Amruthadhaare ; ಮನೆಗೆ ಮರಳಿದ ಕಾಣೆಯಾದ ಗೌತಮ್, ಬಿಕ್ಕಿ ಬಿಕ್ಕಿ ಅತ್ತ ಭೂಮಿಕಾ..!
ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯ ಬದುಕಿದ್ದಾಳೆ ಎಂಬ ಸತ್ಯ ತಿಳಿದ ಬಳಿಕ ಶಕುಂತಲಾ ಗಾಬರಿಯಾಗಿದ್ದಾಳೆ. ಹೇಗಾದರೂ ಮಾಡಿ ಅವಳ ಇರುವಿಕೆಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾಳೆ.ಶಕುಂತಲಾ ಭಾಗ್ಯಳನ್ನು ಪತ್ತೆ ಮಾಡಿ ಈ ಲೋಕದಿಂದಲೇ ದೂರ ಕಳಿಸಬೇಕು ಇಲ್ಲದೇ ಹೋದರೆ ತನ್ನ ಉಳಿವಿಗೆ ಕುತ್ತು ಬರುತ್ತದೆ ಎಂದು ಪ್ಲಾನ್ ಮಾಡುತ್ತಿದ್ದಾಳೆ. ಆದರೆ, ಇತ್ತ ಗೌತಮ್ ಮತ್ತು ಭೂಮಿಕಾ ಸೇರಿ ಪ್ರೈವೇಟ್ ಆಗಿ ಯಾರಿಗೂ ತಿಳಿಯದಂತೆಯೇ ತನ್ನ ತಾಯಿ ಹಾಗೂ ಸಹೋದರಿಯನ್ನು ಹುಡುಕಿಸಬೇಕು ಎಂದು ಆಲೋಚಿಸಿದ್ದಾರೆ.
ಅಮ್ಮನ ಕೈ ರುಚಿ ನೆನಪಿಸಿದ ಸಜ್ಜಪ್ಪ
ಆದರೆ, ಇತ್ತ ಸುಧಾ ಹೇಗಾದರೂ ಮಾಡಿ ಗೌತಮ್ ನ ಭೇಟಿ ಮಾಡಬೇಕು ಎಂದು ತನ್ನೆಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾಳೆ. ಹೀಗಾಗಿ ಇದ್ದಕ್ಕಿದ್ದ ಹಾಗೆಯೇ ಸಜ್ಜಪ್ಪ ಮಾಡಿದ್ದು ಆಫೀಸಿನಲ್ಲಿ ಎಲ್ಲರಿಗೆ ಹಂಚಿ ಎಂದು ಆನಂದ್ ಗೆ ನೀಡಿದ್ದಾಳೆ. ಆನಂದ್ ಗೌತಮ್ ಗೆ ಸಜ್ಜಪ್ಪ ಕೊಟ್ಟಿದ್ದಾನೆ. ಸಜ್ಜಪ್ಪವನ್ನು ತಿಂದ ಗೌತಮ್ ತನ್ನ ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದಾನೆ. ಗೆಳೆಯ ಎಮೋಷನಲ್ ಆಗಿದ್ದಕ್ಕೆ ಆನಂದ್ ಕೂಡ ಬೇಸರ ಮಾಡಿಕೊಂಡಿದ್ದಾನೆ. ಈ ನಡುವೆ ಪಾರ್ಥನ ಕಾರು ಬ್ರೇಕ್ ಫೇಲ್ ಆಗಿದೆ. ಇದನ್ನು ಯಾರೋ ಬೇಕಂತಲೇ ಮಾಡಿದ್ದಾರೆ ಎಂಬುದನ್ನು ತಿಳಿದ ಮನೆಯವರು ಶಾಕ್ ಆಗಿದ್ದಾರೆ. ಜೈದೇವ್ ಇದರಲ್ಲಿ ತನ್ನ ಕೈವಾಡ ಇಲ್ಲ ಎಂದು ಸ್ಪಷ್ಟಪಡಿಸಿದ್ದಾನೆ. ಅಪರಿಚಿತ ವ್ಯಕ್ತಿ ಬ್ರೇಕ್ ಫೇಲ್ ಮಾಡಿರುವುದು ಗೊತ್ತಾಗಿದ್ದು, ಪಾರ್ಥ, ಜೈದೇವ್ ಮತ್ತು ಭೂಮಿಕಾ ಗೊಂದಲದಲ್ಲಿದ್ದಾರೆ.

