Amruthadhaare: ತಪ್ಪಿನ ಅರಿವಾಗಿ ಪ್ರೇಮಿಗಳನ್ನು ಒಂದು ಮಾಡುತ್ತಾರಾ..?

By ಪ್ರಿಯಾ ದೊರೆ

ಜೀವನ್ ಹಾಗೂ ಮಹಿಮಾ ಅವರ ಮದುವೆ ಬಗ್ಗೆ ಜೀವನ್ ಮನೆಯವರೊಂದಿಗೆ ಮಾತುಕಥೆ ನಡೆಸಲು ಗೌತಮ್, ಭೂಮಿಕಾ ಮನೆಗೆ ಬಂದಿರುತ್ತಾನೆ. ಆದರೆ ಭೂಮಿಕಾ, ಗೌತಮ್ ದಿವಾನ್‌ನನ್ನು ಕಾರ್ ಆಕ್ಸಿಡೆಂಟ್ ಸಂಬಂಧ ಗಲಾಟೆ ಮಾಡಲು ಮನೆಯವರೆಗೂ ಬಂದಿದ್ದಾನೆ ಎಂದು ತಿಳಿದು ಜಗಳ ಮಾಡುತ್ತಾಳೆ. ಭೂಮಿಕಾ ಮಾತುಗಳನ್ನು ಅರ್ಥ ಮಾಡಿಕೊಳ್ಳದ ಗೌತಮ್ ಕೂಡ ಭೂಮಿಕಾಳನ್ನು ತಪ್ಪಾಗಿ ಅರ್ಥೈಸಿಕೊಂಡಿರುತ್ತಾನೆ.

ಭೂಮಿಕಾ ಮನೆಯವರೇ ಸರಿಯಿಲ್ಲ ಎಂದು ಗೌತಮ್ ಭಾವಿಸಿರುತ್ತಾನೆ. ಅಪಾರ್ಟ್‌ಮೆಂಟ್‌fನಲ್ಲಿ ಎಲ್ಲರೂ ಕೂಡ ಭೂಮಿಕಾ ಜಗಳ ಮಾಡಿದ್ದನ್ನು ನೋಡುತ್ತಾರೆ. ಇದೇ ವಿಚಾರವನ್ನು ಮಾತನಾಡುತ್ತಿರುತ್ತಾರೆ. ಇದರಿಂದ ಮಂದಾಕಿನಿ ಖುಷಿ ಪಡುತ್ತಾಳೆ. ಮೊದಲ ಬಾರಿಗೆ ಮಗಳು ಜಗಳ ಮಾಡಿದಳು ಎಂಬ ವಿಚಾರ ಒಂದಾದರೆ, ಮತ್ತೊಂದು ಆಕ್ಸಿಡೆಂಟ್ ಮಾಡಿ ತಪ್ಪು ಮಾಡಿದವರು ಮನೆಯವರೆಗೂ ಬಂದಿದ್ದರು ಎಂಬುದು ಮತ್ತೊಂದು ಖುಷಿ ಮಂದಾಕಿನಿಯದ್ದು. ಹೀಗಾಗಿ ಭೂಮಿಕಾಳನ್ನು ಸಿಕ್ಕಾಪಟ್ಟೆ ಹೊಗಳುತ್ತಾಳೆ.

Amruthadhaare Serial 09th June episode written update

ಅಷ್ಟರಲ್ಲಿ ಜೀವನ್ ಬಂದು ಗೌತಮ್ ಬಂದಿದ್ದು, ಮಹಿಮಾ ಹಾಗೂ ತನ್ನ ಮದುವೆ ವಿಚಾರವಾಗಿ ಮಾತನಾಡಲು. ಗೌತಮ್ ಮತ್ತು ಮಹಿಮಾ ಇಬ್ಬರು ಅಣ್ಣ ತಂಗಿ ಎಂದು ಹೇಳುತ್ತಾನೆ. ಇದರಿಂದ ಮಂದಾಕಿನಿಗೆ ಕೋಪ ಬರುತ್ತದೆ. ಭೂಮಿಕಾಳಿಂದ ಒಳ್ಳೆಯ ಸಂಬಂಧ ತಪ್ಪಿ ಹೋಯ್ತು ಎಂದು ಬೈಯುತ್ತಾಳೆ. ದೋಸೆ ಮಗುಚಿದಂತೆ ಮಾತನಾಡುತ್ತಾಳೆ. ಇದರಿಂದ ಭೂಮಿಕಾಳಿಗೆ ಬೇಸರದ ಜೊತೆಗೆ ನೋವಾಗುತ್ತದೆ. ಜೀವನ್ ಅಕ್ಕನಿಗೆ ಏನನ್ನೂ ಹೇಳಬೇಡ ಎಂದು ಹೇಳಿ ರೂಮಿಗೆ ಹೋಗುತ್ತಾನೆ.

