Amruthadhaare ; ಮತ್ತೆ ಬಾಲ ಬಿಚ್ಚಿರುವ ಜೈದೇವ್ : ಫುಲ್ ಖುಷಿ ಮೂಡ್ ನಲ್ಲಿ ಗೌತಮ್-ಭೂಮಿಕಾ..!
ಅಮೃತಧಾರೆ ಧಾರಾವಾಹಿಯಲ್ಲಿ ಮನೆಗೆ ಸ್ನೇಹಿತೆ ಧಾಮಿಸಿ ಬರುತ್ತಿದ್ದಾಳೆ ಎಂದು ಶಕುಂತಲಾ ಫುಲ್ ಹ್ಯಾಪಿ ಆಗಿದ್ದಾಲೆ. ತರಹೇವಾರಿ ಅಡುಗೆ ಮಾಡಲು ಹೇಳಿದ್ದು, ಗೆಳತಿಯನ್ನು ಸ್ವಾಗತಿಸಲು ರೆಡಿಯಾಗುತ್ತಿರುವ ಶಕುಂತಲಾ.ಮನೆಗೆ ಭಾಗ್ಯ ಬರುತ್ತಿರುವ ಸತ್ಯ ಗೊತ್ತಿಲ್ಲದೇ, ಲ್ಕಷ್ಮೀಕಾಂತ ಮತ್ತು ಜೈದೇವ್ ತಮ್ಮದೇ ಲೋಕದಲ್ಲಿದ್ದಾರೆ. ಮನೆಯಲ್ಲಿ ಏನೂ ಆಗೇ ಇಲ್ಲ ಎಂಬಂತೆ ಸುಮ್ಮನಿದ್ದಾರೆ. ಗೌತಮ್ ತನ್ನ ತಾಯಿ ಹಾಗೂ ಸಹೋದರಿ ಜೊತೆಗೆ ಮನೆಗೆ ಎಂಟ್ರಿಕೊಟ್ಟಿದ್ದಾನೆ. ಭಾಗ್ಯಳನ್ನು ಬಹಳ ವರ್ಷಗಳ ಬಳಿಕ ನೋಡಿದ ಅವರ ಅಜ್ಜಿ ಶಾಕ್ ಆಗಿದ್ದಾರೆ.
ಶಕುಂತಲಾಳನ್ನು ಕಂಡು ಹೆದರಿದ ಭಾಗ್ಯ
ನಮ್ಮ ಮನೆಯ ಭಾಗ್ಯವಾಗಿದ್ದ ಭಾಗ್ಯ ಇವಳು. ಇಷ್ಟು ವರ್ಷ ಎಲ್ಲಿದ್ದಳು. ನಿನಗೆ ಎಲ್ಲಿ ಸಿಕ್ಕಳು ಎಂದೆಲ್ಲಾ ಪ್ರಶ್ನಿಸುತ್ತಾ ಗೌತಮ್ ಅಜ್ಜಿ ಕಣ್ಣೀರು ಇಡುತ್ತಾರೆ. ಅಲ್ಲದೇ, ಆರತಿ ಮಾಡಿ ಸೊಸೆಯನ್ನು ಮತ್ತೆ ಮನೆಗೆ ಕರೆಸಿಕೊಳ್ಳುತ್ತಾರೆ. ಭಾಗ್ಯ ಏನೂ ಮಾತನಾಡದೇ ಇರುವುದನ್ನು ಕಂಡು ಅಜ್ಜಿ ಮೊಮ್ಮಗನನ್ನು ಪ್ರಶ್ನೆ ಮಾಡುತ್ತಾರೆ. ಆಗ ಗೌತಮ್ ಬಹಳ ವರ್ಷದಿಂದ ಅಮ್ಮ ಹೀಗೆ ಇದ್ದಾರಂತೆ, ಆಸ್ಪತ್ರೆಗೆ ತೋರಿಸುತ್ತೇನೆ ಎನ್ನುತ್ತಾನೆ. ಇನ್ನು ಶಕುಂತಲಾ ಅಮ್ಮ ಎಲ್ಲಿ ಎಂದು ಕೇಳಿದಾಗ ಲಕ್ಷ್ಮೀಕಾಂತ ಅವರಿಗೆ ತಲೆನೋವು ಅದಕ್ಕೆ ಮಲಗಿದ್ದಾರೆ ಎಂದು ಸುಳ್ಳು ಹೇಳುತ್ತಾನೆ. ಗೌತಮ್ ತನ್ನ ತಾಯಿ ಭಾಗ್ಯಳನ್ನು ಶಕುಂತಲಾ ರೂಮಿಗೆ ಕರೆದುಕೊಂಡು ಹೋಗುತ್ತಾನೆ. ಆಗ ಭಾಗ್ಯ ಶಕುಂತಲಾಳನ್ನು ಕಂಡು ಹೆದರುತ್ತಾಳೆ. ಆಗ ಗೌತಮ್ ತನ್ನ ತಾಯಿಗೆ ಏನೂ ನೆನಪಿಲ್ಲ. ಹೊಸಬರನ್ನು ನೋಡಿದ್ದಕ್ಕೆ ಹೀಗೆ ಆಡುತ್ತಿರಬೇಕು ಎಂದುಕೊಳ್ಳುತ್ತಾನೆ.

