Amruthadhaare ; ಮೈದುನನಿಗೆ ಹೊಸ ಆಫರ್ ಕೊಟ್ಟ ಗೌತಮ್ ಭಾವ : ಜೀವನ್ ಒಪ್ಪಿಕೊಳ್ಳುತ್ತಾನಾ..?
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಗೆ ಊಟ ಡೆಲಿವರಿ ಮಾಡಿದ ವ್ಯಕ್ತಿಯ ಹೆಸರು ಕೂಡ ಜೀವ, ಇದರಿಂದ ಗೌತಮ್ ಬೇಕಂತಲೇ ಆತನನ್ನು ಊಟಕ್ಕೆ ಕರೆದಿದ್ದಾನೆ. ಅಷ್ಟರಲ್ಲಿ ಭೂಮಿಕಾ ಬಂದು ಅವರಿಗೆ ಕೆಲಸ ಇರುತ್ತೆ ಹೋಗಲಿ ಬಿಡಿ ಎಂದು ಕಳಿಸಿ ತಾನು ಹೋಗಿ ಮಾತನಾಡಿದ್ದಾಳೆ. ಭೂಮಿಕಾ ಹಾಗೂ ಜೀವನ್ ಮಾತನಾಡುವುದನ್ನು ಗೌತಮ್ ಗಮನಿಸಿದ್ದಾನೆ. ಜೀವನ್ ನ ತಡೆದು ಬಣ್ಣ ಬಯಲು ಮಾಡಿದ್ದಾನೆ. ಭೂಮಿಕಾ ತನ್ನಿಂದ ಸತ್ಯ ಮುಚ್ಚಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾನೆ. ನನ್ನ ಬಳಿ ಸುಳ್ಳು ಹೇಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾನೆ.
ಮೈದುನನಿಗೆ ಗೌತಮ್ ಕೊಟ್ಟ ಆಫರ್
ಆನಂದ್, ಭೂಮಿಕಾ ಹಾಗೂ ಜೀವನ್ ಮೂವರನ್ನು ಗೌತಮ್ ತರಾಟೆಗೆ ತೆಗೆದುಕೊಂಡಿದ್ದಾನೆ. ಭೂಮಿಕಾ ಒಡವೆ ಅಡವಿಟ್ಟ ವಿಚಾರದಿಂದ ಹಿಡಿದು ಎಲ್ಲಾ ಸತ್ಯವನ್ನು ಹೇಳಿ ಅವರಿಗೆ ಮುಜುಗರವಾಗುವಂತೆ ಮಾಡಿದ್ದಾನೆ. ಇನ್ನು ಜೀವನ್ ಸ್ವಾಭಿಮಾನವನ್ನು ಮೆಚ್ಚಿಕೊಂಡ ಗೌತಮ್ ಅವನಿಗೊಂದು ಆಫರ್ ಕೊಟ್ಟಿದ್ದಾನೆ. ಕಷ್ಟಪಟ್ಟು ಓದಿರುವ ನೀನು ಫುಡ್ ಡೆಲಿವರಿ ಮಾಡಿಕೊಂಡು ವಿದ್ಯೆ ನ ಹಾಳು ಮಾಡಬೇಡ. ಅದೂ ಒಳ್ಳೆಯ ಕೆಲಸವೇ ಆದರೆ, ನಿನಗಲ್ಲ ಜೀವನ್ ಎಂದು ಬುದ್ಧಿ ಹೇಳಿ, ಸ್ವಂತ ಕಂಪನಿಯನ್ನು ತೆರೆಯಬಹುದು. ಇದಕ್ಕೆ ಹಣ ಸಹಾಯವನ್ನು ನಾನು ಮಾಡುತ್ತೀನಿ ಎಂದು ಹೇಳುತ್ತಾನೆ.

