Amruthadhaare ; ಮಲ್ಲಿಗಾಗಿ ಜೈದೇವ 'ವಿಷ' ಬೆರೆಸಿದ ಗಂಜಿ ಕುಡಿಯುತ್ತಾಳಾ ಶಕುಂತಲಾ..?

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಶಿವರಾತ್ರಿ ಹಿನ್ನೆಲೆ ಗೌತಮ್ ಮತ್ತು ಭೂಮಿಕಾ ತವರು ಮನೆಗೆ ಹೋದಾಗ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಜೈದೇವ, ಗೋಪಿನ ಕರೆಸಿದ್ದಾನೆ.

ಮಲ್ಲಿಯನ್ನು ಕಿಡ್ನ್ಯಾಪ್ ಮಾಡಿಸಲು ಯತ್ನಿಸಿದ್ದಾನೆ. ಆದರೆ, ಮಲ್ಲಿ ಫೋನ್ ತೆಗೆಯದೇ ಇದ್ದಾಗ ಅನುಮಾನಗೊಂಡು ಭೂಮಿಕಾ ಮನೆಗೆ ಬಂದು ಗೋಪಿ ಹಾಗೂ ಪುಂಡರನ್ನು ಗದರಿಸಿ ಕಳಿಸಿದ್ದಾಳೆ. ಇದೆಲ್ಲವೂ ಜಯದೇವನದ್ದೇ ಕೆಲಸ ಎಂದು ಅನುಮಾನಗೊಂಡಿರುವ ಭೂಮಿಕಾ, ಮಲ್ಲಿಗೆ ಹುಷಾರಾಗಿ ಇರಲು ಹೇಳಿದ್ದಾಳೆ. ಅಷ್ಟೇ ಅಲ್ಲದೇ, ಗೌತಮ್ ನಿಂದ ಇಷ್ಟು ದೊಡ್ಡ ವಿಚಾರವನ್ನು ಮುಚ್ಚಿಟ್ಟಿದ್ದಾಳೆ.

Amruthadhaare Serial 11 March episode written update

ಅತ್ತೆಗೆ ವಾರ್ನಿಂಗ್ ಕೊಟ್ಟ ಭೂಮಿಕಾ..!

ಅತ್ತೆಯ ಬಳಿ ಹೋದ ಭೂಮಿಕಾ ವಾರ್ನಿಂಗ್ ಕೊಟ್ಟಿದ್ದಾಳೆ. ಬೇಕಂತಲೇ ನನನ್ನು ಮನೆಯಿಂದ ಹೊರಗೆ ಕಳಿಸಿ, ದೇವಸ್ಥಾನಕ್ಕೆ ಹೋಗುವ ನಾಟಕ ಮಾಡಿ ಮಲ್ಲಿಗೆ ತೊಂದರೆ ಕೊಟ್ಟಿದ್ದೀರಾ. ನೀವು ಮತ್ತು ಜೈದೇವ ಸೇರಿಕೊಂಡು ಮಲ್ಲಿಗೇನಾದರೂ ಮಾಡಿದರೆ ನಾನು ಸುಮ್ಮನಿರುವುದಿಲ್ಲ.

ಈ ಹಿಂದೆಯೇ ಗೋಪಿಯನ್ನು ಮುಂದಿಟ್ಟುಕೊಂಡು ಜೈದೇವ ಮಾಡಿದ ತಪ್ಪನ್ನು ಮುಚ್ಚಿ ಹಾಕಲು ನೋಡಿದಿರಿ. ಆದರೆ, ಅದು ಸಾಧ್ಯವಾಗಲಿಲ್ಲ. ಈಗ ಮತ್ತೆ ಗೋಪಿನ ಬಳಸಿಕೊಂಡಿದ್ದು, ಮುಂದೆ ಬಹಳ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಭೂಮಿಕಾ ಹೇಳುತ್ತಾಳೆ. ಇದೇ ವೇಳೆಗೆ ಗೌತಮ್ ಬಂದು ಅತ್ತೆ ಸೊಸೆ ಏನು ಮಾತನಾಡುತ್ತಿದ್ದೀರಾ ಎಂದು ಕೇಳುತ್ತಾನೆ.