ತಂಗಿಯ ಮನೆಗೆ ಬಂದ ಗೌತಮ್
ಇನ್ನು ಗೌತಮ್ ಮನೆಗೆ ಬರುವ ದಾರಿಯಲ್ಲಿ ಶುಗರ್ ಲೋ ಆಗಿದೆ. ಇದರಿಂದ ಪ್ರಜ್ಞೆ ಇಲ್ಲದೇ ಇದ್ದ ಗೌತಮ್ ನನ್ನು ಸುಧಾ ಮನೆಗೆ ಕರೆದುಕೊಂಡು ಬಂದಿದ್ದಾಳೆ. ನೀರು ಕೊಟ್ಟು, ಅವಲಕ್ಕಿ ತಿನ್ನಿಸಿದ್ದಾಳೆ. ಊಟ ಮಾಡಿಕೊಂಡೇ ಹೋಗಬೇಕು ಎಂದು ಹಠ ಮಾಡಿದ್ದು, ಚಿತ್ರಾನ್ನ ಬಡಿಸಿದ್ದಾಳೆ. ಅಪರಿಚಿತರ ಮನೆಯಲ್ಲಿ ಊಟ ಮಾಡಿದ ಗೌತಮ್ ತನ್ನ ತಾಯಿಯ ಕೈ ರುಚಿ ಎಂದು ಹೊಗಳಿದ್ದಾನೆ. ಎದುರಿಗೇ ತನ್ನ ತಾಯಿ ಭಾಗ್ಯ ಮಲಗಿದ್ದರೂ ಮುಖ ನೋಡದೆಯೇ ಆಶೀರ್ವಾದವನ್ನು ಪಡೆದಿದ್ದಾನೆ. ಇನ್ನು ತಂಗಿ ಮತ್ತು ತಂಗಿಯ ಮಗಳನ್ನು ಮಾತನಾಡಿಸಿ ಖುಷಿ ಪಟ್ಟಿದ್ದಾನೆ. ಹಣ ಕೊಡಲು ಮುಂದಾದಾಗ ಸುಧಾಳ ಗುಣ ಕಂಡು ಗೌತಮ್ ಮನಸ್ಸು ಕರಗಿದೆ.
ಗೌತಮ್ ಗಾಗಿ ಕಣ್ಣೀರಿಟ್ಟ ಭೂಮಿಕಾ
ಸಂಜೆಯಿಮದಲೂ ಗೌತಮ್ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಭೂಮಿಕಾ ಗಾಬರಿಯಾಗಿದ್ದು, ಪಾರ್ಥ, ಜೈದೇವ್, ಆನಂದ್ ಎಲ್ಲರ ನಿದ್ದೆ ಕೆಡಿಸಿದ್ದಾಳೆ. ಫೋನ್ ಸ್ವಿಚ್ ಆಫ್ ಆಗಿದ್ದಕ್ಕೆ ಭೂಮಿಕಾ ಮನದಲ್ಲಿ ಬೇಡದ ಆಲೋಚನೆಗಳು ಸುಳಿಯುತ್ತಿವೆ. ಗೆಳಯನಿಗೆ ಏನಾಯ್ತೋ ಎಂದು ಅಪರ್ಣಾ ಮತ್ತು ಆನಂದ್ ಗಾಬರಿಯಾಗಿದ್ದಾರೆ. ಪಾರ್ಥ ಮತ್ತು ಜೈದೇವ್ ಮನೆಯಲ್ಲಿ ಯಾಕೆ ಹೀಗೆಲ್ಲಾ ನಡೆಯುತ್ತಿದೆ ಎಂದು ಚಿಂತೆ ಮಾಡುತ್ತಾ ಊರೆಲ್ಲಾ ಅಲೆದಾಡಿದ್ದಾರೆ. ಗೌತಮ್ ಮನೆಗೆ ಬರುತ್ತಿದ್ದಂತೆ ಭೂಮಿಕಾ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಏನೂ ಆಗಿಲ್ಲ ಎಂಬುದನ್ನು ಅರಿತು ಮಿಕ್ಕವರೆಲ್ಲಾ ಸಮಾಧಾನ ಮಾಡಿಕೊಂಡಿದ್ದಾರೆ.
ಬದಲಾಗುತ್ತಾ ಸುಧಾಳ ಕಣ್ಣಾಮುಚ್ಚಾಲೆ ಆಟ..?
ಇನ್ನು ಆನಂದ್ ಮನೆಗೆ ಸುಧಾ ಕೆಲಸಕ್ಕೆ ಸೇರಿರುವ ಉದ್ದೇಶವೇ ಬೇರೆ ಇದೆ. ಗೌತಮ್ ಮೇಲಿನ ಧ್ವೇಷವೋ ಅಥವಾ ಹಣದ ಮೇಲಿನ ದುರಾಸೆಯೋ ಗೊತ್ತಿಲ್ಲ. ಆದರೆ, ಆಕಸ್ಮಿಕವಾಗಿ ಗೌತಮ್ ಸಹೋದರಿ ಸುಧಾಳನ್ನು ಭೇಟಿಯಾಗಿದ್ದಾಗಿದೆ. ಈ ಭೇಟಿಯು ಸುಧಾಳ ಆಟವನ್ನು ನಿಲ್ಲಿಸುತ್ತಾ. ಅವಳ ರಹಸ್ಯವನ್ನು ಬಯಲು ಮಾಡುತ್ತಾ ಎಂಬ ಕುತೂಹಲ ಇದೀಗ ಮೂಡಿದೆ.


Click it and Unblock the Notifications











