Amruthadhaare: ಮದುವೆ ಜೋಡಿಗಳ ಪ್ರೀ-ವೆಡ್ಡಿಂಗ್ ಫೋಟೋಶೂಟ್
ಎರಡೂ ಮನೆಯಲ್ಲಿ ಮದುವೆ ಕೆಲಸಗಳು ಜೋರಾಗಿ ನಡೆಯುತ್ತಿವೆ. ಇಬ್ಬರೂ ಅಜ್ಜಿಯಂದಿರು ಸೇರಿಕೊಂಡು ಕೆಲವೊಂದು ವಿಚಾರಗಳಲ್ಲಿ ಮನೆಯವರನ್ನು ಗೋಳಾಡಿಸುತ್ತಿದ್ದಾರೆ. ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ಯೋಚಿಸುವುದರಿಂದ ಮನೆಯವರಿಗೆ ಸಮಸ್ಯೆ ಆಗುತ್ತಿದೆ. ಆದರೂ ಕೂಡ ಹೇಗೋ ಸಂಬಾಳಿಸಿಕೊಂಡು ಮದುವೆ ಕೆಲಸಗಳನ್ನು ಮಾಡುತ್ತಿದ್ದಾರೆ.
ಈಗ ಗೌತಮ್ ದಪ್ಪಗಿರುವುದು ಎಲ್ಲರಿಗೂ ಸಮಸ್ಯೆ ಆಗುತ್ತಿದೆ. 15 ದಿನಕ್ಕೆ 2 ಇಂಚು ದಪ್ಪಗಾಗಿದ್ದಾನೆ. ಇದರಿಂದ ಆನಂದ್ ಮತ್ತು ಅಪರ್ಣಾ ಇಬ್ಬರೂ ನೀನು ಡಯಟ್ ಮಾಡಬೇಕು ಎಂದು ಹೇಳಿದ್ದಾರೆ. ಹೀಗಾಗಿ ಅಪರ್ಣಾ ಹಾಗೂ ಆನಂದ್ ಇಬ್ಬರೂ ಬಹಳ ಸ್ಟ್ರಿಕ್ಟ್ ಆಗಿ ಗೌತಮ್ ಡಯಟ್ ಫಾಲೋ ಮಾಡುವಂತೆ ಮಾಡಿದ್ದಾರೆ. ಇವರೆಲ್ಲಾ ಡಿನ್ನರ್ ಅರೇಂಜ್ ಮಾಡಿ ನಾನ್ ವೆಜ್ ಸೇವಿಸುತ್ತಿದ್ದರೆ, ಗೌತಮ್ ಗೆ ಮಾತ್ರ ಹಸಿ ತರಕಾರಿ ಕೊಟ್ಟಿದ್ದಾರೆ. ಡಯಟ್ ಮಾಡದಿದ್ದರೆ ಸಣ್ಣಗಾಗುವುದಿಲ್ಲ. ಭೂಮಿಕಾ ಹಾಗೂ ನೀನು ಅಕ್ಕ-ಪಕ್ಕದಲ್ಲಿ ನಿಂತರೆ ಚೆನ್ನಾಗಿ ಕಾಣಬೇಕು. ಅದಕ್ಕೆ ನೀನೀಗ ಡಯಟ್ ಮಾಡಲೇಬೇಕು ಎಂದು ಹೇಳುತ್ತಾರೆ.

ಭೂಮಿಕಾಳಿಗೆ ನಾನ್‌ವೆಜ್ ಪಜೀತಿ
ಗೌತಮ್ ಇಡೀ ದಿನ ಹೊಟ್ಟೆ ತುಂಬುವಂತೆ ಊಟವನ್ನೇ ಮಾಡಲು ಆಗುವುದಿಲ್ಲ. ಹೀಗಾಗಿ ಮನೆಗೆ ಬಂದು ಮಧ್ಯರಾತ್ರಿಯಲ್ಲಿ ಬಿರಿಯಾನಿ ತಿನ್ನುತ್ತಿರುತ್ತಾನೆ. ಮೊಮ್ಮಗನ ಸ್ಥಿತಿ ಕಂಡು ಗರಂ ಆಗುವ ಅಜ್ಜಿ, ಬಂದು ಬಿಸಿ ಬಿಸಿಯಾಗಿ ಊಟ ಮಾಡಿಸಿದ್ದಾರೆ. ಇನ್ಮೇಲೆ ಡಯಟ್ ಎಲ್ಲಾ ಮಾಡಬೇಡ ಎಂದು ಹೇಳುತ್ತಾರೆ. ಇತ್ತ ಭೂಮಿಕಾಳಿಗೆ ಅವರ ಸ್ನೇಹಿತರು ನಾನ್ ವೆಜ್ ಮಾಡುವ ಪಾಠ ಹೇಳಿ ಕೊಟ್ಟಿದ್ದಾರೆ. ಆದರೆ, ಭೂಮಿಕಾಳಿಗೆ ನಾನ್ ವೆಜ್ ನೋಡಿ ಹಿಂಸೆ ಆಗುತ್ತದೆ.
ಮನೆಯವರಿಗೆ ಪ್ರೀ-ವೆಡ್ಡಿಂಗ್ ಶೂಟ್ ಬೇಕು
ಇನ್ನು ಮಹಿಮಾ ತಮ್ಮ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಬೇಕು ಎಂದು ಕೇಳಿದ್ದಾಳೆ. ಆದರೆ ಜೀವನ್ ಮದುವೆ ಬ್ಯುಸಿಯಲ್ಲಿ ಇದೆಲ್ಲಾ ಬೇಡ ಎನ್ನುತ್ತಾನೆ. ಮಹಿಮಾ ಕೋಪ ಮಾಡಿಕೊಂಡಿದ್ದಾಳೆ. ಇದನ್ನು ನೋಡಿದ ಶಕುಂತಲಾ ಈಗ ಗೌತಮ್ ಹಾಗೂ ಭೂಮಿಕಾ ಪ್ರೀ-ವೆಡ್ಡಿಂಗ್ ಮಾಡಿಸುವ ನೆಪದಲ್ಲಿ ಮಹಿಮಾ ಕೋಪವನ್ನು ತಣಿಸಲು ಮುಂದಾಗಿದ್ದಾಳೆ. ಆದರೆ, ಗೌತಮ್‌ಗೆ ಇದೆಲ್ಲಾ ಇಷ್ಟವಿಲ್ಲ. ಅಜ್ಜಿ ಚಿಕ್ಕವರು ಕೂಡ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ ಎಂದ ಮೇಲೆ ನೀನು ಮಾಡಿಕೊಳ್ಳಬೇಕು ಎಂದು ಹಠ ಮಾಡುತ್ತಾರೆ. ಆಗ ವಿಧಿ ಇಲ್ಲದೇ, ಗೌತಮ್ ಭೂಮಿಕಾಳಿಗೂ ಹೇಳುತ್ತಾರೆ. ಭೂಮಿಕಾ ಮನೆಯಲ್ಲೂ ಪ್ರೀ-ವೆಡ್ಡಿಂಗ್ ಶೂಟ್ ಗೆ ಖುಷಿ ಪಟ್ಟಿದ್ದಾರೆ.

