Amruthadhaare ; ಶಕುಂತಲಾಳಿಗೆ ಕೊನೆಯ ಬಾರಿಗೆ ಖಡಕ್ ವಾರ್ನಿಂಗ್ ಕೊಟ್ಟ ಭೂಮಿಕಾ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಂದಾಗಬೇಕು. ಇಬ್ಬರೂ ಸುಖ ಸಂಸಾರ ನಡೆಸಬೇಕು ಎಂದು ಆನಂದ್ ಮತ್ತು ಅಜ್ಜಿ ಸೇರಿಕೊಂಡು ಫಸ್ಟ್ ನೈಟ್ ಅರೇಂಜ್ ಮಾಡಿದ್ದರು.ಭೂಮಿಕಾ ಹಾಗೂ ಗೌತಮ್ ತಮ್ಮಿಬ್ಬರಿಗೂ ಮುಜುಗರವಿದ್ದರೂ ಕೂಡ ಅಜ್ಜಿಯ ಒತ್ತಾಯಕ್ಕೆ ಒಪ್ಪಿಕೊಂಡಿದ್ದಾರೆ. ಗೌತಮ್ ನಾವಿಬ್ಬರೂ ಈಗಷ್ಟೇ ಒಬ್ಬರನ್ನೊಬ್ಬರು ಇಷ್ಟಪಡುತ್ತಿದ್ದೇವೆ.ನಾವಿಬ್ಬರೂ ಅರ್ಥ ಮಾಡಿಕೊಳ್ಳುವುದು ಇನ್ನೂ ಸಾಕಷ್ಟು ಸಮಯ ಬೇಕಾಗುತ್ತದೆ. ಒಮ್ಮೆ ನಾವಿಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡ ಬಳಿಕ ಮುಂದುವರೆಯೋಣ ಎಂದು ಹೇಳುತ್ತಾನೆ.

ಹೊಸ ಜೀವನ ಶುರು ಮಾಡಿದ ಜೋಡಿ

ಆದರೆ ಭೂಮಿಕಾ ತನ್ನ ಸಂಸಾರವನ್ನು ಆರಂಭಿಸಲು ತಡ ಮಾಡುವುದಿಲ್ಲ. ನಮ್ಮಿಬ್ಬರ ಮಧ್ಯೆ ನಾವೇ ಕಟ್ಟಿಕೊಂಡಿದ್ದ ದೊಡ್ಡ ಗೋಡೆಯನ್ನು ಒಡೆದು ಹಾಕಿದ್ದೇವೆ. ಅದೇ ಕಲ್ಲುಗಳಿಂದ ಸೇತುವೆಯನ್ನು ಕಟ್ಟಿಕೊಂಡಿದ್ದೇವೆ ಎಂದು ಹೇಳುತ್ತಾಳೆ. ಇಬ್ಬರೂ ತಮ್ಮ ಸಂಸಾರವನ್ನು ಆರಂಭಿಸಲು ಇದು ಸೂಕ್ತ ಸಮಯ ಎಂದು ಹೇಳಿ ಒಂದಾಗುತ್ತಾರೆ. ಭೂಮಿಕಾ ಮತ್ತು ಗೌತಮ್ ತಡವಾಗಿ ಆದರೂ ಕೂಡ ಖುಷಿಯಿಂದ ಹೊಸ ಸಂಸಾರವನ್ನು ಶುರು ಮಾಡಿದ್ದಾರೆ. ಇಬ್ಬರೂ ಒಂದಾಗಲು ಶಕುಂತಲಾ ಪದೇ ಪದೇ ಅಡ್ಡ ಬರುತ್ತಿದ್ದಳು. ಆದರೆ, ಈ ಬಾರಿ ಯಾರೂ ಅಡ್ಡಿ ಮಾಡಲು ಅಜ್ಜಿ ಅವಕಾಶ ಮಾಡಿಕೊಟ್ಟಿಲ್ಲ.

