Amruthadhaare ; ಅಪೇಕ್ಷಾ-ಪಾರ್ಥನ ಮದುವೆಯನ್ನು ನಿರಾಕರಿಸಿದ ಸದಾಶಿವ,ಭೂಮಿಕಾ ಮೇಲೆ ಗೂಬೆ ಕೂರಿಸಿದ ಶಕುಂತಲಾ..!
ಅಮೃತಧಾರೆ ಧಾರಾವಾಹಿಯಲ್ಲಿ ದಿಯಾಳಿಗೆ ಗೌತಮ್ ವಾರ್ನಿಂಗ್ ಕೊಟ್ಟು ಬಂದ ಮೇಲೆ ಜೈದೇವ್ ಬೇಕಂತಲೇ ಮಲ್ಲಿ ಬಳಿ ನಾಟಕ ಮಾಡಿ, ತನ್ನದು ತಪ್ಪೇ ಇಲ್ಲ ಎಂಬಂತೆ ನಡೆದುಕೊಂಡಿದ್ದಾನೆ. ಇನ್ನು ಗೌತಮ್ ಹುಡುಗಿ ಮನೆಯವರಿಗೆ ಮದುವೆ ಬಗ್ಗೆ ಖಚಿತ ಮಾಹಿತಿಯನ್ನು ನೀಡಬೇಕು ಎಂದು ಕೇಳುತ್ತಾನೆ. ಆಗ ಶಕುಂತಲಾ ತನ್ನ ಮನಸ್ಸಿನಲ್ಲಿ ಬೇರೆ ಹುಡುಗಿ ಇದ್ದು, ಈಗ ನೋಡಿರುವ ಸಂಬಂಧವನ್ನು ಬೇಡ ಎಂದು ಹೇಳುತ್ತಾಳೆ.ಅಪೇಕ್ಷಾಳನ್ನು ನಮ್ಮ ಮನೆಗೆ ಸೊಸೆಯಾಗಿ ತಂದುಕೊಂಡರೆ ಬಹಳ ಚೆನ್ನಾಗಿರುತ್ತೆ. ನಾನು ಎಲ್ಲಾ ರೀತಿಯಲ್ಲೂ ಯೋಚನೆ ಮಾಡಿಯೇ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳುತ್ತಾಳೆ.
ಅಕ್ಕನ ಮಾತು ಕೇಳಿ ಶಾಕ್ ಆದ ಅಪೇಕ್ಷಾ
ಸರ್ಪ್ರೈಸ್ ಆಗಿ ಶಕುಂತಲಾ ಪಾರ್ಥ ಮತ್ತು ಗೌತಮ್ ಜೊತೆಗೆ ಭೂಮಿಕಾಳನ್ನು ಕರೆದುಕೊಂಡು ಸೀದಾ ಸದಾಶಿವನ ಮನೆಗೆ ಬರುತ್ತಾರೆ. ಮನೆಗೆ ಬರುತ್ತಿದ್ದಂತೆ ಭೂಮಿಕಾಳಿಗೆ ಶಾಕ್ ಆಗುತ್ತದೆ. ಗೌತಮ್ ಅಪೇಕ್ಷಾಳನ್ನು ನಾವು ಪಾರ್ಥನಿಗೆ ತಂದುಕೊಳ್ಳಲು ಬಯಸಿದ್ದೇವೆ ಎಂದಾಗ ಮನೆಯವರೆಲ್ಲಾ ಖುಷಿ ಪಡುತ್ತಾರೆ. ಆದರೆ ಸದಾಶಿವನಿಗೆ ಇದು ಕೊಂಚವೂ ಇಷ್ಟವಾಗುವುದಿಲ್ಲ. ಆಗ ಭೂಮಿಕಾ ಅಪೇಕ್ಷಾ ಬಳಿ ಹೋಗಿ ಈ ಮದುವೆಯನ್ನು ನೀನು ಬೇಡ ಅನ್ನು, ಇದರಿಂದ ಅಪ್ಪನಿಗೆ ಸಮಸ್ಯೆ ಆಗುತ್ತದೆ. ನಿಮ್ಮ ಪ್ರೀತಿಗೆ ಅಡ್ಡ ಬರುತ್ತಿರುವುದಕ್ಕೆ ಕ್ಷಮಿಸಿಬಿಡು ಎಂದು ಕೇಳಿಕೊಳ್ಳುತ್ತಾಳೆ. ಆದರೆ, ಅಪೇಕ್ಷಾ ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ಭೂಮಿಕಾ ತಂದೆಯ ಪರೀಸ್ಥಿತಿಯನ್ನು ಅರ್ಥ ಮಾಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಸಾಧ್ಯವಾಗುವುದಿಲ್ಲ.

