Amruthadhaare ; ಕೊನೆಗೂ ಮದುವೆಗೆ ಒಪ್ಪಿಕೊಂಡ ಗೌತಮ್ : ಶಕುಂತಲಾ ಆಟಕ್ಕೆ ಸೋತ ಜೋಡಿ.!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಸದಾಶಿವನಿಗೆ ಭೂಮಿಕಾಳ ನಡವಳಿಕೆಯಲ್ಲಿ ಅನುಮಾನ ಮೂಡಿದೆ. ದೊಡ್ಡವರಿಗೆ ಗೌರವ ಕೊಡುವ ಭೂಮಿಕಾ ನಿರ್ಧಾರದಲ್ಲಿ ಯಾಕಿಷ್ಟು ವ್ಯತ್ಯಾಸ ಎಂದು ಯೋಚಿಸುತ್ತಿದ್ದಾನೆ. ಮನೆಯವರಿಗೆ ಗೌರವ ಕೊಟ್ಟು ಭಾಗ್ಯಕ್ಕ ಕೈಯಲ್ಲಿ ಹಣ್ಣು ಪಡೆಯಬೇಕಿತ್ತು.

ಆದರೆ, ಎಲ್ಲರೂ ಬಲವಂತವಾಗಿ ಬುದ್ಧಿ ಹೇಳಿದ ಬಳಿಕ ಭೂಮಿಕಾ ಒಪ್ಪಿಕ್ಕೊಳ್ಳಲು ಕಾರಣವೇನು ಎಂದು ಯೋಚಿಸಿದ್ದಾರೆ. ಇತ್ತ ಗೌತಮ್ ಶಕುಂತಲಾ ಬಳಿ ಸುತಾರಾಂ ಈ ಮದುವೆಯಾಗುವುದಿಲ್ಲ ಎಂದಿದ್ದಾನೆ. ಬೇಕಿದ್ದರೆ ಒಂದು ಮಗುವನ್ನು ದತ್ತು ತರೋಣ. ಅದು ಬಿಟ್ಟು ಎರಡನೇ ಮದುವೆ ಬೇಡವೇ ಬೇಡ ಎಂದು ಹೇಳಿದ್ದಾನೆ.

Amruthadhaare Serial 09 March episode written update

ಜಾತಕದ ನೆಪ ಹೇಳಿದ ಶಕುಂತಲಾ

ಗೌತಮ್ ನನ್ನು ಒಪ್ಪಿಸುವ ಸಲುವಾಗಿ ಶಕುಂತಲಾ ಜಾತಕದಲ್ಲಿ ದೋಷವಿದೆ. ನಿನಗೆ ಮಕ್ಕಳಾಗದೇ ಹೋದರೆ, ಇಡೀ ಮನೆಯಲ್ಲಿ ಯಾರಿಗೂ ಮಕ್ಕಳಾಗುವುದಿಲ್ಲ ಎಂದು ಹೇಳಿದ್ದಾಳೆ. ಅದಕ್ಕೋಸ್ಕರಾನೇ ಮಹಿಮಾ ಮತ್ತು ಮಲ್ಲಿ ಗರ್ಭಿಣಿಯಾಗಿದ್ದರೂ ಮನೆಗೆ ಮಗು ಬಾರದ ಹಾಗೆ ಆಗಿದ್ದು. ನನಗೆ ಗೊತ್ತಿರುವ ಕಡೆಯಲೆಲ್ಲಾ ವಿಚಾರಿಸಿದ. ನಿನ್ನ ಜಾತಕದಲ್ಲಿ ದೋಷವಿದೆ. ನಿನಗೆ ಮಕ್ಕಳಾಗದೇ ಹೋದರೆ, ಮತ್ಯಾರಿಗೂ ಆ ಭಾಗ್ಯವೇ ಇಲ್ಲ. ಹಾಗಾಗಿ ನೀನು ಈಗ ಇನ್ನೊಂದು ಮದುವೆಯನ್ನು ಆಗಲೇಬೇಕು ಎಂದು ಹೇಳುತ್ತಾಳೆ. ಗೌತಮ್ ಗೆ ಈ ಮಾತನ್ನು ಕೇಳಿ ಒಪ್ಪಿಕೊಳ್ಳಬೇಕಾ ಎಂಬ ಪ್ರಶ್ನೆ ಮೂಡುತ್ತದೆ. ಆದರೆ, ಭೂಮಿಕಾಳನ್ನು ಬಿಟ್ಟು ಇರುವುದಕ್ಕೆ ಸಾಧ್ಯವೇ ಇಲ್ಲ. ಹಾಗಾಗಿ ಈ ಮದುವೆ ಬೇಡವೇ ಬೇಡ ಎಂದು ಖಡಾಖಂಡಿತವಾಗಿ ಹೇಲಿ ಹೋಗುತ್ತಾನೆ.


