Amruthadhaare ; ದೀಪಾಂಶೂಗೆ ಪಾಠ ಕಲಿಸಿದ ಭೂಮಿಕಾ : ಗೌತಮ್ ಮನದಲ್ಲಿ ಹೆಚ್ಚಿದ ಆತಂಕ..!
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ ಮಲ್ಲಿ ಬಳಿ ನಾಟಕ ಮಾಡುತ್ತಿದ್ದಾನೆ. ತಾನು ಮಲ್ಲಿಯನ್ನು ಪ್ರೀತಿಸುತ್ತಿರುವಂತೆ ನಟಿಸಿದ್ದು, ಮಲ್ಲಿ ಜೈದೇವನ ಪ್ರೀತಿ ನಿಜವೆಂದು ನಂಬಿದ್ದಾಳೆ. ಇನ್ನು ಮಹಿಮಾಳಿಗೆ ದೀಪಾಂಶೂ ಸಿಕ್ಕಾಪಟ್ಟೆ ಟಾರ್ಚರ್ ಕೊಡುತ್ತಿದ್ದಾನೆ. ಅಬಾರ್ಷನ್ ವಿಚಾರವೊಂದನ್ನು ಇಟ್ಟುಕೊಂಡು ದೀಪಾಂಶು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಮಹಿಮಾ ಇದರಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬುದು ಗೊತ್ತಾಗದೇ ಒದ್ದಾಡುತ್ತಿದ್ದಾಳೆ. ಮನೆಯಲ್ಲಿ ಸತ್ಯ ಗೊತ್ತಾದರೆ, ತನ್ನ ಪರಿಸ್ಥಿತಿ ಏನಾಗುತ್ತದೆ ಎಂಬುದು ತಿಳಿಯದೇ ನರಳುತ್ತಿದ್ದಾಳೆ.
ಅತ್ತಿಗೆ ಬಳಿ ಸಮಸ್ಯೆ ಹೇಳಿಕೊಂಡ ಮಹಿಮಾ
ಸ್ಟುಡಿಯೋಗೆ ಬಂದ ಮಹಿಮಾಳನ್ನು ದೀಪಾಂಶೂ ಕಾಡಿಸಿದ್ದಾನೆ. ಸಂಜೆಯೊಳಗೆ ತನಗೆ ಬೇಕಾದಂತೆ ನಡೆದುಕೊಳ್ಳದಿದ್ದರೆ, ತನ್ನ ಜೊತೆಗೆ ಹೊರಗಡೆ ಸುತ್ತಾಡಲು ಒಪ್ಪದೇ ಹೋದರೆ, ಮನೆಯಲ್ಲಿ ಸತ್ಯ ಹೇಳುವುದಾಗಿ ಹೆದರಿಸಿದ್ದಾನೆ. ಮಹಿಮಾ ಬೇರೆ ದಾರಿ ಕಾಣದೇ ಭೂಮಿಕಾಳಿಗೆ ಫೋನ್ ಮಾಡಿದ್ದಾಳೆ. ಸ್ಟುಡಿಯೋಗೆ ಬಂದ ಭೂಮಿಕಾ ಬಳಿ ಮಹಿಮಾ ಎಲ್ಲಾ ಸತ್ಯವನ್ನು ಹೇಳಿಕೊಂಡಿದ್ದಾಳೆ. ತಾನು ಮಾಡಿದ ಒಂದು ತಪ್ಪಿನಿಂದ ಈಗ ಕಷ್ಟದಲ್ಲಿ ಸಿಲುಕಿರುವುದಾಗಿ ಹೇಳಿಕೊಳ್ಳುತ್ತಾಳೆ. ಮಹಿಮಾ ಮಾತುಗಳನ್ನು ಕೇಳಿದ ಬಳಿಕ, ಅವಳಿಗೆ ಭೂಮಿಕಾ ಸಮಾಧಾನ ಮಾಡುತ್ತಾಳೆ.

