Amruthadhaare ; ಚಾಡಿ ಹೇಳಿದ ಅಶ್ವಿನಿ : ಅಪೇಕ್ಷಾ ಕೆನ್ನೆಗೆ ಬಾರಿಸಿದ ಸದಾಶಿವ ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಅಶ್ವಿನಿಗೆ ಈಗ ಪಾರ್ಥನನ್ನು ಅಪೇಕ್ಷಾ ಪ್ರೀತಿ ಮಾಡುತ್ತಿರುವುದು ಸ್ವಲ್ಪವೂ ಇಷ್ಟವಿಲ್ಲ. ಹೀಗಾಗಿ ಇಬ್ಬರನ್ನು ದೂರ ಮಾಡಬೇಕು ಎಂದು ತಲೆ ಕೆಡಿಸಿಕೊಂಡಿದ್ದಾಳೆ. ಇದಕ್ಕೆ ಜೈದೇವ್ ಒಳ್ಳೆಯ ಐಡಿಯಾ ಕೊಟ್ಟಿದ್ದಾನೆ. ಮನೆಯಲ್ಲಿ ಯಾರಿಗೇ ಹೇಳಿದರೂ ಪ್ರಯೋಜನವಿಲ್ಲ. ಅದರ ಬದಲು ಅಪೇಕ್ಷಾ ತಂದೆಗೆ ಹೇಳು ಎನ್ನುತ್ತಾನೆ. ಈ ಮಾತು ಅಶ್ವಿನಿಗೂ ಸರಿ ಎನ್ನಿಸಿದೆ. ಇತ್ತ ಭೂಮಿಕಾ ಹಾಗೂ ಗೌತಮ್ ಆಟೋ, ಕಾಲ್ನಡಿಗೆಯಲ್ಲಿ ಸುತ್ತಾಡುತ್ತಿದ್ದಾರೆ. ಗೌತಮ್ ಕೂಡ ಭೂಮಿಕಾ ಜೊತೆಗಿನ ಸಾಂಗತ್ಯವನ್ನು ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾನೆ.

35 ರೂಪಾಯಿಗೆ ಇಡ್ಲಿ ಕೊಡಿಸಿದ ಭೂಮಿಕಾ

ಸಿನಿಮಾ ನೋಡಿ ಹೊರಗೆ ಬಂದ ಮೇಲೆ ಭೂಮಿಕಾ ಗೌತಮ್ ಗೆ ತಿಂಡಿ ಕೊಡಿಸಿದ್ದಾಳೆ. ಚಿಬ್ಲು ಇಡ್ಲಿಯನ್ನು ಕೊಡಿಸಿದ್ದು, ಗೌತಮ್ ಖುಷಿಯಿಂದ ಸವಿದಿದ್ದಾನೆ. ಊಟಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವ ಗೌತಮ್, ರುಚಿಯನ್ನು ಸವಿಯುವುದರಲ್ಲಿ ನಂಬರ್ ಒನ್. ಹೀಗಾಗಿ ಹೊಟ್ಟೆ ತುಂಬಾ ಬಾಯಿ ರುಚಿಗೆ ಬೇಕಾದಷ್ಟು ತಿನ್ನುತ್ತೇನೆ ಎಂದು ಹೇಳುತ್ತಾನೆ. ಆಗ ಭೂಮಿಕಾ ನನ್ನ ಬಜೆಟ್ ಬಹಳ ಕಮ್ಮಿ ಇದೆ ಎನ್ನುತ್ತಾಳೆ. ಆಗ ಗೌತಮ್ ಓಕೆ ಇವತ್ತು ನನ್ನ ಬಾಯಿಯನ್ನು ಕಟ್ಟುತ್ತೇನೆ ಎಂದು ತಮಾಷೆ ಮಾಡುತ್ತಾನೆ. ಇನ್ನು ನಿಮಗೊಂದು ಸರ್ಪ್ರೈಸ್ ಇದೆ ಎಂದು ಭೂಮಿಕಾ ಗೌತಮ್ ನನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಗೌತಮ್ ಸರ್ಪ್ರೈಸ್ ಏನಿರಬಹುದು ಎಂದು ಕುತೂಹಲಗೊಂಡಿದ್ದಾನೆ.

