Amruthadhaare: ಜೆಡೆ ಪ್ಲಾನ್ ಫ್ಲಾಪ್ ಮಾಡಿದ ಪಾರ್ಥ: ಅತ್ತಿಗೆ ತಂಗಿ ಹೃದಯದಲ್ಲಿ ಮೂಡಿದ ಒಲವು
ಅಮೃತಧಾರೆ ಧಾರಾವಾಹಿಯಲ್ಲಿ ಮಹಿಮಾ ಗರ್ಭಿಣಿ ಎಂಬ ಸತ್ಯ ಈಗ ಎಲ್ಲರಿಗೂ ಗೊತ್ತಾಗಿದೆ. ತಾನು ಗರ್ಭಿಣಿ ಎಂಬ ವಿಚಾರ ತಿಳಿದರೆ ಮನೆಯಲ್ಲಿ ಸಮಸ್ಯೆ ಆಗಬಹುದು ಎಂದು ಮಹಿಮಾ ವಿಚಾರವನ್ನು ಮುಚ್ಚಿಟ್ಟಿದ್ದಳು.
ಈಗ ಸತ್ಯ ತಿಳಿದ ಬಳಿಕ ಎಲ್ಲರ ಮನದಲ್ಲಿ ಸಂತಸ ಹೆಚ್ಚಾಗಿದೆ. ಇದರಿಂದ ಮಹಿಮಾ ಕೂಡ ನಿರಾಳಲಾಗಿದ್ದು, ಎಲ್ಲರ ಖುಷಿಯಲ್ಲಿ ತಾನೂ ದುಪ್ಪಟ್ಟು ಸಂತಸಗೊಂಡಿದ್ದಾಳೆ.

ಮಹಿಮಾ ಗರ್ಭಿಣಿ ಎಂಬ ಕಾರಣವಿಟ್ಟುಕೊಂಡು ಎಲ್ಲಿ ಮನೆಗೆ ಬರುತ್ತಾಳೋ ಎಂದು ಶಕುಂತಲಾ ಅವಳಿಗೆ ಎಲ್ಲಾ ರೀತಿಯ ಸೌಕರ್ಯವನ್ನು ನೀಡಲು ಮುಂದಾಗಿದ್ದಾಳೆ.
ತಂಗಿಗಾಗಿ ಉಡುಗೊರೆ ಕೊಟ್ಟ ಗೌತಮ್
ಗೌತಮ್ ಬಳಿ ಶಕುಂತಲಾ ಮಾತನಾಡಿ ಮಹಿಮಾಳಿಗೆ ಕಾರ್ ಗಿಫ್ಟ್ ಮಾಡಲು ಸೂಚಿಸಿದ್ದಾಳೆ. ಗೌತಮ್ ತಂಗಿ ಗರ್ಭಿಣಿಯಾಗಿರುವ ಖುಷಿಯಲ್ಲಿದ್ದು, ಅವಳಿಗೋಸ್ಕರ ಏನು ಮಾಡಲು ಸಿದ್ಧನಿದ್ದಾನೆ. ಹೀಗಾಗಿ ಕಾರ್ ಮಹಿಮಾಳಿಗೆ ಉಡುಗೊರೆಯಾಗಿ ಕೊಟ್ಟಿದ್ದಾನೆ. ಆದರೆ, ಅದನ್ನು ತೆಗೆದುಕೊಳ್ಳಲು ಮುಜುಗರಗೊಂಡಾಗ ಭೂಮಿಕಾ ಮನೆಯವರಿಗೆ ಉಡುಗೊರೆ ಸ್ವೀಕರಿಸುವಂತೆ ತಿಳಿ ಹೇಳಿದ್ದಾಳೆ. ಈಗ ಮಹಿಮಾ ಮನೆಯಲ್ಲಿ ಸಂಭ್ರಮ ಹೆಚ್ಚಾಗಿದೆ. ಗೌತಮ್, ಜೀವ, ಮಂದಾಕಿನಿ, ಸದಾಶಿವ, ಭೂಮಿಕಾ ಎಲ್ಲರೂ ಖುಷಿಯಾಗಿದ್ದರೆ, ಶಕುಂತಲಾಳಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ.
ಜೆಡೆ ಪ್ಲಾನ್ ಅಟ್ಟರ್ ಫ್ಲಾಪ್
ಇತ್ತ ಜೆಡೆ ತನ್ನ ಪಾಲಿಗೆ ಶತ್ರು ಆಗಿರುವ ಭೂಮಿಕಾಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಪ್ಲಾನ್ ಮಾಡುತ್ತಲೇ ಇದ್ದಾನೆ. ಆದರೆ, ಯಾವುದೂ ಕೂಡ ಸಕ್ಸಸ್ ಆಗುತ್ತಿಲ್ಲ. ಮೊದಲ ದಿನದಿಂದಲೂ ಜೆಡೆಗೆ ಅಪೇಕ್ಷಾ ಮೇಲೆ ಕಣ್ಣಿತ್ತು. ಅವಳನ್ನು ತನ್ನ ಬಟರ್ ಫ್ಲೈ ಎಂದೇ ಭಾವಿಸಿದ್ದ. ಎಷ್ಟೇ ಕಾಳು ಹಾಕಿದರೂ ಅಪೇಕ್ಷ ದೂರವೇ ಇರುತ್ತಿದ್ದಳು. ಈಗ ಸಿಕ್ಕಿದ್ದೇ ಚಾನ್ಸ್ ಎಂದು ಅಪೇಕ್ಷಾಳನ್ನು ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ತನ್ನ ಫಾರ್ಮ್ ಹೌಸ್‌ಗೆ ಕರೆದುಕೊಂಡು ಹೋಗಿದ್ದಾನೆ. ಜ್ಯೂಸ್‌ಗೆ ಮಾತ್ರೆ ಮಿಕ್ಸ್ ಮಾಡಿ ಕೊಟ್ಟಿದ್ದಾನೆ. ಅಪೇಕ್ಷಾ ಅದನ್ನು ಕೊಡಿಯುವ ಮುನ್ನವೇ ಪಾರ್ಥ ಬಂದಿದ್ದಾನೆ. ಅಷ್ಟೇ ಅಲ್ಲದೇ, ಅಪೇಕ್ಷಾ ತಾನು ಜೆಡೆ ಜೊತೆಗೆ ಇರುವ ವಿಚಾರವನ್ನು ತಾಯಿಗೆ ಹೇಳಿದ್ದಾಳೆ.