ಹೊಸ ಕಂಪನಿ ಶುರು ಮಾಡಲು ನಿರ್ಧಾರ
ಆ ಹಣವನ್ನು ಸಾಲ ಎಂದು ತಗೋ, ಕಂಪನಿ ಲಾಭ ಪಡೆದ ಬಳಿಕ ಹಿಂತಿರುಗಿಸು. ಈ ವಿಚಾರ ನಮ್ಮಲ್ಲೇ ಇರಲಿ ಎಂದು ಹೇಳುತ್ತಾನೆ. ಜೀವನ್ ಇದೇ ಸರಿ ಎಂದು ಭಾವ ಕೊಟ್ಟ ಆಫರ್ ಒಪ್ಪಿಕೊಳ್ಳುತ್ತಾನೆ. ಇದರಿಂದ ಎಲ್ಲರಿಗೂ ಖುಷಿಯಾಗುತ್ತದೆ. ಜೀವನ್ ಮನೆಗೆ ಹೋಗಿ ತಾನು ಕೆಲಸಕ್ಕೆ ರಿಸೈನ್ ಮಾಡಿ ಹೊಸ ಬಿಸಿನೆಸ್ ಮಾಡುವ ಬಗ್ಗೆ ಹೇಳಿಕೊಳ್ಳುತ್ತಾನೆ. ಮನೆಯವರೆಲ್ಲಾ ಜೀವನ್ ಮಾತನ್ನು ಕೇಳಿ ಖುಷಿ ಪಡುತ್ತಾರೆ. ಅವನ ಹೊಸ ಹೆಜ್ಜೆಗೆ ಸಪೋರ್ಟ್ ಮಾಡುತ್ತಾರೆ. ಮಹಿಮಾ ಈಗಲಾದರೂ ತನ್ನ ಗಂಡ ಬಿಸಿನೆಸ್ ಮ್ಯಾನ್ ಆಗಲು ಮುಂದಾದನಲ್ಲ ಎಂದು ಸಂತಸಪಟ್ಟಿದ್ದಾಳೆ. ಇತ್ತ ಗೌತಮ್ ಭೂಮಿಕಾಳ ಬಳಿ ರಿಕ್ವೆಸ್ಟ್ ಮಾಡಿದ್ದಾನೆ. ನನ್ನ ಬಳಿ ಯಾವ ವಿಚಾರವನ್ನೂ ಮುಚ್ಚಿಡಬೇಡಿ. ಆದಷ್ಟು ಸ್ವಾಭಿಮಾನವನ್ನು ಕಡಿಮೆ ಮಾಡಿಕೊಳ್ಳಿ ಎಂದು ಕೇಳಿಕೊಳ್ಳುತ್ತಾನೆ. ಇದಕ್ಕೆ ಭೂಮಿಕಾ ಕೂಡ ಓಕೆ ಎನ್ನುತ್ತಾಳೆ.

ಮಲ್ಲಿ ವಿಚಾರದಲ್ಲೂ ಶಕುಂತಲಾಗೆ ಹಿನ್ನೆಡೆ
ಮಲ್ಲಿ ಹಾಗೂ ಜೈದೇವ ಹೊರಗಿನಿಂದ ಮನೆಗೆ ಬರುವುದನ್ನು ನೋಡಿದ ಶಕುಂತಲಾ ಪ್ರಶ್ನೆ ಮಾಡುತ್ತಾಳೆ. ಮಲ್ಲಿ ಕಾಲೇಜಿಗೆ ಹೋಗುತ್ತಿರುವುದಾಗಿ ಹೇಳಿದಾಗ ಶಕುಂತಲಾಳಿಗೆ ತನ್ನ ಒಪ್ಪಿಗೆ ಕೇಳದೇ ಹೋಗಿದ್ದಕ್ಕೆ ಕೋಪ ಮಾಡಿಕೊಳ್ಳುತ್ತಾಳೆ. ಆದರೆ, ಜೈದೇವ ಮಲ್ಲಿಗೆ ಸಪೋರ್ಟ್ ಮಾಡಿ ಮಾತನಾಡುತ್ತಾನೆ. ನಾನೇ ಅವಳನ್ನು ನಿತ್ಯ ಪಿಕ್ ಅಪ್, ಡ್ರಾಪ್ ಮಾಡುತ್ತೇನೆ ಎನ್ನುತ್ತಾನೆ. ಜೈದೇವ ಕೂಡ ತನ್ನ ಕೈ ತಪ್ಪಿ ಹೋದ ಎಂದು ಶಕುಂತಲಾಳಿಗೆ ನೋವಾಗುತ್ತದೆ.

ಭೂಮಿಕಾಳಿಗಾಗಿ ಶಕುಂತಲಾ ಪ್ಲಾನ್
ಅಣ್ಣನ ಬಳಿ ತನ್ನ ಸಂಕಟವನ್ನು ಹೇಳಿಕೊಳ್ಳುತ್ತಾ ಬೇಸರವನ್ನು ವ್ಯಕ್ತಪಡಿಸುತ್ತಾಳೆ. ಲಕ್ಷ್ಮೀಕಾಂತ ಭೂಮಿಕಾಳಿಂದ ನಿನಗೆ ಹೀಗಾಗುತ್ತಿದೆ. ಮೊದಲು ಅವಳಿಗೆ ಒಂದು ಗತಿಯನ್ನು ಕಾಣಿಸಬೇಕು ಎಂದು ಹೇಳುತ್ತಾನೆ. ಆಗ ಶಕುಂತಲಾ ಭೂಮಿಕಾ ಮತ್ತು ಗೌತಮ್ ಇಬ್ಬರನ್ನು ಮನೆಯಿಂದ ಹೊರಗಡೆ ಸ್ವಲ್ಪ ದಿನ ಕಳಿಸಬೇಕು. ನಂತರ ಮಲ್ಲಿ ಮತ್ತು ಅಪೇಕ್ಷಾ ಎರಡೂ ಹಕ್ಕಿಯನ್ನು ಹೊಡೆದು ಹಾಕಬೇಕು. ಭೂಮಿಕಾ ಇದ್ದರೆ, ನನಗೆ ಯಾವ ಕೆಲಸವೂ ಆಗುವುದಿಲ್ಲ ಎಂದು ಶಕುಂತಲಾ ಭೂಮಿಕಾಳಿಗಾಗಿ ಹೊಸ ಪ್ಲಾನ್ ಮಾಡಿದ್ದಾಳೆ.


Click it and Unblock the Notifications











