Amruthadhaare: ಜಸ್ಟ್ ಮಿಸ್ ಆದ ಜಯದೇವ: ಎಲ್ಲಾ ಗೊತ್ತಿದ್ದೂ ಸುಮ್ಮನಿರುವ ಆನಂದ್

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಆಫೀಸ್‌ನಲ್ಲಿ ಜಯದೇವ ತನಗೆ ಬೇಕಾದಾಗೆಲ್ಲಾ ಹಣವನ್ನು ಉಪಯೋಗಿಸಿಕೊಂಡಿದ್ದಾನೆ. ಈಗ ಹಣ ಮಿಸ್ ಆಗಿರುವುದು ಪತ್ತೆಯಾಗಿದೆ.

ಹೀಗಾಗಿ ಗೌತಮ್ ಮೀಟಿಂಗ್ ಕರೆದು ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾನೆ. 25 ಕೋಟಿ ರೂ. ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅದು ಯಾರೆಂದು ನೀವಾಗಿಯೇ ಬಂದು ಒಪ್ಪಿಕೊಳ್ಳಿ ಎಂದು ಹೇಳುತ್ತಾನೆ.

ಜಯದೇವ ತನಗೇನೂ ಗೊತ್ತೇ ಇಲ್ಲ ಅನ್ನೋ ಹಾಗೆ ನಟಿಸುತ್ತಾನೆ. ಕಳ್ಳನನ್ನು ತಾನೇ ಹುಡುಕುವುದಾಗಿ ಗೌತಮ್‌ಗೆ ಭರವಸೆ ಕೊಡುತ್ತಾನೆ. ಆದರೆ, ಗೆಳೆಯಾ ಆನಂದ್‌ಗೆ ಎಲ್ಲವೂ ಗೊತ್ತಿರುತ್ತದೆ.

amruthadhaare-serial

ಜೆಡೆ ಕ್ಯಾಬಿನ್‌ಗೆ ಬಂದ ಗೌತಮ್

ಜೆಡೆನೇ ಹಣವನ್ನು ತೆಗೆದುಕೊಂಡಿರುವುದು ಮೊದಲಿನಿಂದಲೂ ಆನಂದ್‌ಗೆ ಗೊತ್ತಿರುತ್ತದೆ. ಆದರೆ, ಸಾಕ್ಷಿ ಸಮೇತ ಪ್ರೂವ್ ಮಾಡಲು ಆಗಿರುವುದಿಲ್ಲ. ಅಲ್ಲದೇ, ಗೌತಮ್‌ಗೆ ಸತ್ಯ ಹೇಳಿದರೆ, ಹೇಗೆ ರಿಯಾಕ್ಟ್ ಮಾಡುತ್ತಾನೆ ಎಂಬುದು ಕೂಡ ಆನಂದ್‌ಗೆ ಗೊತ್ತಿರುವುದಿಲ್ಲ. ಹೀಗಾಗಿ ಸುಮ್ಮನಿರುತ್ತಾನೆ. ಆದರೆ, ಈಗ ಆಫಿಸ್‌ನಲ್ಲಿ ಹಣ ಪೋಲಾಗುತ್ತಿರುವುದು ಗೊತ್ತಾಗಿದ್ದು, ಅದು ಯಾರಿಂದ ಅನ್ನುವುದು ಮಾತ್ರ ಗೊತ್ತಾಗಿಲ್ಲ.

ಸಾಕ್ಷಿ ನಾಶ ಮಾಡುತ್ತಿರುವ ಜೆಡೆ

ಸಿಸ್ಟಮ್‌ನಲ್ಲಿದ್ದ ಡಾಕ್ಯುಮೆಂಟ್ಸ್ ಅನ್ನು ಜೆಡೆ ಹ್ಯಾಕರ್ಸ್ ಅನ್ನು ಬಳಸಿಕೊಂಡು ಹಾಳು ಮಾಡಿದ್ದಾನೆ. ಈಗ ಲಾಗ್ ಬುಕ್ ಅನ್ನು ಕೂಡ ತರಿಸಿಕೊಂಡಿದ್ದಾನೆ. ಅದರಲ್ಲಿ ಇರುವ ಎಲ್ಲಾ ದಾಖಲೆಯನ್ನು ಚೂರು ಚೂರು ಮಾಡಿದ್ದಾನೆ. ಇದೇ ಸಮಯಕ್ಕೆ ಗೌತಮ್ ಮತ್ತು ಆನಂದ್, ಜೆಡೆ ಕ್ಯಾಬಿನ್‌ಗೆ ಬರುತ್ತಾರೆ.

