Amruthadhaare: ಕಿರಣ್ ಬಳಿ ಸುಳ್ಳು ಹೇಳಿದ ಜೈದೇವ: ಭೂಮಿಕಾ ಟೈಂ ಕೆಡುವುದು ಗ್ಯಾರೆಂಟಿ
ಅಮೃತಧಾರೆ ಧಾರಾವಾಹಿಯಲ್ಲಿ ನಿಧಾನವಾಗಿ ಗೌತಮ್ ಭೂಮಿಕಾಳನ್ನು, ಭೂಮಿಕಾಕೂಡ ಗೌತಮ್ ಅನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಇಬ್ಬರ ಗುಣ, ಸ್ವಭಾವಗಳನ್ನು ಒಬ್ಬರಿಗೊಬ್ಬರು ತಿಳಿದುಕೊಳ್ಳುತ್ತಿದ್ದಾರೆ.
ಗೌತಮ್- ಭೂಮಿಕಾ ಇಬ್ಬರನ್ನು ಒಂದು ಮಾಡಲು ಸ್ನೇಹಿತ ಆನಂದ್ ಅಧಿಕವಾಗಿ ಶ್ರಮ ಹಾಕುತ್ತಿದ್ದು, ಅವರಿಬ್ಬರ ಸಂಸಾರ ಚೆನ್ನಾಗಿರಬೇಕು ಎಂದು ಸದಾ ಬಯಸುತ್ತಿರುತ್ತಾನೆ. ಆನಂದ್ ಜೊತೆಗೆ ಅಜ್ಜಿ ಮತ್ತು ಪಾರ್ಥ ಕೂಡ ಇದ್ದಾರೆ.

ಇನ್ನು ಜೀವನ್ ತನಗೆ ಸಿಗಬೇಕಿದ್ದ ಪ್ರೊಮೋಷನ್ ಅನ್ನು ತನ್ನ ಸ್ನೇಹಿತನಿಗೆ ಬಿಟ್ಟು ಕೊಟ್ಟಿದ್ದಾನೆ. ತನ್ನ ಸ್ನೇಹಿತನ ಪತ್ನಿ ಗರ್ಭಿಣಿಯಾಗಿದ್ದು, ಪ್ರಮೋಷನ್ ಜೊತೆಗೆ ಬರುವ ಅಧಿಕ ಸಂಬಳದ ಅಗತ್ಯವಿದೆ ಎಂದು ಹೀಗೆ ಮಾಡಿದ್ದಾನೆ.
ಜೀವನ್ ಬಳಿ ಮಹಿಮಾ ಪ್ರಶ್ನೆ
ಜೀವನ್ ಸಹಾಯಗುಣಕ್ಕೆ ಮನೆಯವರೆಲ್ಲರೂ ಖುಷಿ ಪಟ್ಟಿದ್ದಾರೆ. ಮಹಿಮಾಳಿಗೆ ಒಂದು ಕಡೆ ಕೋಪ ಬಂದಿದ್ದರೆ, ಮತ್ತೊಂದು ಕಡೆ ತನ್ನ ಮಗುವಿನ ಬಗ್ಗೆ ಯೋಚಿಸುತ್ತಿದ್ದಾಳೆ. ಇದೇ ಚಿಂತೆಯಲ್ಲಿ ಜೀವನ್ ಬಳಿ ನಿನಗೆ ಮಕ್ಕಳು ಎಂದರೆ ಅಷ್ಟು ಇಷ್ಟಾನಾ? ಎಂದು ಕೇಳಿದ್ದಾಳೆ. ಜೀವನ್ ಮಕ್ಕಳು ಎಂದರೆ, ಯಾರಿಗೆ ಇಷ್ಟವಿಲ್ಲ ಹೇಳು, ನೀನು ಹೆದರಬೇಡ. ನಮಗೆ ಬೇಗ ಮಕ್ಕಳಾದರೆ, ನಿಭಾಯಿಸುವುದು ಕಷ್ಟ ಎಂದುಕೊಳ್ಳಬೇಡ ಎಂದಿದ್ದಾನೆ.
