Amruthadhaare ; ಶಕುಂತಲಾ-ಭಾಗ್ಯ ರಹಸ್ಯ ಭೂಮಿಕಾಗೆ ಗೊತ್ತಾಗುತ್ತಾ ? ಮತ್ತೆ ದಾರಿ ತಪ್ಪಿದ ಜೈದೇವ್ !
ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾ ಮತ್ತು ಲಕ್ಷ್ಮೀಕಾಂತನಿಗೆ ಭಾಗ್ಯಳದ್ದೇ ಚಿಂತೆಯಾಗಿದೆ. ಭಾಗ್ಯಳ ಮನದಲ್ಲಿ ಶಕುಂತಲಾ ಗುರುತು ಬಹಳ ಗಟ್ಟಿಯಾಗಿದೆ. ಅದಕ್ಕಾಗಿಯೇ ತನ್ನನ್ನು ನೋಡಿದಾಗ ಮಾತ್ರವೇ ಭಾಗ್ಯ ಹೆದರುತ್ತಾಳೆ. ಆದರೆ, ಈ ಬಗ್ಗೆ ಇನ್ನೂ ಯಾರಿಗೂ ಅನುಮಾನ ಬಂದಿಲ್ಲ. ಅನುಮಾನ ಮುಂದೆಯೂ ಬರಬಾರದು ಎಂದು ಶಕುಂತಲಾ ಚಿಂತಿಸುತ್ತಿದ್ದಾಳೆ. ಭಾಗ್ಯ ಹುಷಾರಾಗಬಾರದು. ಭಾಗ್ಯ ಸರಿ ಹೋದರೆ, ತನಗೆ ಸಂಕಷ್ಟ ಎದುರಾಗುತ್ತದೆ ಎಂದು ಶಕುಂತಲಾ ಯೋಚಿಸುತ್ತಿದ್ದು, ಮುಂದೆ ಯಾವೆಲ್ಲಾ ಪ್ಲಾನ್ ಮಾಡುತ್ತಾರೋ ಕಾದು ನೋಡಬೇಕಿದೆ.
ಭಾಗ್ಯ ವರ್ತನೆ ಬಗ್ಗೆ ಭೂಮಿಕಾಳಲ್ಲಿ ಅನುಮಾನ
ಆದರೆ, ಭಾಗ್ಯ ಹೆದರಿಕೊಂಡ ರೀತಿಯನ್ನು ಕಂಡು ಭೂಮಿಕಾಳಿಗೆ ಅನುಮಾನ ಬಂದಿದೆ. ಶಕುಂತಲಾ ಮೇಲೆ ಅನುಮಾನ ಇಲ್ಲದಿದ್ದರೂ ಕೂಡ, ಹೀಗೆ ಹೆದರಲು ಯಾವುದೋ ಬಲವಾದ ಕಾರಣವಿದೆ ಎಂಬುದನ್ನು ನಂಬಿದ್ದಾಳೆ. ಹೀಗಾಗಿ ರೂಮಿಗೆ ಬಂದು ಸುಧಾ ಬಳಿ ವಿಚಾರಿಸುತ್ತಾಳೆ. ಅಮ್ಮ ಯಾವಾಗೆಲ್ಲಾ ಹೀಗೆ ಆಡುತ್ತಾರೆ. ಯಾರನ್ನಾದರೂ ನೋಡಿದರೆ ಅವರಿಗೆ ಭಯವಾಗುತ್ತದೆಯಾ ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ, ಸುಧಾ ಅದನ್ನೆಲ್ಲಾ ಗಮನಿಸಿಲ್ಲ ಎಂದು ಹೇಳಿದಾಗ, ಭೂಮಿಕಾ ಸುಮ್ಮನಾಗುತ್ತಾಳೆ. ಆದರೆ, ಮುಂದೊಂದು ದಿನ ಶಕುಂತಲಾಳನ್ನು ನೋಡಿದರೆ ಭಾಗ್ಯಳಿಗೆ ಭಯವಾಗುತ್ತದೆ ಎಂಬ ಸತ್ಯ ಗೊತ್ತಾಗುವುದಂತೂ ಪಕ್ಕಾ.