ಮತ್ತಿನಲ್ಲಿ ಪಾರ್ಥ ಮಾಡಿದ ಅವಾಂತರಗಳು
ಇದೆಲ್ಲದರಿಂದಾಗಿ ಜೆಡೆ ಪ್ಲಾನ್ ಸಂಪೂರ್ಣವಾಗಿ ಫ್ಲಾಪ್ ಆಗಿದೆ. ಅಪೇಕ್ಷಾ ಕುಡಿಯಬೇಕಿದ್ದ ಜ್ಯೂಸ್ ಅನ್ನು ಪಾರ್ಥ ಕುಡಿದಿದ್ದು, ಅಪೇಕ್ಷಾಳನ್ನು ತಾನೇ ಮನೆಗೆ ಡ್ರಾಪ್ ಮಾಡಿದ್ದಾನೆ. ದಾರಿಯಲ್ಲಿ ಸ್ಪೀಡ್ ಆಗಿ ಕಾರನ್ನು ಡ್ರೈವ್ ಮಾಡಿದ್ದಾನೆ. ಇದರಿಂದ ಅಪೇಕ್ಷಾ ಭಯಗೊಂಡಿದ್ದಾಳೆ. ಮತ್ತಿನಲ್ಲಿ ಪಾರ್ಥ ನಗೆಪಾಟಲಿಗೆ ಈಡಾಗಿದ್ದಾನೆ. ಮನೆಯವರೆಲ್ಲಾ ಪಾರ್ಥ ನಡೆದುಕೊಂಡ ರೀತಿಗೆ ಗಾಬರಿಯಾಗಿದ್ದಕ್ಕಿಂತಲೂ ನಕ್ಕಿದ್ದೇ ಹೆಚ್ಚು. ಇತ್ತ ಶಕುಂತಲಾ ಜೆಡೆಗೆ ವಾರ್ನಿಂಗ್ ಕೊಟ್ಟಿದ್ದಾಳೆ. ಇನ್ಯಾವತ್ತೂ ಅಪೇಕ್ಷಾ ಜೊತೆಗೆ ಎಲ್ಲೂ ಹೋಗಬಾರದು ಎಂದು ವಾರ್ನಿಂಗ್ ಕೊಟ್ಟಿದ್ದಾಳೆ.
ಪಾರ್ಥ-ಅಪ್ಪಿ ನಡುವೆ ಪ್ರೀತಿ ಚಿಗುರು
ಪಾರ್ಥ ನಡೆದುಕೊಂಡಿದ್ದನ್ನು ನೋಡಿದ ಭೂಮಿಕಾ ಮತ್ತು ಗೌತಮ್ ಆಶ್ಚರ್ಯ ಪಟ್ಟಿದ್ದಾರೆ. ಕೆಟ್ಟ ಅಭ್ಯಾಸವಿಲ್ಲದ ಪಾರ್ಥ ಹೀಗ್ಯಾಕೆ ಮಾಡಿದ? ಎಂದು ಯೋಚಿಸಿದ್ದಾರೆ. ಅಪೇಕ್ಷಾ ಮನೆಯಲ್ಲೇ ಮಲಗಿದ್ದ ಪಾರ್ಥ ಮಧ್ಯ ರಾತ್ರಿ ಎದ್ದಾಗ ನಡೆದ ಘಟನೆಗಳನ್ನೆಲ್ಲಾ ಅಪೇಕ್ಷಾ ತಿಳಿಸಿ ಹೇಳಿದ್ದಾಳೆ. ಅಪೇಕ್ಷಾ ಮನದಲ್ಲಿ ಪಾರ್ಥನ ಮೇಲೆ ಒಲವಾಗಿದ್ದು, ಇತ್ತ ಪಾರ್ಥನ ಹೃದಯದಲ್ಲೂ ಪ್ರೀತಿ ಚಿಗುರೊಡೆದಿದೆ. ಇಬ್ಬರೂ ಮುಂದೆ ಒಂದು ದಿನ ಪ್ರೀತಿಸಿ ಮದುವೆಯಾಗುತ್ತಾರೋ ಇಲ್ಲ ಇದಕ್ಕೆ ಜೆಡೆ ಅಡ್ಡಿಯಾಗುತ್ತಾನೋ? ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











