Amruthadhaare: ಭೂಮಿಕಾಳಿಗೆ ಫೋನ್ ಮಾಡಿದ ಮಾನ್ಯ: ಮಹಿಮಾ ಮುಖಕ್ಕೆ ಏನಾಯ್ತು..?
ಅಮೃತಧಾರೆ ಧಾರಾವಾಹಿಯಲ್ಲಿ ಮದುವೆ ಮಾಡಿಕೊಂಡು ಹನಿಮೂನ್‌ಗೆ ಹೊರಟ ಜೀವ ಮತ್ತು ಮಹಿಮಾ ಎಡವಟ್ಟು ಮಾಡಿಕೊಂಡಿದ್ದಾರೆ. ಮಹಿಮಾ ತಾನೇ ಸುಂದರಿ ಎಂದು ತಿಳಿದಿದ್ದಾಳೆ. ಎಲ್ಲರಿಗಿಂತಲೂ ತಾನೇ ಚೆನ್ನಾಗಿ ಕಾಣಬೇಕು ಎಂಬ ಕಾರಣ ಕಾಸ್ಟ್ಲಿ ಕ್ರೀಂ ಅನ್ನು ತರಿಸಿರುತ್ತಾಳೆ. ಅದನ್ನು ಹಚ್ಚಿದ ಬಳಿಕ ಮಹಿಮಾ ಮುಖ ಹಾಳಾಗಿರುತ್ತದೆ.
ತನ್ನ ಮುಖ ನೋಡಿಕೊಂಡು ಮಹಿಮಾಳಿಗೆ ಗಾಬರಿಯಾಗುತ್ತದೆ. ಇದರಿಂದ ಜೀವ, ಮಹಿಮಾಳನ್ನು ಸಮಾಧಾನ ಮಾಡುತ್ತಾನೆ. ಡಾಕ್ಟರ್ ಕರೆಸುವುದಾಗಿ ಹೇಳುತ್ತಾನೆ.

ಇತ್ತ ಮಾನ್ಯಾ ಸೀದಾ ಗೌತಮ್ ಮದುವೆ ನಡೆಯುವ ಸ್ಥಳಕ್ಕೆ ಬರುತ್ತಾಳೆ. ಹೇಗೋ ಮಾಡಿ ಯಾರ ಕಣ್ಣಿಗೂ ಬೀಳದಂತೆ ಚೌಟರಿ ಒಳಗೆ ಬರುತ್ತಾಳೆ. ಆದರೆ, ಗೌತಮ್ ಮತ್ತು ಭೂಮಿಕಾ ಇಬ್ಬರೂ ಹಸೆಮಣೆ ಮೇಲೆ ಇರುವುದನ್ನು ನೋಡಿ ಮಾನ್ಯ, ಭೂಮಿಕಾಳಿಗೆ ಕಾಲ್ ಮಾಡುತ್ತಾಳೆ.
ಮಾನ್ಯಳನ್ನು ಕೂಡಿ ಹಾಕಿದ ಲಕ್ಕಿ
ಭೂಮಿಕಾ ಫೋನ್ ಅಪೇಕ್ಷಾ ಬಳಿ ಇರುತ್ತದೆ. ಅಪೇಕ್ಷಾ ರಿಸೀವ್ ಮಾಡಿದ ಕೂಡಲೇ ಮಾನ್ಯ, ಭೂಮಿಕಾ ಬಳಿ ಫೋನ್ ಕೊಡಿ ನಾನು ಅವಳ ಫ್ರೆಂಡ್ ತುಂಬಾ ಮುಖ್ಯವಾದ ವಿಚಾರ ಮಾತನಾಡಬೇಕು ಎಂದು ಕೇಳುತ್ತಾಳೆ. ಅಪೇಕ್ಷಾ ಈಗ ಕೊಡುವುದಕ್ಕೆ ಆಗುವುದಿಲ್ಲ ಎನ್ನುತ್ತಾಳೆ. ಅಷ್ಟರಲ್ಲಿ ಲಕ್ಕಿ ಲಕ್ಷ್ಮೀಕಾಂತ ಬಂದು ಅವಳಿಗೆ ಪ್ರಜ್ಞೆ ತಪ್ಪಿಸಿ ರೂಮ್ ಒಂದರಲ್ಲಿ ಕೂಡಿ ಹಾಕುತ್ತಾನೆ.

