Amruthadhaare ;ಚಿಕ್ಕಮಗಳೂರಿನ ಕಾಫಿ ತೋಟದ ಬಗ್ಗೆ ತಲೆ ಕೆಡಿಸಿಕೊಂಡ ಗೌತಮ್ ..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ತಾತ ಮಾಡಿದ ಮೊದಲ ಆಸ್ತಿ ಚಿಕ್ಕಮಗಳೂರಿನ ಕಾಫಿ ತೋಟ. ಅಲ್ಲಿಂದಲೇ ಅವರ ಕುಟುಂಬ ಏಳಿಗೆಯನ್ನು ಕಂಡಿದ್ದು. ಅಜ್ಜಿಗೆ ಇದೆಲ್ಲಾ ಎಮೋಷನ್ ಚಿಕ್ಕಮಗಳೂರಿನ ಕಾಫಿ ತೋಟದ ಮೇಲಿದೆ. ಹೀಗಿರುವಾಗ, ಇದೇ ತೋಟಕ್ಕೆ ಆಪತ್ತು ಎದುರಾಗಿದ್ದು, ಅಜ್ಜಿ ಗಾಬರಿಯಾಗಿದ್ದಾರೆ. ಕಾಫಿ ತೋಟವನ್ನು ಅನ್ಯಾಯವಾಗಿ ಕಳೆದುಕೊಳ್ಳುವ ಸ್ಥತಿಯನ್ನು ಶಕುಂತಲಾ ತಂದೊಡ್ಡಿದ್ದಾಳೆ. ಆದರೆ, ಈ ಸತ್ಯ ತಿಳಿಯದೆಯೇ ಅಜ್ಜಿ ಕೊರಗಲು ಆರಂಭಿಸಿದ್ದಾರೆ.


ಅತ್ತೆ ಮಾಡಿದ್ದೆಲ್ಲಾ ಸೊಸೆಯ ಒಳ್ಳೆಯದ್ದಕ್ಕೆ

ಭೂಮಿಕಾ ಗೌತಮ್ ನನ್ನು ಮದುವೆಯಾಗಿ ಬಂದಾಗಿನಿಂದಲೂ ಒಂದಲ್ಲಾ ಒಂದು ಪ್ಲಾನ್ ಮಾಡುತ್ತಲೇ ಶಕುಂತಲಾ ಬಂದಿದ್ದಾಳೆ. ಗೌತಮ್ ಮತ್ತು ಭೂಮಿಕಾ ದೂರ ಇರಬೇಕು ಎಂದು ಏನೇನೋ ಮಾಡಿದ್ದಾಳೆ. ಗೌತಮ್ ಬಳಿ ಭೂಮಿಕಾ ಮೇಲೆ ಅಪವಾದ ಹಾಕಿದ್ದಾಳೆ. ಹೇಳಿದ ಚಾಡಿ ಮಾತು ವರ್ಕೌಟ್ ಆಗದ ಕಾರಣ, ಜಾತಕದ ಬಗ್ಗೆ ಸುಳ್ಳು ಹೇಳಿಸಿದ್ದಾಳೆ. ಒಟ್ನಲ್ಲಿ ಇಬ್ಬರನ್ನು ದೂರ ಇಡಲು ಪ್ರಯತ್ನ ಮಾಡುತ್ತಲೇ ಬಂದಿದ್ದಾಳೆ. ಆದರೆ, ಶಕುಂತಲಾ ಮಾಡಿದ್ದೆಲ್ಲವೂ ಸೊಸೆ ಭೂಮಿಕಾಳಿಗೆ ಒಳ್ಳೆಯದಾಗುವಂತೆಯೇ ಮಾಡಿದೆ. ಗೌತಮ್ ಮತ್ತು ಭೂಮಿಕಾ ಹತ್ತಿರವಾಗಲು ಇವೆಲ್ಲವೂ ದಾರಿ ಮಾಡಿಕೊಟ್ಟಿದೆ. ಈಗಾಗಲೇ ಇಬ್ಬರೂ ಒಬ್ಬರನ್ನೊಬ್ಬರು ಹೆಚ್ಚು ಹೆಚ್ಚು ಪ್ರೀತಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಶಕುಂತಲಾ ಚಿಕ್ಕಮಗಳೂರಿಗೆ ಇಬ್ಬರನ್ನೂ ಕಳಿಸುವ ಪ್ಲಾನ್ ಮಾಡಿದ್ದು, ಗೌತಮ್ ಮತ್ತು ಭೂಮಿಕಾ ಹನಿಮೂನ್ ಮುಗಿಸುವುದು ಪಕ್ಕಾ ಎನ್ನುತ್ತಿದ್ದಾರೆ ವೀಕ್ಷಕರು.

