Amruthadhaare ; ನನಗೆ ಮೋಸ ಮಾಡ್ತೀರಾ, ಭೂಮಿಕಾ ವಿರುದ್ದ ಗುಡುಗಿದ ಗೌತಮ್ ; ಮಧುರಾ ಕಥೆ ಏನಾಯ್ತು ?
ಅಮೃತಧಾರೆ ಧಾರಾವಾಹಿಯಲ್ಲಿ ಮಧುರ ನಿಮಗೆ ಸರ್ಪ್ರೈಸ್ ಕೊಡಬೇಕು ಎಂದು ಭೂಮಿಕಾ ಮತ್ತು ನಿಮ್ಮ ತಾಯಿ ನಮ್ಮಿಬ್ಬರ ಮದುವೆ ಬಗ್ಗೆ ಏನೂ ಹೇಳಿಲ್ಲ ಅನಿಸುತ್ತೆ ಎನ್ನುತ್ತಾಳೆ. ಈ ಮಾತನ್ನು ಕೇಳಿದ ಗೌತಮ್ ಇದು ಸರ್ಪ್ರೈಸ್ ಅನ್ನೋಲ್ಲ. ಶಾಕಿಂಗ್ ಎಂದು ಹೇಳುತ್ತಾರೆ ಎಂದು ಗೌತಮ್ ಕೋಪ ಮಾಡಿಕೊಳ್ಳುತ್ತಾನೆ. ನಿಮ್ಮ ಬಳಿ ಏನು ಮಾತನಾಡುವುದು ಎಂದು ಹೇಳಿ ಸೀದಾ ಮನೆಗೆ ಹೊರಡುತ್ತಾನೆ. ಮನೆಗೆ ಬಂದ ಗೌತಮ್ ಕೋಪದಲ್ಲೇ ಇರುತ್ತಾನೆ. ಶಕುಂತಲಾ ರೂಮಿಗೆ ಬರ ಬರನೇ ಸಾಗುತ್ತಾನೆ. ಇದನ್ನು ನೋಡಿದ ಲಕ್ಷ್ಮೀಕಾಂತ ಮತ್ತು ಅಪೇಕ್ಷಾ ಆತಂಕಗೊಳ್ಳುತ್ತಾರೆ.
ಶಕುಂತಲಾಳನ್ನು ಪ್ರಶ್ನೆ ಮಾಡಿದ ಗೌತಮ್
ಶಕುಂತಲಾ ರೂಮಿಗೆ ಬಂದ ಗೌತಮ್, ನೇರವಾಗಿ ಪ್ರಶ್ನೆ ಮಾಡುತ್ತಾನೆ. ನೀವು ಮಾಡಿದ್ದು ಎಷ್ಟು ಸರಿ. ಹೀಗೆಲ್ಲಾ ಆಲೋಚಿಸುವುದಕ್ಕಾದರೂ ಹೇಗಾಯ್ತು. ನಾನ್ಯಾಕೆ ಇನ್ನೊಂದು ಮದುವೆಯಾಗಬೇಕು. ಭೂಮಿಕಾಳನ್ನು ಬಿಟ್ಟು ಮದುವೆ ಆಗುವಂತಹದ್ದು ಏನಾಗಿದೆ. ನಿಮ್ಮ ಎಲ್ಲಾ ನಿರ್ಧಾರಗಳಿಗೂ ತಲೆದೂಗುತ್ತೀನಿ ಅಂತ ಇಂತಹ ಕೆಲಸ ಮಾಡುವುದಾ ಎಂದು ಒಂದೇ ಸಮನೆ ಕೂಗಾಡುತ್ತಾನೆ. ಆಗ ಶಕುಂತಲಾ ನೀನು ಮಾಡಿದ್ದು ತಪ್ಪು. ಇನ್ನೊಂದು ಮಾತನಾಡಬೇಡ. ಸಮಸ್ಯೆ ಇರುವುದು ನಿನಗೆ ಅಂತ ಸುಳ್ಳು ಯಾಕೆ ಹೇಳಿದ್ದು ಎಂದಾಗ ಗೌತಮ್ ಸಮರ್ಥಿಸಿಕೊಳ್ಳಲು ಯತ್ನಿಸುತ್ತಾನೆ. ಅದಕ್ಕೆ ಅವಕಾಶ ಕೊಡದ ಶಕುಂತಲಾ ಭೂಮಿಕಾನೇ ಈ ವಂಶ ಬೆಳೆಯಬೇಕು ಎಂದು ಈ ನಿರ್ಧಾರ ಮಾಡಿರುವಾಗ ನಿನ್ನದೇನು ಸಮಸ್ಯೆ. ಈ ಮದುವೆ ನೀನು ಮಾಡಿಕೊಳ್ಳಲೇಬೇಕು ಎನ್ನುತ್ತಾಳೆ. ಗೌತಮ್ ಏನೂ ಮಾತನಾಡಲಾಗದೇ ಅಲ್ಲಿಂದ ಹೊರಡುತ್ತಾನೆ.

