Amruthadhaare ; ಶಕುಂತಲಾಗೆ ಬಿಸಿ ತುಪ್ಪವಾದ ಭೂಮಿಕಾ ; ಮಲ್ಲಿ ಪ್ರಾಣಕ್ಕೆ ಜೈದೇವನಿಂದ ಕುತ್ತು..?
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಪಾರ್ಥ ಮತ್ತು ಅಪೇಕ್ಷಾ ಇಬ್ಬರೂ ಐಸ್ ಕ್ರೀಮ್ ಪಾರ್ಲರ್ ನಲ್ಲಿ ಇರುವುದನ್ನು ನೋಡುತ್ತಾಳೆ. ಅದರಲ್ಲೂ ಪಾರ್ಥ ಅಪ್ಪಿ ಕೆನ್ನೆಗೆ ಮುತ್ತು ಕೊಟ್ಟಿದ್ದನ್ನೂ ನೋಡಿ ಬಿಡುತ್ತಾಳೆ. ಇದನ್ನು ನೋಡಿದ ಭೂಮಿಕಾಳಿಗೆ ಶಾಕ್ ಆಗುತ್ತದೆ.
ಅಪೇಕ್ಷಾಳನ್ನು ಮನೆಯಲ್ಲಿ ಭೇಟಿ ಮಾಡಿದ ಕೂಡಲೇ ಐಸ್ ಕ್ರೀಂ ಪಾರ್ಲರ್ ಗೆ ಹೋಗಿದ್ದ್ಯಾ ಎಂದು ಅನುಮಾನದಿಂದ ಪ್ರಶ್ನಿಸುತ್ತಾಳೆ. ಅಪೇಕ್ಷಾ ಕಕ್ಕಾಬಿಕ್ಕಿಯಾಗಿದ್ದು, ಪಾರ್ಥನ ವಿಚಾರವನ್ನು ಅಕ್ಕನ ಬಳಿ ಹೇಳಿಕೊಳ್ಳದೇ ಮರೆ ಮಾಚಿದ್ದಾಳೆ. ಭೂಮಿಕಾ ಅಷ್ಟಕ್ಕೆ ಬಿಡದೇ ಪಾರ್ಥನ ಬಳಿಯೂ ಪ್ರಶ್ನಿಸಿದ್ದಾಳೆ.

ಶಕುಂತಲಾ ಸ್ಥಾನಕ್ಕಿಲ್ಲ ಬೆಲೆ
ಪಾರ್ಥ ಕೂಡ ಅಪೇಕ್ಷಾ ವಿಚಾರವನ್ನು ಹೇಳಿಲ್ಲ. ಆದರೆ, ಭೂಮಿಕಾಳಿಗೆ ಪಾರ್ಥ ಹಾಗೂ ಅಪೇಕ್ಷಾ ಪ್ರೀತಿಸುತ್ತಿರುವುದು ಖುಷಿಯನ್ನೇ ತಂದಿದ್ದು, ಇಬ್ಬರೂ ಆದಷ್ಟು ಬೇಗ ವಿಚಾರವನ್ನು ಹೇಳಿಕೊಳ್ಳಲಿ ಎಂದು ಬಯಸಿದ್ದಾಳೆ. ಇನ್ನು ಮಹಿಳಾ ದಿನಾಚರಣೆಯನ್ನು ಗೌತಮ್ ಆಚರಿಸಿದ್ದಾನೆ. ಆಫೀಸಿನ ಮಹಿಳೆಯರನ್ನೆಲ್ಲಾ ಕರೆದಿದ್ದು, ಗಿಫ್ಟ್ ನೀಡುತ್ತಾನೆ.
ಬಳಿಕ ಗೌತಮ್ ಭೂಮಿಕಾಳನ್ನು, ಭೂಮಿಕಾ ಗೌತಮ್ ನ ಹೊಗಳುತ್ತಾರೆ. ಶಕುಂತಲಾಳನ್ನು ಗೌತಮ್ ಕೊಂಚ ದೂರವಿಡುತ್ತಾನೆ. ಇದರಿಂದ ಶಕುಂತಲಾಳಿಗೆ ಅವಮಾನವಾದಂತೆ ಆಗುತ್ತದೆ. ಅಲ್ಲದೇ, ಭೂಮಿಕಾ ಬಗ್ಗೆ ಮಾತನಾಡುವಂತೆ ಹೇಳುತ್ತಾನೆ. ಇದು ಶಕುಂತಲಾಳಿಗೆ ಇನ್ನಷ್ಟು ಮುಜುಗರವನ್ನುಂಟು ಮಾಡುತ್ತದೆ. ಅವಳ ಸ್ಥಾನಕ್ಕೆ ಬೆಲೆ ಇಲ್ಲ ಎಂದು ತಿಳಿದು ಕಾರ್ಯಕ್ರಮದ ಅರ್ಧಕ್ಕೆ ಹೊರಟು ಬಿಡುತ್ತಾಳೆ.