amruthadhaare-serial-11-may-episode-written-update


ಗೌತಮ್ ಗೆ ಸತ್ಯ ಹೇಳಿದ ಭೂಮಿಕಾ

ಆಫೀಸಿನಿಂದ ಬರುತ್ತಲೇ ಗೌತಮ್ ಅಜ್ಜಿಯ ಬಳಿ ಕಾಫಿ ತೋಟದ ಸಮಸ್ಯೆ ಅನ್ನು ಹೇಳುತ್ತಾನೆ. ಕೆಂಚ ಎಂಬಾತ ತೊಂದರೆ ಮಾಡುತ್ತಿದ್ದಾನೆ. ಸಮಸ್ಯೆ ಅನ್ನು ಬಗೆಹರಿಸಲು ನಾನೇ ಹೋಗಬೇಕಿದೆ ಎನ್ನುತ್ತಾನೆ. ಅಜ್ಜಿಗೆ ಗಾಬರಿಯಾಗುತ್ತದೆ. ಹೋಗುವುದು ಬೇಡ ಎಂಬಂತೆ ಮಾತನಾಡಿ ಸುಮ್ಮನಾಗುತ್ತಾರೆ. ಇದು ಭೂಮಿಕಾಳ ಆತಂಕವನ್ನು ಹೆಚ್ಚು ಮಾಡುತ್ತದೆ. ಹಾಗಾಗಿ ಅಜ್ಜಿಗೆ ಭಾಷೆ ಕೊಟ್ಟಿದ್ದರೂ ಕೂಡ ಸುಮ್ಮನಿರದೇ, ಗೌತಮ್ ಬಳಿ ಮನೆಗೆ ಕೆಂಚ ಬಂದು ಬೆದರಿಕೆ ಹಾಕಿದ ವಿಚಾರವನ್ನು ಹೇಳುತ್ತಾಳೆ. ಭೂಮಿಕಾ ಮಾತನ್ನು ಕೇಳಿ ಗೌತಮ್ ಗೆ ಶಾಕ್ ಆಗುತ್ತದೆ. ಕೆಂಚನ ಮೇಲೆ ಮತ್ತಷ್ಟು ಕೋಪ ಮಾಡಿಕೊಳ್ಳುತ್ತಾನೆ.


ಜೈದೇವನಿಗಾಗಿ ಶಕುಂತಲಾ ಹೋರಾಟ

ಗೌತಮ್ ಗೆ ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಸಮಸ್ಯೆ ಆಗಿರುವುದು ಗೊತ್ತಾಗುತ್ತಿದ್ದಂತೆ ಶಕುಂತಲಾ ಖೂಷಿ ಪಡುತ್ತಾಳೆ. ಎಲ್ಲವೂ ನಾನು ಅಂದುಕೊಂಡಂತೆ ಆಗುತ್ತಿದೆ. ಈಗ ಗೌತಮ್ ಚಿಕ್ಕಮಗಳೂರಿಗೆ ಹೊರಟಿದ್ದಾನೆ. ಭೂಮಿಕಾಳನ್ನು ಕೂಡ ಹೇಗಾದರೂ ಜೊತೆ ಮಾಡಿ ಕಳಿಸಬೇಕು. ಹನಿಮೂನ್ ನೆಪದಲ್ಲಿ ಅಜ್ಜಿ ಬಾಯಿಯಿಂದಲೇ ಗೌತಮ್ ಜೊತೆಗೆ ಭೂಮಿಕಾ ಹೋಗುವಂತೆ ಮಾಡಬೇಕು. ಆಗ ಇಬ್ಬರೂ ಮನೆಯಿಂದ ಹೊರಡುತ್ತಾರೆ. ಬಳಿಕ ಮಲ್ಲಿಕಾಳಿಗೆ ಒಂದು ಗತಿ ಕಾಣಿಸಬೇಕು. ನಂತರ ಸಮಸ್ಯೆಯನ್ನು ಬಗೆಹರಿಸಲು ಜೈದೇವ್ ಹೋಗುವಂತೆ ಮಾಡಿ ಅವನಿಂದಲೇ ನಿವಾರಿಸಬೇಕು. ಆಗ ಗೌತಮ್ ಕಾಫಿ ತೋಟದ ಮ್ಯಾನೇಜ್ ಮೆಂಟ್ ಮಾಡುವುದಕ್ಕೆ ಜೈದೇವನೇ ಸರಿ ಎಂದು ಅವನ ಹೆಸರಿಗೆ ಎಲ್ಲವನ್ನೂ ಬರೆದುಕೊಡಬೇಕು ಎನ್ನುತ್ತಾಳೆ. ಶಕುಂತಲಾಳಿಗೆ ತನ್ನ ಮಗ ಜೈದೇವನ ಭವಿಷ್ಯಕ್ಕೆ ಏನಾದರೂ ಮಾಡಬೇಕು ಎಂಬ ಆಸೆ.

amruthadhaare-serial-11-may-episode-written-update


ಮತ್ತೆ ಪಾರ್ಥನ ವಿರುದ್ಧ ಜೈದೇವ ಕಿಡಿ

ಇನ್ನು ಅಪೇಕ್ಷಾ ಮತ್ತು ಪಾರ್ಥ ಭೇಟಿಯಾಗುವುದನ್ನು ಜೈದೇವ ನೋಡುತ್ತಾನೆ. ಮಲ್ಲಿ ಅನ್ನು ಮದುವೆ ಆಗುವ ಮೊದಲಿನಿಂದಲೂ ಜೈದೇವನಿಗೆ ಅಪೇಕ್ಷಾಳ ಮೇಲೆ ಕಣ್ಣಿದೆ. ಆದರೆ, ಈಗ ಪಾರ್ಥನ ಜೊತೆಗೆ ಇರುವುದನ್ನು ನೋಡಿ ಅವನಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವನ ವಿರುದ್ಧ ಕಿಡು ಕಾಡಿದ್ದಾನೆ.

More from Filmibeat

English summary
According to shakunthala plan gautham thinking about chikkamagaluru coffee plant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X