Amruthadhaare: ಭೂಮಿಕಾ-ಗೌತಮ್ ಮದುವೆ ಕೂಡ ಕ್ಯಾನ್ಸಲ್ ಆಯ್ತಾ..?

By ಪ್ರಿಯಾ ದೊರೆ

ಗೌತಮ್ ಕೋಪದಿಂದ ಜೀವನ್ ಮನೆಗೆ ಬಂದು ನನ್ನ ತಂಗಿಗೆ ಹೊಡೆಯುವ ಅಧಿಕಾರ ನಿನಗೆ ಯಾರು ಕೊಟ್ಟರು ಎಂದು ಜೋರು ಮಾಡುತ್ತಾನೆ. ಯಾವುದೇ ಕಾರಣಕ್ಕೂ ನಿನಗೆ ನನ್ನ ತಂಗಿಯನ್ನು ಕೊಟ್ಟು ಮದುವೆ ಮಾಡುವುದಿಲ್ಲ. ಯಾರೂ ಒಪ್ಪಿದರೂ ಈ ಮದುವೆಗೆ ನಾನಂತೂ ಒಪ್ಪಿಗೆ ಕೊಡುವುದಿಲ್ಲ ಎಂದಿದ್ದಾನೆ. ಗೌತಮ್‌ಗೆ ಈಗ ಜೀವನ್ ಮೇಲೆ ಬಹಳ ಕೋಪ ಬಂದಿದೆ.

ಜೀವನ್ ತನ್ನ ತಂಗಿಯ ಮೇಲೆ ಕೈ ಮಾಡಿದ್ದಾನೆ. ಮುಂದೆಯೂ ಹೀಗೆ ಆದರೆ, ಮಹಿಮಾಳನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ ಎಂದು ಗೌತಮ್ ಭಾವಿಸಿದ್ದಾನೆ. ಕೋಪದಲ್ಲಿರುವ ಗೌತಮ್‌ಗೆ ಸತ್ಯ ಅರ್ಥವಾಗುತ್ತಿಲ್ಲ. ಗೌತಮ್‌ನನ್ನು ಸಮಾಧಾನ ಮಾಡಲು ಆನಂದ್ ಬಹಳ ಪ್ರಯತ್ನಿಸುತ್ತಾನೆ. ಆದರೆ ಗೌತಮ್ ಆನಂದ್ ಮಾತನ್ನು ಕೇಳುವುದಿಲ್ಲ.

Amruthadhaare-Serial

ಗೌತಮ್ ನೀನು ತೆಗೆದುಕೊಳ್ಳುವ ಈ ನಿರ್ಧಾರದಿಂದ ನಾಲ್ಕು ಜನರ ಜೀವನ ಅಡಗಿದೆ. ಮಹಿಮಾ ಹಾಗೂ ಜೀವನ್ ನಡುವೆ ಏನೇ ನಡೆದರೂ ಅವರಿಬ್ಬರೇ ಸರಿ ಮಾಡಿಕೊಳ್ಳುತ್ತಾರೆ. ನೀನು ಮಧ್ಯದಲ್ಲಿ ಹೋಗಬೇಡ ಎಂದು ಆನಂದ್ ಪರಿ ಪರಿಯಾಗಿ ಬುದ್ಧಿ ಹೇಳುತ್ತಾನೆ. ಆದರೆ ಗೌತಮ್ ಮಾತ್ರ ಆನಂದ್ ಮಾತನ್ನು ಸ್ವಲ್ಪವೂ ಕೇಳುವುದಿಲ್ಲ.

ಮಗನಿಗೆ ಬೈದ ಸದಾಶಿವ

ಬೆಳಗೆದ್ದು ಸದಾಶಿವ ಮಗ ಜೀವನ್‌ಗೆ ಬೈಯುತ್ತಾನೆ. ಒಂದು ಹುಡುಗಿಯ ಮೇಲೆ ಕೈ ಮಾಡಿದ್ದೀಯಾ ಎಂದರೆ ನೀನು ಮನುಷ್ಯನಲ್ಲ ಸೈಕೋ ಆಗಿರಬೇಕು. ನೀನು ಮಾಡಿದ್ದು ತಪ್ಪು ಜೀವನ್. ಗೌತಮ್ ನಿನ್ನ ಮೇಲೆ ಬಹಳ ಭರವಸೆ ಇಟ್ಟಿದ್ದ. ಅವನ ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೀಯಾ ಎಂದುಕೊಂಡಿದ್ದ. ಆದರೆ ನೀನು ಮಾಡಿದ್ದು ತಪ್ಪು ಎಂದು ಹೇಳುತ್ತಾನೆ.

