Amruthadhaare: ಬಟರ್ ಫ್ಲೈ ಹಾರಿ ಹೋಗಿದ್ದನ್ನು ಸಹಿಸದ ಜೈದೇವ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಒಂದುಕಡೆ ಭೂಮಿಕಾ ಹಾಗೂ ಗೌತಮ್ ನಡುವೆ ಪ್ರೀತಿ ಚಿಗುರುತ್ತಿದೆ. ಮತ್ತೊಂದು ಕಡೆಯಲ್ಲಿ ಪಾರ್ಥ ಹಾಗೂ ಅಪೇಕ್ಷಾ ಪ್ರೇಮಲೋಕದಲ್ಲಿ ತೇಲಾಡುತ್ತಿದ್ದಾರೆ.

ಮಹಿಮಾಳಿಗೆ ಅಬಾರ್ಷನ್ ಆದ ಕಾರಣ ಎರಡೂ ಮನೆಯಲ್ಲೂ ನೋವು ತುಂಬಿತ್ತು. ಕನಸುಗಳೆಲ್ಲವೂ ಒಂದೇ ಕ್ಷಣದಲ್ಲಿ ಮರೆಯಾಗಿದ್ದಕ್ಕೆ ಎಲ್ಲರೂ ಬೇಸರ ಮಾಡಿಕೊಂಡಿದ್ದರು.

Amruthadhaare Serial 07th February episode written update

ಮಹಿಮಾ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ಗೌತಮ್‌ಗೆ ಈ ಆಘಾತವನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, ಭೂಮಿಕಾ, ಗೌತಮ್ ನೋವಿಗೆ ಜೊತೆಯಾಗಿ ನಿಂತಿದ್ದಾಳೆ.

ಮಂಡಿಯೂರಿ ಪ್ರಪೋಸ್ ಮಾಡಿದ ಭೂಮಿ

ಭೂಮಿಕಾಳಿಗೆ ಗೌತಮ್‌ನ ಗುಣಗಳು ಇಷ್ಟವಾಗಿದ್ದು, ನಿಧಾನವಾಗಿ ಅವನನ್ನು ಪ್ರೀತಿಸಲು ಆರಂಭಿಸಿದ್ದಾಳೆ. ಗೌತಮ್‌ ಏನು ಬೇಕಿದ್ದರೂ ಮಾಡಲು ತಯಾರಾಗಿದ್ದಾಳೆ. ಹೆಚ್ಚು ಕಾಲ ಗೌತಮ್ ಜೊತೆಗೆ ಕಳೆಯಲು ಬಯಸುತ್ತಿರುವ ಭೂಮಿಕಾಳ ಮಾತುಗಳನ್ನು ಕೇಳಿದ ಮಂದಾಕಿನಿ, ಮಗಳಿಗೆ ಪ್ರಪೋಸ್ ಮಾಡುವಂತೆ ಹೇಳಿಕೊಟ್ಟಿದ್ದಾರೆ. ಅಮ್ಮ ಕೊಟ್ಟ ರೆಡ್ ರೋಸ್ ಅನ್ನು ಹಿಡಿದು ಬಂದಿರುವ ಭೂಮಿಕಾ ಭಯದಲ್ಲೇ ಗೌತಮ್‌ಗೆ ಪ್ರಪೋಸ್ ಮಾಡಲು ಮುಂದಾಗಿದ್ದಾಳೆ. ಆದರೆ ಸಿಕ್ಕಾಪಟ್ಟೆ ಹೆದರಿರುವ ಭೂಮಿಕಾ ಒದ್ದಾಡುತ್ತಿದ್ದಾಳೆ. ಸದ್ಯ ಗೌತಮ್ ಮತ್ತು ಭೂಮಿಕಾ ಈಗ ಒಂದಾಗುವ ದಾರಿಯಲ್ಲಿದ್ದು, ಜೋಡಿ ಇನ್ನಷ್ಟು, ಮತ್ತಷ್ಟು ಹತ್ತಿರವಾಗಿದ್ದಾರೆ.

Amruthadhaare Serial 07th February episode written update

ಜೈದೇವ ಮಾಡಿದ ಎಡವಟ್ಟು

ಇನ್ನು ಜೈದೇವನಿಗೆ ಬಹಳ ಕೆಟ್ಟ ಗುಣಗಳಿವೆ. ಮನೆಯಲ್ಲಿ ಎಲ್ಲರದ್ದು ಒಂದು ದಾರಿಯಾದರೆ, ಶಕುಂತಲಾ ಹಾಗೂ ಜೈದೇವನದ್ದೇ ಬೇರೆ ದಾರಿ. ಅಮ್ಮನಂತೆಯೇ ಜೈದೇವ ಕೂಡ ಇದ್ದು, ಅವನಿಗೆ ಮನೆಯ ಮಾಲಿಯ ಮೊಮ್ಮಗಳ ಜೊತೆಗೆ ಸಂಬಂಧವಿದೆ. ಈ ವಿಚಾರ ಮನೆಯಲ್ಲಿ ಲಕ್ಷ್ಮೀಕಾಂತನಿಗೆ ಬಿಟ್ಟರೆ ಮತ್ಯಾರಿಗೂ ಗೊತ್ತಿಲ್ಲ. ಈಗ ಮಲ್ಲಿ ಮನೆಗೆ ಹೋದಾಗ ತನ್ನ ವಾಚ್ ಅನ್ನು ಬಿಟ್ಟು ಬಂದಿದ್ದು, ಇದನ್ನು ಭೂಮಿಕಾ ನೋಡಿದ್ದಾಳೆ. ಈ ವಾಚ್ ಅಲ್ಲಿಗೆ ಹೇಗೆ ಹೋಯ್ತು ಎಂದು ತಲೆ ಕೆಡಿಸಿಕೊಂಡ ಭೂಮಿಕಾಳಿಗೆ ಸುಳ್ಳು ಹೇಳಿ ಲಕ್ಷ್ಮೀಕಾಂತ ಮ್ಯಾನೇಜ್ ಮಾಡಿದ್ದಾನೆ.

