Amruthadhaare: ಅಪ್ಪನ ಎದುರು ಕಾಳಿಯಾದ ಮಲ್ಲಿ; ಮಗಳಿಗಾಗಿ ಬದಲಾಗುತ್ತಾನಾ ಭೂಪತಿ?
ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಂದ್ರ ಭೂಪತಿಯ ಸಹವಾಸದಿಂದಾಗಿ ಜೀವ ದಿನ ದಿನಕ್ಕೂ ಹಾಳಾಗುತ್ತಿದ್ದಾನೆ. ಮಗನ ನಡವಳಿಕೆ ಸದಾಶಿವನ ನೆಮ್ಮದಿಯನ್ನೇ ಕಿತ್ತುಕೊಂಡಿದೆ. ಅಣ್ಣನಿಗೆ ಏನೂ ಹೇಳಲಾಗದ ಸ್ಥಿತಿಯಲ್ಲಿ ಮಹಿಮಾ ಇದ್ದು, ಮಗನ ಅವತಾರಕ್ಕೆ ಮಂದಾಕಿನಿ ಬೇಸತ್ತು ಹೋಗಿದ್ದಾಳೆ. ಇತ್ತ ರಾಜೇಂದ್ರ ಭೂಪತಿಯನ್ನು ನಂಬಿರುವ ಜೈದೇವ್, ದಿಯಾ ಜೊತೆಗೆ ಮದುವೆಯಾಗಲು ಸಹಾಯ ಕೇಳಿದ್ದಾನೆ. ಹಾಗೋ ಹೀಗೋ ತಪ್ಪಿಸಿಕೊಂಡು ಬಂದಿರುವ ದಿಯಾ ಜೊತೆಗೆ ರಾಜೇಂದ್ರ ಭೂಪತಿಯನ್ನು ಜೈದೇವ್ ಭೇಟಿಯಾಗಿದ್ದಾನೆ.
ಇದೇ ಸಂದರ್ಭದಲ್ಲಿ ಇತ್ತ ಭೂಮಿಕಾ ಜೀವಕ್ಕೆ ಅಪಾಯ ಎದುರಾಗಿದೆ. ಗೌತಮ್‌ಗೆ ಮಗುವಾದರೆ ತನ್ನ ಕನಸುಗಳೆಲ್ಲಾ ನುಚ್ಚು ನೂರಾಗುತ್ತದೆ ಎಂದು ಶಕುಂತಲಾ ಆಲೋಚಿಸಿದ್ದಾಳೆ. ಹೀಗಾಗಿ ಭೂಮಿಕಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವನ್ನು ಕೊಲ್ಲಲು ಮುಂದಾಗಿದ್ದಾಳೆ. ಕರೆಂಟ್ ಶಾಕ್‌ನಿಂದ ಭೂಮಿಕಾ ಸತ್ತರೆ ಯಾರ ಮೇಲೂ ಅನುಮಾನ ಬರುವುದಿಲ್ಲ ಎಂದು ಸ್ಕೆಚ್ ಹಾಕಿದ್ದಾಳೆ.

ಪ್ಲಾನ್ ಹಾಳುಗೆಡವಿದ ಭಾಗ್ಯ
ಶಕುಂತಲಾ ತನ್ನ ಪ್ಲಾನ್ ಅನ್ನು ಜಾರಿಗೆ ತಂದಿದ್ದು, ಭಾಗ್ಯ ಸವತಿಯ ಬುದ್ಧಿಯನ್ನು ತಿಳಿದು, ಸೊಸೆಯನ್ನು ಬದುಕಿಸಿಕೊಂಡಿದ್ದಾಳೆ. ಇನ್ನೇನು ಭೂಮಿಕಾ ಶಾಕ್ ಹೊಡೆಯುವ ಕಡೆಗೆ ಹೀಗುವ ಮುನ್ನವೇ ಭಾಗ್ಯ ಅಲ್ಲಿಗೆ ಹೋಗಿ ತನಗೆ ಅಪಾಯವನ್ನು ತಂದುಕೊಂಡಿದ್ದಾಳೆ. ಇದೆಲ್ಲವನ್ನು ಭೂಮಿಕಾ ಕೂಲಂಕುಶವಾಗಿ ಆಲೋಚಿಸಿದ್ದು, ಅತ್ತೆ ಶಕುಂತಲಾ ಬಳಿ ಪ್ರಶ್ನೆ ಮಾಡಿದ್ದಾಳೆ. ತಾನು ಮಾಡಿದ ಪ್ಲಾನ್ ಉಲ್ಟಾ ಆಯ್ತು ಬೆಂದು ಬೇಸರದಲ್ಲಿರುವ ಶಕುಂತಲಾಳಿಗೆ ಭೂಮಿಕಾಳ ಅನುಮಾನ ಗಾಬರಿಯನ್ನುಂಟು ಮಾಡಿದೆ. ಲಕ್ಷ್ಮೀಕಾಂತ ಮತ್ತು ಶಕುಂತಲಾ ಸೇರಿ ಭೂಮಿಕಾಳ ಆಲೋಚನೆಯನ್ನು ತಪ್ಪು ಎಂದು ಹೇಲಿ ಹೇಗೋ ಎಸ್ಕೇಪ್ ಆಗಿದ್ದಾರೆ.
