Amruthadhaare: ಅತ್ತಿಗೆ ಸೀಕ್ರೆಟ್ ತಿಳಿದ ಅಪೇಕ್ಷಾ: ನವಜೋಡಿಗೆ ಹನಿಮೂನ್ ತಲೆನೋವು!
ಅಮೃತಧಾರೆ ಧಾರಾವಾಹಿಯಲ್ಲಿ ಕಿರಣ್‌ನಿಂದ ಭೂಮಿಕಾಳಿಗೆ ಬಂದಿದ್ದ ತಲೆನೋವನ್ನು ಗೌತಮ್ ಬಹಳ ಸುಲಭವಾಗಿ ದೂರ ಮಾಡಿ, ಹೆಂಡತಿಯನ್ನು ಅರ್ಥ ಮಾಡಿಕೊಂಡಿದ್ದಾನೆ.
ಈಗ ಭೂಮಿಕಾ ತಂದೆ ಸದಾಶಿವನ ಮುಂದೆ ಜಮೀನು ಮಾರಾಟದಲ್ಲಿ ದೊಡ್ಡ ಸಮಸ್ಯೆ ಎದುರಾಗಿದೆ. ಫ್ಯಾಕ್ಟರಿ ನಿರ್ಮಾಣಕ್ಕಾಗಿ ಸದಾಶಿವನ ಜಮೀನು ಅನ್ನು ಗೂಂಡಾಗಳು ಕೇಳುತ್ತಿದ್ದಾರೆ.
ಜಮೀನನ ಬಗ್ಗೆ ವಿಶೇಷವಾದ ಅಭಿಮಾನ ಹೊಂದಿರುವ ಸದಾಶಿವನಿಗೆ ಮಾರಾಟ ಮಾಡಲು ಇಷ್ಟವಿಲ್ಲ. ಆದರೆ ಗೂಂಡಾಗಳು ಮಕ್ಕಳನ್ನು ಕೊಲ್ಲುವ ಬೆದರಿಕೆ ಹಾಕಿದ್ದಾರೆ.

ಸಮಸ್ಯೆ ಬಗೆಹರಿಸಿದ ಗೌತಮ್
ಸದಾಶಿವ ಗೂಂಡಾಗಳನ್ನು ಭೇಟಿ ಮಾಡಲೆಂದು ಹೋದಾಗ ಈ ವಿಚಾರ ತಿಳಿದ ಭೂಮಿಕಾ ಕೂಡ ತಂದೆಯ ಜೊತೆಗೆ ಹೋಗುತ್ತಾಳೆ. ಅಲ್ಲಿ ಜಮೀನನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡುವುದಿಲ್ಲ ಎಂದು ಹೇಳುತ್ತಾನೆ. ಸದಾಶಿವನಿಗೆ ಬೆದರಿಕೆ ಹಾಕುವ ಸಮಯಕ್ಕೆ ಸರಿಯಾಗಿ ಗೌತಮ್ ಅಲ್ಲಿಗೆ ಬಂದು ಹೆಂಡತಿ ಮತ್ತು ಮಾವನಿಗೆ ಏನೂ ಆಗದಂತೆ ಕಾಪಾಡುತ್ತಾನೆ. ಅವರಿಬ್ಬರ ಪರವಾಗಿ ಮಾತನಾಡಿ, ಜಮೀನು ಮಾರಾಟವಾಗದಂತೆಯೂ ಅದರಿಂದ ಮನೆಯವರಿಗೆ ಸಮಸ್ಯೆ ಆಗದಂತೆಯೂ ಎಲ್ಲಾ ತೊಂದರೆ ನಿವಾರಿಸುತ್ತಾನೆ.
ಗೌತಮ್‌ಗೆ ಭೂಮಿಕಾ ಧನ್ಯವಾದ
ಗೌತಮ್ ನಡೆಯನ್ನು ಕಂಡು ಭೂಮಿಕಾಳಿಗೆ ಖುಷಿಯಾಗುತ್ತದೆ. ತನಗಾಗಿ ಹಾಗೂ ತನ್ನ ಮನೆಯವರಿಗಾಗಿ ಪತಿ ಮಾಡಿದ ಕೆಲಸವನ್ನು ಕಂಡು ಮನದೊಳಗೆ ಸಂತಸಗೊಳ್ಳುತ್ತಾಳೆ. ಇದಕ್ಕೆ ಗೌತಮ್ ಬಳಿ ಧನ್ಯವಾದವನ್ನು ಕೂಡ ಹೇಳುತ್ತಾಳೆ.

