Amruthadhaare: ಮತ್ತೆ ಗೌತಮ್ ದಿವಾನ್ ಕಾರಿಗೆ ಗುದ್ದಿದ ಮಂದಾಕಿನಿ

By ಪ್ರಿಯಾ ದೊರೆ

ಭೂಮಿಕಾ ಮನೆಗೆ ಅಪಾರ್ಟ್‌ಮೆಂಟ್‌ನವರೆಲ್ಲಾ ಬರುತ್ತಾರೆ. ಅಪಾರ್ಟ್‌ಮೆಂಟ್ ಸದಸ್ಯರೆಲ್ಲಾ ಸೇರಿ ಪೂಜೆ ಮಾಡುತ್ತಿದ್ದು, ಅದರಲ್ಲಿ ಭೂಮಿಕಾ ಮನೆಯವರು ಕೂಡ ಭಾಗಿಯಾಗಬೇಕು ಎಂಬುದನ್ನು ಹೇಳುತ್ತಾರೆ. ಇದನ್ನು ಕೇಳಿದ ಮಂದಾಕಿನಿಗೆ ಖುಷಿಯಾಗುತ್ತದೆ. ಹಾಗೆ ಮಾತನಾಡುತ್ತಾ ನಿಮ್ಮ ಮನೆಯಲ್ಲಿ ನಿನ್ನೆ ರಾತ್ರಿ ಗಲಾಟೆಯಾಗಿದ್ದೇಕೆ..? ಏನಾದರೂ ಸಮಸ್ಯೆ ಇದ್ದರೆ ಹೇಳಿ ಎಂದು ಕೇಳುತ್ತಾರೆ.

ಅದಕ್ಕೆ ಸದಾಶಿವ ಮತ್ತು ಮಂದಾಕಿನಿ ಹಾಗೇನು ಇಲ್ಲ. ಮನೆ ಎಂದ ಮೇಲೆ ಇದ್ದದ್ದೆ. ಏನಾದರೂ ಇದ್ದರೆ ಹೇಳುತ್ತೀವಿ ಎಂದು ಹೇಳಿ ಗೌತಮ್ ಮನೆಯವರು ಬಂದ ವಿಚಾರವನ್ನು ಮುಚ್ಚಿಡಲು ಯತ್ನಿಸುತ್ತಾರೆ. ಆದರೆ, ಮನೆಗೆ ಬಂದವರೆಲ್ಲಾ ಇಲ್ಲ, ಜೋರಾಗಿ ಜಗಳ ಆಗುತ್ತಿದೆ ಎಂದು ಕೆಳಗಡೆ ಮನೆಯವರು ಹೇಳಿದರು. ಗೌತಮ್ ಮನೆಯವರು ಕೋಪದಲ್ಲಿ ಇದ್ದರಂತೆ. ರಾತ್ರಿ ಮನೆಗೆ ಬಂದು ಮದುವೆ ಬೇಡ ಎಂದು ಹೇಳಿ ಹೋದರಂತೆ ಎಂದು ಹೇಳುತ್ತಾರೆ.

Amruthadhaare Serial 10th July episode written update

ಅವರೆಲ್ಲರ ಮಾತುಗಳಿಂದ ಮಂದಾಕಿನಿ ತಬ್ಬಿಬ್ಬಾದರೂ, ಹಾಗೆಲ್ಲಾ ಏನಿಲ್ಲ ಮದುವೆ ಮಾತುಕತೆ ನಡೆಯುತ್ತಿತ್ತು ಸ್ವಲ್ಪ ಮಿಸ್ ಗೊಂದಲ ಆಗಿತ್ತು. ಅದನ್ನು ಸರಿ ಮಾಡಿಕೊಂಡೆವು ಎಂದು ಹೇಳುತ್ತಾಳೆ. ಗುಂಪಿನಲ್ಲಿದ್ದ ಮಹಿಳೆಯೊಬ್ಬಳು. ಯಾಕೋ ನಿಮ್ಮ ಮನೆಯಲ್ಲಿ ಇಷ್ಟು ದಿನ ಭೂಮಿಕಾ ಮದುವೆ ಆಗುತ್ತಿರಲಿಲ್ಲ. ಈಗ ಜೀವನ್ ಮದುವೆಗೆ ತೊಂದರೆ ಆಗುತ್ತಿದೆ ಎಂದು ಕಾಣಿಸುತ್ತೆ. ಯಾವುದಕ್ಕೂ ನೀವು ಭೂಮಿಕಾ ಜಾತಕವನ್ನ ತೋರಿಸಿ ಪರಿಹಾರ ಮಾಡಿಸಿಕೊಳ್ಳಿ. ಭೂಮಿಕಾ ಜಾತಕ ಸರಿಯಿಲ್ಲ ಎನಿಸುತ್ತೆ ಎಂದು ವ್ಯಂಗ್ಯವಾಗಿ ಮಾತನಾಡುತ್ತಾರೆ.