ಹೆಂಡತಿ ಬಳಿ ಸುಳ್ಳು ಹೇಳಿದ ಕಿರಣ್
ಇತ್ತ ಶೃತಿಗೆ ತನ್ನ ಗಂಡ ಕಿರಣ್ ಕೆಲಸವಿಲ್ಲದಿದ್ದರೂ ನಿತ್ಯ ಎಲ್ಲಿಗೆ ಹೋಗಿ ಬರುತ್ತಿದ್ದಾರೆ ಎಂಬ ಅನುಮಾನ ಕಾಡಿದೆ. ಹೀಗಾಗಿ ಶೃತಿ, ಕಿರಣ್ ಅನ್ನು ದಿನಾ ಎಲ್ಲಿಗೆ ಹೋಗುತ್ತಿದ್ದೀಯಾ. ಕೆಲಸ ಸಿಕ್ಕಿತಾ ಎಂದು ಪ್ರಶ್ನಿಸಿದ್ದಾಳೆ. ಕಿರಣ್ ತಾನು ಎ ಟು ಝೆಡ್ ಎಂಬ ಕಂಪನಿಗೆ ಕೆಲಸಕ್ಕೆ ಹೋಗುತ್ತಿರುವುದಾಗಿ ಸುಳ್ಳು ಹೇಳಿದ್ದಾನೆ.

ಕಂದ ಎಂದು ರೇಗಿಸುತ್ತಿರುವ ಗೌತಮ್
ಗೌತಮ್ ರೂಮಿನಲ್ಲಿದ್ದಾಗ ಭೂಮಿಕಾ ಮೊಬೈಲ್‌ಗೆ ಪದೇ ಪದೇ ಫೋನ್ ಬಂದಿದೆ. ಗೌತಮ್ ಫೋನ್ ರಿಸೀವ್ ಮಾಡಿದ್ದಾನೆ. ಭೂಮಿಕಾ ತಂದೆ ಭೂಮಿಕಾ ಎಂದುಕೊಂಡು ಕಂದ ಎಂದು ಮಾತನಾಡಿಸಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಅಜ್ಜಿ, ಗೌತಮ್ ಅನ್ನು ಗುಂಡು ಎಂದು ಕರೆದಿದ್ದು, ಭೂಮಿಕಾ ಬಾಯಿ ತಪ್ಪಿ ಗುಂಡು ನಿಮ್ಮನ್ನ ಅಜ್ಜಿ ಕರೆಯುತ್ತಿದ್ದಾರೆ ಎನ್ನುತ್ತಾಳೆ. ಈ ಮಾತಿನಿಂದ ಗೌತಮ್‌ಗೆ ಕೋಪ ಬರುತ್ತದೆ. ನನ್ನನ್ನು ದಪ್ಪ ಇದ್ದೀಯಾ ಎಂದು ರೇಗಿಸುತ್ತಿದ್ದಾಳೆ ಎಂದುಕೊಂಡಿದ್ದಾನೆ. ಭೂಮಿಕಾ ಕ್ಷಮೆ ಕೇಳಿದರೂ ಕೂಡ ಗೌತಮ್ ಸುಮ್ಮನಾಗದೇ, ಬೇಕಂತಲೇ ಎಲ್ಲರನ್ನೂ ಕಂದ, ಕಂದ, ಕಂದ ಎಂದು ಕರೆಯುತ್ತಿದ್ದಾನೆ. ಇದು ಭೂಮಿಕಾಳಿಗೆ ತನ್ನನ್ನು ರೇಗಿಸುತ್ತಿರುವುದು ಎಂಬುದು ತಿಳಿಯುವುದಿಲ್ಲ.
