Amruthadhaare ; ಜೈದೇವ್ ಕೈಯಿಂದ ಜಸ್ಟ್ ಮಿಸ್ ಆದ ಭಾಗ್ಯ,ಅಮ್ಮನ ಸುಳಿವು ಪಡೆದ ಗೌತಮ್..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಗೆ ತನ್ನ ತಾಯಿ ಹಾಗೂ ಸಹೋದರಿ ಬದುಕಿದ್ದಾರೆ ಎಂಬ ಸತ್ಯ ತಿಳಿದಾಗಿನಿಂದಲೂ ಮನಸ್ಸಿನಲ್ಲಿ ನೆಮ್ಮದಿ ಇಲ್ಲದಂತಾಗಿದೆ. ತಾನು ಇಷ್ಟು ದೊಡ್ಡ ಶ್ರೀಮಂತನಾದರೂ ಕೂಡ ತನ್ನ ತಾಯಿ ಹಾಗೂ ಸಹೋದರಿ ಇಬ್ಬರೂ ಕೂಡ ಕಷ್ಟಪಟ್ಟು ಜೀವನ ಮಾಡುತ್ತಿದ್ದಾರೆ ಎಂದು ಚಿಂತಿಸುತ್ತಿದ್ದಾರೆ.ನಿತ್ಯ ಗೌತಮ್ ಗೆ ಭೂಮಿಕಾ ಸಮಾಧಾನ ಮಾಡುತ್ತಿರುತ್ತಾಳೆ. ಅಲ್ಲದೇ, ಈಗಾಗಲೇ ಶಕುಂತಲಾಳಿಗೂ ಈ ಸತ್ಯ ಗೊತ್ತಾಗಿರುವುದು ಗೌತಮ್ ಗೆ ಕೊಂಚ ಸಮಾಧಾನವನ್ನು ತಂದಿದೆ.

ಭಾಗ್ಯಳನ್ನು ಕೊಲ್ಲಲು ಮುಂದಾದ ಜೈದೇವ್

ತನ್ನ ತಾಯಿ ಶಕುಂತಲಾಳಿಗೋಸ್ಕರ ಈಗ ಜೈದೇವ್ ಭಾಗ್ಯಳನ್ನು ಹುಡುಕಿಸುತ್ತಿದ್ದಾನೆ. ಗೌತಮ್ ಗೆ ಸಿಕ್ಕಿರುವ ಮಾಹಿತಿಯನ್ನು ಇಟ್ಟುಕೊಂಡು ಅವರು ಎಲ್ಲಿರಬಹುದು ಎಂದು ಗೆಸ್ ಮಾಡಿದ್ದಾನೆ. ಹುಡುಗರನ್ನು ಬಿಟ್ಟು ಹುಡುಕಿಸಿದ್ದಾನೆ. ದುರಾದೃಷ್ಟವಶಾತ್ ಭಾಗ್ಯ ಜೈದೇವ್ ಕಣ್ಣಿಗೆ ಬಿದ್ದಿದ್ದಾಗಿದೆ. ಶಕುಂತಲಾ ಭಾಗ್ಯಳ ಜೊತೆಗೆ ಮಾತನಾಡಲು ಬಯಸಿದ್ದಳು. ಆದರೆ, ಜೈದೇವ್ ಹಾಸಿಗೆ ಮೇಲೆ ಮಲಗಿರುವ ಭಾಗ್ಯ ಮತ್ತೆ ಏಲೂವುದೇ ಬೇಡ ಎಂದು ಪ್ಲಾನ್ ಮಾಡಿದ್ದಾನೆ. ಮಾವ ಲಕ್ಷ್ಮೀಕಾಂತನ ಜೊತೆ ಸೇರಿಕೊಂಡು ಭಾಗ್ಯ ಮತ್ತು ಆಕೆಯ ಸಹೋದರಿ ಇಬ್ಬರನ್ನು ಕೊಲ್ಲಲು ಮುಂದಾಗಿದ್ದಾನೆ.

