Amruthadhaare ; ಅಪರ್ಣಾ ಡಾರ್ಲಿಂಗ್ ಗೆ ಹೊಗಳಿಕೆ ಮಾತು ; ಭೂಮಿಕಾಳಿಗೆ ಹುಸಿ ಮುನಿಸು ತರಿಸಿದ ಗೌತಮ್..!
ಅಮೃತಧಾರೆ ಧಾರಾವಾಹಿಯಲ್ಲಿ ಅಜ್ಜಿ ಮತ್ತು ಆನಂದ್ ಸೇರಿಕೊಂಡು ಭೂಮಿಕಾ ಹಾಗೂ ಗೌತಮ್ ತಮ್ಮ ಸಂಸಾರವನ್ನು ಯಾವುದೇ ಅಡ್ಡಿ ಆತಂಕವಿಲ್ಲದೇ ಶುರು ಮಾಡಲು ಅಣಿ ಮಾಡಿಕೊಟ್ಟಿದ್ದಾರೆ. ಅಜ್ಜಿ ಅಂತೂ ಇನ್ನೊಂದು ವರ್ಷದ ಒಳಗೆ ಗೌತಮ್ ಮತ್ತು ಭೂಮಿಕಾರಿಂದ ಮಗು ಬರಲಿ ಎಂದು ಬಯಸಿದ್ದಾರೆ. ಆ ಮಗು ಗೌತಮ್ ತಂದೆಯೇ ಆಗಿರಬಹುದು ಎಂದು ನಿರೀಕ್ಷಿಸಿದ್ದಾರೆ. ಆದರೆ, ಶಕುಂತಲಾ ಭೂಮಿಕಾಳಿಗೆ ಮಗುವಾದರೆ ಎಲ್ಲಾ ಆಸ್ತಿಯನ್ನು ಗೌತಮ್ ತನ್ನ ಮಗುವಿಗೆ ಬರೆಯುತ್ತಾನೆ. ಆಗ ತಮಗೆ ಚೊಂಬೇ ಗತಿ ಎಂದು ಆದಷ್ಟು ಇಬ್ಬರನ್ನು ದೂರ ಇಡಲು ಯತ್ನಿಸುತ್ತಿರುತ್ತಾರೆ.
ಅಪರ್ಣಾ ಮನೆಗೆ ಬಂದ ಭೂಮಿಕಾ
ಆನಂದ್ ಮತ್ತು ಅಪರ್ಣಾ ಇಬ್ಬರೂ ಗೌತಮ್ ಮತ್ತು ಭೂಮಿಕಾ ಹೊಸ ಜೀವನ ಆರಂಬಿಸಿದ್ದಕ್ಕೆ ಖುಷಿ ಪಟ್ಟಿದ್ದಾರೆ. ಹೀಗಾಗಿ ಇಬ್ಬರಿಗೂ ಪಾರ್ಟಿ ಅರೇಂಜ್ ಮಾಡಬೇಕು ಎಂದು ತೀರ್ಮಾನಿಸಿದ್ದಾರೆ. ಗೌತಮ್ ಗೆ ಸರ್ಪ್ರೈಸ್ ಇರಲಿ ಎಂದು ಭೂಮಿಕಾಳನ್ನು ಮುಂಚಿತವಾಗಿಯೇ ಅಪರ್ಣಾ ಮನೆಗೆ ಕರೆಸಿಕೊಂಡಿದ್ದಾಳೆ. ಭೂಮಿಕಾ ಕೂಡ ಅಪರ್ಣಾ ಸಂಗಡವನ್ನು ಬಯಸುವುದರಿಂದ ಖುಷಿಯಾಗಿ ಬಂದಿದ್ದಾಳೆ. ಅಪರ್ಣಾ ಮತ್ತು ಭೂಮಿಕಾ ಪಾರ್ಟಿಗೆ ಇನ್ನು ಯಾರು ಯಾರನ್ನು ಕರೆಯಬಹುದು ಎಂದು ಯೋಚಿಸಿ ಹಲವರಿಗೆ ಕರೆ ಮಾಡಿ ಆಹ್ವಾನಿಸಿದ್ದಾರೆ. ಅದರಲ್ಲಿ ಭೂಮಿಕಾ ಬೇಕಂತಲೇ ಪಾರ್ಥ ಮತ್ತು ಅಪೇಕ್ಷಾಳನ್ನು ಕರೆದಿದ್ದಾಳೆ.

