Amruthadhaare ; ಭೂಮಿಕಾ ಬಗ್ಗೆ ಚಾಡಿ ಹೇಳಿದ ಶಕುಂತಲಾ : ಗೌತಮ್ ಮನದಲ್ಲಿ ಮೂಡಿದ ಅನುಮಾನ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಕೆಲಸವಿಲ್ಲದ ಕಾರಣ ಜೀವನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಭೂಮಿಕಾ ಕೂಡ ತಮ್ಮನಿಗಾಗಿ ಕೆಲಸ ಹುಡುಕುತ್ತಿದ್ದಾಳೆ. ಇದೇ ಸಂದರ್ಭದಲ್ಲಿ ಮಹಿಮಾಳ ಸ್ನೇಹಿತೆ ಫೋನ್ ಮಾಡಿ ಜೀವನ್ ಫುಡ್ ಡೆಲಿವರಿ ಮಾಡುತ್ತಿದ್ದಾನೆ. ಪಾರ್ಟ್ ಟೈಂ ಜಾಬ್ ಯಾವಾಗ ಶುರುವಾಯ್ತು ಎಂದು ರೇಗಿಸಿದ್ದಾಳೆ. ಇದರಿಂದ ಮಹಿಮಾಳಿಗೆ ಕೋಪ ಬಂದಿದ್ದು ಸ್ನೇಹಿತೆ ಜೊತೆಗೆ ಜಗಳವಾಡಿದ್ದಾಳೆ. ಈ ವಿಚಾರ ತಿಳಿದ ಜೀವನ್ ಗಾಬರಿಯಾಗಿದ್ದಾನೆ. ಮಹಿಮಾಳಿಗೆ ಸತ್ಯ ಗೊತ್ತಾದರೆ ಏನು ಮಾಡುವುದು ಎಂಬುದು ಗೊತ್ತಾಗುತ್ತಿಲ್ಲ.

ಅತ್ತಿಗೆ ಮಾತು ಕೇಳಿ ಖುಷಿಯಾದ ಪಾರ್ಥ

ಇನ್ನು ಪಾರ್ಥನನ್ನು ನೋಡಲು ಅಪೇಕ್ಷಾ ಅಕ್ಕನ ನೆಪದಲ್ಲಿ ಮನೆಗೆ ಬಂದಿದ್ದಾಳೆ. ಅಕ್ಕ ಕಾಲೇಜಿಗೆ ಹೋಗಿದ್ದಾರೆ ಎಂದು ಮಲ್ಲಿ ಕಾಫಿ ಕೊಟ್ಟು ಮಾತನಾಡಿಸಿದ್ದಾಳೆ. ಪಾರ್ಥನಿಗೆ ಅಪೇಕ್ಷಾ ಬಂದಿದ್ದು ಗಾಬರಿಯನ್ನುಂಟು ಮಾಡಿದೆ. ಯಾಕೆ ಬಂದಿದ್ದು ಎಂದು ಪ್ರಶ್ನಿಸಿದ್ದಕ್ಕೆ ಅಪೇಕ್ಷಾ ನೀವು ಯಾಕೆ ನನ್ನನ್ನು ಅವಾಯ್ಡ್ ಮಾಡುತ್ತಿದ್ದೀರಾ..? ನಾನು ನಿಮ್ಮನ್ನೆ ನಂಬಿಕೊಂಡಿದ್ದೇನೆ. ಇವತ್ತು ನನಗೆ ಸತ್ಯ ಹೇಳಿ ಎಂದು ಹಠ ಮಾಡುತ್ತಾಳೆ. ಫೋನ್ ಮಾಡಿ ಇವತ್ತು ನನ್ನನ್ನು ಮೀಟ್ ಮಾಡಿ ಎಲ್ಲಾ ವಿಚಾರವನ್ನು ಹೇಳಲೇಬೇಕು ಎಂದು ಪಟ್ಟು ಹಿಡಿಯುತ್ತಾಳೆ. ಪಾರ್ಥ ಈ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಮನೆಗೆ ಬಂದ ಭೂಮಿಕಾ ಜೊತೆಗೆ ಮಾತನಾಡುತ್ತಾನೆ. ಭೂಮಿಕಾ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕು ಎಂದು ಹೇಳಿ, ಪಾರ್ಥ ಮತ್ತು ಅಪೇಕ್ಷಾ ಪ್ರೀತಿಗೆ ತನ್ನ ಒಪ್ಪಿಗೆ ಇದೆ ಎನ್ನುತ್ತಾಳೆ. ಈ ಮಾತು ಕೇಳಿದ್ದೇ ತಡ ಪಾರ್ಥ ಫುಲ್ ಹ್ಯಾಪಿ ಆಗಿ ಅಪೇಕ್ಷಾಳನ್ನು ಭೇಟಿ ಮಾಡಲು ಹೋಗುತ್ತಾನೆ.