ಮತ್ತೆ ಮಹಿಮಾ ಕಿರಿಕ್
ಈಗ ಎಲ್ಲರೂ ಪ್ರೀ-ವೆಡ್ಡಿಂಗ್ ಶೂಟ್‌ಗೆ ಒಪ್ಪಿದ್ದಾರೆ. ಆದರೆ ಗೌತಮ್ ಹಾಗೂ ಭೂಮಿಕಾಳಿಗೆ ಮಾತ್ರ ಸಂಕಟ ಎದುರಾಗಿದೆ. ಮಹಿಮಾಳಿಗೆ ಈಗ ಕೋಪ ಬಂದಿದೆ. ತಾನು ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸೋಣ ಎಂದಾಗ ಜೀವ ಒಪ್ಪಲಿಲ್ಲ. ಆದರೆ, ಮನೆಯವರು ಹೇಳಿದಾಗ ಜೀವ ಒಪ್ಪಿಕೊಂಡಿದ್ದಾನೆ ಎಂದು ಅವನ ಜೊತೆ ಜಗಳ ಮಾಡಿದ್ದಾಳೆ. ನಿನಗೆ ನನ್ನ ಮಾತಿನ ಮೇಲೆ ಗೌರವ ಇಲ್ಲ ಎಂದು ಜಗಳ ಮಾಡುತ್ತಾಳೆ. ಹೀಗೆ ಮಹಿಮಾ ಪದೇ ಪದೇ ಕಿರಿಕ್ ಮಾಡಿಕೊಳ್ಳುತ್ತಿದ್ದು, ಇದು ಮುಂದೊಂದು ದಿನ ಸಮಸ್ಯೆ ಆಗುತ್ತದೆ.
Bhagyalakshmi: ತನ್ವಿ ಪಾಲಿಗೆ ಒಗಟಾದ ಅಮ್ಮನ ಮಾತು.. ಅಮ್ಮ ನನ್ನ ಶಾಲೆಗೆ ಸೇರಿದ್ದಾಳೆ ಎಂದುಕೊಂಡ ತನ್ವಿ?
ಭೂಮಿ-ಗೌತಮ್ ಫೋಟೋಶೂಟ್ ಸಂಕಟ
ಭೂಮಿಕಾಳಿಗಂತೂ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳಲು ಇಷ್ಟವಿಲ್ಲ. ಮದುವೆಗೂ ಮುಂಚೆಯೇ ಅಕ್ಕ-ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳುವುದು ಬೇಡ. ಅದೆಲ್ಲಾ ಒಂದು ರೀತಿ ಮುಜುಗರ ಉಂಟು ಮಾಡುತ್ತದೆ ಎಂದು ಭೂಮಿಕಾ ಹೇಳುತ್ತಿದ್ದಾಳೆ. ಗೌತಮ್ ಕೂಡ ಇದೆಲ್ಲಾ ನಮಗೆ ಈ ವಯಸ್ಸಲ್ಲಿ ಬೇಕಾ ಎಂದು ಯೋಚಿಸುತ್ತಿದ್ದಾನೆ. ಆದರೆ, ಇಬ್ಬರಿಗೂ ಮನೆಯವರು ಹಾಗೂ ಸ್ನೇಹಿತರೆಲ್ಲಾ ಇಲ್ಲ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿಕೋ ಎಂದು ಬಲವಂತ ಮಾಡಿ ಒಪ್ಪಿಸುತಿದ್ದಾರೆ.


Click it and Unblock the Notifications











