Amruthadhaare; ಭೂಮಿಕಾಳಿಗೆ ಶಾಪವಾದ ಆಷಾಢ : ಪ್ರೀತಿಗೆ ಎಳ್ಳು-ನೀರು ಬಿಡುತ್ತಾರಾ ಅಪೇಕ್ಷಾ-ಪಾರ್ಥಾ..?
ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ತನ್ನ ಹಾಗೂ ಅಪೇಕ್ಷಾಳ ಮುಂದಿನ ಬದುಕಿನ ಬಗ್ಗೆ ಯೋಚಿಸುತ್ತಿದ್ದಾನೆ. ಸದಾಶಿವನ ಮಾತುಗಳು ಪಾರ್ಥನಿಗೆ ಬೇಸರ ತಂದಿದೆ. ಸದಾಶಿವ ಅವರನ್ನು ಹೇಗೆ ಸಮಾಧಾನ ಪಡಿಸುವುದು. ಅವರಿಗೆ ಹೇಗೆ ತಮ್ಮ ಪ್ರೀತಿ ಬಗ್ಗೆ ಅರ್ಥ ಮಾಡಿಸುವುದು ಎಂದು ಯೋಚಿಸುತ್ತಾ, ಫೀಲಿಂಗ್ ನಲ್ಲಿದ್ದಾನೆ. ಪಾರ್ಥನ ಪರಿಸ್ಥಿತಿ ಗೊತ್ತಿದ್ದರೂ ಜೈದೇವ್ ಬೇಕಂತಲೇ ಬಂದು ಬಂದು ಏನಾಯ್ತು ಎಂದು ಕೆದಕಿ ಕೆದಕಿ ಮಾತನಾಡಿಸಿದ್ದಾನೆ. ಇದರಿಂದ ಪಾರ್ಥನಿಗೆ ಹಿಂಸೆಯಾಗಿದೆ.
ಪ್ರೀತಿ ಚಿಂತೆಯಲ್ಲಿ ಅಪೇಕ್ಷಾ
ಅಪೇಕ್ಷಾಳಿಗೆ ಅವರ ತಂದೆ ಸದಾಶಿವ ವಾರ್ನಿಂಗ್ ಕೊಟ್ಟಿದ್ದಾನೆ. ಪ್ರೀತಿ-ಗೀತಿ ಮರೆತು ಬಿಡು ಎಂದಿದ್ದಾನೆ. ಅಪೇಕ್ಷಾ ತಂದೆಯ ಮಾತಿಗೆ ನಡುಗಿದ್ದು, ಎಲ್ಲಾ ವಿಚಾರವನ್ನು ಭೂಮಿಕಾ ಅಕ್ಕನ ಬಳಿ ಹೇಳಿಕೊಳ್ಳಲು ಬಯಸಿದ್ದಾಳೆ. ಆದರೆ, ಸತ್ಯ ಹೇಳಲಾಗದೇ ಫೋನ್ ಕಟ್ ಮಾಡಿರುವ ಅಪೇಕ್ಷಾ ಮೊದಲು ತನ್ನ ತಂದೆಯ ಜೊತೆಗೆ ಮಾತನಾಡಬೇಕು. ತನ್ನ ಹಾಗೂ ಪಾರ್ಥನ ಪ್ರೀತಿ ಬಗ್ಗೆ ವಿವರಿಸಬೇಕು. ಸದಾಶಿವ ಈ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಮಾಡಬೇಕು ಎಂದು ಅಪೇಕ್ಷಾ ಆಲೋಚಿಸಿದ್ದಾಳೆ. ಆದರೆ, ಅಪೇಕ್ಷಾ ಒಬ್ಬಳ ಕೈಯಲ್ಲೇ ಇದೆಲ್ಲವೂ ಸಾಧ್ಯಾನಾ ಇಲ್ಲ ಅಕ್ಕ ಭೂಮಿಕಾಳ ಸಹಾಯ ಪಡೆಯುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

