Amruthadhaare ;ಅಪೇಕ್ಷಾ-ಪಾರ್ಥನ ನಡುವೆ ಜಗಳ,ಹೊಸ ನಾಟಕ ಶುರು ಮಾಡಿದ ಭೂಮಿಕಾ..!
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ನನ್ನು ಗೌತಮ್ ಮನೆಯಲ್ಲೇ ಲಾಕ್ ಮಾಡಿದ್ದಾನೆ. ಶಕುಂತಲಾ ಕೂಡ ಜೈದೇವ್ ದೇ ಏನೋ ತಪ್ಪಿರಬೇಕು ಎಂದು ಸುಮ್ಮನಾಗಿರುತ್ತಾಳೆ. ಜೈದೇವ್ ತನಗೆ ಸಿಕ್ಕಿರುವ ಈ ಅವಕಾಶವನ್ನೂ ಕೂಡ ಮಿಸ್ ಮಾಡಿಕೊಳ್ಳಬಾರದು ಎಂದು ಡಿಸೈಡ್ ಮಾಡಿದ್ದು, ಮಲ್ಲಿ ಸೇವೆಯನ್ನು ಮಾಡುತ್ತಿದ್ದಾನೆ. ಮಲ್ಲಿಯನ್ನು ಇಂಪ್ರೆಸ್ ಮಾಡುತ್ತಾ,ತನ್ನ ಕೆಲಸವನ್ನು ಸಾಧಿಸಿಕೊಳ್ಳಲು ಜೈದೇವ್ ಸಾಕಷ್ಟು ಪ್ರಯತ್ನವನ್ನು ಪಡುತ್ತಿದ್ದಾನೆ. ಮಲ್ಲಿ ತೀರಾ ದಡ್ಡಿಯಾಗಿದ್ದು, ಜೈದೇವ್ ಹೇಳುವುದನ್ನೆಲ್ಲಾ ನಂಬಿದ್ದಾಳೆ.
ಮನೆಯೊಳಗೆ ಜೈದೇವ್ ಒದ್ದಾಟ
ಮನೆಯಿಂದ ಹೊರಗೆ ಹೋಗಲಾಗದೇ ಎರಡು ದಿನದಿಂದ ಜೈದೇವ್ ಒದ್ದಾಡಿದ್ದಾನೆ. ದಿಯಾ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದು, ದಿಯಾಳನ್ನು ಸಮಾಧಾನ ಮಾಡಿದ್ದಾನೆ. ಇದ್ದಕ್ಕಿದ್ದ ಹಾಗೆಯೇ ಜೈದೇವ್ ಕಾಣೆಯಾಗಿದ್ದಕ್ಕೆ ದಿಯಾಳಿಗೆ ಗಾಬರಿಯಾಗಿದೆ. ಮಲ್ಲಿಯನ್ನು ಬಳಸಿಕೊಂಡು ಮತ್ತೆ ಮನೆಯಿಂದ ಹೊರಗೆ ಹೋಗಲು ಜೈದೇವ್ ಪ್ಲಾನ್ ಮಾಡಿದ್ದಾನೆ. ಆದರೆ, ಗೌತಮ್ ಬಹಳ ಸ್ಟ್ರಿಕ್ಟ್ ಆಗಿ ಇದ್ದು, ಹೇಗಾದರೂ ಮಾಡಿ ದಿಯಾ ಮತ್ತು ಜೈದೇವ್ ಸಂಪರ್ಕವನ್ನು ಕಡಿತಗೊಳಿಸಬೇಕು. ಮನೆಯಲ್ಲೇ ಇರುವುದರಿಂದ ಜೈದೇವ್ ಯಾವ ಕೇಡಿ ಕೆಲಸವನ್ನು ಮಾಡಲು ಆಗುವುದಿಲ್ಲ ಎಂದುಕೊಂಡಿದ್ದಾನೆ.