ಪಾರ್ಟಿಗೆ ಪಾರ್ಥ-ಅಪೇಕ್ಷಾಳಿಗೂ ಆಹ್ವಾನ
ಪಾರ್ಥ ಮತ್ತು ಅಪೇಕ್ಷಾ ಇಬ್ಬರೂ ಆದಷ್ಟು ಭೇಟಿ ಮಾಡುವುದನ್ನು ಕಡಿಮೆ ಮಾಡಿ ಎಂದು ಭೂಮಿಕಾ ಹೇಲಿರುತ್ತಾಳೆ. ಆದರೂ ಪಾರ್ಥ ಆಗಾಗ ಅಪೇಕ್ಷಾಳನ್ನು ಭೇಟಿ ಮಾಡುತ್ತಿರುತ್ತಾನೆ. ಈಗಲೂ ಇಬ್ಬರೂ ಒಟ್ಟಿಗೆ ಇರುವಾಗಲೇ ಭೂಮಿಕಾ ಪಾರ್ಥನಿಗೆ ಫೋನ್ ಮಾಡುತ್ತಾನೆ. ಅಪರ್ಣಾ ಮನೆಯಲ್ಲಿ ಇಂದು ಸಣ್ಣ ಪಾರ್ಟಿ ಇದೆ. ನೀನು ಬಾ ಚೆನ್ನಾಗಿರುತ್ತದೆ ಎಂದು ಕರೆದಿದ್ದಾಳೆ. ಅಲ್ಲದೇ ಅಪೇಕ್ಷಾ ಕೂಡ ಪಾರ್ಟಿಗೆ ಬರುತ್ತಾಳೆ ಎಂದು ಹೇಳಿದ್ದಾಳೆ. ಬಳಿಕ ಅಪೇಕ್ಷಾಳಿಗೆ ಕರೆ ಮಾಡಿ ಅವಳಿಗೂ ಆಹ್ವಾನ ನೀಡಿದ್ದಾಳೆ. ಸದ್ಯ ಪಾರ್ಥ ಮತ್ತು ಅಪೇಕ್ಷಾ ಪಾರ್ಟಿ ಮಾಡುವ ಜಾಲಿ ಮೂಡಿನಲ್ಲಿದ್ದಾರೆ.
ಗೌತಮ್ ಗಾಗಿ ನಾನ್ ವೆಜ್ ತಯಾರಿಸಿದ ಭೂಮಿಕಾ
ಈ ಬಾರಿಯ ಪಾರ್ಟಿ ಕೊಂಚ ಡಿಫರೆಂಟ್ ಆಗಿರಲಿ ಎಂದು ಯೋಚಿಸಿದ ಭೂಮಿಕಾ ಗೌತಮ್ ಗೋಸ್ಕರ ನಾನ್ ವೆಜ್ ಅಡುಗೆ ಮಾಡಲು ಬಯಸುತ್ತಾಳೆ. ನಾನ್ ವೆ ಜ್ ತಿನ್ನದ ಭೂಮಿಕಾ ಗೌತಮ್ ಗಾಗಿ ಗ್ಲೌಸ್, ಮಾಸ್ಕ್ ಧರಿಸಿಕೊಂಡು ಅಡುಗೆ ಮಾಡುತ್ತಾಳೆ. ತರಹೇವಾರಿ ಚಿಕನ್ ತಿನಿಸುಗಳನ್ನು ಮಾಡಿದ್ದು, ಅಪರ್ಣಾ ಭೂಮಿಕಾ ಅಡುಗೆ ಮಾಡಿದ್ದನ್ನು ನೋಡಿ ಆಶ್ಚರ್ಯದ ಜೊತೆಗೆ ಖುಷಿ ಕೂಡ ಪಡುತ್ತಾಳೆ. ಭೂಮಿಕಾಳಿಗೆ ತನ್ನ ಪತಿಗಾಗಿ ತಾನು ಏನೂ ಮಾಡಲು ಸಿದ್ಧ ಎಂದು ಅಪರ್ಣ ಬಳಿ ಹೇಳುತ್ತಾಳೆ.

ಭೂಮಿಕಾಳಿಗೆ ಕೋಪ ತರಿಸಿದ ಗೌತಮ್
ಆಫಿಸಿನಿಂದ ಆನಂದ್ ಜೊತೆಗೆ ಬಂದ ಗೌತಮ್ ಡೈನಿಂಗ್ ಟೇಬಲ್ ಮೇಲೆ ನಾನ್ ವೆಜ್ ಐಟಂಗಳನ್ನು ನೋಡಿ ಫಿದಾ ಆಗುತ್ತಾನೆ. ಎಲ್ಲಾ ಅಡುಗೆಯನ್ನು ಅಪರ್ಣಾ ಮಾಡಿರುವುದು ಎಂದು ಅಪಾರ್ಥ ಮಾಡಿಕೊಳ್ಳುತ್ತಾನೆ. ಊಟವನ್ನು ಟೇಸ್ಟ್ ಮಾಡಿ ಅಪರ್ಣಾಳನ್ನು ಹೊಗಳುತ್ತಿರುತ್ತಾನೆ. ಇದನ್ನು ನೋಡಿದ ಭೂಮಿಕಾಳಿಗೆ ಕೋಪ ಬರುತ್ತದೆ. ತಾನು ಮಾಡಿದ ಕೆಲಸ ಆದರೆ, ತನ್ನ ಗಂಡ ಬೇರೆಯವರನ್ನು ಹೊಗಳುತ್ತಿದ್ದಾರೆ ಎಂದು ಹುಸಿ ಮುನಿಸನ್ನು ತೋರುತ್ತಾಳೆ. ಭೂಮಿಕಾ ಮುಖವನ್ನು ನೋಡಿ ಆನಂದ್ ಮತ್ತು ಅಪರ್ಣಾ ಮಜಾ ತೆಗೆದುಕೊಳ್ಳುತ್ತಿರುತ್ತಾರೆ. ಇನ್ನು ಪಾರ್ಟಿಯಲ್ಲಿ ಗೌತಮ್ ಮತ್ತು ಭೂಮಿಕಾ ಏನೆಲಾ ಅವಾಂತರ ಸೃಷ್ಟಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











