Amruthadhaare ; ಹಸೆಮಣೆ ಏರಿದ ಗೌತಮ್, ಭೂಮಿಕಾ-ಮಧುರಾ ಇಬ್ಬರಲ್ಲಿ ಕೊನೆಯಲ್ಲಿ ತಾಳಿ ಕಟ್ಟಿದ್ಯಾರಿಗೆ..?
ಅಮೃತಧಾರೆ ಧಾರಾವಾಹಿಯಲ್ಲಿ ಟೀಚರ್ ಆಗಿರುವ ಭೂಮಿಕಾ ಈಗ ದಡ್ಡತನದ ಕೆಲಸವನ್ನು ಮಾಡುತ್ತಿದ್ದಾಳೆ. ಯಾರೋ ಒಬ್ಬರು ವೈದ್ಯರ ಮಾತು ಹಾಗೂ ಜಾತಕದ ನೆಪದಲ್ಲಿ ತನ್ನ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾಳೆ. ಈ ಮನೆಯ ವಂಶ ಬೆಳೆಯಬೇಕು ಎಂದು ಹೇಳಿ ಹಠ ಮಾಡಿ ಗೌತಮ್ ನನ್ನು ಮದುವೆಗೆ ಒಪ್ಪಿಸಿದ್ದಾಳೆ. ಶಕುಂತಲಾ ಭೂಮಿಕಾ ಪರ ಇದ್ದು, ವಿಷ ಕುಡಿಯುವುದಾಗಿ ಹೇಳಿ ತಪ್ಪು ಮಾಡಿದ್ದಾಳೆ. ಗೊಂದಲದಲ್ಲಿ ಸಿಲುಕಿದ ಗೌತಮ್ ಅಮ್ಮ ಮತ್ತು ಹೆಂಡತಿಯ ಮಾತಿಗೆ ತಲೆ ಬಾಗಿ ಇನ್ನೊಂದು ಮದುವೆಯಾಗಲು ಮುಂದಾಗಿದ್ದಾನೆ. ಶಕುಂತಲಾಳಿಗೆ ಮದುವೆ ತಯಾರಿ ನಡೆಸಲು ತಿಳಿಸಿದ್ದಾನೆ.
ಭೂಮಿಕಾ ನಿರ್ಧಾರವನ್ನು ಪ್ರಶ್ನಿಸುವರು ಯಾರು..?
ಇತ್ತ ಗೌತಮ್ ಎರಡನೇ ಮದುವೆಯಾಗಲು ಒಪ್ಪಿರುವುದಕ್ಕೆ ಜೈದೇವ್ ಖುಷಿಯಾಗಿದ್ದಾನೆ. ರಾಜೇಂದ್ರ ಭೂಪತಿ ಇನ್ನೊಂದು ಮದುವೆಯಾಗಲಿ, ಮಗುವೂ ಆಗಲೀ. ನಾನು ಪಟ್ಟ ಕಷ್ಟಗಳನ್ನು ಗೌತಮ್ ಪಡಬೇಕು. ನಾನು ಅನುಭವಿಸಿದ ನೋವನ್ನು ಅವನೂ ಅನುಭವಿಸಬೇಕು ಎಂದಿದ್ದಾನೆ. ಇನ್ನು ಸದಾಶಿವ, ಮಂದಾಕಿನಿ ಈ ಸತ್ಯ ಗೊತ್ತಾಗಿ ಗೋಳಾಡಿದ್ದಾರೆ. ಜೀವನ್ ಮಹಿಮಾ ಜೊತೆಗೆ ಜಗಳ ಮಾಡಿದ್ದಾನೆ. ನಿಮ್ಮ ಅಣ್ಣ ಇಷ್ಟು ಕೆಟ್ಟ ಮನುಷ್ಯ ಎಂಬುದು ಗೊತ್ತಿರಲಿಲ್ಲ. ಅಕ್ಕನಿಗೆ ಮೋಸ ಮಾಡಲು ಮನಸ್ಸಾದರೂ ಹೇಗೆ ಬಂತು ಎಂದು ಪ್ರಶ್ನಿಸಿದ್ದಾನೆ. ಭೂಮಿಕಾಳ ನಿರ್ಧಾರವನ್ನು ಯಾರೂ ನೇರವಾಗಿ ಪ್ರಶ್ನಿಸಲಾಗದೇ, ಒದ್ದಾಡುತ್ತಿದ್ದಾರೆ. ಆದರೆ, ಭೂಮಿಕಾ ತನ್ನ ಪ್ರಾಣವನ್ನೇ ಬಿಟ್ಟು ಹೊರಡಬೇಕಾ ಎಂದು ಆತಂಕ ಪಡುತ್ತಿದ್ದಾಳೆ.