ಆತಂಕಗೊಂಡಿರುವ ಅಪರ್ಣಾ
ಇನ್ನು ಅಪರ್ಣಾ ಬಳಿ ಆನಂದ್ ನಡೆದ ಘಟನೆಯನ್ನೆಲ್ಲಾ ಹೇಳಿಕೊಂಡಿದ್ದಾನೆ. ಜೈದೇವ್ ತಮ್ಮನನ್ನೇ ಕೊಲ್ಲಲು ಮುಂದಾಗಿದ್ದ ಎಂದರೆ, ನಿನಗೆ ಆದ ಆಕ್ಸಿಡೆಂಟ್ ಗೂ ಜೈದೇವ್ ಕಾರಣ ಎಂದು ಅಪರ್ಣಾ ಭಾವಿಸಿದ್ದಾಳೆ. ಆದರೆ, ಇದನ್ನು ಆನಂದ್ ನಂಬಲು ತಯಾರಿಲ್ಲ. ಅದೇನೇ ಇರಲಿ, ಗೌತಮ್ ಎಷ್ಟೇ ಒಳ್ಳೆಯ ವ್ಯಕ್ತಿ ಆಗಿದ್ದರೂ, ಜೈದೇವ್ ಇಷ್ಟು ಕೆಟ್ಟವನು ಎಂದ ಮೇಲೆ ಅವನಿಂದ ದೂರ ಇರುವುದೇ ಒಳ್ಳೆಯದು. ದಯವಿಟ್ಟು ಅಲ್ಲಿ ಕೆಲಸಕ್ಕೆ ರಾಜೀನಾಮೆ ಕೊಡು ಎಂದು ಅಪರ್ಣಾ ಹೇಳಿದ್ದಾಳೆ. ಆನಂದ್ ಈಗ ಏನು ಮಾಡಬೇಕು ಎಂಬುದು ಗೊತ್ತಿಲ್ಲದೇ ಯೋಚಿಸುತ್ತಿದ್ದಾನೆ. ಆನಂದ್ ಕೆಲಸವನ್ನು ಬಿಟ್ಟರೆ ಗೌತಮ್ ಸುಮ್ಮನಿರುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.
ಅಪೇಕ್ಷಾ-ಪಾರ್ಥನ ನಡುವೆ ಜಗಳ
ಇತ್ತ ಅಪೇಕ್ಷಾ ಮತ್ತು ಪಾರ್ಥ ಮದುವೆಯಾಗಿ ಕೆಲವೇ ದಿನಗಳಾಗಿದೆ. ಹಾಗಿದ್ದರೂ ಇಬ್ಬರ ನಡುವೆ ಜಗಳ ಶುರುವಾಗಿದೆ. ಮನಸ್ತಾಪಗೊಂಡು ಅಪೇಕ್ಷಾ ಮತ್ತು ಪಾರ್ಥ ಜಗಳ ಮಾಡುತ್ತಿದ್ದಾರೆ. ಪಾರ್ಥ ಸುಮ್ಮನಿದ್ದರೂ ಅಪೇಕ್ಷಾ ಜಗಳ ಮಾಡುತ್ತಿದ್ದಾಳೆ. ಪ್ರೀತಿಸುವಾಗ ನನ್ನ ಬಗ್ಗೆ ತೋರುತ್ತಿದ್ದ ಕಾಳಜಿ ಈಗ ಇಲ್ಲ ಎಂದು ಬೇಸರ ಮಾಡಿಕೊಂಡಿದ್ದಾಳೆ. ಇಬ್ಬರೂ ಜಗಳ ಮಾಡುವುದನ್ನು ಕೇಳಿಸಿಕೊಂಡು ಶಕುಂತಲಾ ಬಳಿ ಬಂದು ಭೂಮಿಕಾ ಹೇಳಿದ್ದಾಳೆ ಆದರೆ, ಶಕುಂತಲಾ ನೆಗಲೆಕ್ಟ್ ಮಾಡಿದ್ದು, ಭೂಮಿಕಾ ಇವರಿಬ್ಬರನ್ನೂ ಹೀಗೆ ಬಿಟ್ಟರೆ ಇನ್ನಷ್ಟು ಜಗಳ ಮಾಡುತ್ತಾರೆ. ಇಬ್ಬರನ್ನು ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವಂತೆ ಮಾಡಬೇಕು ಎಂದು ಯೋಚಿಸುತ್ತಾಳೆ.

ತಂಗಿ ಬದುಕನ್ನು ಸರಿಪಡಿಸಲು ಪ್ಲಾನ್
ತಂಗಿ ಮತ್ತು ಮೈದುನನ ನಡುವಿನ ಜಗಳದ ಬಗ್ಗೆ ಗೌತಮ್ ಬಳಿ ಭೂಮಿಕಾ ಹೇಳಿದ್ದು, ಈಗ ಇಬ್ಬರೂ ಸೇರಿ ಸರಿ ಮಾಡಲು ಮುಂದಾಗಿದ್ದಾರೆ.ಅಪೇಕ್ಷಾಳಿಗೆ ಕೇಳಿಸುವಂತೆ ಭೂಮಿಕಾ ಮತ್ತು ಗೌತಮ್ ಪ್ರೀತಿಯಿಂದ ಮಾತನಾಡುತ್ತಾರೆ. ಹೆಂಡತಿ ಗಂಡನನ್ನು ನಿತ್ಯ ಹೇಗೆ ನೋಡಿಕೊಳ್ಳಬೇಕು. ಪತಿ ಕೆಲಸಗಳನ್ನು ಮಾಡುವುದರಿಂದ ಇಬ್ಬರ ನಡುವಿನ ಪ್ರೀತಿ ಹೆಚ್ಚಾಗುತ್ತದೆ ಎಂದು ಮಾತನಾಡುವುದನ್ನು ಅಪೇಕ್ಷಾ ಕೇಳಿಸಿಕೊಳ್ಳುತ್ತಾಳೆ. ಪತಿಗೋಸ್ಕರ ಅಡುಗೆ ಮಾಡಿ ಬಡಿಸಿದರೂ ಇಬ್ಬರ ನಡುವೆ ಪ್ರೀತಿ ಹೆಚ್ಚಾಗುತ್ತದೆ ಎಂದು ಭೂಮಿಕಾ ಬೇಕಂತಲೇ ಮಾತನಾಡುತ್ತಾಳೆ. ಇದನ್ನೆಲ್ಲಾ ಕೇಳಿಸಿಕೊಳ್ಳುವ ಅಪೇಕ್ಷಾ ತಾನೂ ಕೂಡ ಪಾರ್ಥನಿಗೋಸ್ಕರ ಅಡುಗೆ ಮಾಡಬೇಕು ಎಂದು ಆಲೋಚಿಸುತ್ತಾಳೆ. ಶಕುಂತಲಾ ಅಪೇಕ್ಷಾಳನ್ನು ತನ್ನ ದಾರಿಗೆ ಎಳೆದುಕೊಳ್ಳಲು ಯತ್ನಿಸುತ್ತಿದ್ದರೆ, ಅಪೇಕ್ಷಾ ಅಕ್ಕನನ್ನು ಫಾಲೋ ಮಾಡಲು ಮುಂದಾಗಿದ್ದಾಳೆ. ಈಗ ಶಕುಂತಲಾ ಏನು ಮಾಡುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ


Click it and Unblock the Notifications











