Amruthadhaare ; ಗೌತಮ್ ಕಂಡು ಕಣ್ಣೀರಾದ ಭೂಮಿ, ಶಕುಂತಲಾ ಮಾಸ್ಟರ್ ಪ್ಲಾನ್ ಬಗ್ಗೆ ತಿಳಿದ ಮಲ್ಲಿ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಜಾತಕದಲ್ಲಿ ಸಮಸ್ಯೆ ಇದ್ದು, ಇದರಿಂದ ಅವರಿಗೆ ಕಂಟಕವಿದೆ ಎಂದು ತಿಳಿದ ಗೌತಮ್ ದೇವರ ಸೇವೆಯಲ್ಲಿ ತೊಡಗಿದ್ದಾನೆ. ಭೂಮಿಕಾಳಿಗೋಸ್ಕರ ಹನುಮನ ಸನ್ನಿಧಾನದಲ್ಲಿ ಗೌತಮ್ ಉಪವಾಸವಿದ್ದು, ಉರುಳು ಸೇವೆ ಮಾಡಿದ್ದಾನೆ. ಅಷ್ಟೇ ಸಾಲದು ಎಂದು ನೆಲದ ಮೇಲೆ ಪ್ರಸಾದವನ್ನು ಸೇವಿಸಿದ್ದಾನೆ. ಭೂಮಿಕಾಳಿಗೆ ಯಾವುದೇ ತೊಂದರೆ ಆಗಬಾರದು. ಭೂಮಿಕಾಳಿಗೆ ಕಷ್ಟ ಬರಬಾರದು ಎಂದು ಗೌತಮ್ ಹೀಗೆ ಮಾಡಿದ್ದು, ಗೌತಮ್ ನಲ್ಲಿನ ಬದಲಾವಣೆಯನ್ನು ಕಂಡು ಆನಂದ್ ಖುಷಿ ಪಟ್ಟಿದ್ದಾನೆ.

ಗೌತಮ್ ನನ್ನು ಕಂಡು ಮರುಗಿದ ಭೂಮಿಕಾ

ಆದರೆ, ಗೌತಮ್ ಮನೆಯವರಿಗೋಸ್ಕರ ಇಷ್ಟೆಲ್ಲಾ ಕಷ್ಟ ಪಡುತ್ತಿದ್ದಾನೆ ಎಂಬುದನ್ನು ತಿಳಿದ ಭೂಮಿಕಾಳಿಗೆ ಸಂಕಟ ಹೆಚ್ಚಾಗಿದೆ. ಹೀಗೆಲ್ಲಾ ಮನೆಯವರಿಗಾಗಿ ನೀವು ಕಷ್ಟ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾಳೆ. ಆದರೆ, ಗೌತಮ್ ಮನೆಯವರ ಒಳಿತಿಗೆ ಇದೆಲ್ಲವೂ ಅಗತ್ಯವೇ ಎಂದು ಹೇಳಿ ಭೂಮಿಕಾಳಿಗೆ ಸಮಾಧಾನ ಮಾಡಿದ್ದಾನೆ. ಮನೆಗೆ ಬಂದ ಬಳಿಕ ಭೂಮಿಕಾ ಗೌತಮ್ ಗೆ ಕಾಲು ಒತ್ತಿದ್ದಾಳೆ. ಮೈ ಕೈ ನೋವಿನಿಂದ ಬಳಲುತ್ತಿರುವ ಗೌತಮ್ ಸೇವೆಯನ್ನು ಮಾಡಿದ್ದಾಳೆ.

Amruthadhaare Serial 09 April episode written update

ಗೌತಮ್ ಆರೋಗ್ಯದಲ್ಲಿ ಏರುಪೇರು

ಆದರೆ, ಗೌತಮ್ ಆರೋಗ್ಯದಲ್ಲಿ ಏರು ಪೇರಾಗಿದೆ. ಇದರಿಂದ ಗಾಬರಿಯಾದ ಭೂಮಿಕಾ ವೈದ್ಯರನ್ನು ಕರೆಸಿದ್ದಾಳೆ. ವೈದ್ಯರು ಗೌತಮ್ ನನ್ನು ಪರೀಕ್ಷೆ ಮಾಡಿ ನಿಶ್ಯಕ್ತಿಯಿಂದ ಹೀಗಾಗಿದೆ. ಆಯಾಸ ಮಾಡಿಕೊಳ್ಳಬೇಡಿ. ಇದು ಹೀಗೆ ಮುಂದುವರೆದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎಂದು ಹೇಳಿದ್ದಾರೆ. ಆನಂದ್ ಕೂಡ ಗೆಳೆಯನ ಸ್ಥಿತಿ ಕಂಡು ಗಾಬರಿಯಾಗಿದ್ದಾನೆ. ಆದರೆ, ಶಕುಂತಲಾ ಹೇಳಿದ ಸುಳ್ಳಿನಿಂದ ಹೀಗೆಲ್ಲಾ ಆಗುತ್ತಿದೆ ಎಂಬುದು ಭೂಮಿಕಾಳಿಗೆ ತಿಳಿದರೆ, ಮನೆಯಲ್ಲಿ ರಣರಂಗವೇ ಸೃಷ್ಟಿಯಾಗುವುದರಲ್ಲಿ ಅನುಮಾನವೇ ಇಲ್ಲ.