Amruthadhaare Serial 06 June episode written update

ಮಹಿಮಾಳಿಗೆ ಕಡಿಮೆಯಾಗದ ಕೋಪ

ಇತ್ತ ಜೀವನ್ ತನ್ನ ಹೊಸ ಕಂಪನಿಯನ್ನು ಶುರು ಮಾಡಿದ್ದು ಅದರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾನೆ. ಹೀಗಾಗಿ ಮನೆಯಲ್ಲಿ ಯಾರಿಗೂ ಜೀವನ್ ಸಮಯ ಕೊಡಲು ಆಗುತ್ತಿಲ್ಲ. ಇದರಿಂದ ಮಹಿಮಾ ಪದೇ ಪದೇ ಕೋಪ ಮಾಡಿಕೊಳ್ಳುತ್ತಿದ್ದಾಳೆ. ಹೊರಗಡೆ ಹೋಗೋಣ ಬೇಗ ಬಾ ಎಂದು ಜೀವನ್ ಗೆ ಹೇಳಿರುತ್ತಾಳೆ ಆದರೆ ಜೀವನ್ ರಾತ್ರಿ ತಡವಾಗಿ ಬಂದಿದ್ದಕ್ಕೆ ಕೋಪ ಮಾಡಿಕೊಳ್ಳುತ್ತಾಳೆ. ದೇವರು ಕೊಟ್ಟಾಗ ಮಗುವನ್ನು ನಾನೇ ನನ್ನ ಕೈಯ್ಯಾರೆ ಕಳೆದುಕೋಮಡೆ. ಈಗ ಮಗು ಬೇಕು ಎಂದರೂ ಆಗುತ್ತಿಲ್ಲ ಎಂದು ಕೋಪದಲ್ಲಿರುತ್ತಾಳೆ. ಜೀವನ್ ನನಗೆ ಸ್ವಲ್ಪ ಸಮಯ ಕೊಡು ಕಂಪನಿ ಒಂದು ಹಂತಕ್ಕೆ ಬಂದ ಕೂಡಲೇ ಮಗು ಬಗ್ಗೆ ಪ್ಲಾನ್ ಮಾಡೋಣ ಎಂದು ಹೇಳಿ ಸಮಾಧಾನ ಮಾಡಲು ಯತ್ನಿಸುತ್ತಾನೆ.

ಅಜ್ಜಿಗೆ ಈಗ ಆನಂದವೋ ಆನಂದ

ಭೂಮಿಕಾ ಮತ್ತು ಗೌತಮ್ ನನ್ನು ನೋಡಿ ಅಜ್ಜಿಗೆ ಫುಲ್ ಖುಷಿಯಾಗಿದೆ. ಇಬ್ಬರೂ ಆದಷ್ಟು ಬೇಗ ಮರಿ ಮೊಮ್ಮಗುವನ್ನು ಕೊಡಲಿ ಎಂದು ಬಯಸಿದ್ದಾರೆ. ಭೂಮಿಕಾಳಿಗೆ ಸಂಸಾರದ ಬಗ್ಗೆ ಒಂದಷ್ಟು ಕಿವಿ ಮಾತುಗಳನ್ನು ಹೇಳಿದ್ದಾರೆ. ಗೌತಮ್ ಕೂಡ ಫುಲ್ ಹ್ಯಾಪಿ ಆಗಿದ್ದಾನೆ. ಆನಂದ್ ಹಾಗೂ ಅಜ್ಜಿ ಇಬ್ಬರೂ ಈ ಸಂದರ್ಭವನ್ನು ಕಂಡು ತೃಪ್ತಿ ಹೊಂದಿದ್ದಾರೆ. ಇನ್ನು ಆನಂದ್ ಮತ್ತು ಅಪರ್ಣಾ ಇದೇ ಖುಷಿಯಲ್ಲಿ ಗೌತಮ್ ಹಾಗೂ ಭೂಮಿಕಾ ಜೊತೆಗೆ ಪಾರ್ಟಿ ಮಾಡಲು ಪ್ಲಾನ್ ಮಾಡಿದ್ದಾರೆ.

Amruthadhaare Serial 06 June episode written update

ಅತ್ತೆಗೆ ಕೊನೆಯ ಬಾರಿ ವಾರ್ನಿಂಗ್ ಕೊಟ್ಟ ಸೊಸೆ

ಶಕುಂತಲಾ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಭೂಮಿಕಾಳಿಂದ ತನ್ನ ಉದ್ದೇಶಗಳೆಲ್ಲವೂ ಹಾಳಾಗುತ್ತಿದೆ. ತಾನು ಏನೇ ಅಂದುಕೊಂಡರೂ ನೆರವೇರುತ್ತಿಲ್ಲ ಎಂದು ಗೋಳಾಡುತ್ತಿರುತ್ತಾಳೆ. ಭೂಮಿಕಾ ಬಂದು ಅತ್ತೆಗೆ ಕೊನೆಯ ಬಾರಿಗೆ ವಾರ್ನಿಂಗ್ ಕೊಡುತ್ತಾಳೆ. ಪ್ರತೀ ಸಲವೂ ನಾನು ಮತ್ತು ಗೌತಮ್ ಒಂದಾಗಬೇಕು ಎಂದುಕೊಂಡಾಗಲೆಲ್ಲಾ ನಮ್ಮನ್ನು ದೂರ ಮಾಡಲು ಪ್ರಯತ್ನ ಪಟ್ಟಿದ್ದೀರಾ, ಜ್ಯೋತಿಷ್ಯರ ಬಳಿ ಸುಳ್ಳು ಹೇಳಿಸಿದ್ದು, ಚಿಕ್ಕಮಗಳೂರಿನಿಂದ ವಾಪಸ್ ಕರೆಸಿದ್ದ ಎಲ್ಲವೂ ಬೇಕಂತಲೇ ಮಾಡಿದ್ದ ಅಂತ ಗೊತ್ತಿದೆ. ಮತ್ತೆ ನೀವೇನಾದರೂ ನನ್ನ ಮತ್ತು ಗೌತಮ್ ನಡುವೆ ಬಂದರೆ ನಾನಂತೂ ಸುಮ್ಮನಿರಲ್ಲ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾಳೆ.

More from Filmibeat

English summary
bhoomika warns shakunthala for the last time.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X