ನಾಳೆ ನಡೆಯುತ್ತಾ ಗೌತಮ್ ಮದುವೆ
ನಾಳೆಯೇ ಗೌತಮ್ ಮದುವೆಯನ್ನು ಮಾಡಲು ಶಕುಂತಲಾ ನಿಶ್ಚಯಿಸಿದ್ದಾಳೆ. ಇದು ಪಾರ್ಥನಲ್ಲೂ ಬೇಸರವನ್ನು ತಂದಿದ್ದು, ಸುಧಾ ಭಾಗ್ಯ ಬಳಿ ನೋವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾಳೆ. ಈ ಮದುವೆಗೆ ಅರ್ಥವೇ ಇಲ್ಲ ಎಂದು ಗೋಳಾಡಿದ್ದಾಳೆ. ಇನ್ನು ಗೌತಮ್ ಮದುವೆಯನ್ನು ಮನೆಯಲ್ಲಿ ಮಾಡಲು ನಿರ್ಧರಿಸಿದ್ದು. ಕುಟುಂಬದವರು ಹೊರತು ಪಡಿಸಿ ಮತ್ಯಾರೂ ಬರಬಾರದು ಎಂದು ನಿರ್ಭಂಧ ಹಾಕಲಾಗಿದೆ. ಮಧುರಾ ತನ್ನ ಮದುವೆಗೆ ಸುಂದರವಾಗಿ ರೆಡಿಯಾಗಿ ಖುಷಿ ಖುಷಿಯಾಗಿ ಹಸೆಮಣೆ ಏರಿದ್ದಾಳೆ. ಮಧುರ ಯಾವ ನಂಬಿಕೆ ಮೇಲೆ ಶಕುಂತಲಾ ಮಾತನ್ನು ನಂಬಿ ಗೌತಮ್ ನನ್ನು ಮದುವೆಯಾಗಲು ಮುಂದಾಗಿದ್ದಾಳೋ ಗೊತ್ತಿಲ್ಲ.
ಭೂಮಿಕಾಳನ್ನು ಬಿಟ್ಟು ಕೊಡುತ್ತಾನಾ ಗೌತಮ್..?
ಇನ್ನು ಗೌತಮ್ ಮಧುರ ಜೊತೆಗೆ ಹಸೆಮಣೆಯನ್ನು ಏರಿದ್ದಾನೆ. ಹಾರವನ್ನು ಕೂಡ ಬದಲಾಯಿಸಿಕೊಂಡಿದ್ದು, ಗೌತಮ್ ಮದುವೆ ಮಂಟಪದಲ್ಲಿ ತಾಳಿಯನ್ನು ಮತ್ತೆ ಭೂಮಿಕಾಳ ಕುತ್ತಿಗೆಗೆ ಕಟ್ಟಿದ್ದಾನೆ. ಇವಳೇ ನನಗೆಲ್ಲಾ. ಈ ಜನ್ಮದಲ್ಲಿ ಮಾತ್ರವಲ್ಲ ಮುಂದಿನ ಜನ್ಮವೂ ಭೂಮಿಕಾಳೇ ನನ್ನ ಹೆಂಡತಿ ಎಂದು ಹೇಳಿದ್ದಾನೆ. ಈ ಮೂಲಕ ಗೌತಮ್ ತನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿರುವ ಭೂಮಿಕಾಳನ್ನು ಬಿಟ್ಟು ಕೊಡದೇ ಅವಳೊಂದಿಗೆ ಜೀವನ ಮುಂದುವರೆಸಲು ಮುಂದಾಗಿದ್ದಾನೆ.
ಭೂಮಿಕಾಳಿಗಾಗಿ ಭಾಗ್ಯ ಸರಿ ಹೋಗುತ್ತಾಳಾ..?
ಇತ್ತ ಭಾಗ್ಯ ಈಗಾಗಲೇ ಭೂಮಿಕಾಳ ಮಾತುಗಳಿಗೆ ಸ್ಪಂದಿಸುತ್ತಿದ್ದಾರೆ. ಭೂಮಿಕಾ ಭಾಗ್ಯ ಬಳಿ ಕುಳಿತು ಮಾತನಾಡುವಾಗ ಸ್ಪರ್ಷಿಸುವ ಮೂಲಕ ಸ್ಪಂದಿಸುತ್ತಿದ್ದಾರೆ. ಅಲ್ಲದೇ, ನೋವು ಹೇಳಿಕೊಂಡಾಗ ಸಂತೈಸಲೂ ಮುಂದಾಗಿದ್ದಾರೆ. ಎದುರಿಗೆ ಇರುವವರು ಮಾತನಾಡುವುದನ್ನು ಅರ್ಥ ಮಾಡಿಕೊಳ್ಳವ ಬಾಗ್ಯ ಮಾತನಾಡಬೇಕಿದೆ ಅಷ್ಟೇ. ಈಗ ಭೂಮಿಕಾ ಬದಲು ಗೌತಮ್ ಇನ್ನೊಂದು ಮದುವೆಯಾಗುತ್ತಿರುವ ವಿಚಾರವನ್ನು ಕೇಳಿ ಭಾಗ್ಯ ಮಾತನಾಡಲು ಮುಂದಾಗುತ್ತಾಳಾ. ಈ ಮದುವೆ ಮಂಟಪದಲ್ಲಿ ಒಂದಕ್ಕಿಂತ ಹೆಚ್ಚು ಆಶ್ಚರ್ಯಕರ ಘಟನೆಗಳು ನಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಇನ್ನು ಗೌತಮ್ ಮಧುರಾಳನ್ನು ಮದುವೆಯಾಗದೇ ಹೋದರೆ ಆಕೆ ಯಾವ ರೀತಿ ನಡೆದುಕೊಳ್ಳಬಹುದು, ಶಕುಂತಲಾ ಏನು ಮಾಡಬಹುದು ಎಂಬ ಕುತೂಹಲವಿದೆ.


Click it and Unblock the Notifications











