Amruthadhaare ; ಆಸ್ಪತ್ರೆಗೆ ಬಂದ ಭಾಗ್ಯಳನ್ನು ಕಂಡು ಶಾಕಿಂಗ್ ವಿಚಾರ ಹೇಳಿದ ವೈದ್ಯರು !

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಇದ್ದಕ್ಕಿದ್ದ ಹಾಗೆಯೇ ಶಕುಂತಲಾ ತಲೆಗೆ ಗಾಯ ಆಗಿರುವುದನ್ನು ಕಂಡ ಭೂಮಿಕಾಳಿಗೆ ಬಹಳಷ್ಟು ಅನುಮಾನಗಳು ಮೂಡಿವೆ. ರಾತ್ರಿ ಭಾಗ್ಯ ಅತ್ತೆ ರೂಮಿನಿಂದ ಬಂದಿದ್ದು ಇವರೇ ಇರಬೇಕು ಎಂದು ಗೆಸ್ ಮಾಡಿದ್ದಾಳೆ. ಆದರೆ ಸ್ಪಷ್ಟವಾಗಿ ಅರ್ಥವಾಗದ ಕಾರಣ ಸುಮ್ಮನಾಗಿದ್ದಾಳೆ. ಇನ್ನು ಇತ್ತ ರಾಜೇಂದ್ರ ಭೂಪತಿ ಜೊತೆ ಸೇರಿಕೊಂಡು ಜೈದೇವ್ ತನ್ನ ಅಣ್ಣ ಗೌತಮ್ ನ ಮಣ್ಣು ಮುಕ್ಕಿಸಲು ತಯಾರಿ ನಡೆಸುತ್ತಿದ್ದಾನೆ. ರಾಜೇಂದ್ರ ಭೂಪತಿ ಈಗಾಗಲೇ ಗೌತಮ್ ಕಂಪನಿ ನೌಕರರನ್ನು ಬುಟ್ಟಿಗೆ ಹಾಕಿಕೊಳ್ಳಲು ಮುಂದಾಗಿದ್ದನೆ.

ತಾಯಿಯನ್ನು ಆಸ್ಪತ್ರೆಗೆ ಕರೆ ತಂದ ಗೌತಮ್

ಎಲ್ಲಾ ನೌಕರರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದು, ಯಾರಿಗೆ ಏನು ಬೇಕು. ಯಾರ ಕುಟುಂಬಕ್ಕೆ ಹಣದ ಅವಶ್ಯಕತೆ ಇದೆ ಎಂದೆಲ್ಲಾ ತಿಳಿದುಕೊಳ್ಳುವ ಯತ್ನ ಮಾಡಿದ್ದು, ಆ ಮೂಲಕ ನೌಕರರಿಂದ ಕಂಪನಿಯ ಮಾಹಿತಿಗಳನ್ನು ಪಡೆದು ಗೌತಮ್ ನನ್ನು ಮುಳುಗಿಸಲು ಮುಂದಾಗಿದ್ದಾನೆ. ಈ ಪ್ಲಾನ್ ಬಗ್ಗೆ ತಿಳಿದುಕೊಂಡ ಜೈದೇವ್ ಶಾಕ್ ಆಗಿದ್ದು. ನಿಮ್ಮದು ಸೂಪರ್ ಡೂಪರ್ ಪ್ಲಾನ್. ನಿಮ್ಮ ಮುಂದೆ ನಾನು ಏನೇನು ಅಲ್ಲ ಎಂದು ಹೇಳಿದ್ದಾನೆ. ಅಲ್ಲದೇ, ಜೈದೇವ್ ನನ್ನು ದಿವಾನ್ ಕಂಪನಿಯ ಚೇರ್ ಮನ್ ಮಾಡುವುದಾಗಿಯೂ ರಾಜೇಂದ್ರ ಭೂಪತಿ ಹೇಳಿದ್ದಾನೆ. ಇತ್ತ ಗೌತಮ್ ತನ್ನ ತಾಯಿ ಭಾಗ್ಯಳನ್ನು ಆತ್ಮೀಯ ಸ್ನೇಹಿತನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಪರೀಕ್ಷೆಗಳನ್ನು ಮಾಡಿಸುತ್ತಿದ್ದಾರೆ.

Amruthadhaare Serial 08 February episode written update

ಭಾಗ್ಯಳಿಗೆ ಏನಾಗಿದೆ ಗೊತ್ತಾ..?