ಸೊಸೆಯನ್ನು ರೆಡಿ ಮಾಡಿದ ಗೌತಮ್
ಗೌತಮ್ ಗಂತೂ ತನ್ನ ಕುಟುಂಬ ವಾಪಸ್ ಸಿಕ್ಕಿರುವುದಕ್ಕೆ ಆಫೀಸಿಗೆ ರಜೆ ಹಾಕಿ, ಖುಷಿಯಲ್ಲಿ ತೇಲಾಡುತ್ತಿದ್ದಾನೆ. ತಿಂಡಿ ತಾನೇ ರೆಡಿ ಮಾಡಿದ ಗೌತಮ್ ಅಮ್ಮನಿಗೆ ತಿನ್ನಿಸಿ ಖುಷಿ ಪಟ್ಟ. ಈಗ ಸೊಸೆಯ ಜೊತೆಗೆ ಆಟವಾಡುತ್ತಿದ್ದಾನೆ. ತಂಗಿ ಸುಧಾಳ ಮಗಳೆಂದರೆ ಗೌತಮ್ ಗೆ ಬಹಳ ಇಷ್ಟ. ಆ ಮಗುವಿನ ಜೊತೆಗೆ ಆಟವಾಡುವುದು. ಮಗುವಿಗೆ ಕಥೆ ಹೇಳುವುದನ್ನು ಮಾಡಿದ್ದು, ಈಗ ಶಾಲೆಗೂ ಬಟ್ಟೆಯನ್ನು ಐರನ್ ಮಾಡಿ ಮಗುವನ್ನು ರೆಡಿ ಮಾಡಿದ್ದಾನೆ. ಈ ವೇಳೆ ಟೈ ಐರನ್ ಮಾಡುವಾಗ ಹಾಳಾಗಿದ್ದಕ್ಕೆ ಹೊಸ ಟೈ ತರಿಸಿ ರೆಡಿ ಮಾಡಿದ್ದಾನೆ. ಗೌತಮ್ ನ ಸಂಭ್ರಮವನ್ನು ಕಂಡು ಸುಧಾ ಮತ್ತು ಭೂಮಿಕಾ ಕೂಡ ಬಹಳ ಖುಷಿ ಪಡುತ್ತಿದ್ದಾರೆ.
ಮಕ್ಕಳ ತರಲೆ ಮಾತಿಗೆ ಸಿಟ್ಟಾದ ಅಪರ್ಣಾ
ಇತ್ತ ಗೌತಮ್ ಆಫೀಸಿಗೆ ಹೋಗದೆಯೇ ಮನೆಯಲ್ಲೇ ಇರುವುದರಿಂದ ಆನಂದ್ ಗೆ ಕೆಲಸ ಹೆಚ್ಚಾಗಿದೆ. ಇನ್ನು ಮನೆಯಲ್ಲಿ ಮಕ್ಕಳು ರಗಳೆ ಮಾಡುತ್ತಿದ್ದು ಒಂದೇ ಗೊಂಬೆಗಾಗಿ ಇಬ್ಬರೂ ಕಿತ್ತಾಡುತ್ತಿರುತ್ತಾರೆ. ಆಗ ಆನಂದ್ ಸಮಾಧಾನ ಮಾಡಲು ಪ್ರಯತ್ನಿಸಿದಾಗ ಅವರ ಮಗ ನನಗೆ ಹೊಸ ತಂಗಿ ಬೇಕು ಎಂದು ಕೇಳುತ್ತಾನೆ. ಈ ಮಾತನ್ನು ಕೇಳಿ ಆನಂದ್ ಖುಷಿ ಪಡುತ್ತಾನೆ. ಅಪರ್ಣಾ ಬಳಿ ಈ ಮಾತನ್ನು ಹೇಳಿದಾಗ ಅಪರ್ಣಾ ಬೈಯುತ್ತಾಳೆ. ಮಕ್ಕಳ ತರಲೆ ಮಾತಿಗೆ ಆನಂದ್ ಮತ್ತು ಅಪರ್ಣಾ ಪೇಚಿಗೆ ಸಿಲುಕುತ್ತಾರೆ.
ದಾರಿ ತಪ್ಪಿದ ಜೈದೇವ್ ಗೆ ಪಾಠ ಕಲಿಸುತ್ತಾಳಾ ಮಲ್ಲಿ..?
ಇದರೊಂದಿಗೆ ಜೈದೇವ್ ಕಡೆಗೆ ಮನೆಯವರು ಗಮನ ಕೊಡುವುದನ್ನು ನಿಲ್ಲಿಸಿದ್ದಾರೆ. ಇದನ್ನೇ ಪ್ಲಸ್ ಪಾಯಿಂಟ್ ಆಗಿ ತೆಗೆದುಕೊಂಡಿರುವ ಜೈದೇವ್ ಪದೇ ಪದೇ ದಿಯಾಳನ್ನು ಭೇಟಿ ಮಾಡುತ್ತಿದ್ದಾನೆ. ಪ್ರತಿ ದಿನವೂ ಜೈದೇವ್ ದಿಯಾ ಮನೆಗೆ ಹೋಗುತ್ತಿದ್ದಾನೆ. ಆಫಿಸಿನಲ್ಲಿ ಕೆಲಸ ಜಾಸ್ತಿ ಎಂಬ ಕಾರಣವನ್ನು ಕೊಟ್ಟು ದಿಯಾ ಜೊತೆಗೆ ರಾತ್ರಿ ಪೂರ ಕಳೆಯುತ್ತಿದ್ದಾನೆ. ಪ್ರತಿ ನಿತ್ಯದಂತೆ ಮಲ್ಲಿ ನಿತ್ಯ ರಾತ್ರಿ ಫೋನ್ ಮಾಡುತ್ತಿದ್ದಾಳೆ. ಇದರಿಂದ ದಿಯಾಳಿಗೆ ಕೋಪ ಬರುತ್ತಿದ್ದು, ಈಗ ಜೈದೇವ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಅನುಮಾನಗೊಂಡು ಮಲ್ಲಿ ಸತ್ಯ ಅರಿಯುತ್ತಾಳಾ..? ಜೈದೇವ್ ಗೆ ಪಾಠ ಕಲಿಸುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