ದೀಪಾಂಶೂಗೆ ಪಾಠ ಕಲಿಸಿದ ಭೂಮಿಕಾ
ಭೂಮಿಕಾ ಮಹಿಮಾಳಿಗೆ ಧೈರ್ಯ ತುಂಬಿದ್ದು, ದೀಪಾಂಶೂ ನನ್ನು ಸ್ಟುಡಿಯೋಗೆ ಕರೆಸಿದ್ದಾಳೆ. ಮಹಿಮಾ ದೀಪಾಂಶೂ ಗೆ ಫೋನ್ ಮಾಡಿ ಕರೆದಿದ್ದಕ್ಕೆ, ಬಹಳ ಆಸೆ ಹೊತ್ತು ಬಂದಿದ್ದಾನೆ. ಹೂ ಗುಚ್ಛವನ್ನು ಕೊಟ್ಟು ಮಹಿಮಾಳನ್ನು ಪ್ರಪೋಸ್ ಮಾಡುತ್ತಾನೆ. ಅಷ್ಟರಲ್ಲಿ ಭೂಮಿಕಾ ಬಂದು ದೀಪಾಂಶೂಗೆ ಬೈಯುತ್ತಾಳೆ. ಕಪಾಳಕ್ಕೆ ಹೊಡೆಯುತ್ತಾಳೆ. ಗೌತಮ್ ದಿವಾನ್ ಮತ್ತು ಜೀವನ್ ಇಬ್ಬರಿಗೂ ಸತ್ಯ ಹೇಳುತ್ತೀನಿ ಎಂದು ದೀಪಾಂಶೂ ಹೆದರಿಸುತ್ತಾನೆ. ಆದರೆ, ಭೂಮಿಕಾಳೇ ಜೀವನ್ ನ ಕರೆಸುತ್ತಾಳೆ. ಜೀವನ್ ಬಂದು ನನ್ನ ಹೆಂಡತಿಯ ಮೇಲೆ ಕಣ್ಣು ಹಾಕುತ್ತೀಯಾ ಎಂದು ಬೈದು ಹೊಡೆಯುತ್ತಾನೆ. ಇನ್ಯಾವತ್ತು ಕಾಣಿಸಿಕೊಳ್ಳಬೇಡ ಎಂದು ಬೈದು ಕಳಿಸುತ್ತಾನೆ. ನಂತರ ಮಹಿಮಾಳಿಗೆ ಸಮಾಧಾನ ಮಾಡುತ್ತಾನೆ. ಮಹಿಮಾ ಜೀವನ್ ಗೆ ಸತ್ಯ ಗೊತ್ತಾದರೆ, ಸಂಬಂಧ ಹಾಳಾಗುತ್ತದೆ ಎಂದು ನಂಬಿದ್ದಳು. ಆದರೆ, ಜೀವನ್ ತನ್ನ ಪರ ಮಾತನಾಡಿದ್ದಕ್ಕೆ ಅವಳಿಗೆ ಸಮಾಧಾನವಾಗುತ್ತದೆ.
ಪತ್ನಿ ಆರೋಗ್ಯಕ್ಕೋಸ್ಕರ ಹರಕೆ ಹೊತ್ತ ಗೌತಮ್
ಇತ್ತ ಭೂಮಿಕಾ ಜಾತಕದಲ್ಲಿ ಸಮಸ್ಯೆ ಇದೆ ಎಂಬುದನ್ನು ಕೇಳಿರುವ ಗೌತಮ್ ಮನದಲ್ಲಿ ಕಳವಳ ಸಂಕಟ ಎಲ್ಲವೂ ಶುರುವಾಗಿದೆ. ಗೆಳೆಯ ಆನಂದ್ ಬಳಿ ಸತ್ಯ ಹೇಳಿಕೊಂಡು ಬೇಸರ ಮಾಡಿಕೊಳ್ಳುತ್ತಾನೆ. ಗೌತಮ್ ಗೆ ಆನಂದ್ ಧೈರ್ಯ ಹೇಳಿದ್ದು, ಭೂಮಿಕಾ ಅತ್ತಿಗೆಗೆ ಏನೂ ಆಗುವುದಿಲ್ಲ ಎಂದು ಹೇಳಿದ್ದಾನೆ. ಆಂಜನೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾನೆ. ಯಾವತ್ತೂ ದೇವರ ಬಳಿ ಏನನ್ನೂ ಕೇಳದ ಭೂಮಿಕಾಳಿಗೋಸ್ಕರ ಗೌತಮ್ ಹರಕೆಯನ್ನು ಹೊರುತ್ತಾನೆ. ಭೂಮಿಕಾಳಿಗೆ ಯಾವ ಸಮಸ್ಯೆಯೂ ಆಗದಿದ್ದರೆ, ಉರುಳು ಸೇವೆ ಮಾಡಿ ನೆಲದ ಮೇಲೆ ಊಟ ಮಾಡುವುದಾಗಿ ಹರಕೆ ಹೊತ್ತಿದ್ದಾನೆ.

ಭೂಮಿಕಾ ಮೇಲೆ ಗೌತಮ್ ಗೆ ಬೇಸರ
ಅಲ್ಲದೇ, ಈಗ ಉಪವಾಸ ಕೂಡ ಇದ್ದು, ಭೂಮಿಕಾಳಿಗೆ ಒಳ್ಳೆಯದಾದರೆ ಸಾಕು ಎಂದು ಬಯಸಿದ್ದಾನೆ. ಮನೆಗೆ ಬರುವ ಗೌತಮ್ , ಭೂಮಿಕಾ ಕಾಣಿಸದೇ ಇದ್ದದ್ದಕ್ಕೆ ಗಾಬರಿಯಾಗುತ್ತಾನೆ. ಕಾರನ್ನು ಕಳಿಸುತ್ತೇನೆ ಎಲ್ಲಿದ್ದೀರಾ ಹೇಳಿ ಎಂದು ಭೂಮಿಕಾಳಿಗೆ ಫೋನ್ ಮಾಡಿದರೆ, ಭೂಮಿಕಾ ಆಟೋದಲ್ಲೇ ಬರುತ್ತಾಳೆ. ಇದರಿಂದ ಗೌತಮ್ ಗೆ ಬೇಸರವಾಗುತ್ತದೆ. ಆದರೆ, ಭೂಮಿಕಾಳಿಗೆ ಗೌತಮ್ ಮನದ ಆತಂಕ ಅರ್ಥವಾಗದ ಕಾರಣ, ತಮಾಷೆಯಾಗಿ ಮಾತನಾಡಿಸುತ್ತಾಳೆ. ಗೌತಮ್ ಗೆ ಸಮಾಧಾನ ಮಾಡುತ್ತಾಳೆ. ಆದರೆ, ಗೌತಮ್ ಮನದಲ್ಲಿ ಮಾತ್ರ ಭೂಮಿಕಾ ಕುರಿತು ಆತಂಕ ಹಾಗೆ ಇರುತ್ತದೆ.


Click it and Unblock the Notifications











