Amruthadhaare ; ಭೂಮಿಕಾಳಿಗಾಗಿ ಕಾಲೇಜಿನಲ್ಲಿ ಉಳಿದ ಗೌತಮ್ ಗೆ ಸತ್ಯ ಗೊತ್ತಾಗುತ್ತಾ..?
ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್ ಗೆ ಮನೆ ನಡೆಸುವ ಕಷ್ಟವಾಗಿದ್ರೆ, ಮಹಿಮಾಳಿಗೆ ಇನ್ನೊಬ್ಬರು ಹೇಳುವ ಮಾತುಗಳೇ ತಲೆ ಕೆಡಿಸಿಕೊಳ್ಳುತ್ತಿರುತ್ತಾಳೆ. ಸ್ನೇಹಿತರೆಲ್ಲಾ ಜೀವನ್ ಫುಡ್ ಡೆಲಿವರಿ ಮಾಡುವುದನ್ನು ನೋಡಿ ಫೋನ್ ಮಾಡಿ ಚಾಡಿ ಹೇಳುತ್ತಿದ್ದಾರೆ. ಆದರೆ, ಸತ್ಯ ತಿಳಿಯದ ಮಹಿಮಾ ಸುಮ್ಮನೆ ಕೂಗಾಡುತ್ತಿದ್ದಾಳೆ. ಎಲ್ಲಾ ಸತ್ಯ ಗೊತ್ತಿರುವ ಜೀವನ್ ಏನೂ ಹೇಳಲಾಗಲಾಗದೇ ಒದ್ದಾಡುತ್ತಿದ್ದಾನೆ. ಮನೆಯಲ್ಲಿ ಸುಳ್ಳು ಹೇಳುತ್ತಾ ಮ್ಯಾನೇಜ್ ಮಾಡಲು ಮುಂದಾಗಿದ್ದಾನೆ.
ಅನುಮಾನವನ್ನು ಹೆಚ್ಚಿಸಿತಾ ಭೂಮಿಕಾ ಮಾತು..?
ಶಕುಂತಲಾ ಹೇಳಿದ ಮಾತುಗಳು ಗೌತಮ್ ಮನದಲ್ಲಿವೆ. ಸತ್ಯ ತಿಳಿಯುವವರೆಗೂ ಗೌತಮ್ ಗೆ ಸಮಾಧಾನವಿಲ್ಲ. ಹೀಗಾಗಿ ಭೂಮಿಕಾಳನ್ನು ಕೆಣಕುತ್ತಲೇ ಇದ್ದಾನೆ. ನಂಬಿಕೆ, ಸಂಬಂಧ, ಸ್ನೇಹ ಎಂದೆಲ್ಲಾ ವಿಚಾರವನ್ನು ತೆಗೆಯುತ್ತಾನೆ. ಭೂಮಿಕಾ ಕೂಡ ತಾನು ಮಾಡಿರುವ ತಪ್ಪಿನಿಂದ ಪಶ್ಚಾತಾಪದಲ್ಲೇ ಮಾತನಾಡುತ್ತಾಳೆ. ಆದರೆ, ಸತ್ಯವನ್ನು ಮಾತ್ರ ಹೇಳುತ್ತಿಲ್ಲ. ಸುಮ್ಮನೆ ಕುಳಿತಿದ್ದಾಳೆ. ಆದರೆ, ಭೂಮಿಕಾ ಮುಖ ಮತ್ತು ಮಾತುಗಳನ್ನು ಕೇಳಿದ ಗೌತಮ್ ಗೆ ಅನುಮಾನ ಮಾತ್ರ ಬಂದಿದೆ. ಭೂಮಿಕಾ ತನ್ನ ಸತ್ಯವನ್ನು ಮುಚ್ಚಿಟ್ಟಿದ್ದಾಳೆ ಎಂಬುದು ಖಾತ್ರಿ ಆಗುತ್ತದೆ. ಆದರೆ, ಯಾವ ವಿಚಾರ ಯಾಕೆ ಮುಚ್ಚಿಟ್ಟಿದ್ದಾಳೆ ಎಂಬ ಸತ್ಯ ಗೊತ್ತಾಗುತ್ತಿಲ್ಲ.