ಅಪ್ಪನ ಎದುರು ನಿಂತ ಮಲ್ಲಿ
ಮಲ್ಲಿಗೆ ಮನೆಯಲ್ಲಿ ಏನೂ ಸರಿ ಇಲ್ಲ ಎಂಬುದು ಅರ್ಥವಾಗಿದ್ದು, ಇದೆಲ್ಲವೂ ಪ್ಲಾನ್ ಮಾಡಿಯೇ ಮಾಡಲಾಗಿದೆ. ಇದಕ್ಕೆ ಕಾರಣ ರಾಜೇಂದ್ರ ಭೂಪತಿ ಎಂದು ಭೂಮಿಕಾ ತಲೆಗೆ ಹುಳ ಬಿಟ್ಟಿದ್ದಾಳೆ. ಮಲ್ಲಿಯೂ ತನ್ನ ತಪ್ಪು ಆಲೋಚನೆಯಿಂದ ಅಪ್ಪನನ್ನು ಎದುರಾಗಿದ್ದಾಳೆ. ನನ್ನ ಅಕ್ಕ-ಭಾವನ ತಂಟೆಗೆ ಬಂದರೆ ಸಿಗಿದು ಹಾಕುತ್ತೇನೆ ಎಂದು ರಾಜೇಂದ್ರ ಭೂಪತಿಯ ಎದುರು ಮಲ್ಲಿ ಬಂದಿದ್ದಾಳೆ. ಗೌತಮ್ ದಿವಾನ್ ಗೆ ರಾಜೇಂದ್ರ ಭೂಪತಿ ಶತ್ರು ಎಂಬುದನ್ನು ಮಾತ್ರ ಅರ್ಥ ಮಾಡಿಕೊಂಡ ಮಲ್ಲಿ, ತನ್ನ ಕುಟುಂಬದ ಒಳಿತಿಗಾಗಿ ಕಾಳಿಯಾಗಿ ಅವತಾರವೆತ್ತಿದ್ದಾಳೆ. ಇಷ್ಟು ದಿನ ಮಲ್ಲಿಗೆ ಹೂವಿನಷ್ಟೇ ಮೃದುವಾಗಿದ್ದ ಮಲ್ಲಿ, ಈಗ ಗುಲಾಬಿ ಗಿಡದ ಮುಳ್ಳಾಗಿ ಕಾಣಿಸಿಕೊಂಡಿದ್ದಾಳೆ.
ಅಪ್ಪನಿಗೆ ಮಲ್ಲಿ ವಾರ್ನಿಂಗ್
ರಾಜೇಂದ್ರ ಭೂಪತಿಯೇ ಮಲ್ಲಿಯ ಸ್ವಂತ ತಂದೆ ಎಂಬ ಸತ್ಯ ಸದ್ಯ ಗೌತಮ್‌ಗೆ ಗೊತ್ತಾಗಿದೆ. ಈ ವಿಚಾರವನ್ನು ಗೆಳೆಯಾ ಆನಂದ್ ಬಳಿ ಹಂಚಿಕೊಂಡಿದ್ದಾನೆ. ಮಲ್ಲಿ ತಾತ ಹೇಳಿದ ಸತ್ಯವನ್ನು ತಿಳಿದು ಆನಂದ್, ಗೌತಮ್ ಮೌನಕ್ಕೆ ಜಾರಿದ್ದಾರೆ. ಆದರೆ, ಇದ್ಯಾವುದೂ ಅರಿಯದ ಮಲ್ಲಿ ಸ್ವಂತ ತಂದೆಯನ್ನು ಭೇಟಿಯಾಗಿ ವಾರ್ನಿಂಗ್ ಕೊಟ್ಟು ಬಂದಿದ್ದಾಳೆ. ಮಗಳೇ ವಾರ್ನಿಂಗ್ ಕೊಟ್ಟಿದ್ದು ಎಂಬುದು ಅರಿಯದ ರಾಜೇಂದ್ರ ಭೂಪತಿ ಜೈದೇವ್ ಬಳಿ ಈ ವಿಚಾರಕ್ಕೆ ಕೆಂಡಾಮಂಡಲವಾಗಿದ್ದಾನೆ. ನಿನ್ನ ಹೆಂಡತಿ ನನ್ನ ಕುತ್ತಿಗೆ ಪಟ್ಟಿ ಹಿಡಿದು ಮಚ್ಚು ತೋರಿಸಿದ್ದಾಳೆ ಎಂದು ಕೋಪಗೊಂಡಿದ್ದಾನೆ.
ಬದಲಾಗುತ್ತಾನಾ ಭೂಪತಿ?
ಇದೇ ಸಿಟ್ಟಿನಲ್ಲಿ ರಾಜೇಂದ್ರ ಭೂಪತಿ, ಜೈದೇವ್ ಮತ್ತು ದಿಯಾಳಿಗೆ ಮದುವೆ ಮಾಡಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಜೊತೆಗೆ ಮಲ್ಲಿ ಜೀವಕ್ಕೆ ಅಪಾಯವನ್ನು ತಂದೊಡ್ಡುವ ಸೂಚನೆಗಳಿವೆ. ಆದರೆ, ಮಲ್ಲಿ ತನ್ನ ಮಗಳು ಎಂಬ ಸತ್ಯ ಗೊತ್ತಾದರೆ ಬದಲಾಗುತ್ತಾನಾ..? ಮಗಳ ಬಾಳನ್ನು ಸರಿ ಮಾಡುತ್ತಾನಾ..? ಜೈದೇವ್ ಮತ್ತು ಮಲ್ಲಿಯನ್ನು ಹೇಗೆ ಒಟ್ಟು ಗೂಡಿಸುತ್ತಾನೆ ಎಂಬುದೇ ಕುತೂಹಲಕಾರಿ ಸಂಗತಿಯಾಗಿದೆ.


Click it and Unblock the Notifications











