Amruthadhaare: ಜೈದೇವನ ಬಣ್ಣ ಬಯಲು ಮಾಡಿದ ಭೂಮಿಕಾ: ಶಕುಂತಲಾ ಆಡಿದ ನಾಟಕವೇನು..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಈಗ ಗರ್ಭಿಣಿ. ಆದರೆ, ಮಹಿಮಾ ಅದೇಕೋ ಈ ಸತ್ಯವನ್ನು ಯಾರ ಬಳಿಯೂ ಹೇಳಲು ಸಾಧ್ಯವಾಗುತ್ತಿಲ್ಲ. ಮದುವೆಯಾದ ಮೇಲೂ ಜೀವನಿಂದಲೂ ಈ ಸತ್ಯವನ್ನು ಮುಚ್ಚಿಟ್ಟಿದ್ದಾಳೆ. ಆದರೆ, ದಿನ ದಿನಕ್ಕೂ ಅವಳ ಪರಿಸ್ಥಿತಿ ಹದಗೆಡುತ್ತಿದ್ದು, ಮುಚ್ಚಿಡಲು ಸಾಧ್ಯವಾಗುತ್ತಿಲ್ಲ.

ಒಂದು ದಿನ ವಾಂತಿ, ಮತ್ತೊಂದು ದಿನ ಸುಸ್ತು, ಮಗದೊಂದು ದಿನ ತಲೆ ಸುತ್ತು ಹೀಗೆ ಒಂದೊಂದು ದಿನ ಒಂದೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಈಗಂತೂ ಮಹಿಮಾಳಿಗೆ ತೀರಾ ಸುಸ್ತಾಗಿದ್ದು, ಆಫೀಸಿನಿಂದ ಬೇಗ ಬಂದು ಮಲಗಿದ್ದಾಳೆ. ಜೀವನಿಗೆ ಸತ್ಯ ಹೇಳಲಾಗದೇ ಸುಸ್ತು ಎಂದಿದ್ದಾಳೆ.

AMruthadhaare-kannada-serial

ಸೊಸೆಗೆ ಹುಷಾರಿಲ್ಲ ಎಂಬುದನ್ನು ತಿಳಿದ ಮಂದಾಕಿನಿ, ಡಾಕ್ಟರ್ ಅನ್ನು ಕರೆಸುತ್ತೇನೆ ಎನ್ನುತ್ತಾಳೆ. ಆದರೆ ಮಹಿಮಾ ಗಾಬರಿಯಾಗಿ ಅದೆಲ್ಲಾ ಬೇಡ ಎಂದು ಹೇಳುತ್ತಾಳೆ.

ಮಹಿಮಾ ಪರಿಸ್ಥಿತಿ ಹದಗೆಡುತ್ತಿದೆ

ಮಂದಾಕಿನಿ ಎದುರಿಗೆ ವಾಂತಿ ಮಾಡಿದಾಗ ಮಂದಾಕಿನಿ ಕಷಾಯ ಮಾಡಿಕೊಡುವುದಾಗಿ ಹೇಳಿ ಹೋಗುತ್ತಾಳೆ. ಮಹಿಮಾಳಿಗೆ ತನ್ನ ಪರೀಸ್ಥಿತಿಯ ಬಗ್ಗೆ ಗಾಬರಿಯಾಗುತ್ತಿದೆ. ಹೀಗೆ ಬಿಟ್ಟರೆ ತನ್ನ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂಬುದು ಸ್ಪಷ್ಟವಾಗಿದೆ.

ಮನೆಗೆ ಬಂದ ಗೆಳೆಯಾ

ಗೌತಮ್ ಮತ್ತು ಆನಂದ್ ಇಬ್ಬರೂ ಹಾರ ಕಳುವಾದ ಕಾರಣದಿಂದ ದೂರಾಗಿದ್ದಾರೆ. ಗೆಳೆಯಾ ಇಲ್ಲ ಎಂದು ಆನಂದ್ ಇಲ್ಲಿ ಕೊರಗುತ್ತಿದ್ದರೆ, ಗೌತಮ್ ಫೋನ್ ಮಾಡಿಲ್ಲ ಎಂದು ಅಲ್ಲಿ ಆನಂದ್ ಕೊರಗುತ್ತಿದ್ದಾನೆ. ಇದೀಗ ಇವರಿಬ್ಬರನ್ನೂ ಭೂಮಿಕಾಳೇ ಒಂದು ಮಾಡಲು ಮುಂದಾಗಿದ್ದಾಳೆ. ಹೀಗಿರುವಾಗ ಭೂಮಿಕಾ ಕಣ್ಣಿಗೆ ಜೈದೇವ ಹಾರವನ್ನು ಸ್ಟೋರ್ ರೂಮ್‌ನಲ್ಲಿ ಬಚ್ಚಿಟ್ಟಿರುವುದು ಗೊತ್ತಾಗುತ್ತದೆ. ಆನಂದ್ ತಾನೇ ಸೋತು ಗೌತಮ್‌ಗೆ ಫೋನ್ ಮಾಡಿ ಮನೆಗೆ ಬರುತ್ತೇನೆ ಎಂದು ಹೇಳುತ್ತಾನೆ. ಆನಂದ್ ಮನೆಗೆ ಬರುತ್ತಿರುವುದಕ್ಕೆ ಗೌತಮ್ ಕೂಡ ಖುಷಿಪಡುತ್ತಾನೆ.