ಮದುವೆ ಬಗ್ಗೆ ಅಪ್ಪಿ ಆತಂಕ

ಅಪೇಕ್ಷಾ ಮನೆಯಲ್ಲಿ ಈಗಾಗಲೇ ಎಲ್ಲರಿಗೂ ಅಪ್ಪಿ ಮದುವೆ ಬಗ್ಗೆ ಆತಂಕವಿದೆ. ಒಂದು ಬಾರಿ ಸೆಟ್‌ ಆಗಿ ಮದುವೆ ಕ್ಯಾನ್ಸಲ್‌ ಆಗಿದ್ದಕ್ಕೆ ಆಘಾತಗೊಂಡಿದ್ದಾರೆ. ಮುಂದೆಂದೂ ದೊಡ್ಡವರ ಮನೆಗೆ ಅಪೇಕ್ಷಾಳನ್ನು ಮದುವೆ ಮಾಡಿ ಕೊಡಬಾರದು ಎಂದು ಅಂದುಕೊಂಡಿದ್ದಾರೆ. ಇದರಿಂದ ಅಪ್ಪಿಗೆ ತನ್ನ ಹಾಗೂ ಪಾರ್ಥನ ಪ್ರೀತಿ ಬಗ್ಗೆ ದೊಡ್ಡ ಚಿಂತೆಯಾಗಿದೆ. ತನ್ನ ಪ್ರೀತಿಯನ್ನು ಒಪ್ಪುತ್ತಾರಾ ಇಲ್ಲ ವಿರೋಧಿಸುತ್ತಾರಾ ಎಂಬ ಆತಂಕವಿದ್ದು, ಮನೆಯವರಿಗೆ ಈಗಲೇ ಗೊತ್ತಾಗುವುದು ಬೇಡ ಎಂದು ಪಾರ್ಥನೊಂದಿಗೆ ಕದ್ದು ಮುಚ್ಚಿ ಓಡಾಡುತ್ತಿದ್ದಾಳೆ.

Amruthadhaare Serial 09 April episode written update

ಜೋತಿಷ್ಯದ ಬಗ್ಗೆ ಸತ್ಯ ತಿಳಿದ ಮಲ್ಲಿ

ಇನ್ನು ಮಲ್ಲಿ ಅಕಸ್ಮಾತ್‌ ಆಗಿ ಶಕುಂತಲಾ ಮಾತುಗಳನ್ನು ಕೇಳಿಸಿಕೊಂಡಿದ್ದಾಳೆ. ಶಕುಂತಲಾ ಬೇಕಂತಲೇ ಹುಷಾರಿಲ್ಲದಂತೆ ನಟಿಸಿದ್ದು, ಗುರುಗಳನ್ನು ಮನೆಗೆ ಕರೆಸಿ ಜಾತಕ ತೋರಿಸಿದ್ದು, ಜೊತೆಗೆ ಗುರುಗಳಿಗೆ ಹಣ ನೀಡಿ, ತನಗೆ ಬೇಕಾದಂತೆ ಭವಿಷ್ಯ ಹೇಳಿಸಿದ್ದನ್ನು ಮಗಳು ಅಶ್ವಿನಿ ಬಳಿ ಹೇಳುತ್ತಿರುತ್ತಾಳೆ. ಇದು ಅಕಸ್ಮಾತ್‌ ಆಗಿ ಮಲ್ಲಿ ಕೇಳಿಸುಕೊಳ್ಳುತ್ತಾಳೆ. ಭೂಮಿಕಾ ಮತ್ತು ಗೌತಮ್‌ ನನ್ನು ದೂರ ಇಡಲು, ಜಾತಕದಲ್ಲಿ ದೋಷವಿದೆ ಎಂದು ಹೇಳಿರುತ್ತಾಳೆ. ಗೌತಮ್‌ ತನ್ನ ಮಾತನ್ನು ಮೀರದಂತೆ ನೋಡಿಕೊಂಡಿರುವ ಶಕುಂತಲಾ ಮತ್ತು ಭೂಮಿಕಾಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ಹೀಗೆ ಮಾಡಿರುವುದಾಗಿ ಹೇಳುತ್ತಾಳೆ. ಇದನ್ನೆಲ್ಲಾ ಕೇಳಿಸಿಕೊಂಡ ಮಲ್ಲಿಗೆ ಗಾಬರಿ ಆಗುತ್ತದೆ. ಮನೆಯವರ ಮೇಲಿನ ಅನುಮಾನಗಳು ಹೆಚ್ಚಾಗಿದ್ದು, ಸತ್ಯವನ್ನು ಭೂಮಿಕಾ ಅಕ್ಕನಿಗೆ ಹೇಳಬೇಕು ಎಂದು ಹೊರಟಿದ್ದಾಳೆ.

More from Filmibeat

English summary
Gautham health got disturbed. Bhoomika worried about gautham
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X