ತವರು ಮನೆಗೆ ಬಂದ ಭೂಮಿಕಾ
ಇನ್ನು ಭೂಮಿಕಾ ಆಷಾಢ ಎಂದು ತವರು ಮನೆಗೆ ಬರಬೇಕಿದೆ. ಮಂದಾಕಿನಿ ಗೌತಮ್ ಗೆ ಫೋನ್ ಮಾಡಿದ ಕೂಡಲೇ ಗೌತಮ್ ಭೂಮಿಕಾಳನ್ನು ತವರು ಮನೆಗೆ ಬಿಡಲು ಸಜ್ಜಾಗಿದ್ದಾನೆ. ಆದರೆ, ಭೂಮಿಕಾಳಿಗೆ ಗೌತಮ್ ನನ್ನು ಬಿಟ್ಟಿರುವುದು ಕಷ್ಟವಾಗುತ್ತಿದೆ. ತವರು ಮನೆಗೆ ಹೋಗಲು ಸಂಕಟವಾಗಿದ್ದರೂ ಈ ಭಾವ ಗೌತಮ್ ನಲ್ಲಿ ಕಾಣುತ್ತಿಲ್ಲ. ಸ್ವತಾಃ ಗೌತಮ್ ಭೂಮಿಕಾಳನ್ನು ತವರು ಮನೆಗೆ ಕರೆದುಕೊಂಡು ಬಂದು ಬಿಟ್ಟು ಹೊರಟಿದ್ದಾನೆ. ಭೂಮಿಕಾ ಗೌತಮ್ ನನ್ನು ಮಿಸ್ ಮಾಡಿಕೊಂಡಿದ್ದು, ಗೌತಮ್ ಗೆ ಭೂಮಿಕಾ ಭಾವನೆಗಳು ಅರ್ಥವಾಗಿಲ್ಲ. ಇದು ಭೂಮಿಕಾಳಿಗೆ ಬೇಸರವನ್ನು ಕೂಡ ತಂದಿದೆ. ಭೂಮಿಕಾಳಿಗೆ ಆಷಾಢ ಮಾಸ ಶಾಪವಾಗಿ ಪರಿಣಮಿಸಿದೆ.
ಪಾರ್ಥನನ್ನು ಭೇಟಿ ಮಾಡಿದ ಅಪೇಕ್ಷಾ
ಭೂಮಿಕಾ ಬರುತ್ತಿದ್ದಂತೆ ಅಪೇಕ್ಷಾ ಮನೆಯಿಂದ ಹೊರಗೆ ಹೊರಟಿದ್ದಾಳೆ. ಕೆಲಸದ ನೆಪ ಹೇಳಿ ಹೊರಗೆ ಬಂದಿದ್ದು, ಪಾರ್ಥ ಸಿಕ್ಕಿದ್ದಾನೆ. ಅಪೇಕ್ಷಾ ಮನೆಯಲ್ಲಿ ನಾನು ಅಪ್ಪನ ಜೊತೆಗೆ ಮಾತನಾಡಿ ಸಮಸ್ಯೆ ಅನ್ನು ಬಗೆ ಹರಿಸುತ್ತೇನೆ ಎಂದು ಹೇಳಿದ್ದಾಳೆ. ಆದರೆ ಪಾರ್ಥ ಇದು ನನ್ನ ಜವಾಬ್ದಾರಿ ನಾನೇ ಬಂದು ಮಾತನಾಡುತ್ತೇನೆ ಎನ್ನುತ್ತಾನೆ. ಆದರೆ, ಸದಾಶಿವ ಬಹಳ ಕೋಪದಲ್ಲಿದ್ದು, ಈ ಸಂದರ್ಭದಲ್ಲಿ ಪಾರ್ಥನನ್ನು ನೀನು ಬರುವುದು ಬೇಡ ಎಂದು ಹೇಳಿದ್ದಾಳೆ. ತಾನೇ ಸಮಸ್ಯೆಗೆ ಪರಿಹಾರ ಹುಡುಕಿ, ತಂದೆಯನ್ನು ಕನ್ವಿನ್ಸ್ ಮಾಡುವುದಾಗಿ ಹೇಳಿದ್ದಾಳೆ. ಆದರೆ, ಅಪೇಕ್ಷಾ ಮನೆಯಲ್ಲಿ ಹೇಗೆ ವಿಚಾರವನ್ನು ಪ್ರಸ್ತಾಪ ಮಾಡುತ್ತಾಳೊ ಗೊತ್ತಿಲ್ಲ. ಇನ್ನು ಭೂಮಿಕಾ ಅಪೇಕ್ಷಾಳನ್ನು ಕಂಡು ಏನಾಗಿದೆ ಎಂದು ವಿಚಾರಿಸಿದ್ದಾಳೆ. ಆದರೆ, ಅಪೇಕ್ಷಾ ಸುಳ್ಳು ಹೇಳಿ ಪರಿಸ್ಥಿತಿಯನ್ನು ಮ್ಯಾನೇಜ್ ಮಾಡಿದ್ದಾಳೆ.

ಶಕುಂತಲಾ ಹೊಸ ಪ್ಲಾನ್
ಇನ್ನು ಇತ್ತ ಶಕುಂತಲಾ ಮತ್ತು ಲಕ್ಷ್ಮೀಕಾಂತ ಫುಲ್ ಹ್ಯಾಪಿ ಮೂಡ್ ನಲ್ಲಿದ್ದಾರೆ. ಅಂತೂ ಇಂತೂ ಒಂದು ತಿಂಗಳ ಮಟ್ಟಕ್ಕೆ ಭೂಮಿಕಾ ತವರು ಮನೆಗೆ ಹೋಗಿದ್ದಾಳೆ. ಅವಳು ಬರುವವರೆಗೂ ತಮ್ಮದೇ ಕಾರುಬಾರು ಎಂದು ಬೀಗಿದ್ದಾರೆ. ಭೂಮಿಕಾ ಬರುವ ಮುನ್ನ ಅವಳ ಬಗ್ಗೆ ಗೌತಮ್ ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಬೇಕು. ಅವಳಿಗೆ ಕೊಟ್ಟಿರುವ ಜವಾಬ್ದಾರಿಯನ್ನು ವಾಪಸ್ ಪಡೆಯಬೇಕು ಎಂದು ಶಕುಂತಲಾ ಪ್ಲಾನ್ ಮಾಡಿಕೊಂಡಿದ್ದಾಳೆ. ಹೇಗಾದರೂ ಮಾಡಿ ಗೌತಮ್ ಮನಸ್ಸನ್ನು ಒಲಿಸಿಕೊಳ್ಳಬೇಕು. ಆಗ ಭೂಮಿಕಾ ಆಟ ಏನೂ ನಡೆಯುವುದಿಲ್ಲ. ಎಲ್ಲವೂ ಮೊದಲಿನಂತೆ ಆಗುವ ಹಾಗೆ ಮಾಡಬೇಕು ಎಂದುಕೊಂಡಿದ್ದಾಳೆ.


Click it and Unblock the Notifications