AMruthadhaare-kannada-serial

ಜೈದೇವನ ಬಣ್ಣ ಬಯಲು

ಹಾರವನ್ನು ತೆಗೆದುಕೊಂಡು ಆನಂದ್ ಮನೆಗೆ ಬರುತ್ತಾನೆ. ಎಲ್ಲರೂ ನನ್ನನ್ನು ಕ್ಷಮಿಸಿ ಬಿಡಿ. ತುಂಬಾ ಸಾಲ ಮಾಡಿಕೊಂಡಿದ್ದೆ, ಅದಕ್ಕೆ ಇಂತಹ ಮಣ್ಣು ತಿನ್ನುವ ಕೆಲಸ ಮಾಡಿಬಿಟ್ಟೆ ಎಂದು ಹಾರವನ್ನು ವಾಪಸ್ ಕೊಡುತ್ತಾನೆ. ಅಜ್ಜಿ ಮತ್ತು ಗೌತಮ್ ಇಬ್ಬರೂ ಆನಂದ್ ಕ್ಷಮೆಯನ್ನು ಒಪ್ಪಿಕೊಳ್ಳುತ್ತಾರೆ. ಆಗಿದ್ದು ಆಗಿ ಹೋಯ್ತು ಬಿಡು. ಇನ್ಮುಂದೆ ಖುಷಿಯಾಗಿ ಇರಿ ಎಂದು ಅಜ್ಜಿ ಹೇಳುತ್ತಾರೆ. ಆದರೆ, ಶಕುಂತಲಾ, ಲಕ್ಷ್ಮೀಕಾಂತ ಹಾಗೂ ಜೈದೇವನಿಗೆ ಶಾಕ್ ಆಗುತ್ತದೆ. ಇದ್ಯಾವ ಹಾರ ಎಂದು ಟೆನ್ಷನ್ ಮಾಡಿಕೊಳ್ಳುತ್ತಾರೆ. ಜೈದೇವ ಹಾರ ಸ್ಟೋರ್ ರೂಮ್‌ನಲ್ಲಿ ಇದೆಯಾ ಎಂದು ನೋಡಲು ಹೋಗುತ್ತಾನೆ. ಇದೇ ಸಮಯಕ್ಕೆ ಸರಿಯಾಗಿ ಭೂಮಿಕಾ ಗೌತಮ್ ಅನ್ನು ಸಪರೇಟ್ ಆಗಿ ಕರೆದು, ಸಿಸಿಟಿವಿ ಫುಟೇಜ್ ಅನ್ನು ಗೌತಮ್‌ಗೆ ತೋರಿಸುತ್ತಾಳೆ. ಜೈದೇವ ಸ್ಟೋರ್ ರೂಮ್‌ನಲ್ಲಿ ಹಾರವನ್ನು ತೆಗೆದು ನೋಡಿ ಅಲ್ಲೆ ಇಟ್ಟು ಬರುತ್ತಾನೆ. ಇದನ್ನು ನೋಡಿದ ಗೌತಮ್‌ಗೆ ಶಾಕ್ ಆಗುತ್ತದೆ.

ನಾಟಕ ಮಾಡಿ ಕಣ್ಣೀರಿಟ್ಟ ಶಕುಂತಲಾ

ಎಲ್ಲರ ಮುಂದೆ ಜೈದೇವನನ್ನು ಕರೆಯುವ ಗೌತಮ್, ಕೆನ್ನೆಗೆ ಬಾರಿಸುತ್ತಾನೆ. ಹಾರವನ್ನು ಯಾಕೆ ಕದ್ದಿದ್ದು ಎಂದು ಕೇಳುತ್ತಾನೆ. ಜೈದೇವನಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗುವುದಿಲ್ಲ. ಶಕುಂತಲಾ ಪರಿಸ್ಥಿತಿಯನ್ನು ತನ್ನ ಕೈಯಲ್ಲಿ ತೆಗೆದುಕೊಳ್ಳಲು ಜೈದೇವನ ಕೆನ್ನೆಗೆ ಹೊಡೆದು, ಗೌತಮ್ ಕೊಟ್ಟಿರುವ ಭಿಕ್ಷೆ ಈ ಬದುಕು. ಅವನು ನಮಗೆ ಎಲ್ಲವನ್ನೂ ನೀಡಿದ್ದಾನೆ. ಯಾಕೆ ಹೀಗೆ ಮಾಡಿದೆ. ನಮಗೆ ಏನು ಕಡಿಮೆಯಾಗಿದೆ ಹೇಳು. ಯಾಕೋ ಹೀಗೆ ಅನ್ಯಾಯ ಮಾಡಿದೆ ಎಂದು ಗೋಳಾಡುತ್ತಿರುತ್ತಾಳೆ. ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Amruthadhaare Kannada Serial today Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X