ಮಂದಾಕಿನಿಗೆ ಕೋಪ ಬಂದು ಕೂಗಾಡುತ್ತಾಳೆ. ಇಷ್ಟು ವರ್ಷ ಈ ಮನೆ ನಡೆದಿರುವುದೇ ಭೂಮಿಕಾಳಿಂದ. ಅವಳು ನಮ್ಮನ್ನೆಲ್ಲಾ ಸಾಕಿದ್ದಾಳೆ. ಅವಳು ಮದುವೆ ಆಗಬೇಕು ಎಂದುಕೊಂಡಿದ್ದರೆ ಯಾವಾಗಲೋ ಆಗುತ್ತಿತ್ತು. ಅವಳ ಜಾತಕದ ಬಗ್ಗೆ ಮಾತನಾಡಬೇಡಿ ಎಂದು ಬೈದು ಕಳಿಸುತ್ತಾಳೆ.

ಕ್ಷಮೆ ಕೇಳಿದ ಜೀವನ್

ಜೀವನ್‌ಗೆ ಈ ಘಟನೆಯನ್ನು ನೋಡಿ ತನ್ನ ಬಗ್ಗೆ ಗಿಲ್ಟ್ ಫೀಲ್ ಆಗುತ್ತದೆ. ತಾನು ಮಾಡಿದ ತಪ್ಪಿನಿಂದ ಮನೆಯವರಿಗೆಲ್ಲಾ ಸಮಸ್ಯೆ ಆಗುತ್ತದೆ ಎಂಬುದನ್ನು ಅರಿತುಕೊಂಡ ಜೀವನ್, ಮಹಿಮಾಳನ್ನು ಭೇಟಿ ಮಾಡಲು ಹೋಗುತ್ತಾನೆ. ಮಹಿಮಾಳಿಗೆ ಜೀವನ್ ಮೇಲೆ ಕೋಪ ಇರುವುದರಿಂದ ಅವನ ಕಡೆಗೆ ತಿರುಗಿಯೂ ನೋಡುವುದಿಲ್ಲ. ಜೀವನ್ ಕ್ಷಮೆ ಕೇಳಿದರೂ ಕ್ಯಾರೆ ಎನ್ನದ ಮಹಿಮಾ ದುರಹಂಕಾರದಿಂದ ನಡೆದುಕೊಳ್ಳುತ್ತಾಳೆ.

Amruthadhaare Serial 10th July episode written update

ಮಹಿಮಾ ಮಂಡಿಯೂರಿ ಕ್ಷಮೆ ಕೇಳಲು ಹೇಳುತ್ತಾಳೆ. ನಂತರ ತನ್ನ ಚಪ್ಪಲಿಗಳನ್ನು ಕ್ಷಮೆ ಕೇಳಿ ಅದರ ಜೊತೆಗೆ ಮದುವೆಯಾಗಲು ಹೇಳುತ್ತಾಳೆ. ಜೀವನ್‌ಗೆ ಇದರಿಂದ ಬೇಸರವಾಗುತ್ತದೆ. ನಾನು ಇಲ್ಲಿಗೆ ಬಂದಿದ್ದೇ ತಪ್ಪು. ನಿನ್ನ ದುರಹಂಕಾರ ಸರಿಯಲ್ಲ ಎಂದು ಬೈದು ವಾಪಸ್ ಬರುತ್ತಾನೆ. ಜೀವನ್ ಹಾಗೆ ಹೊರಟಿದ್ದಕ್ಕೆ ಮಹಿಮಾಳಿಗೆ ಇರಿಟೇಟ್ ಆಗುತ್ತದೆ.

