Amruthadhaare ; ಮಲ್ಲಿ ತಾತನ ಜೀವ ಜೈದೇವ್ ಕೈಯಲ್ಲಿ : ಕೆಂಚನನ್ನು ಭೇಟಿ ಮಾಡಿದ ಭೂಮಿಕಾ..!
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಮಲ್ಲಿಗೆ ತನ್ನ ಬಗ್ಗೆ ಯಾವ ಸತ್ಯವೂ ಗೊತ್ತಾಗಿಲ್ಲ ಎಂದು ಭಾವಿಸಿದ್ದು, ಸುಳ್ಳು ಹೇಳಿ ಮತ್ತೆ ದಿಯಾಳನ್ನು ಭೇಟಿ ಮಾಡಲು ಹೋಗಿರುತ್ತಾನೆ. ಹಲವು ಹೊತ್ತಾದ ಬಳಿಕ ಜೈದೇವ್ ಮನೆಗೆ ಬಂದ ಕಾರಣ ಮಲ್ಲಿ ತನ್ನ ತಾಳ್ಮೆಯನ್ನು ಕಳೆದುಕೊಂಡಿರುತ್ತಾಳೆ. ಯಾಕೆ ನಿಮಗೆ ಮಾತ್ರ ಇಷ್ಟು ಕೆಲಸ ಎಂದು ಮೊದಲು ಪ್ರಶ್ನಿಸುತ್ತಾಳೆ. ಜೈದೇವ್, ಆಫೀಸ್ ನ ಅರ್ಧ ಕೆಲಸ ತಾನೇ ಮಾಡುವುದು. ಓಡಾಟವೇನಿದ್ದರೂ ತನ್ನದೇ ಎಂದು ಜಂಬದಿಂದ ಬಿಲ್ಡಪ್ ಕೊಡುತ್ತಾ ಮಾಮೂಲಿಯಂತೆಯೇ ಹೇಳುತ್ತಾನೆ.
ಜೈದೇವ್ ಗೆ ಗ್ರಹಚಾರ ಬಿಡಿಸಿದ ಮಲ್ಲಿ
ನಿಮ್ಮ ಹೆಂಡತಿ ನಾನು, ಮಗುವನ್ನು ಕಳೆದುಕೊಂಡು ದುಃಖದಲ್ಲಿರುತ್ತೇನೆ. ಆದಷ್ಟು ಬೇಗ ಮನೆಗೆ ಹೋಗಬೇಕು ಎಂದು ಅನಿಸುವುದಿಲ್ವಾ ಎಂದು ಕೇಳುತ್ತಾಳೆ. ಆಗ ಜೈದೇವ್ ನನಗೂ ಆ ದುಃಖವಿದೆ. ಮಲ್ಲಿ ನಾನು ನಿನ್ನ ಜೊತೆಗೆ ಇದ್ದೇನೆ. ಮಗು ಹೋಯ್ತು ಎಂದಾಗ ನನಗೆ ಬದುಕುವುದಕ್ಕೇ ಆಸೆ ಇರಲಿಲ್ಲ. ಆದರೆ, ಏನು ಮಾಡುವುದು ಎಂದು ನಾಟಕ ಶುರು ಮಾಡುತ್ತಾನೆ. ಕೇಳುವವರೆಗೂ ಕೇಳಿದ ಮಲ್ಲಿ ನಿಮ್ಮ ಆಟವೆಲ್ಲಾ ನನಗೆ ಗೊತ್ತು ಸುಳ್ಳು ಹೇಳಬೇಡಿ. ನಾನು ಮೊದಲಿನ ಮಲ್ಲಿ ಅಲ್ಲ. ಈಗ ನನಗೆ ಬುದ್ಧೀ ಬಂದಿದೆ. ದಿಯಾ ಕಥೆ ಏನು ಎನ್ನುತ್ತಾಳೆ. ಜೈದೇವ್ ಆಗ ಮಲ್ಲಿ ನೀನು ಕೂಡ ದಿಯಾ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಬೇಡ. ಅವಳು ನನ್ನ ಫ್ರೆಂಡ್ ಅಷ್ಟೇ ಎಂದು ಹೇಳುತ್ತಾನೆ. ಆದರೆ, ಮಲ್ಲಿ ಎಲ್ಲಾ ಸತ್ಯವನ್ನು ಹೇಳುತ್ತಾಳೆ.