ಪ್ರೀತಿಯ ಕಥೆ ಕೇಳಿದ ಭೂಮಿಕಾ

ಭೂಮಿಕಾ ತಮ್ಮನ ಭವಿಷ್ಯಕ್ಕೆ ತಾನೇ ಕಲ್ಲು ಹಾಕಿದೆ ಎಂದು ಬೇಸರಗೊಳ್ಳುತ್ತಾಳೆ. ಕೊನೆಗೆ ಜೀವನ್ ರೂಮಿಗೆ ಹೋಗಿ ಅವಳೇ ಮಾತನಾಡುತ್ತಾಳೆ. ಪ್ರೀತಿ ಮಾಡುವಷ್ಟು ದೊಡ್ಡವನಾಗಿದ್ದಾನೆ ನನ್ನ ತಮ್ಮ. ಅದೂ ಕೂಡ ನನ್ನ ಹತ್ರ ಏನೂ ಹೇಳಿಲ್ಲ ಎಂದು ರೇಗಿಸುತ್ತಾಳೆ. ನಾಚಿಕೊಳ್ಳುವ ಜೀವನ್, ತನ್ನ ಪ್ರೀತಿ, ಮಹಿಮಾ ಬಗ್ಗೆ ಹೇಳಿಕೊಳ್ಳುತ್ತಾನೆ. ಆದರೆ, ಮಹಿಮಾ ಕೆಲವೊಮ್ಮೆ ತುಂಬಾ ಹಠ ಮಾಡುತ್ತಾಳೆ. ಆಗ ಅವಳನ್ನು ಮ್ಯಾನೇಜ್ ಮಾಡುವುದೇ ಕಷ್ಟ ಎಂದು ಹೇಳುತ್ತಾನೆ.

Amruthadhaare Serial 09th June episode written update

ಭೂಮಿಕಾ ಅದೇ ಪ್ರೀತಿ, ನಿನಗೆ ಅರ್ಥವಾಗುವುದಿಲ್ಲ. ಯಾವುದೇ ಕಾರಣಕ್ಕೂ ನಿನ್ನ ಪ್ರೀತಿಯನ್ನು ಬಿಟ್ಟು ಕೊಡಬೇಡ ಎಂದು ಹೇಳುತ್ತಾಳೆ. ಆಮೇಲೆ ಮಹಿಮಾ ಅವರ ಅಣ್ಣನ ಜೊತೆಗೆ ಮಾತನಾಡಿ ಈಗ ಬಂದಿರುವ ಸಮಸ್ಯೆ ಅನ್ನು ಬಗೆಹರಿಸುತ್ತೀನಿ ಎಂದು ಹೇಳುತ್ತಾಳೆ.

ಖುಷಿಯಲ್ಲಿರುವ ಮಹಿಮಾ

ಇನ್ನು ಮಹಿಮಾ ಮದುವೆಯ ಬಗ್ಗೆ ಗೌತಮ್ ಬಳಿ ವಿಚಾರಿಸುತ್ತಾಳೆ. ಆದರೆ, ಗೌತಮ್ ಜೀವನ್ ಅವರ ಮನೆಯವರು ಯಾರು ಸರಿಯಿಲ್ಲ ಎಂದು ಹೇಳುತ್ತಾನೆ. ಆಗ ಮಹಿಮಾ ಕೋಪ ಮಾಡಿಕೊಳ್ಳುತ್ತಾಳೆ. ವಿಧಿ ಇಲ್ಲದೇ ಗೌತಮ್ ,ಮಹಿಮಾ ಹಾಗೂ ಜೀವನ್ ಮದುವೆಗೆ ಒಪ್ಪಿಕೊಳ್ಳುತ್ತಾನೆ. ಇದರಿಂದ ಮಹಿಮಾ ತುಂಬಾ ಖುಷಿಯಾಗಿರುತ್ತಾಳೆ. ಮನೆಯಲ್ಲೆಲ್ಲಾ ಕುಣಿದಾಡುತ್ತಿರುತ್ತಾಳೆ. ಮಹಿಮಾಳ ಖುಷಿಯನ್ನು ನೋಡಿ ಗೌತಮ್‌ಗೆ ದಿಕ್ಕು ತೋಚದಂತಾಗುತ್ತದೆ.

ಸತ್ಯ ತಿಳಿದುಕೊಂಡ ಗೌತಮ್

ಗೌತಮ್ ದಿವಾನ್‌ಗೆ ಜೀವನ್ ಮನೆಯವರ ಮೇಲೆ ಕೆಟ್ಟ ಕೋಪವಿರುತ್ತದೆ. ಆಗ ಡ್ರೈವರ್ ಮತ್ತು ಆನಂದ್ ಬಂದು ಸತ್ಯವನ್ನು ಅರ್ಥ ಮಾಡಿಸುತ್ತಾರೆ. ಜೀವನ್ ತಾಯಿ ಕಾರಿಗೆ ಅವತ್ತು ಆಕ್ಸಿಡೆಂಟ್ ಆಗಿದ್ದು. ಅವರನ್ನೇ ಎರಡು ದಿನದಿಂದ ಪೊಲೀಸ್ ಸ್ಟೇಷನ್‌ಗೆ ಅಲೆದಾಡಿಸುತ್ತಿದ್ದೇವೆ. ಹೀಗಿರುವಾಗ ಅವರಿಗೆ ನಿಮ್ಮ ಮೇಲೆ ಕೋಪ ಬರುವುದು ಸಹಜ. ಅದರಲ್ಲೂ ಜೀವನ್ ವಿಚಾರಕ್ಕೆ ನೀನು ಅವರ ಮನೆಗೆ ಹೋಗಿದ್ದೀಯಾ ಎಂಬುದು ಅವರಿಗೆ ತಿಳಿದೇ ಇಲ್ಲ ಎಂದು ಹೇಳುತ್ತಾನೆ.

ಕೊನೆಗೆ ಎಲ್ಲಾ ಅರ್ಥ ಮಾಡಿಕೊಂಡ ಗೌತಮ್, ಭುಮಿಕಾ ಬಗ್ಗೆ ಯೋಚಿಸುತ್ತಾನೆ. ಇತ್ತ ಭೂಮಿಕಾ ಕೂಡ ಗೌತಮ್‌ಗೆ ಫೋನ್ ಮಾಡಬೇಕು ಎಂದು ಯೋಚಿಸುತ್ತಿರುತ್ತಾಳೆ.

More from Filmibeat

English summary
Amruthadhaare Serial 09th June episode written update. here is details about Gautham and Bhoomika comes to know about the truth. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X