Amruthadhaare ;ಜೈದೇವ್ ಕರ್ಮಕಾಂಡ ಬಟಾಬಯಲು : ಎಸ್ಕೇಪ್ ಆಗಲು ಜೈ ಹೊಸ ಪ್ಲಾನ್
ಅಮೃತಧಾರೆ ಧಾರವಾಹಿಯಲ್ಲಿ ಜೈದೇವ್ ಕರ್ಮಕಾಂಡಗಳನ್ನು ಗೌತಮ್ ಗೆ ಹೇಳಬೇಕು. ಜೈದೇವ್ ಆಟಗಳಿಗೆ ಬ್ರೇಕ್ ಹಾಕಬೇಕು ಎಂದು ಭೂಮಿಕಾ ತೀರ್ಮಾನಿಸಿದ್ದಾಳೆ. ಪಾರ್ಥನಿಗೆ ಸ್ವಂತ ಅಣ್ಣನೇ ತನ್ನನ್ನು ಕೊಲ್ಲಲು ಪ್ರಯತ್ನ ಪಟ್ಟಿದ್ಯಾಕೆ ಎಂದು ಗಾಬರಿಯಾಗಿದ್ದಾನೆ. ಈ ವಿಚಾರವನ್ನು ಯಾರ ಬಳಿಯೂ ಹೇಳಲಾಗದೆಯೇ ಒದ್ದಾಡುತ್ತಿರುತ್ತಾನೆ. ಪಾರ್ಥನ ಆತಂಕವನ್ನು ನೋಡಿದ ಅಪೇಕ್ಷಾ ಬಲವಂತವಾಗಿ ಸತ್ಯ ಬಾಯಿ ಬಿಡಿಸಿಕೊಳ್ಳುತ್ತಾಳೆ. ಜೈದೇವ್ ನ ಕೆಟ್ಟ ಗುಣವನ್ನು ಕೇಳಿ ಅಪೇಕ್ಷಾ ಕೂಡ ಗಾಬರಿಯಾಗಿರುತ್ತಾಳೆ.
ಜೈದೇವ್ ಬಗ್ಗೆ ಸತ್ಯ ತಿಳಿದ ಗೌತಮ್
ಭೂಮಿಕಾ ಜೈದೇವ್ ಮಾಡಿದ ಪ್ರತಿಯೊಂದು ತಪ್ಪಿಗೂ ಸಾಕ್ಷಿಯನ್ನು ಹುಡುಕಲು ಮುಂದಾಗಿದ್ದಾಳೆ. ಆನಂದ್ ಕೂಡ ಭೂಮಿಕಾಳಿಗೆ ಸಾಥ್ ಕೊಟ್ಟಿದ್ದು, ಅತ್ತಿಗೆ ಜೊತೆ ಇಡೀ ದಿನ ಹೊರಗೆ ಸುತ್ತಾಡಿದ್ದಾನೆ. ಇನ್ನು ಕೆಂಚನನ್ನು ಭೂಮಿಕಾ ಭೇಟಿ ಮಾಡಿದ್ದನ್ನು ನೋಡಿದ ವ್ಯಕ್ತಿ ಜೈದೇವ್ ಗೆ ಮಾಹಿತಿ ನೀಡಿದ್ದಾರೆ. ಆದರೆ, ಕೆಂಚನ ಹೆರನ್ನು ಬಸಯ್ಯ ಎಂದು ಹೇಳಿದ ಕಾರಣ ಜೈದೇವ್ ಗೆ ಗೊತ್ತಾಗುವುದಿಲ್ಲ. ಸ್ವಲ್ಪ ನೆಗಲೆಕ್ಟ್ ಮಾಡುತ್ತಾನೆ. ಇದು ಭೂಮಿಕಾ ಕೆಲಸಕ್ಕೆ ಸಹಾಯವಾಗಿದೆ. ಭೂಮಿಕಾ ಮನೆಗೆ ಬಂದ ಕೂಡಲೇ ಗೌತಮ್ ಗೆ ಎಲ್ಲಾ ಸತ್ಯವನ್ನು ಹೇಳುತ್ತಾಳೆ. ಅದರಲ್ಲೂ ಆಫೀಸಿನಲ್ಲಿ ಟೆಂಡರ್ ಮಿಸ್ ಆಗುತ್ತಿರುವ ಬಗ್ಗೆ ಮೊದಲು ಹೇಳುತ್ತಾಳೆ. ಇದಕ್ಕೆಲ್ಲಾ ಜೈದೇವ್ ಕಾರಣ ಎಂಬ ಸತ್ಯ ತಿಳಿದ ಗೌತಮ್ ಶಾಕ್ ಆಗುತ್ತಾನೆ.