ಸದಾಶಿವನ ಮಾತಿಗೆ ಬೆಲೆ ಕೊಟ್ಟ ಗೌತಮ್
ಮನೆಯಲ್ಲಿ ಮದುವೆಯ ಮಾತನ್ನು ಕೇಳಿ ಎಲ್ಲರೂ ಖುಷಿ ಪಡುತ್ತಾರೆ. ಗೌತಮ್ ತಾಂಬೂಲ ಕೊಡಲು ಹೋದಾಗ ಸದಾಶಿವ ಮೌನವಾಗಿರುತ್ತಾನೆ. ಏನಾಯ್ತು ಎಂದು ಕೇಳಿದ್ದಕ್ಕೆ ಭೂಮಿಕಾ ಈ ಮದುವೆ ಅಪ್ಪನಿಗೆ ಇಷ್ಟವಿಲ್ಲ. ಇದರಿಂದ ಎರಡೂ ಕುಟುಂಬಕ್ಕೆ ಸಮಸ್ಯೆ ಆಗುತ್ತೆ ಎಂದು ಹೇಳುತ್ತಾಳೆ. ಆಗ ಸದಾಶಿವ ತನ್ನ ಮನದಲ್ಲಿರುವ ಮಾತುಗಳನ್ನು ಹೇಳುತ್ತಾನೆ. ಪಾರ್ಥ ಮತ್ತು ಅಪೇಕ್ಷಾ ಪ್ರೀತಿ ಬಗ್ಗೆಯೂ ಹೇಳುತ್ತಾನೆ. ಈ ಮದುವೆ ನಡೆದರೆ ಏನೆಲ್ಲಾ ಸಮಸ್ಯೆ ಆಗಬಹುದು. ತನಗೆ ಏನೆಲ್ಲಾ ಕಷ್ಟಗಳು ಬರಬಹುದು ಎಂದು ವಿವರಿಸಿ ಹೇಳುತ್ತಾನೆ. ಆಗ ಗೌತಮ್ ಮಾವನ ಮಾತಿನಲ್ಲಿ ಅರ್ಥವಿದೆ ಎಂದು ತಿಳಿದು ಅಲ್ಲಿಂದ ಹೊರಟು ಹೋಗುತ್ತಾನೆ. ಇದರಿಂದ ಅಪೇಕ್ಷಾಳಿಗೆ ನೋವಾಗುತ್ತದೆ.
ಸತ್ಯ ತಿಳಿದು ಕೆಂಡಾಮಂಡಲಗೊಂಡ ಜೈದೇವ್
ಇನ್ನು ಈ ವಿಚಾರ ತಿಳಿದ ಜೈದೇವ್ ಅಮ್ಮ ಶಕುಂತಲಾ ಮೇಲೆ ಕೋಪ ಮಾಡಿಕೊಳ್ಳುತ್ತಾನೆ. ನಾನು ಅಪೇಕ್ಷಾಳನ್ನು ಇಷ್ ಪಟ್ಟ ವಿಚಾರ ಗೊತ್ತಿದ್ದು, ಅದರ ಜೊತೆಗೆ ಅವಳು ಈ ಮನೆಗೆ ಸೊಸೆಯಾಗಿ ಬರಬಾರದು ಎಂದು ಹೇಳಿದ್ದರೂ ಕೂಡ ಅಮ್ಮ ಅವರಾಗೆ ಅವರು ಹೋಗಿ ಪಾರ್ಥನ ಮದುವೆಯನ್ನು ಅಪೇಕ್ಷಾ ಜೊತೆಗೆ ಮಾಡಲು ಮುಂದಾಗಿದ್ದಾರಾ ಎಂದು ಕೋಪ ಮಾಡಿಕೊಳ್ಳುತ್ತಾನೆ. ಲಕ್ಷ್ಮೀಕಾಂತ ಆಗ ಜೈದೇವ್ ಗೆ ಸಮಾಧಾನ ಮಾಡುತ್ತಾನೆ.

ಮದುವೆ ಸಾಧ್ಯವಿಲ್ಲ ಎಂದ ಭೂಮಿಕಾ
ಇನ್ನು ಭೂಮಿಕಾ ಮನೆಗೆ ಬಂದ ಕೂಡಲೇ ಶಕುಂತಲಾಳನ್ನು ಭೇಟಿ ಮಾಡುತ್ತಾಳೆ. ಯಾಕೆ ಹೀಗೆಲ್ಲಾ ಮಾಡಿದ್ದು. ಅಪ್ಪಿ ಜೊತೆಗೆ ಮದುವೆ ಬೇಡ ಎಂದವರು ಈಗ ಯಾಕೆ ಹೀಗೆ ಮಾಡುತ್ತಿದ್ದೀರಾ ಎಂದು ಕೇಳುತ್ತಾಳೆ. ಅದಕ್ಕೆ ಶಕುಂತಲಾ ನನ್ನ ಮಗ ಪಾರ್ಥ ಸುಖವಾಗಿರುವುದು ನನಗೆ ಮುಖ್ಯ ನಿನ್ನ ಕಾಲಿಗೆ ಬೀಳುತ್ತೀನಿ. ದಯವಿಟ್ಟು ನಿಮ್ಮ ಅಪ್ಪನನ್ನು ಈ ಮದುವೆಗೆ ಒಪ್ಪಿಸು ಎಂದು ಕೇಳಿಕೊಳ್ಳುತ್ತಾಳೆ. ಆದರೆ ಭೂಮಿಕಾ ಖಡಾಖಂಡಿತವಾಗಿ ಈ ಮದುವೆ ಸಾಧ್ಯವೇ ಇಲ್ಲ ಎಂದು ಹೇಳುತ್ತಾಳೆ. ಭೂಮಿಕಾ ಆಡಿದ ಮಾತುಗಳನ್ನು ಲಕ್ಷ್ಮೀಕಾಂತ ರೆಕಾರ್ಡ್ ಮಾಡಿಕೊಂಡಿದ್ದಾನೆ.


Click it and Unblock the Notifications