ಬಿಸಿ ತುಪ್ಪದಂತಾದ ಹಿರಿಯ ಸೊಸೆ
ಶಕುಂತಲಾಳಿಗೆ ಈಗ ಭೂಮಿಕಾ ಬಿಸಿ ತುಪ್ಪದಂತಾಗಿದ್ದಾಳೆ. ಎತ್ತ ಕಡೆ ಹೋದರೂ ಕೂಡ ಭೂಮಿಕಾ ಶಕುಂತಲಾ ದಾರಿಗೆ ಅಡ್ಡವಾಗಿ ನಿಂತಿದ್ದಾಳೆ. ಮಲ್ಲಿ ಸೊಸೆಯಾಗಿ ಬಂದಿರುವುದು ಶಕುಂತಲಾಳಿಗೆ ಸಹಿಸಲಾರದ ಸಂಕಟವನ್ನು ತಂದಿದೆ. ಶಕುಂತಲಾ, ಲಕ್ಷ್ಮೀಕಾಂತ ಹಾಗೂ ಜೈದೇವ ಕುಳಿತು ತಮ್ಮ ಇಕ್ಕಟ್ಟಿನ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡುತ್ತಾರೆ. ಆಗ ಶಕುಂತಲಾ ಜೈದೇವನನ್ನು ಬೈಯುತ್ತಾಳೆ. ಎಲ್ಲಾ ಆಗಿದ್ದು ನಿನ್ನಿಂದಲೇ, ಮಲ್ಲಿ ಸಹವಾಸ ಮಾಡಿ ನನ್ನ ಮರ್ಯಾದೆ ತೆಗೆದೆ. ಈಗ ಸಂಕಷ್ಟಕ್ಕೆ ಸಿಲುಕಿದ್ದೀನಿ. ಮೊದಲು ಆ ಮಲ್ಲಿಗೆ ಒಂದು ಗತಿ ಕಾಣಿಸು ಎಂದು ಹೇಳುತ್ತಾಳೆ.
ಮಲ್ಲಿ ಜೀವಕ್ಕೆ ಕುತ್ತು ತರುತ್ತಾನಾ ಜೈದೇವ..?
ಜೈದೇವ ಶಕುಂತಲಾ ಮಾತು ಕೇಳಿ ಮಲ್ಲಿಯಿಂದಲೇ ತನಗೂ ತೊಂದರೆ ಆಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾನೆ. ಮಲ್ಲಿಯನ್ನು ಹೇಗಾದರೂ ಮಾಡಿ ಈ ಮನೆಯಿಂದ ಹೊರಗೆ ಹಾಕಬೇಕು ಎಂದು ಶಕುಂತಲಾ ಯೋಚಿಸಿದರೆ, ಜೈದೇವ ಇನ್ನೂ ಮುಂದಕ್ಕೆ ಹೋಗಿ ಮಲ್ಲಿಯನ್ನು ಶಾಶ್ವತವಾಗಿ ಇಲ್ಲವಾಗಿಸಬೇಕು ಎಂದುಕೊಂಡಿದ್ದಾನೆ. ಮಲ್ಲಿಯನ್ನು ಈ ಲೋಕದಿಂದಲೇ ಕಳಿಸಿ, ಅವಳು ಹುಟ್ಟನ್ನೇ ಸುಳ್ಳಾಗಿಸಬೇಕು ಎಂದು ಪ್ಲಾನ್ ಮಾಡಿದ್ದಾನೆ. ಸದ್ದಿಲ್ಲದೇ, ಮಲ್ಲಿಯ ಜೀವಕ್ಕೆ ಕುತ್ತು ತಂದಿದ್ದಾನೆ ಜೈದೇವ.

ಶಕುಂತಲಾ ಮಾತನ್ನು ಅನುಮಾನಿಸಿದ ಭೂಮಿಕಾ
ಆದರೆ, ಅವನ ಪ್ಲಾನ್ ಎಷ್ಟು ಸಕ್ಸಸ್ ಆಗುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಯಬೇಕಿದೆ. ಸದ್ಯ ಜೈದೇವ ಶಕುಂತಲಾಳಿಗೆ ಮನೆಯಿಂದ ಎಲ್ಲರನ್ನೂ ಹೊರಗೆ ಕಳಿಸು ಎಂದು ಕೇಳಿಕೊಂಡಿದ್ದಾನೆ. ಇದೇ ಸಂದರ್ಭದಲ್ಲಿ ಭೂಮಿಕಾ ಶಿವರಾತ್ರಿ ಜಾಗರಣೆ ಬಗ್ಗೆ ಮಾತನಾಡುತ್ತಾಳೆ. ಅವರ ಮನೆಯಲ್ಲಿ ಎಲ್ಲರೂ ಜಾಗರಣೆ ಮಾಡುತ್ತಾರೆ ಎಂದು ಹೇಳುತ್ತಾಳೆ.
ಇದೇ ಸಿಕ್ಕ ಅವಕಾಶ ಎಂದು ತಿಳಿದ ಶಕುಂತಲಾ ಗೌತಮ್ ಮತ್ತು ಭೂಮಿಕಾ ಇಬ್ಬರನ್ನು ಮಂದಾಕಿನಿ ಮನೆಗೆ ಹೋಗುವಂತೆ ತಿಳಿಸಿದ್ದಾಳೆ. ಈ ಮಾತು ಭೂಮಿಕಾಳಲ್ಲಿ ಅನುಮಾನವನ್ನು ಮೂಡಿಸಿದ್ದು, ಮುಂದೆ ಏನು ಮಾಡುತ್ತಾಳೆ ಎಂಬ ಕುತೂಹಲದ ಜೊತೆಗೆ ಮಲ್ಲಿ ಕಥೆ ಏನಾಗಬಹುದು ಎಂಬ ಪ್ರಶ್ನೆಯನ್ನೂ ಮೂಡಿಸಿದೆ


Click it and Unblock the Notifications