ಭೂಮಿಕಾಳಿಗಾಗಿ ಪೂಜೆ ಮಾಡಿದ ಭಾಗ್ಯ
ಇತ್ತ ಜೀವನ್, ಮಹಿಮಾ, ಸುಧಾ ಎಲ್ಲರೂ ಭೂಮಿಕಾಳಿಗೆ ಭಾಗ್ಯ ಬಳಿ ಪೂಜೆ ಮಾಡಿಸಿ ಹಣ್ಣು ತಿನ್ನಲು ಬಲವಂತ ಮಾಡುತ್ತಾರೆ. ಈ ವಿಚಾರದ ಬಗ್ಗೆ ತಿಳಿದ ಗೌತಮಾಜ್ಜಿಯೂ ಕೂಡ ಭೂಮಿಕಾಳಿಗೆ ಒತ್ತಾಯ ಮಾಡುತ್ತಾರೆ. ಭಾಗ್ಯ ದೇವರಿಗೆ ಪೂಜೆ ಮಾಡಿ, ಒಂದು ಆಪಲ್ ಅನ್ನು ಭೂಮಿಕಾಳಿಗೆ ನೀಡುತ್ತಾಳೆ. ಭೂಮಿಕಾ ಈ ಹಣ್ಣನ್ನು ತೆಗೆದುಕೊಂಡು ಭಾಗ್ಯಳ ಆಶೀರ್ವಾದವನ್ನು ಪಡೆದುಕೊಳ್ಳುತ್ತಾಳೆ. ಇದನ್ನು ನೋಡಿದ ಶಕುಂತಲಾ ನಗುತ್ತಾಳೆ. ಇಷ್ಟಕ್ಕೆಲ್ಲಾ ಮಕ್ಕಳಾಗುತ್ತಾ ಎಂದು ತಮಾಷೆಯಾಗಿ ಮಾತನಾಡಿಕೊಳ್ಳುತ್ತಾಳೆ.
ಅಕ್ಕ-ಭಾವನ ಬಗ್ಗೆ ಅಪೇಕ್ಷಾ ಕಾಳಜಿ
ಇನ್ನು ಅಪೇಕ್ಷಾ ಪಾರ್ಥನ ಬಳಿ ಗೌತಮ್ ಕೋಪದಲ್ಲಿದ್ದ ವಿಚಾರವನ್ನು ಹೇಳುತ್ತಾಳೆ. ಭಾವ ಯಾಕೆ ಹಾಗೆ ನಡೆದುಕೊಂಡರು ಎಂಬುದು ಗೊತ್ತಿಲ್ಲ. ಈ ಕಡೆ ನೋಡಿದರೆ ಅಕ್ಕ ಭಾಗ್ಯ ಅವರ ಕೈಯಲ್ಲಿ ಪೂಜೆ ಮಾಡಿಸಲು ಒಪ್ಪುತ್ತಿಲ್ಲ. ಏನಾಗುತ್ತಿದೆಯೋ ಮನೆಯಲ್ಲಿ. ಇದೆಲ್ಲಾ ಸರಿ ಹೋದರೆ ಸಾಕು ಎಂದು ಹೇಳುತ್ತಾಳೆ. ಅಪೇಕ್ಷಾ ಬಾಯಲ್ಲಿ ಈ ಮಾತುಗಳನ್ನು ಕೇಳಿದ ಪಾರ್ಥನಿಗೆ ಸಮಾಧಾನವಾಗುತ್ತದೆ. ಅಪೇಕ್ಷಾ ಮತ್ತೆ ಮೊದಲಿನಂತೆ ಆಗುತ್ತಿದ್ದಾಳೆ ಎಂದು ನಿಟ್ಟುಸಿರು ಬಿಡುತ್ತಾನೆ.
ಭೂಮಿಕಾ ಬಳಿ ಜಗಳ ಮಾಡಿದ ಗೌತಮ್
ಇನ್ನು ನೇರವಾಗಿ ಭೂಮಿಕಾ ಬಳಿ ಹೋಗುವ ಗೌತಮ್ ಜಗಳ ಮಾಡುತ್ತಾನೆ. ನಿಮಗೆ ಹೇಗೆ ಮನಸ್ಸು ಬಂತು. ನನಗೆ ಮೋಸ ಮಾಡುತ್ತಿದ್ದೀರಾ. ನೀವು ಚೀಟರ್ ಎಂದು ಬೈಯುತ್ತಾನೆ. ಇನ್ಯಾವತ್ತೂ ಈ ರೀತಿ ಯೋಚಿಸಬೇಡಿ ಎಂದು ಹೇಳಿ ಹೋಗುತ್ತಾನೆ. ಗೌತಮ್ ನನ್ನು ಭೂಮಿಕಾ ಸಮಾಧಾನ ಮಾಡಲು ಯತ್ನಿಸುತ್ತಾಳೆ. ನೀವು ಈ ಮದುವೆಗೆ ಒಪ್ಪಲೇಬೇಕು. ಮನೆಯವರಿಗೋಸ್ಕರ ನಾವು ಮದುವೆಯಾಗಿದ್ದು, ಇದಕ್ಕೂ ಕುಟುಂಬಕ್ಕೋಸ್ಕರ ಎಂದು ರಿಕ್ವೆಸ್ಟ್ ಮಾಡಿಕೊಳ್ಳುತ್ತಾಳೆ. ಆದರೆ ಗೌತಮ್ ಒಂದೇ ಮಾತಿನಲ್ಲಿ ನೀವೇ ನನಗೆಲ್ಲಾ. ಇನ್ಯಾವತ್ತು ನನ್ನ ಬಳಿ ಮದುವೆ ಬಗ್ಗೆ ಮಾತನಾಡಬೇಡಿ. ನಿಮ್ಮನ್ನು ಬಿಟ್ಟು ಇನ್ನೊಂದು ಮದುವೆಯಾಗುವುದು ಯಾವತ್ತೂ ಸಾಧ್ಯವಾಗುವುದಿಲ್ಲ ಎನ್ನುತ್ತಾನೆ.


Click it and Unblock the Notifications