ದಿಯಾ ಜೊತೆಗಿದ್ದ ಜೈಗೆ ಶಾಕ್
ತಕ್ಷಣವೇ ಜೈದೇವ್ ಗೆ ಫೋನ್ ಮಾಡಿ ಕರೆಯುತ್ತಾನೆ. ಆದರೆ ಜೈದೇವ್ ಮೈಸೂರಿಗೆ ಕೆಲಸದ ಮೇಲೆ ಹೋಗುತ್ತಿದ್ದೇನೆ ಎಂದು ಹೇಲಿ, ದಿಯಾ ಜೊತೆಗೆ ಕಾಲ ಕಳೆಯುತ್ತಿರುತ್ತಾನೆ. ಗೌತಮ್ ಫೋನ್ ಮಾಡಿ ಟೆಂಡರ್ ಬಗ್ಗೆ ಅರ್ಜೆಂಟ್ ಮೀಟಿಂಗ್ ಇದೆ ಬಾ ಎಂದಿದ್ದಕ್ಕೆ, ಆಗುವುದಿಲ್ಲ ಎನ್ನಲಾಗದೇ ಜೈದೇವ್ ಮನೆಗೆ ಹೋಗುತ್ತಾನೆ. ತನ್ನ ಕರ್ಮಕಾಂಡ ರಿವೀಲ್ ಆಗುತ್ತೆ ಎಂಬ ಸತ್ಯ ತಿಳಿಯದೆಯೇ ಹಾಡು ಹಾಡುತ್ತಾ ಖುಷಿಯಾಗಿ ಹೋಗುತ್ತಾನೆ. ಗೌತಮ್ ಮೊದಲು ಟೆಂಡರ್ ವಿಚಾರವನ್ನು ಹೇಳುತ್ತಾನೆ. ಜೈದೇವ್ ತನ್ನದೇನು ತಪ್ಪಿಲ್ಲ ಎಂಬಂತೆ ನಟಿಸುತ್ತಾನೆ. ಆದರೆ, ಗೌತಮ್ ಸಾಕ್ಷಿಯನ್ನು ಕರೆಸಿ ಟೆಂಡರ್ ವಿಚಾರದಲ್ಲಿ ಜೈದೇವ್ ಎರಡು ಕೋಟಿ ಹಣವನ್ನು ಗಳಿಸಿರುವ ವಿಚಾರವನ್ನು ಹೇಳುತ್ತಾನೆ. ಆಗ ಜೈದೇವ್ ಗೆ ಶಾಕ್ ಆಗುತ್ತದೆ.
ಮಗನ ಪುರಾಣ ಕೇಳಿ ಶಕುಂತಲಾ ಶಾಕ್
ಶಕುಂತಲಾ ಮಗನನ್ನು ಸಪೋರ್ಟ್ ಮಾಡಲು ಮುಂದಾಗುತ್ತಾಳೆ. ಆದರೆ, ಗೌತಮ್ ಯಾರೂ ಜೈದೇವ್ ಗೆ ಈ ಬಾರಿ ಸಪೋರ್ಟ್ ಮಾಡುವ ಅಗತ್ಯವಿಲ್ಲ ಎನ್ನುತ್ತಾನೆ. ಜೈದೇವ್ ಭೂಮಿಕಾಳನ್ನು ಕಿಡ್ನ್ಯಾಪ್ ಮಾಡಿಸಿದ್ದು, ಮಲ್ಲಿಯನ್ನು ಕೊಲ್ಲಲು ಯತ್ನಿಸಿದ್ದು, ಆನಂದ್ ಗೆ ಅಪಘಾತವಾಗಿದ್ದು, ಪಾರ್ಥನ ಮೇಲೆ ಟ್ಯಾಕ್ ಹಾಗೂ ದಿಯಾ ಜೊತೆಗಿನ ಸಂಬಂಧ ಎಲ್ಲಾ ವಿಚಾರವನ್ನು ಗೌತಮ್ ಹೇಳುತ್ತಾನೆ. ಆದರೆ, ಜೈದೇವ್ ಇದ್ಯಾವುದನ್ನೂ ನಂಬಲು ತಯಾರಿರುವುದಿಲ್ಲ. ಆಗ ಗೌತಮ್ ಸಾಕ್ಷಿಗಳನ್ನು ಕರೆಸುತ್ತಾನೆ. ಪಾರ್ಥನ ಮೇಲೆ ಜೈ ಅಟ್ಯಾಕ್ ಮಾಡಿಸಿದ ಎಂಬ ಸತ್ಯ ತಿಳಿದ ಶಕುಂತಲಾ ಶಾಕ್ ಆಗುತ್ತಾಳೆ.
ಮತ್ತೆ ನಾಟಕ ಮಾಡಿದ ಜೈದೇವ್
ಸ್ವಂತ ತಮ್ಮನ ಮೇಲೆ ಅಟ್ಯಾಕ್ ಮಾಡಿಸಿದ್ದೀಯಾ ಎಂದ ಹೊಡೆಯುತ್ತಾಳೆ. ಇನ್ಯಾವುದೇ ಕಾರಣಕ್ಕೂ ನಿನಗೆ ಕ್ಷಮೆ ಇಲ್ಲ. ಈ ಮನೆಯಲ್ಲೂ ಜಾಗವಿಲ್ಲ ಎಂದು ಮನೆಯಿಂದ ಹೊರಗೆ ಹಾಕುತ್ತಾಳೆ. ಆದರೆ, ಜೈದೇವ್ ಬಟ್ಟೆ ತೆಗೆದುಕೊಂಡು ಹೋಗುತ್ತೇನೆ ಎಂದು ಮನೆಯೊಳಗೆ ಬಂದು ಬೇಕಂತಲೇ ಚೂಪಾದ ವಸ್ತುವಿನಿಂದ ಹೊಟ್ಟೆಗೆ ಚುಚ್ಚಿಕೊಳ್ಳುತ್ತಾನೆ. ಜೈದೇವ್ ನನ್ನು ಆಸ್ಪತ್ರೆಗೆ ಸೇರಿಸಿದ್ದು, ಇತ್ತ ಶಕುಂತಲಾ ತಲೆ ತಿರುಗಿ ಬಿದ್ದಿದ್ದಾಳೆ.


Click it and Unblock the Notifications