ಕಿರಣ್ ಬಳಿ ಸುಳ್ಳು ಹೇಳಿದ ಜೈದೇವ
ಜೈದೇವ ಪ್ಲಾನ್ ಮಾಡಿಯೇ ಕಿರಣ್ ಅನ್ನು ತನ್ನ ಆಫೀಸಿನಲ್ಲಿ ಕೆಲಸಕ್ಕೆ ಸೇರಿಸಿಕೊಂಡಿದ್ದಾನೆ. ಈ ಪ್ಲಾನ್ ಸಕ್ಸಸ್ ಮಾಡುವುದಕ್ಕಾಗಿಯೇ ಭೂಮಿಕಾಳನ್ನು ಟ್ರೈನಿಂಗ್ ಹೆಸರಿನಲ್ಲಿ ಆಫೀಸಿಗೆ ಕರೆಸಿಕೊಂಡಿದ್ದಾನೆ. ಕಿರಣ್‌ಗೆ ಭೂಮಿಕಾ ಹಿಂದೆಯೇ ಇರುವಂತೆ ಜೈದೇವ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲದೇ, ಕಿರಣ್‌ಗೆ ಡ್ರಿಂಕ್ಸ್ ಕೊಟ್ಟು ಅವನಿಂದ ಭೂಮಿಕಾಳಿಗೂ ಕಿರಣ್‌ಗೂ ಇದ್ದ ಸಂಬಂಧಗಳ ಬಗ್ಗೆ ಮಾಹಿತಿ ಪಡೆದಿದ್ದಾನೆ. ಇಬ್ಬರೂ ಒಟ್ಟಿಗೆ ಓದಿ, ಪ್ರೀತಿಸುತ್ತಿದ್ದ ವಿಚಾರವನ್ನು ತಿಳಿದುಕೊಂಡಿದ್ದಾನೆ. ಭೂಮಿಕಾ ಕೂಡ ನಿಮ್ಮನ್ನು ಬಯಸುತ್ತಿದ್ದು, ಅವರ ಬಳಿ ನೇರವಾಗಿ ಹೇಳಿಕೊಳ್ಳಲು ಆಗುತ್ತಿಲ್ಲ. ಅದಕ್ಕೆ, ನನಗೆ ಹೇಳಿ ನಿಮಗೆ ಕೆಲಸ ಕೊಡಿಸಿರುವುದು ಎಂದು ಸುಳ್ಳು ಹೇಳುತ್ತಾನೆ.
ಮನೆಗೆ ಬಂದು ಕ್ಷಮೆ ಕೇಳಿದ ಕಿರಣ್
ಕಿರಣ್, ಜೈದೇವನ ಮಾತುಗಳನ್ನು ನಂಬುತ್ತಾನೆ. ಜೈದೇವ ಮುಂದೆ ಏನು ಮಾಡಬೇಕು. ಭೂಮಿಕಾ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಕೂಡ ಹೇಳಿಕೊಡುತ್ತಾನೆ. ಕಿರಣ್, ಭೂಮಿಕಾಳಿಗೆ ತನ್ನ ಮೇಲೆ ಪ್ರೀತಿ ಇದೆ ಎಂಬುದನ್ನು ತಿಳಿದು ಫುಲ್ ಖುಷಿಯಾಗಿದ್ದಾನೆ. ಸೀದಾ ಮನೆಗೆ ಹೋಗಿದ್ದಾನೆ. ಭೂಮಿಕಾಳನ್ನು ಭೇಟಿಯಾಗಿದ್ದಾನೆ. ಎದುರಿಗೆ ಕ್ಷಮೆ ಕೇಳಿದ್ದಾನೆ. ಆಫಿಸಿನಲ್ಲಿ ಸಲುಗೆ ಇಂದ ಮಾತನಾಡಿದ್ದಕ್ಕೆ ಕ್ಷಮೆ ಕೇಳಿ ಬಂದಿದ್ದಾನೆ. ಆದರೆ, ಇದು ಭೂಮಿಕಾಳಿಗೆ ಇರಿಟೇಟ್ ಮಾಡಿದೆ.


Click it and Unblock the Notifications