ಪಾರ್ಥ-ಅಪೇಕ್ಷಾ ಪ್ರೀತಿ ಸಹಿಸದ ಜೈದೇವ

ಜೈದೇವನ ಕಣ್ಣು ಭೂಮಿಕಾ ತಂಗಿ ಅಪೇಕ್ಷಾ ಮೇಲೆಯೂ ಬಿದ್ದಿದ್ದು, ಅವಳನ್ನು ಪಟಾಯಿಸಲು ಸಾಕಷ್ಟು ಪ್ರಯತ್ನ ಪಟ್ಟ. ಆದರೆ ಜೈದೇವನಿಗೆ ಅಡ್ಡಲಾಗಿ ಈಗ ಪಾರ್ಥ ಬಂದಿದ್ದಾನೆ. ಈಗಾಗಲೇ ಪಾರ್ಥ ಮತ್ತು ಅಪೇಕ್ಷಾ ಇಬ್ಬರೂ ಪ್ರೀತಿ ಮಾಡುತ್ತಿದ್ದು, ಮನೆಯವರಿಗೆ ಸುಳ್ಳು ಹೇಳಿ ಇಬ್ಬರೂ ಲಾಂಗ್ ರೈಡ್ ಹೋಗಿದ್ದಾರೆ. ಪಾರ್ಥನಲ್ಲಿನ ಬದಲಾವಣೆಗಳನ್ನು ಭೂಮಿಕಾ ಗಮನಿಸಿದ್ದು, ಇದಕ್ಕೆ ಕಾರಣ ತಿಳಿದಿಲ್ಲ. ಇತ್ತ ಮಂದಾಕಿನಿಯೂ ಕೂಡ ಅಪೇಕ್ಷಾಳಲ್ಲಿನ ಬದಲಾವಣೆಗಳನ್ನು ಪ್ರಶ್ನಿಸಿದ್ದಾಳೆ. ಇನ್ನು ಅಪೇಕ್ಷಾ ಮತ್ತು ಪಾರ್ಥನನ್ನು ನೋಡಿದ ಜೈದೇವನಿಗೆ ಹೊಟ್ಟೆ ಉರಿ ಬಂದಿದೆ. ನನ್ನ ಬಟರ್‌ಪ್ಲೈ ಅಪೇಕ್ಷಾಳನ್ನು ಪಾರ್ಥ ಸೈಲೆಂಟ್ ಆಗಿ ಹಾರಿಸಿಕೊಂಡು ಹೋಗುತ್ತಿರುವುದಕ್ಕೆ ಕೋಪಗೊಂಡಿದ್ದಾನೆ.

ಅಪೇಕ್ಷಾ ಜೊತೆಗೆ ಜೈದೇವ ಮದುವೆ..?

ಇಷ್ಟಕ್ಕೇ ಸುಮ್ಮನಿರದೇ ಜೈದೇವ ಹಗಲಲ್ಲೇ ಕುಡಿಯಲು ಶುರು ಮಾಡಿದ್ದಾನೆ. ತಾನು ಆಸೆ ಪಟ್ಟಿದ್ದು ಬೇರೆಯವರ ಪಾಲಾಗುತ್ತಿದೆ ಎಂದು ಸಂಕಟ ಅನುಭವಿಸುತ್ತಿದ್ದಾನೆ. ಮಗನ ಸ್ಥಿತಿಯನ್ನು ನೋಡಲಾಗದೇ, ಶಕುಂತಲಕಾ ನಿನಗೆ ಏನು ಬೇಕು ಕೇಳು. ನಾನು ಕೊಡಿಸುತ್ತೇನೆ ಎಂದು ಮಾತು ಕೊಟ್ಟಿದ್ದಾಳೆ. ಜೈದೇವ ತನಗೆ ಮದುವೆ ಮಾಡಿಸಬೇಕು ಅದೂ ಕೂಡ ತಾನು ಇಷ್ಟಪಟ್ಟ ಅಪೇಕ್ಷಾ ಜೊತೆಗೆ ಎಂದು ಶಕುಂತಲಾ ಎದುರು ಕೇಳಿಕೊಂಡಿದ್ದಾನೆ. ಆದರೆ, ಶಕುಂತಲಾ ಇದಕ್ಕೆ ಸುತಾರಾಂ ಒಪ್ಪುತ್ತಿಲ್ಲ. ಅವಳು ಈ ಮನೆ ಸೊಸೆಯಾಗುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾಳೆ. ಈಗ ಜೈದೇವ ಹಾಗೂ ಅಪೇಕ್ಷಾ ಮದುವೆ ನಡೆಯುತ್ತದೆಯೋ ಇಲ್ಲ ಪ್ರೇಮಿಗಳು ಒಂದಾಗುತ್ತಾರೋ ಎಂಬ ಕುತೂಹಲ ಮೂಡಿದೆ.

More from Filmibeat

English summary
Amruthadhaare Serial today episode update; partha and apeksha are in love now. Jaideva is not accepting and planned to marry apeksha;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X