Amruthadhaare: ಶಕುಂತಲಾ ಗಾಬರಿಯಿಂದ ಗೌತಮ್ ದಿವಾನ್‌ನ ಮನೆಗೆ ಕರೆಸಿಕೊಂಡಿದ್ದೇಕೆ..?

By ಪ್ರಿಯಾ ದೊರೆ

ಗೌತಮ್ ದಿವಾನ್ ತನ್ನ ಕೈಯಲ್ಲಿರುವ ಉಂಗುರವನ್ನು ಬಿಚ್ಚಿ ಭೂಮಿಕಾಳಿಗೆ ವಾಪಸ್ ಮಾಡಲು ಯತ್ನಿಸುತ್ತಾನೆ. ಆದರೆ, ಉಂಗುರ ಟೈಟ್ ಆಗಿರುವುದರಿಂದ ಬರುವುದಿಲ್ಲ. ಇದೇ ವೇಳೆಗೆ ಶಕುಂತಲಾ, ಗೌತಮ್‌ಗೆ ಫೋನ್ ಮಾಡುತ್ತಾಳೆ. ಗೌತಮ್ ಅನ್ನು ಏನೇ ಕೆಲಸವಿದ್ದರೂ ಈ ಕೂಡಲೇ ಬಿಟ್ಟು ಮನೆಗೆ ಬರಬೇಕು. ಬಹಳ ಮುಖ್ಯವಾದ ವಿಚಾರ ಮಾತನಾಡಬೇಕು ಎಂದು ಹೇಳುತ್ತಾಳೆ.

ಈ ಮಾತನ್ನು ಕೇಳಿದ ಗೌತಮ್‌ಗೆ ಗಾಬರಿಯಾಗುತ್ತದೆ. ಹಾಗಾಗಿ ಭೂಮಿಕಾಳಿಗೆ ಉಂಗುರವನ್ನು ನಂತರ ಕೊಡುವುದಾಗಿ ಹೇಳಿ ಅಲ್ಲಿಂದ ಹೊರಡುತ್ತಾನೆ. ಮನೆಯಲ್ಲಿ ಮಹಿಮಾ ಗರ್ಭಿಣಿಯಾಗಿರುವುದನ್ನು ತಿಳಿದ ಶಕುಂತಲಾಳಿಗೆ ಗಾಬರಿಯಾಗಿರುತ್ತದೆ. ಇದೇ ಸಂದರ್ಭದಲ್ಲಿ ಮಹಿಮಾ, ಜೀವನ್ ಜೊತೆಗೆ ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ. ಮಹಿಮಾ, ಜೀವನ್‌ನ ಮದುವೆಯಾದರೆ, ಭೂಮಿಕಾಳನ್ನು ಗೌತಮ್‌ಗೆ ಮದುವೆ ಮಾಡಿಕೊಂಡು ಎಲ್ಲರ ಜುಟ್ಟನ್ನು ತನ್ನ ಕೈಯಲ್ಲಿ ಹಿಡಿದುಕೊಳ್ಳಬೇಕು ಎಂಬುದು ಶಕುಂತಲಾ ಆಸೆ.

Amruthadhaare Serial

ಮಹಿಮಾ ತೆಗೆದುಕೊಂಡಿರುವ ನಿರ್ಧಾರದಿಂದ ಶಕುಂತಲಾ ಲೆಕ್ಕಾಚಾರ ಎಲ್ಲವೂ ತಳಕೆಳಗಾಗಿದೆ. ಮಹಿಮಾ ಗರ್ಭಿಣಿ ಆಗಿರುವ ವಿಚಾರವನ್ನು ದಾಳವಾಗಿಟ್ಟುಕೊಂಡು ಶಕುಂತಲಾ ಈ ಎರಡೂ ಮದುವೆಯನ್ನು ಮಾಡಲು ಮುಂದಾಗಿದ್ದಾಳೆ. ಇದಕ್ಕಾಗಿಯೇ ಗೌತಮ್ ಬಳಿ ಮಾತನಾಡಲು ಫೋನ್ ಮಾಡಿ ಮನೆಗೆ ಬರುವಂತೆ ಹೇಳಿದ್ದಾಳೆ.

ಮಂದಾಕಿನಿಗೆ ಹೆಚ್ಚಿದ ಭರವಸೆ

ಭೂಮಿಕಾ ಉಂಗುರವನ್ನು ವಾಪಸ್ ಮಾಡಿದರೂ, ಗೌತಮ್ ತೆಗೆದುಕೊಳ್ಳದೇ ಇರುವುದು. ಗೌತಮ್ ಉಂಗುರವನ್ನು ಭೂಮಿಕಾಳಿಗೆ ವಾಪಸ್ ಮಾಡದೇ ಇರುವುದು ಮಂದಾಕಿನಿಗೆ ಖುಷಿ ಕೊಡುತ್ತದೆ. ಅದರ ಜೊತೆಗೆ ಈ ಮದುವೆ ನಡೆಯುತ್ತದೆ ಎಂಬ ಭರವಸೆ ಬಂದಿದೆ. ಇದೇ ವಿಚಾರವನ್ನು ಭೂಮಿಕಾ ಬಳಿ ಹಂಚಿಕೊಳ್ಳುತ್ತಾಳೆ. ಆದರೆ, ಭೂಮಿಕಾ ನಂಬುವುದಿಲ್ಲ. ಸುಮ್ಮನೆ ಏನೇನೋ ಊಹಿಸಿಕೊಳ್ಳಬೇಡಿ. ಹಾಗೆಲ್ಲಾ ಏನೂ ಆಗುವುದಿಲ್ಲ ಎನ್ನುತ್ತಾಳೆ. ಆದರೂ ಮಂದಾಕಿನಿ ದೇವರು ಈ ಮದುವೆ ನಡೆಸಿಕೊಳ್ಳುತ್ತಾನೆ ಎಂಬ ಭರವಸೆಯಲ್ಲಿ ಖುಷಿ ಪಡುತ್ತಾಳೆ.