ಶಕುಂತಲಾಗೆ ಹೆಚ್ಚಿದ ಆತಂಕ
ಬೆಳಗೆದ್ದು ಭೂಮಿಕಾ ಕಾಲೇಜಿಗೆ ಹೊರಟರೆ, ಗೌತಮ್ ಆಫೀಸಿಗೆ ರೆಡಿಯಾಗಿದ್ದಾನೆ. ಆದರೆ, ಇವತ್ತೂ ಭೂಮಿಕಾಳನ್ನು ಡ್ರಾಪ್ ಮಾಡುವುದಾಗಿ ಹೇಳಿದ್ದಕ್ಕೆ ಭೂಮಿಕಾ ಲೆಕ್ಚರ್ ಕೊಡುತ್ತಾಳೆ. ನಂತರ ಇಬ್ಬರೂ ಖುಷಿಯಲ್ಲಿ ಒಟ್ಟಿಗೆ ಹೊರಡುತ್ತಾರೆ. ಇಬ್ಬರೂ ಒಟ್ಟಿಗೆ ಆಫೀಸ್‌ಗೆ ಹೊರಟಿದ್ದನ್ನು ನೋಡಿದ ಶಕುಂತಲಾಳಿಗೆ ಅನುಮಾನ ಬರುತ್ತದೆ. ಗೌತಮ್ ನನ್ನು ಭೂಮಿಕಾ ಸಂಪೂರ್ಣವಾಗಿ ಹಿಡಿದಿಟ್ಟುಕೊಂಡಿದ್ದಾಳೆ. ಭೂಮಿಕಾ ಮಾತನ್ನು ಗೌತಮ್ ಕೇಳುತ್ತಾನೆ. ನಮ್ಮ ಮಾತನ್ನೆಲ್ಲಾ ಅಷ್ಟು ತಲೆಗೆ ಹಾಕಿಕೊಳ್ಳುತ್ತಿಲ್ಲ ಅನಿಸುತ್ತದೆ ಎಂದು ಅನುಮಾನ ಪಡುತ್ತಾಳೆ. ಇದರಿಂದ ಇನ್ನೇನಾದರೂ ಮಾಡಬೇಕು. ಹೇಗಿದ್ದರೂ ಭೂಮಿಕಾಳ ಸ್ಥಾನವನ್ನು ಸಂಪೂರ್ಣವಾಗಿ ಬದಲಾಯಿಸಬೇಕು ಎಂದು ಹೇಳುತ್ತಾಳೆ.
ಭೂಮಿಕಾ ಜೊತೆಗೆ ಇರುವ ಗೌತಮ್
ಭೂಮಿಕಾಳನ್ನು ಕಾಲೇಜಿಗೆ ಬಿಟ್ಟ ಮೇಲೆ ಇಲ್ಲೇ ಇರುತ್ತೀನಿ ಕ್ಲಾಸ್ ಮುಗಿಸಿಕೊಂಡು ಬನ್ನಿ ಎನ್ನುತ್ತಾನೆ. ಯಾಕೆ ಎಂದು ಕೇಳಿದ್ದಕ್ಕೆ ಸುಮ್ಮನೆ ನೆಪ ಹೇಳುತ್ತಾನೆ. ಆನಂದ್ ಗೆ ಫೋನ್ ಮಾಡಿ ಗೌತಮ್ ಕಾಲೇಜಿನ ಆವರಣದಲ್ಲೇ ಮೀಟಿಂಗ್ ಅರೇಂಜ್ ಮಾಡುವಂತೆ ಹೇಳುತ್ತಾನೆ. ವಿಚಿತ್ರ ಎನಿಸಿದರೂ ಗೌತಮ್ ಪ್ರೀತಿಗೆ ಆನಂದ್ ಸಪೋರ್ಟ್ ಮಾಡುತ್ತಿದ್ದಾನೆ. ಇಡೀ ಆಫೀಸ್ ಟೀಮ್ ಅನ್ನೇ ಕಾಲೇಜಿಗೆ ಆನಂದ್ ಕರೆ ತರುತ್ತಾನೆ. ಬಳಿಕ ಗೌತಮ್ ಊಟ ಬುಕ್ ಮಾಡಲು ಭೂಮಿಕಾಳಿಗೆ ಫೋನ್ ಮಾಡಿ ನಿಮಗೆ ಏನು ಬೇಕು ಎಂದು ಕೇಳುತ್ತಾನೆ. ನಿಮಗೋಸ್ಕರ ವೆಜ್ ಅಡುಗೆಯನ್ನೇ ಬುಕ್ ಮಾಡುತ್ತೇನೆ ಎಂದಾಗ ಭೂಮಿಕಾ ಕೂಡ ಶಾಕ್ ಆಗುತ್ತಾಳೆ.

ಭಾವನಿಗೆ ಊಟ ತಂದ ಜೀವನ್
ಇನ್ನು ಗೌತಮ್ ಆರ್ಡರ್ ಮಾಡಿರುವ ಊಟವೆಲ್ಲವೂ ಜೀವನ್ ಗೆ ಆರ್ಡರ್ ಹೋಗಿರುತ್ತದೆ. ಊಟವನ್ನು ಡೆಲಿವರಿ ಮಾಡಬೇಕು ಎಂದು ಕಾಲೇಜಿಗೆ ಬಂದಿದ್ದಾನೆ. ಆದರೆ, ಗೌತಮ್ ನ ನೋಡಿ ಗಾಬರಿಯಾಗಿದ್ದಾನೆ. ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಂಡು ಊಟ ಡೆಲಿವರಿ ಮಾಡಿದ್ದಾನೆ. ಇನ್ನೇನು ಅಲ್ಲಿಂದ ಹೊರಟ ಎನ್ನುವಾಗ ಗೌತಮ್ ಬೇಕಂತಲೇ ಜೀವನ್ ನನ್ನು ತಡೆಯುತ್ತಾನೆ. ಯಾಕೆ ತಡೆದ ಎಂಬ ಅನುಮಾನ ಮೂಡಿದ್ದು, ಜೀವನ್ ಬಗ್ಗೆ ಸತ್ಯ ಗೊತ್ತಾಗುತ್ತಾ..? ಸತ್ಯ ತಿಳಿದರೆ ಗೌತಮ್ ಭೂಮಿಕಾ ಹಾಗೂ ಜೀವನ್ ಇಬ್ಬರ ಮೇಲೂ ಕೋಪ ಮಾಡಿಕೊಳ್ಳುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











