Amruthadhaare; ಮಲ್ಲಿಯನ್ನು ಯಾಮಾರಿಸುತ್ತಿರುವ ಜೈದೇವ್ ಬಚಾವ್ ಆಗುತ್ತಾನಾ..?
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ತನ್ನ ಮಕ್ಕಳಿಗಾಗಿ ಏನು ಬೇಕಿದ್ದರೂ ಮಾಡಲು ತಯಾರಿದ್ದಾಳೆ. ಭೂಮಿಕಾ ಕೈಯಿಂದ ವಾಪಸ್ ತನ್ನ ಕೈಗೆ ತಿಜೋರಿ ಕೀ ಸಿಕ್ಕಾಗಿನಿಂದ ಮೆರೆಯುತ್ತಿದ್ದಾಳೆ. ಜೈದೇವ್ ತನಗೆ ಬೇಕಾದಾಗಲೆಲ್ಲಾ ಬಂದು ಎಷ್ಟು ಬೇಕೋ ಅಷ್ಟು ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾನೆ. ಈಗ ಜೈದೇವ್ ದಿಯಾಳಿಗೆ ಕಾರನ್ನು ಗಿಫ್ಟ್ ಮಾಡಿದ್ದಾನೆ. ಇನ್ನು ಶಕುಂತಲಾ ತನ್ನ ಎರಡನೇ ಮಗ ಪಾರ್ಥ ತನ್ನ ಮೇಲೆ ಡಿಪೆಂಡ್ ಆಗಿದ್ದು, ಹೇಗಾದರೂ ಮಾಡಿ ತಮ್ಮ ಪ್ರೀತಿಯನ್ನು ಉಳಿಸಿಕೊಡಿ ಎಂದು ಅಮ್ಮನ ಬಳಿ ಕೇಳಿದ್ದಾನೆ.
ಮದುವೆ ಬಗ್ಗೆ ತಲೆಕೆಡಿಸಿಕೊಂಡಿರುವ ಅಪ್ಪಿ
ಹೀಗಾಗಿ ಶಕುಂತಲಾ ಅಪೇಕ್ಷಾ ಬಳಿ ಮಾತನಾಡಿದ್ದು, ತಮ್ಮಿಬ್ಬರ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾಳೆ. ಯಾವುದೇ ಅಡ್ಡಿ ಆತಂಕ ಬಂದರೂ ಇಬ್ಬರಿಗೂ ಮದುವೆ ಮಾಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾಳೆ. ಶಕುಂತಲಾಳ ಈ ನಿರ್ಧಾರದಿಂದ ಪಾರ್ಥ ಮತ್ತು ಅಪೇಕ್ಷಾ ನೆಮ್ಮದಿಯಾಗಿದ್ದಾರೆ. ಆದಷ್ಟು ಬೇಗ ತಮ್ಮ ಮನೆಯಲ್ಲಿ ಮದುವೆ ಪ್ರಸ್ತಾಪವನ್ನು ಮಾಡಬೇಕು ಎಂದುಕೊಂಡಿದ್ದಾಳೆ. ಇದೇ ಸಂದರ್ಭದಲ್ಲಿ ಶಕುಂತಲಾ ಜೈದೇವ್ ಗೆ ಹಿಂಟ್ ಕೊಡಲು ಮುಂದಾಗಿದ್ದಾಳೆ. ಅಪೇಕ್ಷಾ ಪಾರ್ಥನ ಹೆಂಡತಿಯಾಗಲಿದ್ದಾಳೆ ಎಂದು ಹೇಳಲು ಯತ್ನಿಸಿದ್ದಾಳೆ.

