Amruthadhaare: ಬೇಲ್ ಮೇಲೆ ಹೊರ ಬಂದ ಮಾನ್ಯ, ಗೌತಮ್‌ನನ್ನು ಭೇಟಿ ಮಾಡುತ್ತಾಳಾ..?
ಅಮೃತಧಾರೆ ಧಾರಾವಾಹಿಯಲ್ಲಿ ಹುಡುಗನ ಮನೆಯವರು ಚೌಟರಿಗೆ ಬಂದ ಕೂಡಲೇ ಕರೆಂಟ್ ಕಟ್ ಆಗುತ್ತದೆ. ಸುಮಾರು ಹೊತ್ತು ಗಂಡಿನ ಕಡೆಯವರು ಕತ್ತಲೆಯಲ್ಲೇ ಇರಬೇಕಾಗುತ್ತದೆ. ಸೆಕೆಯಿಂದ ಎಲ್ಲರೂ ನರಳುತ್ತಿರುತ್ತಾರೆ. ಸದಾಶಿವ ಹಾಗೂ ಮಂದಾಕಿನಿಗೆ ಈ ಪರಿಸ್ಥಿತಿ ಕಂಡು ಮುಜುಗರವಾಗುತ್ತದೆ. ಗೌತಮ್ ದಿವಾನ್‌ನಂತಹ ದೊಡ್ಡ ಬಿಸಿನೆಸ್ ಮ್ಯಾನ್‌ಗೆ ಒಳ್ಳೆಯ ಆತಿಥ್ಯ ನೀಡಲು ಆಗುತ್ತಿಲ್ಲವಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾರೆ.
ಎಲ್ಲರಿಗೂ ಕೊಡುವ ವೆಲ್ಕಂ ಜ್ಯೂಸ್ ಕೂಡ ಚೆನ್ನಾಗಿರುವುದಿಲ್ಲ. ಆದರೆ, ಆನಂದ್ ಜ್ಯೂಸ್ ಕುಡಿದು ತುಂಬಾ ಚೆನ್ನಾಗಿದೆ ಎಂದು ಸುಳ್ಳು ಹೇಳುತ್ತಾನೆ. ಆಗ ಎಲ್ಲರೂ ಜ್ಯೂಸ್ ಕುಡಿಯುತ್ತಾರೆ. ಕರೆಂಟ್ ಇಲ್ಲದೇ ಸೆಕೆ ಆಗುತ್ತಿದ್ದಕ್ಕೆ ಶಕುಂತಲಾ ಹಾಗೂ ಮನೆಯವರಿಗೆಲ್ಲಾ ತುಂಬಾ ಹಿಂಸೆ ಆಗುತ್ತಿರುತ್ತದೆ. ನಮಗೇ ಇಷ್ಟೆಲ್ಲಾ ಕಷ್ಟ ಆಗುತ್ತಿದೆ. ಇನ್ನು ಮದುವೆಗೆ ಬರುವವರಿಗೆ ಹೇಗೆ ಎಂದು ಗಾಬರಿಯಾಗುತ್ತಾರೆ.

ಗೌತಮ್‌ನನ್ನು ಕರೆದು ಮಾತನಾಡುತ್ತಾರೆ. ಗೌತಮ್ ನಾವಿಲ್ಲಿ ಮುಹೂರ್ತ ಮುಗಿಸಿಕೊಂಡು, ರಿಸೆಪ್ಶನ್ ಅನ್ನು ಸ್ಟಾರ್ ಹೋಟೆಲ್‌ನಲ್ಲಿ ಮಾಡೋಣ. ಇಲ್ಲಿ ಯಾರಿಗೂ ಹೆಚ್ಚು ಹೊತ್ತು ಇರುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾಳೆ. ಆಗ ಪಾರ್ಥ ಬಂದು ಅದೆಲ್ಲಾ ಬೇಕಿಲ್ಲ. ಈಗ ಅವರು ಹೇಗೆ ಪ್ಲಾನ್ ಮಾಡಿದ್ದಾರೋ ಹಾಗೆ ಮದುವೆ ನಡೆಯಲಿ. ಇದೊಂಥರ ತುಂಬಾ ಚೆನ್ನಾಗಿದೆ. ಎಂದು ಹೇಳಿ, ಬೇರೆ ಅರೇಂಜ್‌ಮೆಂಟ್ಸ್ ಮಾಡುವುದು ಬೇಡ ಎಂದು ಹೇಳುತ್ತಾನೆ. ಇದಕ್ಕೆಲ್ಲರೂ ಒಪ್ಪುತ್ತಾರೆ.
ಮಾವನ ಪಾದ ಪೂಜೆ ಮಾಡಿದ ಗೌತಮ್
ಇನ್ನು ಕಾಶಿಯಾತ್ರೆ ಮಾಡುವಾಗ ಗೌತಮ್ ಶಾಸ್ತ್ರವನ್ನೇ ಬದಲು ಮಾಡುತ್ತಾನೆ. ಅಂದರೆ, ತನ್ನ ಪಾದಕ್ಕೆ ಹುಡುಗಿಯ ತಂದೆ ಸದಾಶಿವ ಪಾದ ಪೂಜೆ ಮಾಡುವುದು ಬೇಡ. ತಾನೇ ತನ್ನ ಮಾವನ ಪಾದ ಪೂಜೆ ಮಾಡುವುದಾಗಿ ಹೇಳುತ್ತಾನೆ. ಶಾಸ್ತ್ರಗಳನ್ನು ಮನುಷ್ಯರು ತಮಗೆ ಬೇಕಾದಂತೆ ಮಾಡಿಕೊಂಡಿದ್ದು. ಆದರೆ, ಈಗ ಅದನ್ನು ನಮಗೆ ಬೇಕಾದಂತೆ ಮಾಡಿಕೊಳ್ಳೋಣ ಎಂದು ಹೇಳುತ್ತಾನೆ. ಸದಾಶಿವನ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದುಕೊಳ್ಳುತ್ತಾನೆ.