Amruthadhaare Serial

ವಾರ್ನಿಂಗ್ ಕೊಟ್ಟ ಶಕುಂತಲಾ

ಇತ್ತ ಮಹಿಮಾಳಿಗೆ ಜೀವನ್ ಅನ್ನು ಮದುವೆಯಾಗಲು ಶಕುಂತಲಾ ಹೇಳುತ್ತಾಳೆ. ಆದರೆ, ಮಹಿಮಾ ತನ ದುರಹಂಕಾರದಿಂದ ಸಾಧ್ಯವಿಲ್ಲ ಎಂದು ಹೇಳುತ್ತಾಳೆ. ನನಗೆ ಹೇಗೆ ಬೇಕೋ ಹಾಗೆ ಬದುಕುತ್ತೀನಿ. ನಾನು ಜೀವನ್ ಅನ್ನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಹೇಳುತ್ತಾಳೆ. ಆಗ ಶಕುಂತಲಾ ತಾನು ಹೇಳಿದಂತೆ ಕೇಳದಿದ್ದರೆ, ಈ ಮನೆಯಿಂದ ಹೊರಗೆ ಹೋಗುವಂತೆ ಹೇಳುತ್ತಾಳೆ. ಅದಕ್ಕೆ ಮಹಿಮಾ ಹೆದರುವುದಿಲ್ಲ.

ಮಾತು ಮುಂದುವರೆಸುವ ಶಕುಂತಲಾ ನಿನಗೆ ಗೌತಮ್ ಸಪೋರ್ಟ್ ಇದೆ ಎಂದು ಜಂಭ ಮಾಡಬೇಡ. ನಾನು ಮನಸ್ಸು ಮಾಡಿದರೆ, ಗೌತಮ್ ಅನ್ನು ನಿನ್ನಿಂದ ದೂರ ಆಗುವಂತೆ ಮಾಡುತ್ತೇನೆ. ಇದು ನನ್ನ ಕೋಟೆ. ನಾನು ಹೇಳಿದಂತೆ ಕೇಳಬೇಕು. ಏನಕ್ಕೂ ಗತಿ ಇಲ್ಲದ ನಾನು ಇವತ್ತು ಕೋಟಿ ಕೋಟಿಗೆ ಬೆಲೆ ಬಾಳುವಂತೆ ಮಾಡಿರುವುದೆಲ್ಲವೂ ನನ್ನ ಸ್ವಾರ್ಥಕ್ಕೆ. ನನ್ನ ಮಾತನ್ನು ಕೇಳು ಎಂದು ಮಹಿಮಾಳನ್ನು ಬೆದರಿಸುತ್ತಾಳೆ.

ಜೀವನ್ ಬೇಕು ಎಂದ ಮಹಿಮಾ

ತನ್ನ ತಾಯಿ ಮಾತನ್ನು ಕೇಳದೇ ಬೇರೆ ದಾರಿ ಇಲ್ಲ ಎಂಬುದನ್ನು ತಿಳಿದ ಮಹಿಮಾ, ಶಕುಂತಲಾ ಮಾತಿಗೆ ಹ್ಞೂ ಎನ್ನುತ್ತಾಳೆ. ಮನೆಗೆ ಗೌತಮ್ ಬಂದು ಏನಾಯ್ತು ಎಂದು ಕೇಳಿದಾಗ ಶಕುಂತಲಾ ಏನನ್ನೂ ಮಾತನಾಡುವುದಿಲ್ಲ. ಗೌತಮ್‌ಗೆ ಗಾಬರಿಯಾಗುತ್ತದೆ. ಮಹಿಮಾ ನನಗೆ ಜೀವ ಬೇಕು. ನಾನು ಅವನನ್ನು ಬಿಟ್ಟಿರಲು ಆಗುವುದಿಲ್ಲ ಎಂದು ಹೇಳುತ್ತಾಳೆ. ಗೌತಮ್ ಅವನು ನಿನಗೆ ಹೊಡೆದಿದ್ದಾನೆ. ಅವಮಾನ ಮಾಡಿದ್ದಾನೆ, ಅವನ ಜೊತೆ ಹೇಗೆ ಬಾಳುತ್ತೀಯಾ ಎಂದು ಕೇಳುತ್ತಾನೆ. ಅದಕ್ಕೆ ಮಹಿಮಾ ಇಲ್ಲ, ಪಾರ್ಟಿಯಲ್ಲಿ ನಾನು ಕೂಡ ಜೀವನ್‌ಗೆ ಅವಮಾನ ಮಾಡಿದೆ. ಅದಕ್ಕೆ ಅವನು ಹೊಡೆದಿದ್ದು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಗೌತಮ್‌ಗೆ ಬೇಸರವಾಗುತ್ತದೆ.

More from Filmibeat

English summary
Amruthadhaare Serial 11th July episode written update. Here is details about Shakunthala warns Mahima and force her to marry Jeevan. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X