ಕೆಲಸ ಕೆಟ್ಟಿದ್ದಕ್ಕೆ ಬೇಸರ ಮಾಡಿಕೊಂಡ ಜಯರಾಂ
ಆದರೆ, ಭಾಗ್ಯ ತನ್ನನ್ನು ಗುರುತಿಸಲಿಲ್ಲ ಎಂದು ಸಮಾಧಾನ ಮಾಡಿಕೊಂಡ ಶಕುಂತಲಾ ಬೇಕಂತಲೇ ಭಾಗ್ಯಳನ್ನು ಮಾತನಾಡಿಸುವ ಯತ್ನ ಮಾಡುತ್ತಾಳೆ. ಇತ್ತ ಜೈದೇವ್ ಕೋಪ ಮಾಡಿಕೊಂಡಿದ್ದು, ಜಯರಾಂಗೆ ಫೋನ್ ಮಾಡಿ, ಭಾಗ್ಯ ಮತ್ತು ಅವರ ಕುಟುಂಬ ತಮ್ಮ ಮನೆಗೆ ಬಂದು ವಕ್ಕರಿಸಿದ್ದು, ನೀವು ಕಿಡ್ನ್ಯಾಪ್ ಮಾಡಿಸಿದ್ದು ಯಾರಿಗೆ. ನಿಮ್ಮನ್ನು ನಂಬಿ ನಾಣು ಕೆಟ್ಟೆ ಎಂದು ಬೈದು ಫೋನ್ ಇಡುತ್ತಾನೆ. ಜಯರಾಂ ಅನುಮಾನಗೊಂಡು ಗೋಡೌನ್ ಗೆ ಹೋಗಿ ನೋಡಿದರೆ, ಅಲ್ಲಿ ಅವಚರ ಹುಡುಗರು ಕಿಡ್ನ್ಯಾಪ್ ಮಾಡಿದ್ದೇ ಬೇರೆಯವರನ್ನು ಇದನ್ನು ಕಂಡ ಜಯರಾಂ ಅಯ್ಯೋ ನನ್ನ ಕೈಗೆ ಸಿಕ್ಕಿದ ಒಳ್ಳೆಯ ಅವಕಾಶವನ್ನು ನಾನು ಕಳೆದುಕೊಂಡೆ ಎಂದು ಬೇಸರ ಮಾಡಿಕೊಳ್ಳುತ್ತಾನೆ.
ಅಮ್ಮನ ಮಡಿಲಲ್ಲಿ ಮಲಗಿದ ಗೌತಮ್
ಇತ್ತ ಅಮ್ಮ ಮನೆಗೆ ಬಂದಿದ್ದಕ್ಕೆ ಗೌತಮ್ ಗೆ ಬಹಳ ಖುಷಿ ಇರುತ್ತದೆ. ಅಮ್ಮನನ್ನು ತನಗೆ ಗೊತ್ತಿರುವ ಒಳ್ಳೆಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಬೇಕು ಎಂದುಕೊಳ್ಳುತ್ತಾನೆ. ಗೆಳೆಯನ ಬಾಳಲ್ಲಿ ಒಳ್ಳೆಯದಾಗುತ್ತಿರುವುದಕ್ಕೆ ಆನಂದ್ ಮತ್ತು ಅಪರ್ಣಾ ಬಹಳ ಖುಷಿ ಪಡುತ್ತಾರೆ. ಇನ್ನು ಗೌತಮ್ ಗೆ ರಾತ್ರಿ ಇಡೀ ನಿದ್ದೆಯೇ ಬರುವುದಿಲ್ಲ. ಖುಷಿಗೂ ನಿದ್ದೆ ಬರೋದಿಲ್ವಾ ಎಂದು ಭುಮಿಕಾ ಬಳಿ ಹೇಳುತ್ತಾನೆ. ಆಗ ಭೂಮಿಕಾ ಗೌತಮ್ ನನ್ನು ತನ್ನ ತಾಯಿಯ ರೂಮ್ ಗೆ ಕರೆದುಕೊಂಡು ಹೋಗಿ ಅಮ್ಮನ ಮಡಿಲಲ್ಲಿ ಮಲಗುವಂತೆ ಹೇಳುತ್ತಾನೆ. ಗೌತಮ್ ಖುಷಿಯಾಗಿ ಮಲಗುತ್ತಾನೆ.
ಮತ್ತೆ ಬಾಲ ಬಿಚ್ಚಿರುವ ಜೈದೇವ್
ಇತ್ತ ಜೈದೇವ್ ಕಡೆಗೆ ಗೌತಮ್ ಮತ್ತು ಭೂಮಿಕಾ ಗಮನ ಕಮ್ಮಿ ಮಾಡಿದ್ದು, ಈಗ ಮತ್ತೆ ಬಾಲ ಬಿಚ್ಚಿದ್ದಾನೆ. ಮಲ್ಲಿ ಬಳಿ ಮತ್ತೆ ಆಫೀಸ್ ಕೆಲಸದ ನೆಪ ಹೇಳಿ, ದಿಯಾಳನ್ನು ಭೇಟಿ ಮಾಡಲು ಹೋಗುತ್ತಿದ್ದಾನೆ. ದಿಯಾ ಜೊತೆಗೆ ಜೈದೇವ್ ಇಡೀ ರಾತ್ರಿ ಕಳೆದಿದ್ದು, ಮಲ್ಲಿ ಆತಂಕಗೊಂಡಿದ್ದಾಳೆ. ಆದರೆ, ಜೈದೇವ್ ಮತ್ತೆ ಮಲ್ಲಿಯನ್ನು ಯಾಮಾರಿಸಿದ್ದಾನೆ. ಇನ್ನು ಮನೆಗೆ ಬಹಳ ಕಾಲಗಳ ಬಳಿಕ ಭೂಮಿಕಾ ತಂದೆ-ತಾಯಿ ಸದಾಶಿವ ಮತ್ತು ಮಂದಾಕಿನಿ ಆಗಮಿಸಿದ್ದಾರೆ.


Click it and Unblock the Notifications