ಜೈದೇವ್ ಕೈಯಲ್ಲಿ ಮಲ್ಲಿ ತಾತನ ಜೀವ
ನೀವು ದಿಯಾ ಜೊತೆಗೆ ಚಕ್ಕಂದ ಆಡುತ್ತಿದ್ದದ್ದನ್ನು ನಾನು ನೋಡಿದ್ದೇನೆ. ಯಾಕೆ ಇಷ್ಟು ಸುಳ್ಳು ಹೇಳುತ್ತೀರಾ. ನಾನು ಏನು ಮಾಡಿದ್ದೆ. ಬೇಡ ಬೇಡ ಎಂದರೂ ನೀವೇ ನನ್ನ ಬಳಿ ಬಂದಿದ್ದು, ನನಗೆ ಮಗು ಕೊಟ್ಟಿದ್ದು. ಈಗ ನೈಸ್ ಆಗಿ ನನಗೆ ಗೇಟ್ ಪಾಸ್ ಕೊಡಬೇಕು ಎಂದುಕೊಂಡಿದ್ದೀರಾ. ನಿಮ್ಮನ್ನು ಯಾವುದೇ ಕಾರಣಕ್ಕೂ ನಾನು ಸುಮ್ಮನೆ ಬಿಡುವುದಿಲ್ಲ. ಮನೆಯಲ್ಲಿ ಎಲ್ಲರಿಗೂ ಸತ್ಯ ಹೇಳುತ್ತೇನೆ ಎಂದು ಹೇಳುತ್ತಾಳೆ. ಆಗ ಜೈದೇವ್ ಬೇಡ. ಯಾರಿಗೂ ಏನೂ ಹೇಳಬೇಡ ಎಂದು ಕೇಳಿಕೊಳ್ಳಲು ಯತ್ನಿಸುತ್ತಾನೆ. ಆದರೆ, ಮಲ್ಲಿ ರೂಮಿನಿಂದ ಆಚೆ ಬಂದು ಗೌತಮ್ ಬಳಿ ಸತ್ಯ ಹೇಳಲು ಮುಂದಾಗುತ್ತಾಳೆ. ಅಷ್ಟರಲ್ಲಿ ಜೈದೇವ್ ನಿಮ್ಮ ತಾತ ವೀಡಿಯೋ ಕಾಲ್ ಮಾಡಿದ್ದಾರೆ ಎಂದು ಹೇಳಿ, ತಾತನನ್ನು ಕಟ್ಟಿ ಹಾಕಿ ಕುತ್ತಿಗೆಗೆ ಚಾಕು ಹಿಡಿದಿರುವ ದೃಶ್ಯವನ್ನು ತೋರಿಸುತ್ತಾನೆ. ಇದರಿಂದ ಮಲ್ಲಿ ಹೆದರಿ ಏನೂ ಹೇಳದೇ ಬರುತ್ತಾಳೆ.
ಜೈ ಆಟಕ್ಕೆ ಬ್ರೇಕ್ ಹಾಕಲು ಮುಂದಾದ ಭೂಮಿಕಾ
ಇತ್ತ ಭೂಮಿಕಾ ಸಾಕ್ಷಿ ಸಮೇತವಾಗಿ ಗೌತಮ್ ಎದುರು ಜೈದೇವ್ ಆಟಕ್ಕೆ ಬ್ರೇಕ್ ಹಾಕಬೇಕು ಎಂದು ತೀರ್ಮಾನಿಸಿದ್ದಾಳೆ. ಹಹೀಗಾಗಿ ಆಫಿಸಿನ ಟೆಂಡರ್ ಗಳ ಬಗ್ಗೆ ಮಾಹಿತಿ ಪಡೆದಿದ್ದಾಳೆ. ಇದರೊಂದಿಗೆ ಮಲ್ಲಿಯನ್ನು ಕೊಲ್ಲಲು ಯತ್ನಿಸಿದ್ದು, ಪಾರ್ಥನ ಮೇಲೆ ಹಲ್ಲೆ ಮಾಡಿಸಿದ್ದು, ತನ್ನನ್ನು ಕಿಡ್ನ್ಯಾಪ್ ಮಾಡಿಸಿದ್ದು, ಆನಂದ್ ಮೇಲೆ ಅಟ್ಯಾಕ್ ಮಾಡಿದ್ದು, ಎಲ್ಲಾ ಸಾಕ್ಷಿಗಳನ್ನು ಭೂಮಿಕಾ ಕಲೆ ಹಾಕಿದ್ದಾಳೆ.
ಕೆಂಚನನ್ನು ಭೇಟಿ ಮಾಡಿದ ಭೂಮಿಕಾ
ಕೆಂಚನನ್ನು ಭೇಟಿ ಮಾಡಲು ಆನಂದ್ ಜೊತೆಗೆ ಭೂಮಿಕಾ ಹೋಗಿದ್ದಾಳೆ. ಆದರೆ, ಕೆಂಚ ಭೂಮಿಕಾಳನ್ನು ನೋಡಿದ್ದೇ ಓಡಿ ಹೋಗಿ ಮರದ ಮೇಲೆ ಕುಳಿತುಕೊಳ್ಳುತ್ತಾನೆ. ಒಂದು ಸಲ ನಿಮಗೆ ಸತ್ಯ ಹೇಳಲು ಬಂದು ಜೈದೇವ್ ಅವರ ಕೈಯಲ್ಲಿ ಸಿಕ್ಕಿ ಬಿದ್ದೆ. ಆಗ ಅವರು ನನಗೆ ಸಾವಿನ ಬಾಗಿಲು ತಟ್ಟುವಂತೆ ಮಾಡಿದ್ದರು. ನರಕ ನೋಡಿರುವ ನಾನು ಹೇಗೋ ಬದುಕುತ್ತಿದ್ದೇನೆ. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ ಎಂದು ಹೇಳುತ್ತಾಳೆ.


Click it and Unblock the Notifications