Amruthadhaare Serial 06 May episode written update

ಭೂಮಿಕಾಳನ್ನು ಹೆಚ್ಚು ನಂಬುವ ಗೌತಮ್

ಆಫೀಸಿನಲ್ಲಿ ಗೌತಮ್ ಆನಂದ್ ಜೊತೆಗೆ ಮಾತನಾಡುವಾಗ ನಂಬಿಕೆ ಬಗ್ಗೆ ಮಾತನಾಡುತ್ತಾನೆ. ಆಗ ನಿನಗಿಂತಲೂ ನಾನು ಭೂಮಿಕಾ ಅವರನ್ನು ಹೆಚ್ಚು ನಂಬ್ತೀನಿ. ಆ ನಂಬಿಕೆಗೆ ಭೂಮಿಕಾ ಅವರು ಅರ್ಹರು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಆನಂದ್ ಗೆ ಗಾಬರಿಯಾಗುತ್ತದೆ. ಸೀದಾ ಗೌತಮ್ ಮನೆಗೆ ಬಂದು ಭೂಮಿಕಾಳ ಬಳಿ ನೀವು ಒಡವೆಯನ್ನು ಅಡವಿಟ್ಟಿರುವ ವಿಚಾರವನ್ನು ಗೌತಮ್ ಬಳಿ ಹೇಳಿ ಬಿಡಿ. ಅವರು ನಿಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿದ್ದಾರೆ. ನೀವು ಈ ಸತ್ಯವನ್ನು ಮುಚ್ಚಿಟ್ಟಿರುವ ಸತ್ಯ ತಿಳಿದರೆ, ಗೌತಮ್ ಗೆ ಬೇಸರವಾಗುತ್ತದೆ ಎನ್ನುತ್ತಾನೆ.

ಭೂಮಿಕಾ ಬಗ್ಗೆ ಚಾಡಿ ಹೇಳಿದ ಶಕುಂತಲಾ

ಭೂಮಿಕಾ ಹಾಗೂ ಗೌತಮ್ ಮನೆಯಲ್ಲಿ ಇಲ್ಲದಾಗ ರೂಮ್ ನಲ್ಲಿ ಶಕುಂತಲಾ ಚೆಕ್ ಮಾಡುತ್ತಾಳೆ. ಆಗ ಒಡವೆಗಳನ್ನು ಅಡವಿಟ್ಟ ಚೀಟಿ ಸಿಗುತ್ತದೆ. ಅದನ್ನು ಗೌತಮ್ ಗೆ ತೋರಿಸಿ ಭೂಮಿಕಾ ಯಾವುದೋ ಸಮಸ್ಯೆ ಎದುರಿಸುತ್ತಿದ್ದಾಳೆ. ಮನೆಯವರಿಂದ ಸತ್ಯ ಮುಚ್ಚಿಟ್ಟಿದ್ದಾಳೆ. ಮನೆಯವರ ಬಳಿಯೇ ಹೇಳದಿರುವುದು ತಪ್ಪು ಎಂದು ಗೌತಮ್ ಗೆ ಹೇಳಿಕೊಟ್ಟಿದ್ದಾಳೆ. ಚಾಡಿ ಮಾತು ಆಡಿ, ಭೂಮಿಕಾಳ ಮೇಲೆ ಗೌತಮ್ ಇಟ್ಟಿರುವ ನಂಬಿಕೆಯನ್ನು ಹಾಳು ಮಾಡಲು ಯತ್ನಿಸಿದ್ದಾಳೆ.

Amruthadhaare Serial 06 May episode written update

ಅನುಮಾನದಲ್ಲಿ ಮಾತನಾಡಿದ ಗೌತಮ್

ಚೀಟಿಯನ್ನು ನೋಡಿದ ಗೌತಮ್ ಗೆ ಅನುಮಾನ ಮೂಡಿದೆ. ಭೂಮಿಕಾ ತನ್ನಿಂದ ಸತ್ಯ ಯಾಕೆ ಮುಚ್ಚಿಟ್ಟಳು ಎಂದು ತನ್ನ ಮನದಲ್ಲೇ ನೂರೆಂಟು ಪ್ರಶ್ನೆಗಳನ್ನು ಕೇಳಿಕೊಂಡಿದ್ದಾನೆ. ಭೂಮಿಕಾ ಕೂಡ ಗಿಲ್ಟ್ ನಲ್ಲಿದ್ದು, ಸತ್ಯ ಹೇಳಲಾಗದೇ ಒದ್ದಾಡುತ್ತಿದ್ದಾಳೆ. ಭೂಮಿಕಾಳಿಗೆ ಬಂದಿರುವ ಕಷ್ಟವೇನು..? ಅದೂ ಕೂಡ ತನ್ನ ಬಳಿ ಹೇಳದಂತೆ ಬಚ್ಚಿಡುವಂತೆ ಏನಾಗಿದೆ ಎಂದು ಗೌತಮ್ ಆಲೋಚಿಸುತ್ತಿದ್ದಾನೆ.

More from Filmibeat

English summary
shakunthala intentionly complains about bhoomika with gautham
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X