amruthadhaare-serial

ಸ್ವಲ್ಪದರಲ್ಲೇ ಎಸ್ಕೇಪ್ ಆದ ಜೆಡೆ

ಕ್ಯಾಬಿನ್‌ನಲ್ಲಿ ಲಾಗ್ ಬುಕ್ ಅನ್ನು ಹರಿದು ಹಾಕಿರುತ್ತಾನೆ. ಇದನ್ನು ನೋಡಿ ಗೌತಮ್‌ಗೆ ಕೋಪ ಬರುತ್ತದೆ. ಆತ ಪ್ರಶ್ನಿಸುವ ವೇಳೆಗೆ ಜೆಡೆ ಬಂದು ಏನಾಯ್ತು ಎಂದು ಕೇಳುತ್ತಾನೆ. ಇನ್ನೆಲ್ಲಿ ತನ್ನ ಹೆಸರನ್ನು ಹೇಳಿ ಬಿಡುತ್ತಾನೋ ಅನ್ನೋ ಆತಂಕದಲ್ಲಿ ಜೆಡೆ ಆತನನ್ನು ಹೊಡೆಯುತ್ತಾನೆ. ನಮ್ಮ ಜೊತೆಗೆ ಇದ್ದುಕೊಂಡು ನಮಗೆ ಮೋಸ ಮಾಡುತ್ತೀಯ. ನಿನ್ನಂತಹವರು ನಮ್ಮ ಆಫಿಸ್‌ನಲ್ಲಿ ಕೆಲಸ ಮಾಡುವುದು ಸರಿ ಇಲ್ಲ ಎಂದು ಬೈದು ಆತನನ್ನು ಹೊರಗೆ ಕಳಿಸುತ್ತಾನೆ. ಆದರೆ, ಆನಂದ್‌ಗೆ ಜೆಡೆ ಮಾಡುತ್ತಿರುವುದು ನಾಟಕ ಎಂಬುದು ಸ್ಪಷ್ಟವಾಗುತ್ತದೆ.

ಮಗನನ್ನು ತರಾಟೆಗೆ ತೆಗೆದುಕೊಂಡ ಶಕುಂತಲಾ

ಇನ್ನು ಶಕುಂತಲಾ, ಭೂಮಿಕಾಳನ್ನು ಹೇಗಿದ್ದೀಯಾ? ಮನೆ ಎಲ್ಲಾ ಅಡ್ಜಸ್ಟ್ ಆಯ್ತಾ ಎಂದು ಕೇಳುತ್ತಾಳೆ. ಹಾಗೆ ಗೌತಮ್ ನಿನ್ನ ಜೊತೆಗೆ ಅರಾಮಾಗಿದ್ದಾನಾ? ಎಂದು ವಿಚಾರಿಸುತ್ತಾಳೆ. ಆಗ ಭೂಮಿಕಾ ಆಫೀಸ್‌ನಲ್ಲಿ ಹಣ ಮಿಸ್ ಆಗಿರುವುದರ ಬಗ್ಗೆ ಹೇಳುತ್ತಾಳೆ. ಇದನ್ನು ಕೇಳಿದ ಶಕುಂತಲಾಗೆ ಇದೆಲ್ಲಾ ಜಯದೇವನದ್ದೇ ಕೆಲಸ ಎಂದು ಗೊತ್ತಾಗುತ್ತದೆ. ಸೀದಾ ಮಗನ ಬಳಿ ಹೋಗಿ ಜಗಳ ಮಾಡುತ್ತಾಳೆ. ನಿನ್ನಿಂದ ಯಾವುದೂ ಸರಿಯಾಗೊಲ್ಲ. ಅಷ್ಟೊಂದು ದುಡ್ಡು ಯಾಕೆ ಬೇಕಿತ್ತು? ಎಂದು ಕೇಳುತ್ತಾಳೆ. ಆಗ ಜಯದೇವ ತನಗೂ ಸ್ವಂತ ಬಿಸಿನೆಸ್ ಮಾಡಬೇಕು. ಎಲ್ಲಾದಕ್ಕೂ ನಾನು ಹಣ ಬೇಡಿಕೊಳ್ಳಬೇಕು. ಅದಕ್ಕೆ ಬಿಸಿನೆಸ್‌ಗೆ ಹಣ ತೆಗೆದುಕೊಂಡಿದ್ದೇನೆ ಎಂದು ಹೇಳುತ್ತಾನೆ.

ಗೌತಮ್‌ಗೆ ಹೊಸ ಟಾಸ್ಕ್ ಕೊಟ್ಟ ಅಜ್ಜಿ

ಇನ್ನು ಅಜ್ಜಿ, ಗೌತಮ್ ಆಫೀಸಿನಿಂದ ಬರುತ್ತಿದ್ದಂತೆ ತಡೆದು ಮಾತನಾಡಿಸುತ್ತಾರೆ. ಮದುವೆಯಾದಾಗಿನಿಂದಲೂ ಹೆಂಡತಿಯ ಜೊತೆಗೆ ಕಾಲವೇ ಕಳೆದಿಲ್ಲ. ಅಮೇರಿಕಾದಿಂದ ಬರುವಾಗ ಭೂಮಿಕಾಗೆ ಗಿಫ್ಟ್ ತಂದಿದ್ದೇನು..? ಅದನ್ನು ಮೊದಲು ತಂದು ಕೊಡು. ನಾಳೆ ಆಫೀಸ್‌ಗೆ ರಜೆ ಹಾಕಿ ಭೂಮಿಕಾಳನ್ನು ಆಚೆ ಕರೆದುಕೊಂಡು ಹೋಗು ಎಂದು ಹೇಳುತ್ತಾರೆ. ಈ ಹೊಸ ಟಾಸ್ಕ್‌ ಬಗ್ಗೆ ಕೇಳಿ ಗೌತಮ್‌ಗೆ ಗಾಬರಿಯಾಗುತ್ತದೆ. ಆದರೂ ಬೇರೆ ದಾರಿ ಇಲ್ಲದೇ ಟಾಸ್ಕ್ ಕಂಪ್ಲೀಟ್ ಮಾಡಲು ಒಪ್ಪಿಕೊಂಡಿದ್ದಾನೆ.

More from Filmibeat

English summary
Amruthadhaare Kannada Serial today Episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X