ಮಹಿಮಾ ಈಗ ಗರ್ಭಿಣಿ

ಫ್ಯಾಷನ್ ಶೋ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವ ಮಹಿಮಾ ಮನೆಯಲ್ಲೂ ಫೋನ್ ಮಾತನಾಡುತ್ತಿರುತ್ತಾಳೆ. ಈ ವೇಳೆ ಶಕುಂತಲಾ ಬಂದು ಮಹಿಮಾಳನ್ನು ಮಾತನಾಡಿಸುತ್ತಾಳೆ. ಪದೇ ಪದೇ ಮಹಿಮಾ ವಾಂತಿ ಮಾಡುತ್ತಿರುತ್ತಾಳೆ. ಇದರಿಂದ ಅನುಮಾನಗೊಂಡ ಶಕುಂತಲಾ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸುತ್ತಾಳೆ. ಮಹಿಮಾ ಗರ್ಭಿಣಿಯಾಗಿರುತ್ತಾಳೆ. ಇದನ್ನು ನೋಡಿ ಶಕುಂತಲಾಳಿಗೆ ಶಾಕ್ ಆಗುತ್ತದೆ. ಮುರಿದು ಬಿದ್ದಿರುವ ಮದುವೆಯನ್ನು ಈಗ ಶಕುಂತಲಾ ಮಾಡಿಸುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

ಉಂಗುರ ಹಿಂದಿರುಗಿಸಿದ ಭೂಮಿಕಾ

ಇತ್ತ ಜೀವನ್ ಕ್ಷಮೆ ಕೇಳಿದ ವಿಚಾರವನ್ನು ಭೂಮಿಕಾಳಿಗೆ ಹೇಳುತ್ತಾನೆ. ಇನ್ನು ಭೂಮಿಕಾ, ಮಂದಾಕಿನಿ ಜೊತೆಗೆ ಹೊರಗಡೆ ಹೋಗುವಾಗ ಉಂಗುರವನ್ನು ಗೌತಮ್‌ಗೆ ವಾಪಸ್ ಮಾಡಬೇಕು ಎಂದುಕೊಂಡಿದ್ದೇನೆ. ಒಂದು ಆಕ್ಸಿಡೆಂಟ್ ಏನೇನೋ ಆಗುವಂತೆ ಮಾಡಿತು ಎಂದು ಹೇಳುತ್ತಾಳೆ. ಅದೇ ಸಮಯದಲ್ಲೇ ಮತ್ತೆ ಮಂದಾಕಿನಿ ಕಾರಿಗೆ ಡಿಕ್ಕಿ ಹೊಡೆಯುತ್ತಾಳೆ. ಭೂಮಿಕಾ ಕ್ಷಮೆ ಕೇಳಲು ಹೋದಾಗ ಅದು ಗೌತಮ್‌ ಕಾರ್ ಆಗಿರುತ್ತದೆ.

ಭೂಮಿಕಾ ಕ್ಷಮೆ ಕೇಳಿ, ಉಂಗುರವನ್ನು ವಾಪಸ್ ಮಾಡುತ್ತಾಳೆ. ಆದರೆ, ಗೌತಮ್ ಉಂಗುರವನ್ನು ತನ್ನ ಬೆರಳಿನಿಂದ ಬಿಚ್ಚಲಾಗುವುದಿಲ್ಲ. ಒಟ್ನಲ್ಲಿ 'ಅಮೃತಧಾರೆ' ಕಥೆ ಧಾರಾವಾಹಿ ಕುತೂಹಲಭರಿತವಾಗಿ ಸಾಗುತ್ತಿದೆ. ಮುಂದೆ ಕಥೆಯಲ್ಲಿ ಏನೆಲ್ಲಾ ಟ್ವಿಸ್ಟ್ ಸಿಗುತ್ತೋ ನೋಡಬೇಕು. ಈ ಧಾರಾವಾಹಿಗೆ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದು ಟಿಆರ್‌ಪಿ ಕೂಡ ವಾರದಿಂದ ವಾರಕ್ಕೆ ಏರುತ್ತಾ ಸಾಗಿದೆ.

More from Filmibeat

English summary
Amruthadhaare Serial 10th July episode written update. here is details about Mandakini again crashes the car into Gautham's car. Bhumika has apologized for this. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X