Amruthadhaare ; ಅಮ್ಮನಿಗಾಗಿ ಸಜ್ಜಪ್ಪ ತಯಾರಿಸಿದ ಗೌತಮ್ : ಶಕುಂತಲಾ ಪ್ಲಾನ್ ಬೇರೆಯೇ ಇದೆ..!
ಅಮೃತಧಾರೆ ಧಾರಾವಾಹಿಯಲ್ಲಿ ಮನೆಗೆ ಸದಾಶಿವ ಮತ್ತು ಮಂದಾಕಿನಿ ಆಗಮಿಸಿದ್ದಾರೆ. ಗೌತಮ್ ಅವರ ಅತ್ತೆ-ಮಾವನಿಗೆ ತನ್ನ ತಾಯಿಯನ್ನು ಪರಿಚಯ ಮಾಡಿಸಲು ಮುಂದಾಗಿದ್ದಾರೆ. ಭಾಗ್ಯ ಅವರನ್ನು ಕಂಡ ಸದಾಶಿವ, ಭಾಗ್ಯಕ್ಕೆ ಎಂದು ಕರೆದು ಕಾಲಿಗೆ ಬಿದ್ದು, ಇವರು ನಿಜಕ್ಕೂ ದೇವತೆ ಎಂದು ಹಾಡಿ ಹೊಗಳಿದ್ದಾರೆ. ಈ ಹಿಂದೆಯೇ ತಮಗೆ ಇವರು ತಿಳಿದವರು ಎಂದು ಹೇಳುತ್ತಾರೆ. ತಮ್ಮ ಕಷ್ಟದಲ್ಲಿ ಸಹಾಯ ಮಾಡಿದ ಭಾಗ್ಯ ಅವರ ಕುಟುಂಬ ಆಗರ್ಭ ಶ್ರೀಮಂತರು ಎಂದು ಹೇಳುತ್ತಾರೆ. ಇದನ್ನೆಲ್ಲಾ ಕೇಳುವ ಗೌತಮ್ ಮತ್ತು ಭೂಮಿಕಾಳಿಗೆ ಬಹಳ ಖುಷಿಯಾಗುತ್ತದೆ.
ತಂದೆ-ತಾಯಿಗೆ ಅವಮಾನಿಸಿದ ಅಪೇಕ್ಷಾ
ಅಪ್ಪ-ಅಮ್ಮ ಬಂದಿದ್ದಾರೆ ಎಂದು ಹೇಳಿದರೂ ಕೇರ್ ಮಾಡದ ಅಪೇಕ್ಷಾ ಬೇಕಿದ್ದರೆ ಅವರೇ ಬಂದು ಮಾತನಾಡಿಸಲಿ ಎಂದು ತನ್ನ ಪಾಡಿಗೆ ತಾನು ಇರುತ್ತಾಳೆ. ಮಗಳು ಹೇಳದೇ ಕೇಳದೇ ಮದುವೆಯಾದಳು ಎಂಬ ಬೇಸರದಿಂದ ಇದ್ದ ಸದಾಶಿವ ಮತ್ತು ಮಂದಾಕಿನಿ ಈಗ ಅದನ್ನೆಲ್ಲಾ ಮರೆತಿದ್ದಾರೆ. ಮಗಳನ್ನು ನೋಡುವ ಆಸೆಯಿಂದ ಅವರೇ ರೂಮಿಗೆ ಹೋಗಿ ಭೇಟಿ ಮಾಡುತ್ತಾರೆ. ಪ್ರೀತಿಯಿಂದ ಮಾತನಾಡಿಸಿದಾಗ ಅಪೇಕ್ಷಾ ಬೈಯುತ್ತಾಳೆ. ನನಗೆ ಅವಶ್ಯಕತೆ ಇದ್ದಾಗ ಇಲ್ಲದ ನೀವು ತಂದೆ-ತಾಯಿನೇ ಅಲ್ಲ. ಅಯೋಗ್ಯರು ಎಂದೆಲ್ಲಾ ಬೈಯುತ್ತಾಳೆ. ಇದರಿಂದ ಮಂದಾಕಿನಿ ಮತ್ತು ಸದಾಶಿವನ ಮನಸ್ಸಿಗೆ ಬಹಳ ಬೇಸರವಾಗುತ್ತದೆ.