ಸೆಕೆಯಿಂದ ನರಳಿದವರಿಗೆ ಗೌತಮ್ ಮಾತು
ಇತ್ತ ಮದುವೆಗೆ ಬಂದವರೆಲ್ಲರೂ ಸೆಕೆಯಿಂದ ನರಳುತ್ತಿರುತ್ತಾರೆ. ಆಗ ಶಕುಂತಲಾ ಹಾಗೂ ಮದುವೆಗೆ ಬಂದವರು ಎಷ್ಟೊತ್ತಿಗೆ ಮದುವೆ ಮುಗಿಯುತ್ತದೋ ಎಂದು ಮಾತನಾಡುತ್ತಿರುತ್ತಾರೆ. ಆಗ ಸದಾಶಿವ, ಗೌತಮ್‌ಗೆ ಕ್ಷಮೆ ಕೇಳುತ್ತಾನೆ. ನೀವು ಎಸಿ ಬೇಕು ಎಂದು ಹೇಳಿದ್ದಿರಿ. ಆದರೆ, ಕರೆಂಟ್ ಇಲ್ಲದೇ ಎಸಿ ವರ್ಕ್ ಆಗುತ್ತಿಲ್ಲ. ನಮ್ಮನ್ನು ಕ್ಷಮಿಸಿ ಎನ್ನುತ್ತಾನೆ.
ತಂದೆ ಕನಸಿನಂತೆ ಮದುವೆ
ಗೌತಮ್ ಎಲ್ಲರಿಗೂ ಇಲ್ಲಿ ಮದುವೆಗೆ ಎಂದು ಎಲ್ಲರೂ ಬಂದಿದ್ದು, ನಾನು ಕೋಟಿ ಖರ್ಚು ಮಾಡಿ ನನ್ನ ತಂಗಿ ಮದುವೆ ಮಾಡಿದ್ದೇನೆ. ಆದರೆ, ಇಲ್ಲಿ ಒಬ್ಬ ತಂದೆ ಜೀವನ ಪೂರ್ತಿ ದುಡಿದು ತನ್ನ ಕನಸಿನಂತೆ ಮಗಳ ಮದುವೆ ಮಾಡುತ್ತಿದ್ದಾರೆ. ಮದುವೆಯಲ್ಲಿ ಇರಲು ಬಯಸುವವರು ಇರಬಹುದು. ಇಲ್ಲದವರು, ಹೋಗಬಹುದು. ಯಾರನ್ನೂ ಇಲ್ಲಿ ತಡೆಯುವುದಿಲ್ಲ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ಎಲ್ಲರೂ ಶಾಕ್ ಆಗುತ್ತಾರೆ.
ಸಿಂಪಲ್ ಆಗಿ ನಡೀತು ಮದುವೆ
ಬಳಿಕ ಮದುವೆಯ ಶಾಸ್ತ್ರ ನಡೆಯುತ್ತದೆ. ಕನ್ಯಾದಾನ ಮಾಡಿಕೊಡಲಾಗುತ್ತದೆ. ಕನ್ಯಾದಾನ ಮಾಡುವಾಗ ಸದಾಶಿವ, ಮಂದಾಕಿನಿ, ಅಪೇಕ್ಷಾ ಎಲ್ಲರೂ ಭೂಮಿಕಾಳ ಗುಣ ಹೊಗಳಿ ಹೇಳುತ್ತಾರೆ. ಗೌತಮ್‌ಗೆ ಭೂಮಿಕಾ ಬಗ್ಗೆ ಕೇಳಿ ಕನಿಕರವೂ ಬರುತ್ತದೆ. ನಂತರ ಸಪ್ತಪದಿ ತುಳಿದು ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬದುಕುವುದಾಗಿ ಭರವಸೆ ಕೊಡುತ್ತಾರೆ. ಇನ್ನು ಶಕುಂತಲಾ ನೀವು ಬಯಸಿದಂತೆ ಬದುಕುವುದಿಲ್ಲ. ಎಲ್ಲವೂ ನನ್ನ ಇಷ್ಟದಂತೆ ನಡೆಯುತ್ತದೆ. ನಿಮ್ಮ ಬದುಕು ನನ್ನ ಕೈಯಲ್ಲಿದೆ ಎಂದು ಹೇಳುತ್ತಾಳೆ. ಉಳಿದವರೆಲ್ಲಾ ಭೂಮಿಕಾ ಹಾಗೂ ಗೌತಮ್ ಮದುವೆ ಆಗಿದ್ದಕ್ಕೆ ಖುಷಿ ಪಡುತ್ತಾರೆ.
ಸೀತಾಳಿಗೆ ಬುದ್ಧಿ ಹೇಳಿದ ಭೂಮಿಕಾ
ಮದುವೆ ಮುಗಿದ ಬಳಿಕ ಭೂಮಿಕಾ, ಸೀತಾಳನ್ನು ಮಾತನಾಡಿಸುತ್ತಾಳೆ. ಕೊನೆಗೂ ಜೋಡಿಯಾದೆ. ಖುಷಿಯಾಗುತ್ತಿದೆ ಎನ್ನುತ್ತಾಳೆ. ಆಗ ಭೂಮಿಕಾ, ಸೀತಾಳಿಗೆ ಮದುವೆಯಾಗುವಂತೆ ಬುದ್ಧಿ ಹೇಳುತ್ತಾಳೆ. ನೀನು ಮದುವೆಯಾಗು. ನಿನಗೂ ಒಬ್ಬರು ಬೇಕು. ಸಿಹಿಯ ಜೊತೆಗೆ ನಿನಗೆ ಅಂತ ಒಬ್ಬರು ಬೇಕು ಎಂದು ಹೇಳುತ್ತಾಳೆ.


Click it and Unblock the Notifications