ದಿಯಾಳ ಮನೆಗೆ ಬಂದ ಗೌತಮ್
ಇತ್ತ ಜೈದೇವ್ ದಿಯಾಳಿಗೆ ಕಾರನ್ನು ಕೊಡಿಸುತ್ತಿರುವುದು ಮತ್ತು ಅವಳೊಂದಿಗೆ ಬಹಳ ಕ್ಲೋಸ್ ಆಗಿರುವುದನ್ನು ನೋಡಿದ್ದು, ಗೌತಮ್ ಗಾಬರಿಯಾಗಿದ್ದಾನೆ. ಭೂಮಿಕಾ ಜೈದೇವ್ ನನ್ನು ದಾರಿಗೆ ತರಬೇಕು ಎಂದರೆ ನಾವು ಮೊದಲು ದಿಯಾಳಿಗೆ ಬುದ್ಧಿ ಹೇಳಬೇಕು ಎಂದಿದ್ದು, ಅವರ ಮನೆಗೆ ಹೋಗಿ ಬೈಯುತ್ತಾರೆ. ಜೈದೇವ್ ಗೆ ಮದುವೆಯಾಗಿದೆ. ಅವನಿಂದ ದೂರ ಇದ್ದಷ್ಟು ನಿನಗೇ ಒಳ್ಳೆಯದು. ಇಲ್ಲದೇ ಹೋದರೆ,ಕ ನಿಮ್ಮ ಮನೆಯ ಪರೀಸ್ಥಿತಿ ಹಾಳು ಮಾಡಲು ಕೂಡ ಹಿಂದೆ ಮುಂದೆ ನೋಡುವುದಿಲ್ಲ ಎಂದು ಬೈಯುತ್ತಾನೆ. ದಿಯಾ ತನ್ನ ತಂದೆಯನ್ನು ಕರೆಸಿ ಗೌತಮ್ ಗೆ ಬೈಯಿಸಲು ಯತ್ನಿಸುತ್ತಾಳೆ. ಆದರೆ, ಅವರ ತಂದೆ ಗೌತಮ್ ಅವರನ್ನು ಗೌರವದಿಂದ ಕಂಡು ಮಾತನಾಡಿಸಿದಾಗ ದಿಯಾಳಿಗೆ ಬೇರೆ ದಾರಿಯೇ ಇರುವುದಿಲ್ಲ. ಹೀಗಾಗಿ ಗೌತಮ್ ಹೇಳಿದ ಮಾತುಗಳನ್ನು ಕೇಳಿಸಿಕೊಂಡು ಸುಮ್ಮನಾಗುತ್ತಾಳೆ.
ಮಲ್ಲಿಯನ್ನು ಯಾಮಾರಿಸುತ್ತಿರುವ ಜೈದೇವ್
ಈ ವಿಚಾರವನ್ನು ದಿಯಾ ಜೈದೇವ್ ಗೆ ಫೋನ್ ಮಾಡಿ ಹೇಳುತ್ತಾಳೆ. ನಿಮ್ಮಿಂದಾಗಿ ನಾನು ಬೈಐಇಸಿಕೊಂಡೆ. ನಿಮ್ಮ ಅಣ್ಣ ಮತ್ತು ಅತ್ತಿಗೆ ಬಂದು ನನ್ನನ್ನು ಕೀಳಾಗಿ ಕಂಡರು. ನಿಮ್ಮ ಬಾಳಳಲ್ಲಿ ನಾನು ಬಂದಿದ್ದು ತಪ್ಪಂತೆ. ನಿಮ್ಮ ಸಹವಾಸ ಮಾಡಿದ್ದಕ್ಕೆ ನನಗೆ ಇದೆಲ್ಲವೂ ಬೇಕಿತ್ತು ಎಂದು ಬೇಸರ ಮಾಡಿಕೊಳ್ಳುತ್ತಾಳೆ. ದಿಯಾ ಫೋನ್ ಕಟ್ ಮಾಡಿದ ಮೇಲೆ ಜೈದೇವ್ ಗಾಬರಿಯಾಗುವುದಲ್ಲದೇ, ಭೂಮಿಕಾಳಿಂದಲೇ ತನ್ನ ಅಫೇರ್ ವಿಚಾರ ಗೌತಮ್ ಗೆ ಗೊತ್ತಾಗಿದೆ ಎಂದು ಅಪಾರ್ಥ ಮಾಡಿಕೊಳ್ಳುತ್ತಾನೆ. ಸೀದಾ ಮಲ್ಲಿ ಬಳಿಗೆ ಹೋಗಿ ತನ್ನದೇನೂ ತಪ್ಪಿಲ್ಲ. ಕಾರನ್ನು ಕೊಡಿಸಿದ ಮಾತ್ರಕ್ಕೆ ಸಂಬಂಧ ಕಟ್ಟುತ್ತಿದ್ದಾರೆ ಎಂದು ಹೇಳುತ್ತಾನೆ.

ಮಲ್ಲಿಗೆ ಬುದ್ಧಿ ಹೇಳಿದ ಭೂಮಿಕಾ
ಮಲ್ಲಿ ಜೈದೇವ್ ಮಾತನ್ನು ನಂಬುತ್ತಾಳೆ. ನನಗೆ ಯಾರು ಏನೇ ಅನ್ನಲಿ ನಿಮ್ಮ ಮೇಲೆ ನನಗೆ ಅನುಮಾನ ಬರುವುದಿಲ್ಲ ಎಂದು ಭರವಸೆ ಕೊಡುತ್ತಾಳೆ. ಭೂಮಿಕಾ ಗಂಡನನ್ನು ಹೆಂಡತಿ ಆದವಳು ಹದ್ದು ಬಸ್ತಿನಲ್ಲಿ ಇಟ್ಟುಕೊಂಡರೆ ಹೀಗೆಲ್ಲಾ ಆಗುವುದಿಲ್ಲ ಎಂದು ತಿಳಿಯುತ್ತಾಳೆ. ಹೀಗಾಗಿ ಮಲ್ಲೊಇಯನ್ನು ಕರೆದು ಗಂಡನ ಬಗ್ಗೆ ಎಚ್ಚರವಹಿಸು ಎಂದು ನೇರವಾಗಿ ಹೇಳಲಾಗದೇ ಒದ್ದಾಡುತ್ತಿರುತ್ತಾಳೆ. ಮಲ್ಲಿಗೆ ವಿಚಾರ ಗೊತ್ತಿದ್ದರಿಂದ ನನ್ನ ಗಂಡ ಹಾಗೆಲ್ಲಾ ಏನೂ ಇಲ್ಲ ಎಂದು ಹೇಳಿ ಸಂಭಾಳಿಸುತ್ತಾಳೆ.


Click it and Unblock the Notifications