ನಾದಿನಿಗೆ ಬುದ್ಧಿ ಹೇಳಿದ ಗೌತಮ್
ಇದನ್ನೆಲ್ಲಾ ಗಮನಿಸಿದ ಗೌತಮ್, ಅಪೇಕ್ಷಾಳನ್ನು ಬೈಯುತ್ತಾನೆ. ನಿನ್ನ ತಂದೆ-ತಾಯಿ ಅವರು. ನಿನ್ನ ಮದುವೆ ಆಗುವ ಸಂದರ್ಭವೇ ಬೇರೆ ಇತ್ತು. ಆ ಜಾಗದಲ್ಲಿ ಯಾರೇ ಇದ್ದರೂ ಹಾಗೆ ನಡೆದುಕೊಳ್ಳುತ್ತಿದ್ದರು. ಆಗ ನೀವು ಮಾಡಿದ್ದು ತಪ್ಪೇ. ನೀನು ನಮ್ಮ ಮನೆಗೆ ಸೊಸೆಯಾಗಿ ಬರುತ್ತೀಯಾ ಎಂದಾಗ ಖುಷಿ ಪಟ್ಟಿದ್ದೆ. ಆದರೆ, ಇವತ್ತು ನಿನ್ನ ವರ್ತನೆಯನ್ನು ನೋಡಿ ಬಹಳ ಬೇಸರವಾಗುತ್ತಿದೆ. ನೀನು ಈಗ ಮಾತನಾಡಿದ್ದು ತಪ್ಪು. ಅವರ ಬಳಿ ಕ್ಷಮೆ ಕೇಳು ಎಂದು ಹೇಳುತ್ತಾನೆ. ಅಪೇಕ್ಷಾಳಿಗೆ ಮನಸ್ಸಿಲ್ಲದಿದ್ದರೂ ಕ್ಷಮೆ ಕೇಳುತ್ತಾಳೆ. ಬಳಿಕ ಗೌತಮ್ ನನ್ನು ಕರೆದು ಅಪೇಕ್ಷಾಳಿಗೆ ಬೇರೆಯವರ ಮುಂದೆ ಹಾಗೆ ಅವಮಾನ ಮಾಡಬಾರದಿತ್ತು ಎಂದು ಬುದ್ಧಿ ಹೇಳುತ್ತಾಳೆ. ಆದರೆ, ತನ್ನ ತಂದೆ-ತಾಯಿಯನ್ನು ವಹಿಸಿಕೊಂಡು ಮಾತನಾಡಿದ್ದಕ್ಕೆ ಭೂಮಿಕಾ ಖುಷಿ ಪಡುತ್ತಾಳೆ.
ಜೀವನ್ ಮನೆ ಗೃಹಪ್ರವೇಶಕ್ಕೆ ಆಹ್ವಾನ
ಇನ್ನು ಜೀವನ್ ಬಿಸಿನೆಸ್ ಚೆನ್ನಾಗಿ ನಡೆಯುತ್ತಿದ್ದು, ಅದಾಗಲೇ ಮನೆಯನ್ನು ಕೂಡ ಕಟ್ಟಿರುತ್ತಾನೆ. ಇದರ ಗೃಹಪ್ರವೇಶಕ್ಕಾಗಿ ಆಹ್ವಾನ ನೀಡಲು ಬಂದಿರುತ್ತಾರೆ. ಇನ್ನು ಸದಾಶಿವ ಮತ್ತು ಮಂದಾಕಿನಿ ಉಡುಗೊರೆ ಸಮೇತವಾಗಿ ಭಾಗ್ಯಳಿಗೆ ಆಹ್ವಾನ ಪತ್ರಿಕೆಯನ್ನು ನೀಡುತ್ತಾರೆ. ಕುಟುಂಬ ಸಮೇತರಾಗಿ ಬರಬೇಕು ಎಂದು ಕರೆದು ಹೊರಡುತ್ತಾರೆ. ಭೂಮಿಕಾ ಅಪೇಕ್ಷಾ ರೂಮಿಗೆ ತೆರಳಿ ಇನ್ವಿಟೇಶನ್ ಕೊಟ್ಟು ಕರೆಯುತ್ತಾಳೆ. ಇದು ನಮ್ಮ ತವರು ಮನೆ ಸಂಭ್ರಮ ನಾವು ಇದರಲ್ಲಿ ಭಾಗವಹಿಸಬೇಕು ಎಂದು ಸಮಾಧಾನವಾಗಿ ಹೇಳುತ್ತಾಳೆ.
ಅಮ್ಮನಿಗಾಗಿ ಅಡುಗೆ ತಯಾರಿಸಿದ ಗೌತಮ್
ಇತ್ತ ಗೌತಮ್ ಬಹಳ ಖುಷಿ ಮೂಡ್ ನಲ್ಲಿದ್ದು, ತನ್ನ ತಾಯಿ ಭಾಗ್ಯಳಿಗೋಸ್ಕರ ತಾನೇ ತಿಂಡಿಯನ್ನು ತಯಾರಿಸಿದ್ದಾನೆ. ಚಿತ್ರಾನ್ನ ಮಾಡಿ ಅದಕ್ಕೆ ಅಮ್ಮನಿಗೆ ಇಷ್ಟ ಎಂದು ಸಜ್ಜಪ್ಪ ಮಾಡಿದ್ದಾನೆ. ಗೌತಮ್ ಗೆ ಭೂಮಿಕಾ ಸಹಾಯ ಮಾಡಿದ್ದಾಳೆ. ಇನ್ನು ಶಕುಂತಲಾ ಸದ್ಯ ಗೌತಮ್ ಖುಷಿಯಲ್ಲಿ ತೇಲಾಡುತ್ತಿದ್ದಾನೆ. ಇದು ಎಷ್ಟು ದಿನ ನಡೆಯುತ್ತದೋ ನಡೆಯಲಿ ಆಮೇಲೆ ನಮ್ಮ ಆಟವನ್ನು ತೋರಿಸೋಣ ಎಂದು ದೊಡ್ಡದಾಗಿ ಪ್ಲಾನ್ ಮಾಡುತ್ತಿದ್ದಾಳೆ. ಆದರೆ, ಭೂಮಿಕಾ ತನ್ನ ಕುಟುಂಬಕ್ಕೆ ರಕ್ಷಣೆಯಾಗಿ ನಿಲ್ಲುವುದು ಪಕ್ಕಾ ಆಗಿದ್ದು, ಅದಕ್ಕೆ ಯಾವೆಲ್ಲಾ ಸವಾಲುಗಳನ್ನು ಎದುರಿಸಬೇಕಾಗುತ್ತದೋ ಕಾದು ನೋಡಬೇಕಿದೆ.


Click it and Unblock the Notifications