ಗೌತಮ್ ಗೆ ಸಮಾಧಾನ ಮಾಡಿದ ಭೂಮಿಕಾ

ಸೀದಾ ಭೂಮಿಕಾ ಬಳಿ ಹೋಗಿ ಇದೇನು ಕೆಲಸ ಮಾಡಿದ್ದೀರಾ. ನಿಮಗೆ ಮನಸ್ಸಾದರೂ ಹೇಗೆ ಬಂತು ಎಂದು ಬೈಯುತ್ತಾನೆ. ಭೂಮಿಕಾ ನಿಮಗೆ ವಿಷಯ ಗೊತ್ತಾಯ್ತಾ ಎಂದಾಗ ನೀವು ಟೀಚರ್ ಅಲ್ಲ, ಚೀಟರ್. ಮೋಸ ಮಾಡಲು ಹೇಗೆ ಸಾಧ್ಯವಾಯ್ತು ಎಂದಾಗ ಭೂಮಿಕಾ ಮರು ಪ್ರಶ್ನೆ ಮಾಡುತ್ತಾಳೆ. ನೀವೂ ನನಗೆ ಸುಳ್ಳು ಹೇಳಿ ಮೋಸ ಮಾಡಿದ್ದೀರಾ. ನನ್ನ ಬಳಿ ಸತ್ಯ ಯಾಕೆ ಮುಚ್ಚಿಟ್ಟಿದ್ದು ಎಂದು ಹೇಳಿ ಮದುವೆಗೆ ಒಪ್ಪಿಸಲು ಪ್ರಯತ್ನ ಪಡುತ್ತಾಳೆ. ಆದರೆ, ಗೌತಮ್, ನಿಮ್ಮನ್ನ ಬಿಟ್ಟು ಇರುವುದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ದಯವಿಟ್ಟು ಇದನ್ನು ಇಲ್ಲಿಗೆ ಕೈ ಬಿಡಿ ಎಂದು ಹೇಳುತ್ತಾನೆ. ಭೂಮಿಕಾ ಎಷ್ಟೇ ಒಪ್ಪಿಸಲು ಪ್ರಯತ್ನ ಪಟ್ಟರೂ ಸಾಲುವುದಿಲ್ಲ.


ಗೌತಮ್ ಹಠಕ್ಕೆ ಶಕುಂತಲಾ ಹೊಸ ಅಸ್ತ್ರ

ಗೌತಮ್ ಎರಡನೇ ಮದುವೆ ಸಾದ್ಯವೇ ಇಲ್ಲ ಎಂದು ಹಠ ಮಾಡುತ್ತಿರುತ್ತಾನೆ. ಶಕುಂತಲಾಳಿಗೆ ಈಗ ಏನು ಮಾಡುವುದು ಎಂಬುದು ತಿಳಿಯದೇ ಕಂಗಾಲಾಗುತ್ತಾಳೆ. ಹೇಗಾದರೂ ಮಾಡಿ ಭೂಮಿಕಾಳನ್ನು ಮನೆಯಿಂದ ಹೊರಗೆ ಕಳಿಸಲೇಬೇಕು. ಹಾಗೆ ಮಾಡಬೇಕು ಎಂದರೆ, ಈಗ ನಾನು ಹೊಸ ನಾಟಕ ಮಾಡಬೇಕು ಎಂದು ವಿಷದ ಬಾಟಲಿಯನ್ನು ಕೈಯಲ್ಲಿಡಿದು ಗೌತಮ್ ಮುಂದೆ ಹೋಗುತ್ತಾಳೆ. ಮದುವೆಗೆ ಒಪ್ಪಿಕೊ ಎಂದು ಕಾಲು ಹಿಡಿದು ಕೇಳಿಕೊಳ್ಳುತ್ತಾಳೆ. ಗೌತಮ್ ಆಗದೇ ಇರುವ ವಿಚಾರದ ಬಗ್ಗೆ ಪದೇ ಪದೇ ಮಾತನಾಡಬೇಡಿ ಎನ್ನುತ್ತಾನೆ.


ಅಮ್ಮನಿಗಾಗಿ ಮದುವೆಗೆ ಒಪ್ಪಿಕೊಂಡ ಗೌತಮ್

ಆಗ ಗೌತಮ್ ಮೂಮದೆ ವಿಷದ ಬಾಟಲಿಯನ್ನು ತೆಗೆದು ಶಕುಂತಲಾ ನಾಟಕ ಮಾಡುತ್ತಾಳೆ. ಈ ಮದುವೆಗೆ ಒಪ್ಪದೇ ಹೋದರೆ, ಇಲ್ಲೇ ವಿಷ ಕುಡಿದು ಸಾಯುತ್ತೇನೆ ಎಂದು ಬೆದರಿಕೆ ಹಾಕುತ್ತಾಳೆ. ಗೌತಮ್ ವಿಷದ ಬಾಟಲಿಯನ್ನು ಕಿತ್ತುಕೊಂಡು. ಹೀಗೆಲ್ಲಾ ಮಾಡಬೇಡಿ ಎನ್ನುತ್ತಾನೆ. ನಿಮಗೋಸ್ಕರ ಈ ಮದುವೆಗೆ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿ ಗೌತಮ್ ಅಲ್ಲಿಂದ ಹೊರಟು ಬಿಡುತ್ತಾನೆ. ಈ ಮಾತನ್ನು ಕೇಳಿದ ಶಕುಂತಲಾಳಿಗೆ ಖುಷಿಯಾಗಿದ್ದು, ಭೂಮಿಕಾ ನೊಂದುಕೊಳ್ಳುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X