ಎಸಿ ಇಲ್ಲದೇ ಒದ್ದಾಡುತ್ತಿರುವ ಗೌತಮ್
ಗೌತಮ್ ಶಾಸ್ತ್ರವನ್ನೇ ಬದಲು ಮಾಡಿದ್ದಕ್ಕೆ ಶಕುಂತಲಾ ಹಾಗೂ ಲಕ್ಕಿ ಲಕ್ಷ್ಮೀಕಾಂತ ಇಬ್ಬರೂ ಇದೆಲ್ಲಾ ಏನು ಹೀಗೆ ನಡೆಯುತ್ತಿದೆ. ಇದೆಲ್ಲಾ ಎಷ್ಟು ಸರಿ ಎಂದು ಮಾತನಾಡಿಕೊಳ್ಳುತ್ತಾರೆ. ಇನ್ನು ಗೌತಮ್‌ಗೆ ಎಸಿ ಇಲ್ಲದೇ ಉಸಿರು ಕಟ್ಟುತ್ತಿರುತ್ತದೆ. ಮಂಟಪದಲ್ಲಿ ಕುಳಿತಾಗ ಗೌತಮ್ ಭೂಮಿಕಾ ಬಳಿ ಎಸಿ ಇಲ್ಲದೇ ಕಷ್ಟ ಆಗುತ್ತಿದೆ ಎಂದು ಹೇಳುತ್ತಾನೆ. ಭೂಮಿಕಾ ತನ್ನ ತಂದೆಯನ್ನು ಕರೆದು ಎಸಿ ಸರಿ ಮಾಡುವಂತೆ ಕೇಳುತ್ತಾಳೆ. ಗೌತಮ್ ಅಂತೂ ಎಸಿ ಇಲ್ಲದೇ, ಕೆಂಪಗಾಗಿರುತ್ತಾನೆ.
ಬೇಲ್ ಮೇಲೆ ಹೊರಗೆ ಬಂದ ಮಾನ್ಯ
ಇತ್ತ ಮಾನ್ಯ ಬೇಲ್ ಮೇಲೆ ಹೊರಗೆ ಬಂದಿದ್ದಾಳೆ. ಹೇಗಾದರೂ ಮಾಡಿ ಗೌತಮ್ ಭೇಟಿ ಮಾಡಬೇಕು. ತನ್ನ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಹೇಗಾದರೂ ಮಾಡಿ ಸತ್ಯವನ್ನು ಹೇಳಬೇಕು ಎಂದು ಲಾಯರ್ ಬಳಿ ಹೇಳುತ್ತಾಳೆ. ಆಗ ಲಾಯರ್ ತುಂಬಾ ಟೈಟ್ ಸೆಕ್ಯೂರಿಟಿ ಇದೆ ಎಂದು ಹೇಳುತ್ತಾರೆ. ಆಗ ಮಾನ್ಯ ಕೊನೆಪಕ್ಷ ಗೌತಮ್ ಮದುವೆಯಾಗುವ ಹುಡುಗಿಯನ್ನಾದರೂ ಭೇಟಿ ಮಾಡುತ್ತೇನೆ. ಈಗಿರುವ ಅವಕಾಶವನ್ನು ಬಳಸಿಕೊಳ್ಳಲೇಬೇಕು. ಇಲ್ಲದೇ ಹೋದರೆ, ಮುಂದೆ ಬಹಳ ಕಷ್ಟ ಆಗುತ್ತದೆ ಎಂದು ಹೇಳುತ್ತಾಳೆ. ಅಲ್ಲಿಗೆ ಮಾನ್ಯ, ಭೂಮಿಕಾಳನ್ನು ಯಾವಾಗ ಎಲ್ಲಿ ಭೇಟಿ ಮಾಡುತ್ತಾಳೆ ಎಂಬ ಕುತೂಹಲ ಮೂಡಿದೆ.


Click it and Unblock the Notifications