amruthadhaare-serial-05-july-episode-written-update

ಸದಾಶಿವನ ಮನೆಗೆ ಬಂದ ಅಶ್ವಿನಿ

ಅಶ್ವಿನಿ ಸದಾಶಿವನ ಮನೆಗೆ ಹೋಗುತ್ತಾಳೆ. ಅಪರೂಪದಲ್ಲಿ ಅಪರೂಪ ಎಂಬಂತೆ ಅಶ್ವಿನಿ ಮನೆಗೆ ಬಂದಿದ್ದಕ್ಕೆ ಎಲ್ಲರೂ ಆಶ್ಚರ್ಯ ಪಡುತ್ತಾರೆ. ಕೆಲಸ ಇತ್ತು ಇಲ್ಲೇ ಬಂದಿದ್ದೆ ಹಾಗೆ ಬಂದೆ ಎನ್ನುತ್ತಾಳೆ. ಕಾಫಿ ಕುಡಿಯುವಾಗ ಸದಾಶಿವನಿಗೆ ನಿಮ್ಮ ಜೊತೆಗೆ ಮಾತನಾಡಬೇಕು ಎಂದು ಹೇಳಿ ಹೊರಗಡೆ ಕರೆದುಕೊಂಡು ಹೋಗುತ್ತಾಳೆ. ಅಪೇಕ್ಷಾ ಮತ್ತು ಪಾರ್ಥ ಇಬ್ಬರೂ ಪ್ರೀತಿಸುತ್ತಿದ್ದಾರೆ. ಈ ವಿಚಾರ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಆದರೆ, ನಾನು ನೋಡಿದ್ದೇನೆ. ಇದು ನಮಗೂ ನಿಮಗೂ ಸರಿ ಹೋಗುವಂತಹ ವಿಷಯವಲ್ಲ ಎನ್ನುತ್ತಾಳೆ. ಆಗ ಸದಾಶಿವ ಅಶ್ವಿನಿ ಮಾತನ್ನು ನಂಬುವುದಿಲ್ಲ. ಅಶ್ವಿನಿ ಪಾರ್ಕ್ ನಲ್ಲಿ ಇಬ್ಬರೂ ಇದ್ದಾರೆ ಹೋಗಿ ನೋಡಿ ಎಂದಾಗ ಸದಾಶಿವ ಸೀದಾ ಪಾರ್ಕ್ ಕಡೆಗೆ ಹೊರಡುತ್ತಾನೆ.

ಆತಂಕಗೊಂಡಿರುವ ಅಪೇಕ್ಷಾ

ಅಪೇಕ್ಷಾ ಪಾರ್ಥನನ್ನು ಭೇಟಿ ಮಾಡಿದ್ದು, ತನ್ನ ಆತಂಕವನ್ನು ಹಂಚಿಕೊಂಡಿದ್ದಾಳೆ. ಆದಷ್ಟು ಬೇಗ ನನ್ನ ತಂದೆಯ ಬಳಿ ನಮ್ಮ ಪ್ರೀತಿ ಬಗ್ಗೆ ಹೇಳಿ. ನಾವು ಇನ್ನೂ ಎಷ್ಟು ದಿನ ಅಂತ ಹೀಗೆ ಕದ್ದು ಮುಚ್ಚಿ ಓಡಾಡುವುದು. ಯಾವತ್ತಾದರೂ ನಾವು ನಮ್ಮ ಮನೆಯವರ ಕಣ್ಣಿಗೆ ಕಾಣಿಸಿಕೊಂಡರೆ ಕಷ್ಟವಾಗುತ್ತದೆ ಎಂದು ಹೆದರುತ್ತಾಳೆ. ಪಾರ್ಥ ಅಪೇಕ್ಷಾಳಿಗೆ ಸಮಾಧಾನ ಮಾಡುತ್ತಾ ಇಬ್ಬರೂ ಕೈ ಕೈ ಹಿಡಿದುಕೊಂಡು ಪಾರ್ಕ್ ನಲ್ಲಿ ಕುಳಿತಿರುತ್ತಾರೆ. ಈ ದೃಶ್ಯವನ್ನು ಸದಾಶಿವ ನೋಡಿ ಶಾಕ್ ಆಗುತ್ತಾನೆ.

amruthadhaare-serial-05-july-episode-written-update

ಅಪೇಕ್ಷಾಳಿಗೆ ತಂದೆಯಿಂದ ಕಪಾಳಮೋಕ್ಷ

ಅಪೇಕ್ಷಾಳ ಕೆನ್ನೆಗೆ ಸದಾಶಿವ ಬಾರಿಸುತ್ತಾನೆ. ಇದರಿಂದ ಪಾರ್ಥ ಕೂಡ ಗಾಬರಿಯಾಗುತ್ತಾನೆ. ಇಬ್ಬರೂ ಸದಾಶಿವನಿಗೆ ತಮ್ಮ ಬಗ್ಗೆ ಹೇಳಲು ಯತ್ನಿಸುತ್ತಾರೆ. ಆದರೆ, ಸದಾಶಿವ ಇಬ್ಬರ ಮಾತನ್ನೂ ಕೇಳುವುದಕ್ಕೆ ತಯಾರಿರುವುದಿಲ್ಲ. ನಮ್ಮ ಮಕ್ಕಳು ಹೀಗಿರಬೇಕು ಎಂದು ನೂರಾರು ಕನಸುಗಳನ್ನು ಕಟ್ಟಿಕೊಂಡಿರುತ್ತೇವೆ. ಆದರೆ, ನೀವಿಬ್ಬರೂ ಜೊತೆಗೆ ಇದ್ದುಕೊಂಡು ಇಷ್ಟು ದೊಡ್ಡ ಮೋಸ ಮಾಡಿದ್ದೀರಾ. ನಿಮಗೆ ನಾಚಿಕೆ ಆಗುತ್ತಿಲ್ಲವೇ ಎಂದು ಬೈಯುತ್ತಾನೆ. ಪಾರ್ಥ ಮತ್ತು ಅಪೇಕ್ಷಾ ಇಬ್ಬರೂ ಏನೂ ಮಾತನಾಡಲಾಗದೇ ಮೌನವಾಗಿ ತಲೆ ತಗ್ಗಿಸುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X