Amruthadhaare; ದಿವಾನ್ ಕಂಪನಿಯ ಶೇರ್ ಖರೀದಿಗೆ ಮುಂದಾದ ರಾಜೇಂದ್ರ ಭೂಪತಿ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದರಿಂದ ಭೂಮಿಕಾ ಕೂಡ ಬೇಸರ ಮಾಡಿಕೊಳ್ಳುತ್ತಾಳೆ. ಆದರೆ, ಮನೆಯವರು ಹಳೆಯ ನೆನಪನ್ನು ಮರುಕಳಿಸಲು ಯತ್ನಿಸಿದರೆ, ಭಾಗ್ಯ ಸರಿ ಹೋಗಬಹುದು ಎಂಬುದನ್ನು ತಿಳಿದು ಭೂಮಿಕಾ ಸಮಾಧಾನ ಮಾಡಿಕೊಳ್ಳುತ್ತಾಳೆ. ಇನ್ನು ಭಾಗ್ಯ ಬಗ್ಗೆ ವೈದ್ಯರು ಏನೆಲ್ಲಾ ಹೇಳಿದ್ದಾರೆ ಎಂಬುದನ್ನು ಲಕ್ಷ್ಮೀಕಾಂತ ತಿಳಿದುಕೊಂಡು ಬಂದು ಅಕ್ಕ ಶಕುಂತಲಾಳಿಗೆ ಎಲ್ಲಾ ವರದಿಯನ್ನು ಒಪ್ಪಿಸುತ್ತಾನೆ.

ಮತ್ತೆ ಮಾತ್ರೆ ಬದಲಿಸಿದ ಶಕುಂತಲಾ

ಇನ್ನು ಶಕುಂತಲಾ ಭಾಗ್ಯಳಿಗೆ ನೀಡಿರುವ ಹೊಸ ಮಾತ್ರೆಗಳಿಗೆ ತದ್ವಿರುದ್ಧವಾಗಿ ಕೆಲಸ ಮಾಡುವ ಮಾತ್ರೆಗಳನ್ನು ತರಿಸುತ್ತಾಳೆ. ಅದನ್ನೆಲ್ಲಾ ಬದಲಾಯಿಸಬೇಕು ಎಂದು ಭಾಗ್ಯ ರೂಮಿಗೆ ಬರುತ್ತಾಳೆ. ಲಕ್ಷ್ಮೀಕಾಂತ ಮಾತ್ರೆಯನ್ನು ಬದಲಿಸುವಾಗ ಶಕುಂತಲಾ ಭಾಗ್ಯಳನ್ನು ಮಾತನಾಡಿಸುತ್ತಿರುತ್ತಾಳೆ. ಇದೇ ವೇಳೆಗೆ ಸುಧಾ ಬರುತ್ತಾಳೆ. ಆದರೆ, ಸುಧಾಳಿಗೆ ಅನುಮಾನ ಬಾರದಂತೆ ನಡೆದುಕೊಳ್ಳುತ್ತಾಳೆ. ಬಳಿಕ ಲಕ್ಷ್ಮೀಕಾಂತ ಮತ್ತು ಶಕುಂತಲಾ, ಇನ್ನು ಮುಂದೆ ಮಾತ್ರೆಗಳನ್ನು ನೀಡುವ ನರ್ಸ್ ಗೆ ಹಣ ಕೊಟ್ಟು ಅವರೇ ಬದಲಾಯಿಸುವಂತೆ ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಾರೆ. ಇನ್ನು ಮುಂದೆ ಹೆಚ್ಚಿಗೆ ಭಾಗ್ಯ ಎದುರಿಗೆ ಹೋಗಬಾರದು. ಹೋದರೆ ಅವಳಿಗೆ ಹಳೆಯ ನೆನಪುಗಳು ಬರಬಹುದು ಎಂದು ಯೋಚಿಸುತ್ತಾರೆ.

amruthadhaare-serial-10-february-episode-written-update

ಅಪೇಕ್ಷಾಳ ಮೊಂಡು ಬುದ್ಧಿಗೆ ಬೇಸತ್ತ ಪಾರ್ಥ

ಇನ್ನು ಪಾರ್ಥ ಲಕ್ಷ್ಮೀ ಜೊತೆಗೆ ಆಟವಾಡಿ ಖುಷಿಯಿಂದ ರೂಮಿಗೆ ಬರುತ್ತಾನೆ. ಅಪೇಕ್ಷಾ ಬೇಕಂತಲೇ ಪಾರ್ಥನನ್ನು ಕೆದಕುತ್ತಾಳೆ. ಯಾಕೆ ಇನ್ನು ನನಗೆ ಏನು ಹೇಳಿಲ್ಲ. ಇಷ್ಟೊತ್ತಿಗಾಗಲೇ, ಭೂಮಿಕಾ ಮನೆಗೆ ತಿರುಗಿ ಬಂದಿದ್ದಾಳೆ. ಅವಳನ್ನು ಮಾತನಾಡಿಸಲು ಹೋಗು ಅಂತೆಲ್ಲಾ ಹೇಳಬೇಕಿತ್ತು. ಯಾಕಲೆ ಏನೂ ಹೇಳಿಲ್ಲ ಎಂದು ಪ್ರಶ್ನೆ ಮಾಡುತ್ತಾಳೆ. ಈ ಮಾತುಗಳನ್ನು ಕೇಳಿದ ಪಾರ್ಥನಿಗೆ ಬೇಸರವಾಗುತ್ತದೆ. ಆಗ ಅಪೇಕ್ಷಾ ಮತ್ತೆ ಪಾರ್ಥನನ್ನು ಹೀಯಾಳಿಸುತ್ತಾಳೆ. ಇದರಿಂದ ಕೋಪ ಬರುತ್ತದೆ. ಆದರೆ, ಪಾರ್ಥ ಏನೂ ಮಾತನಾಡಲಾಗದೇ ಸುಮ್ಮನಾಗುತ್ತಾನೆ.