Amruthadhaare Serial 11 March episode written update

ಭೂಮಿಕಾ ಮೌನವನ್ನು ಅನುಮಾನಿಸಿದ ಗೌತಮ್

ಭೂಮಿಕಾ ಕ್ಯಾಶ್ಯುವಲ್ ಟಾಕ್ ಎಂದು ಹೇಳಿ ಹೊರಟು ಹೋಗುತ್ತಾಳೆ. ಶಕುಂತಲಾ ಕೂಡ ಗೌತಮ್ ಗೆ ಸರಿಯಾಗಿ ಉತ್ತರಿಸುವುದಿಲ್ಲ. ಇದು ಗೌತಮ್ ಮನದಲ್ಲಿ ನೂರೆಂಟು ಪ್ರಶ್ನೆಗಳನ್ನು ಸೃಷ್ಟಿ ಮಾಡುತ್ತವೆ. ಭೂಮಿಕಾ ರೂಮಿನಲ್ಲಿ ಚಿಂತೆ ಮಾಡುತ್ತಾ ಇರುವಾಗ ಕಾಫಿ ತೆಗೆದುಕೊಂಡು ಹೋಗುವ ಗೌತಮ್ ನಿಮ್ಮ ಮನದಲ್ಲಿರುವ ಆತಂಕವೇನು..? ಯಾವುದರ ಬಗ್ಗೆ ಇಷ್ಟೊಂದು ಯೋಚಿಸುತ್ತಿದ್ದೀರಾ ಎಂದು ಕೇಳುತ್ತಾನೆ. ಆದರೆ, ಭೂಮಿಕಾ ಸರಿಯಾಗಿ ಮಾತನಾಡದೇ, ಅಲ್ಲಿಂದ ಹೊರಟು ಬರುತ್ತಾಳೆ. ಇದು ಗೌತಮ್ ಗೆ ಇನ್ನಷ್ಟು ಯೋಚಿಸುವಂತೆ ಮಾಡುತ್ತದೆ.

ಅನುಮಾನವನ್ನು ವ್ಯಕ್ತಪಡಿಸಿದ ಮಲ್ಲಿ

ಶಕುಂತಲಾ ಜೈದೇವನಿಗೆ ಬೈಯುತ್ತಾಳೆ. ಹೀಗೆಲ್ಲಾ ಎಡವಟ್ಟು ಕೆಲಸವನ್ನು ಮಾಡಬೇಡ. ಪದೇ ಪದೇ ಬಚಾವ್ ಮಾಡೋದಕ್ಕೆ ಆಗಲ್ಲ. ಗೌತಮ್ ಬಳಿ ಸಿಕ್ಕಿ ಬಿದ್ದರೆ ಕಷ್ಟವಾಗುತ್ತೆ ಎಂದು ವಾರ್ನಿಂಗ್ ಕೊಡುತ್ತಾಳೆ. ಹಾಗಿದ್ದರೂ ಕೂಡ ಮಲ್ಲಿ ಮೇಲೆ ಕೋಪ ತೋರಿಸುವ ಜೈದೇವ, ನೀನೆಂದರೆ ಇಷ್ಟವಿಲ್ಲ. ಇನ್ನು ಈ ಮಗು ಬೇರೆ ಎಂದು ಬೈಯುತ್ತಾನೆ.

