Amruthadhaare ; ಪಾರ್ಥನ ಪ್ರೀತಿ ಒಪ್ಪಲು ಸದಾಶಿವ ಹಾಕಿದ ಕಂಡೀಷನ್ ಏನು..?
ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥ ಮತ್ತು ಅಪೇಕ್ಷಾ ಭೇಟಿ ಮಾಡಿದ್ದು, ಇಬ್ಬರೂ ಈಗ ಸದಾಶಿವನ ಬಳಿ ಮಾತನಾಡಿ ತಮ್ಮ ಪ್ರೀತಿ ಬಗ್ಗೆ ಹೇಳಬೇಕು ಎಂದು ನಿರ್ಧಾರ ಮಾಡಿದ್ದಾರೆ.ಅಪೇಕ್ಷಾಳಿಗೆ ಮನೆಯಲ್ಲಿ ಹೇಗೆ ಈ ವಿಚಾರವನ್ನು ಹೇಳುವುದು. ತನ್ನ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಚಿಂತೆ ಕಾಡುತ್ತಿದೆ. ಆದರೆ, ಏನೇ ಆದರೂ ಕೂಡ ಪಾರ್ಥನನ್ನು ಬಿಟ್ಟು ಕೊಡಲು ಅಪೇಕ್ಷಾ ಸಿದ್ಧವಾಗಿಲ್ಲ. ಅಪೇಕ್ಷಾ ಈಗ ಧೈರ್ಯ ಮಾಡಿ ಅಪ್ಪನ ಬಳಿ ಮಾತನಾಡಲು ಹೋಗಿದ್ದಾಳೆ. ಸದಾಶಿವ ಒಬ್ಬನೇ ರೂಮಿನಲ್ಲಿದ್ದಾಗ ಅಪ್ಪಿ ಹೋಗಿ ಪ್ರೀತಿ ಬಗ್ಗೆ ಮಾತನಾಡಿದ್ದಾಳೆ.
ಅಪೇಕ್ಷಾ ಮಾತನ್ನು ಕೇಳದ ಸದಾಶಿವ
ನಾನು ಮತ್ತು ಪಾರ್ಥ ಮೊದಲಿನಿಂದಲೂ ಪ್ರೀತಿ ಮಾಡುತ್ತಿದ್ದೇವೆ. ನಿಮಗೆಲ್ಲಾ ಹೇಳಬೇಕು ಎನ್ನುವಷ್ಟರಲ್ಲಿ ಜೈದೇವ್ ಮದುವೆ ವಿಚಾರ ಬಂತು. ಆಗ ನಾನು ಪಾರ್ಥನ ಜೊತೆಗೆ ಮದುವೆ ಎಂದುಕೊಂಡಿದ್ದೆ. ಆದರೆ, ಜೈದೇವ್ ಹುಡುಗ ಎಂದು ಗೊತ್ತಾಗುವುದರೊಳಗೆ ಕಾಲ ಮಿಂಚಿ ಹೋಗಿತ್ತು. ಆ ಮದುವೆಗೆ ನಾನು ಒಪ್ಪಿಕೊಳ್ಳಲೇ ಬೇಕಾಯ್ತು. ಆದರೆ, ಮದುವೆ ನಿಂತ ಮೇಲೆ ನಾನು ಪಾರ್ಥ ಮತ್ತೆ ಒಂದಾದೆವು. ನಿಮಗೆ ಈ ವಿಚಾರವನ್ನು ತಿಳಿಸುವ ಮುನ್ನವೇ ಹೀಗೆಲ್ಲಾ ಆಗಿದೆ. ನನ್ನನ್ನು ಕ್ಷಮಿಸಿ. ನಮ್ಮಿಬ್ಬರ ಪ್ರೀತಿಯನ್ನು ಒಪ್ಪಿಕೊಳ್ಳಿ ಎಂದು ಕೇಳುತ್ತಾಳೆ. ಆದರೆ, ಸದಾಶಿವ ಖಡಾಖಂಡಿತವಾಗಿ ನಿರಾಕರಿಸುತ್ತಾನೆ. ನನಗೆ ಪಾರ್ಥನ ಮೇಲೆ ಸ್ವಲ್ಪವೂ ನಂಬಿಕೆ ಇಲ್ಲ. ನನಗೆ ಈ ಮದುವೆ ಇಷ್ಟವಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳುತ್ತಾಳೆ.

