Amruthadhaare: ಸತ್ಯ ಅರ್ಥ ಮಾಡಿಕೊಂಡು ಬೇಸರ ಮಾಡಿಕೊಂಡ ಮಹಿಮಾ
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಭೂಮಿಕಾ ಮದುವೆ ಮುಗಿದ ಮೇಲೆ ಸಿಹಿ ಆಟವಾಡಿಕೊಂಡಿದ್ದವಳು ಇದ್ದಕ್ಕಿದ್ದ ಹಾಗೆ ಕಾಣೆಯಾಗಿರುತ್ತಾಳೆ. ಸೀತಾಳಿಗೆ ಸಿಹಿ ಕಾಣೆಯಾಗಿರುವುದು ತಿಳಿದು ಗಾಬರಿಯಾಗುತ್ತಾಳೆ. ಎಲ್ಲರೂ ಸಿಹಿ ಅನ್ನು ಹುಡುಕಲು ಶುರು ಮಾಡುತ್ತಾರೆ. ಆದರೆ ಸಿಹಿ ಎಲ್ಲೂ ಕಾಣುವುದಿಲ್ಲ.
ಎಲ್ಲರನ್ನೂ ಬೇಗ ಪರಿಚಯ ಮಾಡಿಕೊಳ್ಳುವ ಸಿಹಿ ಅಡುಗೆ ಮನೆಯಲ್ಲಿ ಮೈಸೂರ್ ಪಾಕ್ ಕದ್ದು ತಿನ್ನುತ್ತಿದ್ದ ಗೌತಮ್ ದಿವಾನ್ ಅನ್ನು ಪರಿಚಯ ಮಾಡಿ ಕೊಳ್ಳುತ್ತಾಳೆ. ಗೌತಮ್‌ಗೆ ಸಿಹಿ ಗೇಲಿ ಮಾಡುತ್ತಾ ಮಾತನಾಡಿಸುತ್ತಾಳೆ. ