Amruthadhaare: 25 ಕೋಟಿ ರೂ. ಹಣ ನಾಪತ್ತೆ: ತಲೆ ಕೆಡಿಸಿಕೊಂಡ ಗೌತಮ್‌ಗೆ ಭೂಮಿಕಾ ಕ್ಲಾಸ್
ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ ಸುಳ್ಳು ಹೇಳಿ ಕಂಪನಿಯ ಹಣ ಪಡೆದುಕೊಂಡಿದ್ದಾನೆ. ತನಗೆ ಬೇಕಾದ ಹಾಗೆ ಹಣ ಬಳಸಿಕೊಂಡಿದ್ದಾನೆ. ಇದೇ ವಿಚಾರಕ್ಕೆ ಜಯದೇವ ಕೆಲ ದಿನಗಳಿಂದ ಸ್ವಲ್ಪ ಟೆನ್ಷನ್‌ನಲ್ಲಿ ಕೂಡ ಇದ್ದಾನೆ. ತಾನು ಕದ್ದು ಮಾಡಿರುವ ವ್ಯವಹಾರವನ್ನು ಅಣ್ಣ ಗೌತಮ್ ದಿವಾನ್‌ಗೆ ತಿಳಿಯದಂತೆ ಮಾಡುವುದು ಹೇಗೆ ಅನ್ನೋ ಯೋಚನೆಯಲ್ಲಿದ್ದಾನೆ.
ನಿನ್ನ ಸಮಸ್ಯೆ ಏನು ಎಂದು ಹೇಳು ಅಳಿಮಯ್ಯ, ನಿನ್ನ ಕಷ್ಟಕ್ಕೆ ನನ್ನ ಹತ್ರ ಪರಿಹಾರವಿದೆ ಎಂದು ಲಕ್ಷ್ಮೀಕಾಂತ ಹೇಳುತ್ತಾನೆ. ಆದರೂ ಜಯದೇವ ಏನಾಗುತ್ತಿದೆ ಎಂದು ಹೇಳುವುದೇ ಇಲ್ಲ.

ಇತ್ತ ಆಫೀಸಿನಲ್ಲಿ ದೊಡ್ಡ ಗಂಡಾಂತರವೇ ಎದುರಾಗಿರುತ್ತದೆ. ಲೈಸೆನ್ಸ್ ಇಲ್ಲದೆಯೇ ಕಂಪನಿಯನ್ನು ನಡೆಸುತ್ತಿದ್ದೀರಾ? ಎಂದು ನೋಟೀಸ್ ಅನ್ನು ನೀಡಲಾಗುತ್ತದೆ. ನೋಟೀಸ್ ನೋಡಿ ಆನಂದ್‌ಗೆ ಶಾಕ್ ಆಗುತ್ತದೆ.
ನೋಟೀಸ್ ಪಡೆದ ದಿವಾನ್ ಕಂಪನಿ
ಲೈಸೆನ್ಸ್ ರಿನೀವಲ್ ಮಾಡಿಸಿದ್ದೀವಿ ಎಂದು ಆನಂದ್ ಲೈಸೆನ್ಸ್ ಕಾಪಿಯನ್ನು ಅಧಿಕಾರಿಗಳಿಗೆ ತೋರಿಸುತ್ತಾನೆ. ಆದರೆ, ಅದನ್ನು ನೋಡಿ ಇದು ಡುಪ್ಲಿಕೇಟ್ ಲೈಸೆನ್ಸ್ ಎಂದು ಹೇಳುತ್ತಾರೆ. ಇದರಿಂದ ಶಾಕ್ ಆದ ಆನಂದ್ ಅಕೌಂಟ್ಸ್ ಅನ್ನು ಚೆಕ್ ಮಾಡುತ್ತಿರುತ್ತಾನೆ. ಇನ್ನು ಯುಎಸ್‌ನಿಂದ ಬಂದ ಗೌತಮ್ ಅನ್ನು ಕೂಡ ಆಫಿಸಿಗೆ ಕರೆಸಿಕೊಳ್ಳುತ್ತಾನೆ. ನಡೆದ ಘಟನೆಗಳನ್ನೆಲ್ಲಾ ಹೇಳುತ್ತಾನೆ. ಗೌತಮ್ ತನ್ನ ಆಫಿಸಿನಲ್ಲಿ ಹೀಗೆಲ್ಲಾ ನಡೆಯುತ್ತಿದೆಯಾ? ಎಂದು ಗಾಬರಿಯಾಗುತ್ತದೆ.
ಮನೆಯಲ್ಲಿ ಅಡ್ಜಸ್ಟ್ ಮಾಡಿಕೊಳ್ಳಲಾಗುತ್ತಿಲ್ಲ
ಇನ್ನು ಮಹಿಮಾ ಮಿಡಲ್ ಕ್ಲಾಸ್ ಮನೆಗೆ ಹೊಂದಿಕೊಳ್ಳಲು ಬಹಳ ಕಷ್ಟಪಡುತ್ತಿದ್ದಾಳೆ. ಐಷಾರಾಮಿ ಬದುಕು ನಡೆಸಿದ ಮಹಿಮಾಗೆ ಚಿಕ್ಕ ಅಪಾರ್ಟ್‌ಮೆಂಟ್ ನಲ್ಲಿ ಎಸಿ ಇಲ್ಲ. ಆಳುಗಳಿಲ್ಲದೆ ಜೀವನ ನಡೆಸಲು ಆಗುತ್ತಿಲ್ಲ. ಪಾರ್ಟಿ ಮಾಡಿದ್ದರಿಂದ ಮನೆಯಲ್ಲಿ ಸಮಸ್ಯೆ ಎದುರಾಗಿದೆ. ಆಫೀಸ್‌ನಿಂದ ಲೇಟ್ ಆಗಿ ಬಂದಿದ್ದಕ್ಕೂ ಕಿರಿಕಿರಿ ಉಂಟಾಗಿದೆ. ಇದೆಲ್ಲದರಿಂದ ಮಹಿಮಾಳಿಗೆ ಸಾಕಾಗಿ ಹೋಗಿದೆ. ಸ್ನೇಹಿತರು ಬೇರೆ ಆ ಮನೆ ನಿನಗಲ್ಲ. ನಿನ್ನ ರೇಂಜ್ ಬೇರೆಯೇ ಇದೆ ಎಂದು ಇಲ್ಲಸಲ್ಲದ್ದನ್ನು ತಲೆಗೆ ತುಂಬುತ್ತಿದ್ದಾರೆ. ಮಹಿಮಾ ತಲೆ ಕೆಟ್ಟಿದ್ದು, ಚಿಕ್ಕ-ಪುಟ್ಟ ವಿಚಾರಕ್ಕೂ ಜೀವನ್ ಜೊತೆಗೆ ಜಗಳ ಮಾಡಿಕೊಳ್ಳುವಂತಾಗಿದೆ.

ಕೋಟಿ ಕೋಟಿ ಹಣ ಮಿಸ್
ಆನಂದ್ ಮತ್ತು ಗೌತಮ್ ಅಕೌಂಟ್ಸ್ ಅನ್ನು ಚೆಕ್ ಮಾಡುತ್ತಾರೆ. ಹಲವು ಕಡೆಗಳಲ್ಲಿ ಹಣ ಮಿಸ್ ಆಗಿರುವುದು ಪತ್ತೆಯಾಗುತ್ತದೆ. ಅದರಲ್ಲೂ ಬರೋಬ್ಬರಿ 25 ಕೋಟಿ ರೂಪಾಯಿ ಹಣದ ಲೆಕ್ಕವೇ ಸಿಕ್ಕಿರುವುದಿಲ್ಲ. ಆಫಿಸ್‌ನಲ್ಲಿ ಇರುವವರಿಗೆ ಎಲ್ಲಾ ಸೌಲಭ್ಯವನ್ನೂ ಕೊಟ್ಟಿದ್ದೀವಿ ಆದರೂ, ಇಷ್ಟೊಂದು ಹಣ ಯಾಕೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆನಂದ್ ಅನ್ನು ಪ್ರಶ್ನಿಸುತ್ತಾನೆ. ಆನಂದ್ ನೀನು ವರಿ ಮಾಡಿಕೊಳ್ಳಬೇಡ. ಇದು ಯಾರಿಂದ ಹೀಗಾಗಿದೆ ಎಂದು ನಾನು ಪತ್ತೆ ಮಾಡುತ್ತೇನೆ ಎಂದು ಹೇಳಿ ಸಮಾಧಾನ ಮಾಡಿ ಮನೆಗೆ ಕಳಿಸುತ್ತಾನೆ. ಇದೇ ಟೆನ್ಷನ್‌ನಲ್ಲಿ ಗೌತಮ್ ಮನೆಗೆ ಬರುತ್ತಾನೆ.
ಆತಂಕದಲ್ಲಿರುವ ಗೌತಮ್
ಅಜ್ಜಿ, ಭೂಮಿಕಾ ಕೈಯಲ್ಲಿ ಅಡುಗೆ ಮಾಡಿಸಿ, ನಿನ್ನ ಗಂಡ ಬಂದ ಕೂಡಲೇ ನೀನೇ ಬಡಿಸು ಎಂದು ಹೇಳಿರುತ್ತಾಳೆ. ಗೌತಮ್ ಟೆನ್ಷನ್‌ನಲ್ಲಿ ಮನೆಗೆ ಬರುತ್ತಾನೆ. ಇದನ್ನು ಗಮನಿಸಿದ ಅಜ್ಜಿ ರೂಮಿಗೆ ಊಟ ಕಳಿಸುತ್ತಾರೆ. ಭುಮಿಕಾ, ಗೌತಮ್‌ಗೆ ಊಟ ಮಾಡುವಂತೆ ಹೇಳಿದ್ದಕ್ಕೆ ಹೆಂಡತಿ ಮೇಲೆಯೇ ಕೂಗಾಡುತ್ತಾನೆ. ಇದರಿಂದ ಭೂಮಿಕಾಳಿಗೆ ಬೇಸರವಾಗುತ್ತದೆ. ಮಧ್ಯರಾತ್ರಿ ಹಸಿವಾದಾಗ ಗೌತಮ್ ಕದ್ದು ಊಟ ಮಾಡಲು ಹೋಗುತ್ತಾನೆ. ಆಗ ಭೂಮಿಕಾಳೇ ಊಟ ಬಡಿಸುತ್ತಾಳೆ. ನಂತರ ನೀವು ಮಾಡಿದ್ದು ಸರಿಯಲ್ಲ. ನನ್ನದೇನೂ ತಪ್ಪಿಲ್ಲ ಆದರೂ, ನಿಮ್ಮ ಟೆನ್ಷನ್ ಅನ್ನು ನನ್ನ ಮೇಲೆ ತೀರಿಸಿಕೊಂಡಿದ್ದು ತಪ್ಪು ಎಂದು ಬುದ್ದಿ ಹೇಳುತ್ತಾಳೆ.


Click it and Unblock the Notifications