ಗೌತಮ್ ಗೊರಕೆ ಮಿಸ್ ಮಾಡಿಕೊಂಡ ಭೂಮಿಕಾ
ಗೌತಮ್ ಮತ್ತು ಆನಂದ್ ಮನೆಯಲ್ಲೇ ಪಾರ್ಟಿ ಮಾಡುತ್ತಾರೆ. ಈ ವಿಚಾರ ತಿಳಿದ ಅಪರ್ಣಾ ಆನಂದ್ ಗೆ ವಾರ್ನಿಂಗ್ ಕೊಡುತ್ತಾಳೆ. ಅದೇ ಭೂಮಿಕಾ ಗೌತಮ್ ಗಾಗಿ ಸೈಡ್ ಡಿಶ್ ಕಳಿಸುತ್ತಾಳೆ. ಭೂಮಿಕಾ ಮತ್ತು ಗೌತಮ್ ನಡುವಿನ ಸಾಮರಸ್ಯವನ್ನು ನೋಡಿ ಆನಂದ್ ಖುಷಿ ಪಡುತ್ತಾನೆ. ಇನ್ನು ಭೂಮಿಕಾಳಿಗೆ ಗೌತಮ್ ಇಲ್ಲದೇ ನಿದ್ದೆಯೇ ಬರುವುದಿಲ್ಲ. ಹಾಗಾಗಿ ಆನಂದ್ ಗೆ ಫೋನ್ ಮಾಡಿ, ಗೊರಕೆ ಶಬ್ಧ ಕೇಳಿಸುವಂತೆ ಕೇಳುತ್ತಾಳೆ. ಆನಂದ್ ಇವರಿಬ್ಬರ ಒಡನಾಟಕ್ಕೆ ಮನಸೋಲುತ್ತಾನೆ.
ಪಾರ್ಥನಿಗೆ ಕಂಡೀಷನ್ ಹಾಕಿದ ಮಾವ
ಇದೇ ಸಮಯಕ್ಕೆ ಸರಿಯಾಗಿ ಪಾರ್ಥ ಸದಾಶಿವನ ಜೊತೆಗೆ ಮಾತನಾಡಲು ಮುಂದಾಗಿದ್ದಾನೆ. ಹಾಗಾಗಿ ಅಪಾರ್ಟ್ ಮೆಂಟ್ ಬಳಿ ಬಂದು ಫೋನ್ ಮಾಡಿದ್ದಾನೆ. ಸದಾಶಿವ ಬೆಳಗ್ಗೆ ಮಾತನಾಡುವುದಾಗಿ ಹೇಳಿ ಕಳಿಸುತ್ತಾನೆ. ಬೆಳಗ್ಗೆ ಪಾರ್ಥನನ್ನು ಭೇಟಿ ಮಾಡಿ, ಪ್ರೀತಿಸಲು ನಿನಗೆ ಏನು ಹಕ್ಕಿದೆ ಎಂದು ಕೇಳುತ್ತಾನೆ. ಅಲ್ಲದೇ, ನಾಲ್ಕು ಹುಡುಗರನ್ನು ನಿನಗೆ ಕೊಡುತ್ತೇನೆ ಅವರಿಗೆ ಜವಾಬ್ದಾರಿ ಬರುವಂತೆ ಎರಡು ವಾರದಲ್ಲಿ ಬುದ್ಧಿ ಕಲಿಸಬೇಕು ಎನ್ನುತ್ತಾನೆ. ಪಾರ್ಥ ಮಾವನ ಚಾಲೆಂಜ್ ಗೆಲ್ಲುತ್ತಾನಾ..?

ಸೊಸೆ ಬಳಿ ಹಣಕ್ಕೆ ಬೇಡಿಕೆ ಇಟ್ಟ ಅತ್ತೆ
ಇನ್ನು ಗೌತಮ್ ದಿವಾನ್ ರಾತ್ರಿ ನಿದ್ದೆ ಮಾಡುವಾಗಲೂ, ಬೆಳಗ್ಗೆ ಎದ್ದಾಗಲೂ ಭೂಮಿಕಾಳನ್ನು ಬಹಳ ಮಿಸ್ ಮಾಡಿಕೊಳ್ಳುತ್ತಾನೆ. ಬೆಳಗ್ಗೆ ಬೆಳಗ್ಗೆ ಭೂಮಿಕಾಳಿಗೆ ಫೋನ್ ಮಾಡಿ ಮಾತನಾಡುತ್ತಾನೆ. ಆದರೆ, ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಲು ಕೊಂಚ ಮುಜುಗರ ಪಟ್ಟುಕೊಳ್ಳುತ್ತಾನೆ. ಕ್ಲಬ್ ನಲ್ಲಿ ಶಕುಂತಲಾ ಆಟವಾಡುವಾಗ ಇಪ್ಪತ್ತು ಲಕ್ಷ ಹಣವನ್ನು ಬೆಟ್ಟಿಂಗ್ ಕಟ್ಟಿ ಸೋತಿದ್ದಾಳೆ. ಈಗ ಕ್ಲಬ್ ನವರಿಗೆ ಈ ಹಣವನ್ನು ಶಕುಂತಲಾ ಕೊಡಬೇಕಿದೆ. ಆದರೆ, ತನ್ನ ಬಳಿ ತಿಜೋರಿ ಕೀ ಇಲ್ಲದ ಕಾರಣ ಭೂಮಿಕಾಳಿಗೆ ಕಾಲ್ ಮಾಡಿ ಕೇಳಿದ್ದಾಳೆ. ಭೂಮಿಕಾ ಎಷ್ಟು ಹಣ ಎಂದು ಕೇಳದೇ ಕೊಡುವುದಾಗಿ ಹೇಳುತ್ತಾಳೆ. ಆದರೆ ಮುಂದೇನಾಗುತ್ತದೆಯೋ ಗೊತ್ತಿಲ್ಲ.


Click it and Unblock the Notifications