ರಾಜೇಂದ್ರ ಭೂಪತಿ ಮಾಸ್ಟರ್ ಪ್ಲಾನ್

ರಾಜೇಂದ್ರ ಭೂಪತಿ ಗೌತಮ್ ಮೇಲೆ ಹಳೆಯ ಧ್ವೇಷವನ್ನು ಹೊಂದಿದ್ದಾನೆ. ಸೇಡು ತೀರಿಸಿಕೊಳ್ಳಲು ಏನೆಲ್ಲಾ ಮಾಡಬೇಕೋ ಅದಕ್ಕೆ ಎಲ್ಲಾ ರೀತಿಯ ತಯಾರಿಯನ್ನು ಕೂಡ ನಡೆಸಿಕೊಳ್ಳುತ್ತಿದ್ದಾನೆ. ಇದೀಗ ರಾಜೇಂದ್ರ ಭೂಪತಿ ಮಾಸ್ಟರ್ ಪ್ಲಾನ್ ಮಾಡಿದ್ದು, ದಿವಾನ್ ಕಂಪನಿಯ ಶೇರ್ ಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾನೆ. ಎಲ್ಲಾ ಶೇರ್ ಅನ್ನು ಎರಡರಷ್ಟು ಹಣವನ್ನ ಕೊಟ್ಟು ಶೇರ್ ಗಳನ್ನು ಖರೀದಿ ಮಾಡಲು ಯತ್ನಿಸಿದ್ದಾನೆ. ಈ ವಿಚಾರ ತಿಳಿದ ಆನಂದ್ ಗಾಬರಿಯಾಗಿದ್ದಾನೆ. ಗೌತಮ್ ಗೆ ವಿಚಾರವನ್ನು ತಿಳಿಸಿ, ನಾವು ಎಚ್ಚರದಿಂದ ಇರಬೇಕು ಎಂದು ಹೇಳುತ್ತಾನೆ.

ಹೆದರಿದ ಬೋರ್ಡ್ ಮೆಂಬರ್ಸ್

ಗೌತಮ್ ತಮ್ಮ ಕಂಪನಿಯ ಶೇರ್ ನ ಶೇ.51ರಷ್ಟು ತಮ್ಮ ಬಳಿಯೇ ಇದ್ದು, ಇನ್ನುಳಿದ ಶೇ.49ರಷ್ಟು ಶೇರ್ ಮಾತ್ರವೇ ಬೇರೆಯವರ ಬಳಿ ಇದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾನೆ. ಹೀಗಾಗಿ ರಾಜೇಂದ್ರ ಭೂಪತಿ ಏನೇ ಮಾಡಲು ಹೊರಟರೂ ತಮಗೆ ಏನು ಆಗದು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾನೆ. ಆದರೆ, ಬೋರ್ಡ್ ಮೆಂಬರ್ಸ್ ಗಾಬರಿಯಾಗಿದ್ದು, ಅವರಿಗಾಗಿ ಮೀಟಿಂಗ್ ಅರೇಂಜ್ ಮಾಡಲಾಗಿದೆ. ಗೌತಮ್ ಎಲ್ಲರಿಗೂ ಧೈರ್ಯ ತುಂಬಿದ್ದಾನೆ. ತಮ್ಮ ಕುಟುಂಬದಲ್ಲೇ ಶೇ.51ರಷ್ಟು ಶೇರ್ ಇರುವುದು ಗೌತಮ್ ಧೈರ್ಯಕ್ಕೆ ಕಾರಣ. ಆದರೆ, ಜೈದೇವ್ ಈಗ ರಾಜೇಂದ್ರ ಪಕ್ಷವನ್ನು ಸೇರಿಕೊಂಡಿದ್ದಾನೆ. ಜೈದೇವ್ ಏನಾದರೂ ಪಾಲಿನ ಶೇರ್ ಅನ್ನು ಮಾರಿಕೊಂಡಿದ್ದರೆ, ಗೌತಮ್ ಲೆಕ್ಕಾಚಾರ ಉಲ್ಟಾ ಆಗುವುದು ಪಕ್ಕಾ..? ಹಾಗೇನಾದರೂ ಆದರೆ, ಗೌತಮ್ ಬೀದಿಗೆ ಬರುವುದಂತೂ ಪಕ್ಕಾ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X