ಭಾಗ್ಯ ಅವರಿಗೆ ಎಂಆರ್ ಐ ಸ್ಕ್ಯಾನ್ ಸೇರಿದಂತೆ ಇತರೆ ಪರೀಕ್ಷೆಗಳನ್ನು ಮಾಡಿಸಲಾಗಿದೆ. ಈ ನಡುವೆ ಆಸ್ಪತ್ರೆಗೆ ಅಣ್ಣ-ತಂಗಿ ಮಕ್ಕಳಿಬ್ಬರು ಬಂದಿದ್ದು, ಅವರನ್ನು ಕಂಡ ಭಾಗ್ಯ ಗುಂಡು ಪಾಪು ಎಂದು ಮಾತನಾಡಿಸಿದ್ದಾಳೆ. ಅಮ್ಮನ ಬಿಹೇವಿಯರ್ ಕಂಡು ಗೌತಮ್ ಗೆ ಗಾಬರಿಯಾಗಿದೆ. ಇನ್ನು ಯಾವುದರಲ್ಲೂ ಸಮಸ್ಯೆ ಏನಾಗಿದೆ ಎಂಬುದು ಗೊತ್ತಾಗಿಲ್ಲ. ಬ್ರೈನ್ ನಲ್ಲಿ ಯಾವುದೇ ಬ್ಲಡ್ ಕ್ಲಾಟ್ ಆಗಲೀ, ನರಗಳ ಸಮಸ್ಯೆ ಆಗಲಿ ಕಾಣುತ್ತಿಲ್ಲ. ಆದರೆ, ಹೀಗೆ ವರ್ಷಗಳಿಂದ ಇರಲು ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಭಾಗ್ಯಳ ಬಗ್ಗೆ ತಲೆಕೆಡಿಸಿಕೊಂಡ ಶಕುಂತಲಾ

ವೈದ್ಯರು ಬಹುಶ ಯಾವುದೋ ಘಟನೆಯಿಂದ ಇವರು ಡಿಪ್ರೆಷನ್ ಗೆ ಹೋಗಿರಬಹುದು. ಕೆಲ ಔಷಧಿಗಳನ್ನು ನೀಡುತ್ತೇನೆ. ಅದರ ಜೊತೆಗೆ ಭಾಗ್ಯ ಅವರ ಜೊತೆಗೆ ಒಳ್ಳೆಯ ಸಮಯವನ್ನು ಕಳೆಯಿರಿ ಎಂದು ಹೇಳಿದ್ದಾರೆ. ಇತ್ತ ಶಕುಂತಲಾಳಿಗೆ ಭಾಗ್ಯಳನ್ನು ಗೌತಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂಬ ವಿಚಾರವನ್ನು ಅರಿತು ಕಂಗಾಲಾಗಿದ್ದಾಳೆ. ಲಕ್ಷ್ಮೀಕಾಂತ ಅಕ್ಕನಿಗೆ ಸಲಹೆಯೊಂದನ್ನು ನೀಡಿದ್ದಾನೆ. ಇನ್ಮುಂದೆ ಭಾಗ್ಯ ಜೊತೆಗೆ ಸ್ನೇಹ ಬೆಳೆಸಿಕೊ. ಈ ಮೂಲಕ ನೀನು ಆಕೆಯ ಜೊತೆಗಿದ್ದರೆ, ನಿನ್ನ ಬಗ್ಗೆ ಭಾಗ್ಯ ಕನ್ಫ್ಯೂಸ್ ಆಗಬಹುದು ಎಂದು ಹೇಳಿಕೊಡುತ್ತಾನೆ. ಈ ಮಾತುಗಳು ಶಕುಂತಲಾಳಿಗೂ ಸರಿ ಎಂದೇ ಅನಿಸಿದೆ.

ಮಹಿಮಾಳಿಗೆ ಮಗು ಆಗುವುದು ಅನುಮಾನ..?

ಇತ್ತ ಮಹಿಮಾ ಮನೆಯಲ್ಲಿ ಬೇಸರದಿಂದ ಇದ್ದಾಳೆ. ಮಹಿಮಾ ಮನಸ್ಸು ಸಮಾಧಾನವಾಗುವಂತೆ ಮಾತನಾಡುವ ಬದಲು ಸದಾಶಿವ ಒಂದು ಮಗುವನ್ನು ಮಾಡಿಕೊ. ಅದರಿಂದ ನಿಮ್ಮಿಬ್ಬರ ಭವಿಷ್ಯ ಇನ್ನಷ್ಟು ಚೆನ್ನಾಗಿರುತ್ತದೆ ಎಂದು ಬುದ್ಧಿ ಹೇಳುತ್ತಾನೆ. ಇದರಿಂದ ಮಹಿಮಾಳಿಗೆ ಮತ್ತಷ್ಟು ಬೇಸರವಾಗುತ್ತದೆ. ತಾನು ಮೊದಲ ಬಾರಿಗೆ ಅಬಾರ್ಷನ್ ಮಾಡಿಸಿಕೊಂಡಾಗಲೇ ತನಗೆ ಮತ್ತೆ ಮಗುವಾಗುವುದು ಡೌಟ್ ಎಂದು ವೈದ್ಯರು ಹೇಳಿದ್ದರು. ಈಗ ಈ ಬಗ್ಗೆ ಏನು ಮಾಡುವುದು ಎಂದು ಮಹಿಮಾ ಚಿಂತಿಸುವಂತಾಗಿದೆ. ನಿಜಕ್ಕೂ ಮಹಿಮಾ ತಾಯಿಯಾಗುವ ಭಾಗ್ಯವನ್ನೇ ಕಳೆದುಕೊಂಡಿದ್ದಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X