ಸದಾಶಿವನಿಗೆ ಅಳಿಯನ ಬಗ್ಗೆ ಹೆಮ್ಮೆ
ಇನ್ನು ಮಂದಾಕಿನಿ ಅಳಿಯಂದಿರು ತಮಗಾಗಿ ತಮ್ಮೆಲ್ಲಾ ಕೆಲಸಗಳನ್ನು ಬಿಟ್ಟು ಬಂದು ಸಮಸ್ಯೆ ಅನ್ನು ಬಗೆಹರಿಸಿದ್ದಕ್ಕೆ ಖುಷಿ ಪಡುತ್ತಾರೆ. ಸದಾಶಿವ, ಮಂದಾಕಿನಿಗೆ ಬೈಯುತ್ತಾರೆ. ನಮ್ಮ ಮನೆಯ ಸಮಸ್ಯೆಗೆ ನೀನು ಗೌತಮ್ ಬಳಿ ತಿಳಿಸಬಾರದಿತ್ತು. ಅವರಿಗೆ ಸುಮ್ಮನೆ ತೊಂದರೆ ಕೊಟ್ಟಂತಾಯ್ತು ಎಂದು ಹೇಳುತ್ತಾರೆ. ಇದಕ್ಕೆ ಮಂದಾಕಿನಿ ಅಂತಹ ಕಷ್ಟದ ಸಮಯದಲ್ಲಿ ನನಗೆ ಗೌತಮ್ ಅವರ ಬಳಿ ಹೇಳುವುದೇ ಸರಿ ಎಂದು ಅನಿಸಿದ್ದರಿಂದ ಹೇಳಿದೆ. ಈಗ ಅದರಿಂದ ನಮಗೆ ಒಳ್ಳೆಯದೇ ಆಯಿತು ಎನ್ನುತ್ತಾಳೆ.
ತಲೆನೋವು ತಂದ ಹನಿಮೂನ್
ಇನ್ನು ಭೂಮಿಕಾ ಹಾಗೂ ಗೌತಮ್ ದಿನ ದಿನಕ್ಕೂ ಕೊಂಚ ಕೊಂಚವೇ ಹತ್ತಿರವಾಗುತ್ತಿದ್ದಾರೆ. ಇಬ್ಬರೂ ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲೇ ಈಗ ಆನಂದ್ ಉಡುಗೊರೆಯಾಗಿ ಕೊಟ್ಟ ಹನಿಮೂನ್ ಟಿಕೆಟ್ ಇಬ್ಬರಿಗೂ ಉರುಳಾಗಿದೆ. ಮನೆಯಲ್ಲಿ ಗೌತಮ್ ಮತ್ತು ಭೂಮಿಕಾ ಹನಿಮೂನ್‌ಗೆ ಕಳಿಸಲು ತಯಾರಿಯನ್ನು ನಡೆಸಲಾಗುತ್ತಿದೆ. ಅಜ್ಜಿ ಚಟ್ನಿಪುಡಿ, ಪುಳಿಯೋಗರೆ ಗೊಜ್ಜು ತಯಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಇದು ಭೂಮಿಕಾ ಮತ್ತು ಗೌತಮ್‌ಗೆ ಕೊಂಚವೂ ಇಷ್ಟವಿಲ್ಲ. ಆದರೆ, ಗೆಳೆಯ ಮಾಡಿರುವ ಈ ಎಡವಟ್ಟು ಹನಿಮೂನ್‌ಗೆ ಹೋಗದೇ ಬೇರೆ ದಾರಿಯೂ ಇಲ್ಲ. ಇದರಿಂದ ಇಬ್ಬರೂ ಹೇಗೆ ಎಸ್ಕೇಪ್ ಆಗುತ್ತಾರೋ ಕಾದು ನೋಡಬೇಕಿದೆ.
ಅತ್ತಿಗೆಯ ಸೀಕ್ರೆಟ್ ತಿಳಿದ ಅಪೇಕ್ಷಾ
ಇತ್ತ ಮಹಿಮಾ ಮನೆಯಲ್ಲಿ ಆಗಾಗ ಧೂಮಪಾನ ಮಾಡುತ್ತಿರುತ್ತಾಳೆ. ಇದು ಬೇರೆ ಮನೆಯವರ ಸಿಗರೇಟ್ ಎಂದು ತಿಳಿದಿರುವ ಸದಾಶಿವ ಪದೇ ಪದೇ ಈ ವಿಚಾರಕ್ಕೆ ಗೊಂದಲಗೊಂಡಿದ್ದಾನೆ. ಆದರೆ, ಮಹಿಮಾ ಸಿಗರೇಟ್ ಸೇದುತ್ತಿರುವುದನ್ನು ಅಪೇಕ್ಷಾ ಕಣ್ಣಾರೆ ನೋಡಿದ್ದಾಳೆ. ಶಾಕ್ ಆದ ಅಪೇಕ್ಷಾಳಿಗೆ ಮಹಿಮಾ ತನ್ನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದಾಳೆ. ಟೆನ್ಷನ್ ಆದಾಗ ಮಾತ್ರ ಬಳಸುತ್ತೇನೆ. ಇದನ್ನು ಮನೆಯಲ್ಲಿ ಯಾರಿಗೂ ಹೇಳಬೇಡ. ಸ್ವಲ್ಪ ದಿನದಲ್ಲೇ ಈ ಅಭ್ಯಾಸವನ್ನು ಬಿಡುತ್ತೇನೆ ಎಂದು ಕೇಳುತ್ತಾಳೆ. ಇದಕ್ಕೆ ಒಪ್ಪುವ ಅಪೇಕ್ಷಾಗೆ ಮನದಲ್ಲಿ ಅತ್ತಿಗೆ ಬಗ್ಗೆ ಸಣ್ಣ ಅನುಮಾನವೂ ಇದೆ.


Click it and Unblock the Notifications