Amruthadhaare-Serial

ಗೊಂದಲದಲ್ಲಿ ಮಂದಾಕಿನಿ

ಜೀವನ್ ನನ್ನ ಮಾತನ್ನು ಕೇಳಿ ಎಂದರೂ ಯಾರೂ ಕೇಳಲು ತಯಾರಿರುವುದಿಲ್ಲ. ಇನ್ನು ಮಂದಾಕಿನಿ ಕೂಡ ಜೀವನ್ ಮದುವೆ ನಿಂತರೆ, ಭೂಮಿಕಾ ಮದುವೆಯೂ ಮುರಿದು ಬೀಳುತ್ತದೆ. ಅದಕ್ಕೆ ನಾವೇ ಗೌತಮ್ ಮನೆಗೆ ಹೋಗಿ ಈ ಬಗ್ಗೆ ಮಾತನಾಡೋಣ ಎಂದು ಹೇಳುತ್ತಾಳೆ. ಆದರೆ ಮನೆಯವರಿಗೆ ಏನು ಹೇಳಬೇಕು ಎಂಬುದೇ ತಿಳಿಯುವುದಿಲ್ಲ.

ಅಮ್ಮನ ನಿದ್ದೆ ಕೆಡಿಸಿದ ಮಹಿಮಾ

ಇತ್ತ ಶಕುಂತಲಾಳಿಗೆ ರಾತ್ರಿ ಪೂರ್ತಿ ನಿದ್ದೆ ಬಂದಿರುವುದಿಲ್ಲ. ಮಹಿಮಾ ಜಗಳ ಮಾಡಿಕೊಂಡಿದ್ದರಿಂದ ಗೌತಮ್ ಅವರಿಬ್ಬರ ಮದುವೆಯನ್ನು ಕ್ಯಾನ್ಸಲ್ ಮಾಡಿದ್ದ. ಇನ್ನು ಮಹಿಮಾಳನ್ನು ಕಂಟ್ರೋಲ್ ಮಾಡುವುದು ಹೇಗೆ ಎಂದು ಯೋಚಿಸುತ್ತಾ ಇಡೀ ರಾತ್ರಿ ಎದ್ದಿರುತ್ತಾಳೆ. ಆದರೆ, ಶಕುಂತಲಾ ಅವರ ಸಹೋದರ ಬಂದು ಮಹಿಮಾ ಮದುವೆ ನಿಂತರೆ, ಭೂಮಿಕಾ ಕೂಡ ಈ ಮನೆಗೆ ಸೊಸೆಯಾಗಿ ಬರುವುದಿಲ್ಲ. ಆಗ ನಿನಗೆ ಸಮಸ್ಯೆ ಆಗುತ್ತದೆ. ಭೂಮಿಕಾ ಬಿಟ್ಟು ಬೇರೆ ಯಾರೇ ಗೌತಮ್‌ನನ್ನು ಮದುವೆಯಾದರೂ ಕೂಡ ಎಲ್ಲರೂ ನಿನ್ನ ಮೇಲೆ ಸವಾರಿ ಮಾಡುತ್ತಾರೆ. ನಿನ್ನನ್ನು ಬೀದಿಗೆ ಹಾಕುತ್ತಾರೆ ಎಂದು ಹೇಳುತ್ತಾನೆ. ಈ ಮಾತು ಶಕುಂತಲಾಳಿಗೆ ಗಾಬರಿಯನ್ನುಂಟು ಮಾಡುತ್ತದೆ.

ಭೂಮಿಕಾ ಜೊತೆ ಮದುವೆ ಕ್ಯಾನ್ಸಲ್

ಇದೇ ವೇಳೆಗೆ ಗೌತಮ್, ಶಕುಂತಲಾ ರೂಮಿಗೆ ಬರುತ್ತಾನೆ. ಅಮ್ಮ ನಾನು ನಿಮ್ಮ ಜೊತೆ ಒಂದು ಗಂಭೀರವಾದ ವಿಚಾರವನ್ನು ಹೇಳಬೇಕು ಎಂದು ಹೇಳುತ್ತಾನೆ. ಶಕುಂತಲಾ ಏನು ಎಂದು ಕೇಳಿದ್ದಕ್ಕೆ ಗೌತಮ್, ನನ್ನ ಹಾಗೂ ಭೂಮಿಕಾ ಮದುವೆ ಕ್ಯಾನ್ಸಲ್ ಮಾಡುತ್ತೇನೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಶಾಕ್ ಆಗುತ್ತದೆ. ಮಹಿಮಾಗೋಸ್ಕರ ನಾನು ಭೂಮಿಕಾಳನ್ನು ಮದುವೆಯಾಗಲು ಒಪ್ಪಿದೆ. ಆದರೆ, ಈಗ ಮಹಿಮಾ ಮದುವೆಯೇ ನಡೆಯುತ್ತಿಲ್ಲ. ಹಾಗಾಗಿ ನಾನು ಭೂಮಿಕಾಳನ್ನು ಮದುವೆಯಾಗುವುದಿಲ್ಲ ಎಂದು ಗೌತಮ್, ಶಕುಂತಲಾಳಿಗೆ ತನ್ನ ನಿರ್ಧಾರವನ್ನು ಹೇಳುತ್ತಾನೆ.

More from Filmibeat

English summary
Amruthadhaare Serial 07th July episode written update. A fight between Mahima and Jeevan has caused problems in both the houses. Due to this the marriage of both of them is broken. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X