Amruthadhaare Serial 11 March episode written update

ಮಲ್ಲಿಗೆ ಏನಾದರೂ ಮಾಡಿ ತನ್ನಿಂದ ದೂರ ಮಾಡಿಕೊಳ್ಳಬೇಕು ಎಂದು ಕೊಳ್ಳುವ ಜೈದೇವ, ಮಲ್ಲಿಗೆಂದು ತಯಾರಿಸಿರುವ ಗಂಜಿಗೆ ವಿಷವನ್ನು ಬೆರೆಸುತ್ತಾನೆ. ಅಡುಗೆಯವರಿಗೆ ಈ ಗಂಜಿಯನ್ನು ಮಲ್ಲಿಗೆ ಮಾತ್ರ ಕೊಡಿ. ಅವಳು ಬಿಟ್ಟು ಬೇರೆ ಯಾರೂ ಕುಡಿಯಬಾರದು. ಅವಳು ಮತ್ತು ಅವಳ ಹೊಟ್ಟೆಯಲ್ಲಿರುವ ಮಗುವಿಗೆ ಮಾತ್ರವೇ ಈ ಗಂಜಿ ಕೊಡಿ ಎಂದು ಒತ್ತಿ ಒತ್ತಿ ಹೇಳುತ್ತಿರುತ್ತಾನೆ. ಈ ಮಾತನ್ನು ಮಲ್ಲಿ ಕೇಳಿಸಿಕೊಳ್ಳುತ್ತಾಳೆ.

ಶಕುಂತಲಾ ಕೈಯಲ್ಲಿ ವಿಷ ಬೆರೆಸಿದ ಗಂಜಿ

ಇದರಿಂದ ಅನುಮಾನಗೊಂಡ ಮಲ್ಲಿ ಸೀದಾ ಭೂಮಿಕಾ ಬಳಿ ಹೋಗಿ ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾಳೆ. ಭೂಮಿಕಾ ಸೀದಾ ಮಲ್ಲಿಯನ್ನು ಶಕುಂತಲಾ ಬಳಿ ಕರೆದುಕೊಂಡು ಹೋಗಿ, ಮಲ್ಲಿ ಸುಮ್ಮನೆ ಅನುಮಾನ ಪಡುತ್ತಿದ್ದಾಳೆ. ಈ ಮನೆಯಲ್ಲಿ ತಾನು ತಿನ್ನುವ ಊಟಕ್ಕೆ ಯಾರಾದರೂ ವಿಷ ಬೆರೆಸುತ್ತಾರೆ ಎನ್ನುತ್ತಿದ್ದಾಳೆ. ಆದರೆ, ನಮ್ಮ ಮನೆಯಲ್ಲಿ ಅಂತವರು ಯಾರಿದ್ದಾರೆ ಎಂದು ಕೇಳುತ್ತಾಳೆ.

ಶಕುಂತಲಾ ಮಲ್ಲಿಗೆ ಎದುರು ಮಾತನಾಡುವ ಬರದಲ್ಲಿ ನೀನು ತಿನ್ನುವ ಊಟವನ್ನು ನಾವೆಲ್ಲಾ ರುಚಿ ನೋಡಿ ಕೊಡಲು ಆಗಲ್ಲ. ಯಾರೂ ಏನೂ ಮಾಡಲ್ಲ ಎನ್ನುತ್ತಾಳೆ. ಆದರೆ, ಭೂಮಿಕಾ ಈಗ ಶಕುಂತಲಾಳಿಗೆ ಟಾಸ್ಕ್ ಕೊಟ್ಟಿದ್ದಾಳೆ. ಮಲ್ಲಿ ತಿನ್ನುವ ಆಹಾರವನ್ನು ಶಕುಂತಲಾ ಮೊದಲು ಟೇಸ್ಟ್ ಮಾಡಬೇಕಿದೆ. ಹಾಗಾಗಿ ಗಂಜಿಯನ್ನು ಕೈಯಲ್ಲಿಡಿದ ಶಕುಂತಲಾ ಕುಡಿಯುವುದು ಬಾಕಿ ಇದೆ.

More from Filmibeat

English summary
jaideva plans to kill malli. So he mixed poison in ganji.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X