amruthadhaare-serial-09-december-episode-written-update


ಎಡವಟ್ಟು ಮಾಡಿಕೊಂಡ ಮಾವ-ಅಳಿಯ

ಹುಡುಗರಿಂದ ಭಾಗ್ಯ ಮನೆಯ ಬಾಗಿಲನ್ನು ಹಾಕಿಸಿದ್ದು, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಭಾಗ್ಯ ಮತ್ತು ಅವಳ ಮಗಳು ಇಬ್ಬರೂ ಸುಟ್ಟು ಹೋದರು ಎಂದು ಭಾವಿಸಿದ್ದಾರೆ. ಆದರೆ, ಅಷ್ಟರಲ್ಲಿ ಪಕ್ಕದ ಮನೆಯಾಕೆ ಬಂದು ಸದ್ಯ ಇಬ್ಬರೂ ಮನೆಯ ಹಿಂದೆಗಡೆ ಬಾಗಿಲಿನಿಂದ ಎಲ್ಲೋ ಹೋಗಿದ್ದಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡ ಜೈದೇವ್ ಮತ್ತು ಲಕ್ಷ್ಮೀಕಾಂತ ಇಬ್ಬರೂ ಗಾಬರಿಯಾಗುತ್ತಾರೆ. ತಾವು ಮಾಡಿದ ಪ್ಲಾನ್ ಎಲ್ಲವೂ ವ್ಯರ್ಥವಾಯ್ತೇ ಎಂದು ಗೋಳಾಡುತ್ತಾರೆ. ಇನ್ನು ಶಕುಂತಲಾ ಬಳಿ ಈ ಸತ್ಯವನ್ನು ಹೇಳುತ್ತಾರೆ. ಆಗ ಶಕುಂತಲಾ ಕೂಡ ಬೈಯುತ್ತಾಳೆ. ಅವಳನ್ನು ಜೀವಂತವಾಗಿ ಕರೆದುಕೊಂಡು ಬರುವುದು ಬಿಟ್ಟು ಆಗದ ಕೆಲಸಗಳನ್ನು ಮಾಡಿದ್ದೀರಾ. ಈಗ ನಿಮ್ಮ ಹೆಸರು ಹೊರಗೆ ಬಂದರೆ, ಏನು ಮಾಡುತ್ತೀರಾ ಎಂದು ಬೈಯುತ್ತಾಳೆ.


ಗೌತಮ್ ಗೆ ಅಮ್ಮನ ಸುಳಿವು ಸಿಕ್ಕಾಯ್ತು

ಇನ್ನು ಗೌತಮ್ ತನ್ನ ತಾಯಿಯನ್ನು ಪೊಲೀಸರು ಮತ್ತು ಪ್ರೈವೇಟ್ ಏಜೆನ್ಸಿ ಮೂಲಕ ಹುಡುಕಿಸುತ್ತಿದ್ದಾರೆ. ಈಗ ಪೊಲೀಸರು ನಿಮ್ಮ ತಾಯಿಯನ್ನು ನೋಡಿರುವವರು ಇದ್ದಾರೆ. ಆ ವ್ಯಕ್ತಿಯನ್ನು ವಿಚಾರಿಸಬೇಕಿದೆ ಎಂದು ವಿಚಾರ ತಿಳಿಸಿದ್ದು, ಗೌತಮ್ ಗೆ ಬಹಳ ಖುಷಿಯಾಗಿದೆ. ತನ್ನ ತಾಯಿ ಸಿಕ್ಕೇಬಿಟ್ಟರು ಎಂಬ ಸಂಭ್ರಮದಲ್ಲಿ ಇದ್ದಾನೆ. ಶಕುಂತಲಾಳಿಗೂ ವಿಚಾರವನ್ನು ತಿಳಿಸಿ ಸಂತಸಪಟ್ಟಿದ್ದಾನೆ. ಆದರೆ, ಈಗ ಸುಧಾ ಮತ್ತು ಭಾಗ್ಯ ಇದ್ದ ಮನೆ ಸುಟು ಹೋಗಿದ್ದು, ನಿಜಕ್ಕೂ ಗೌತಮ್ ಗೆ ತನ್ನ ತಾಯಿ ಸಿಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


ಭಾಗ್ಯಳನ್ನು ಕಾಪಾಡಿಕೊಳ್ಳುತ್ತಾಳಾ ಸುಧಾ..?

ಇತ್ತ ಸುಧಾ ತನ್ನ ತಾಯಿ ಭಾಗ್ಯಳಿಗೆ ಜ್ವರ ಬಂದ ಕಾರಣ ಹಿಂದಿನ ಬಾಗಿಲಿನಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾಳೆ. ಇದೇ ಸಂದರ್ಭದಲ್ಲಿ ಜೈದೇವ್ ಬೆಂಕಿ ಹಚ್ಚಿದ್ದು, ಅಮ್ಮ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಜೈದೇವ್ ಇಷ್ಟಕ್ಕೇ ಸುಮ್ಮನಾಗುತ್ತಾನಾ..? ಭಾಗ್ಯಳನ್ನು ಮತ್ತೆ ಹುಡುಕುತ್ತಾನಾ..? ಭಾಗ್ಯ ಮತ್ತು ಸುಧಾ ಇರುವ ಸ್ಥಳದ ಸುಳಿವು ಸಿಕ್ಕರೆ ಮುಂದೇನು ಮಾಡಬಹುದು ಎಂಬ ಕುತೂಹಲ ಮೂಡಿದೆ. ಅದರೊಂದಿಗೆ ಸುಧಾ ತನ್ನ ತಾಯಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾಳೆ. ಅವಳಿಗೆ ತನ್ನ ಸುತ್ತಾ ನಡೆಯುತ್ತಿರುವ ಷಡ್ಯಂತ್ರ ತಿಳಿಯುತ್ತದಾ ಎಂಬ ಪ್ರಶ್ನೆ ಎದ್ದಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X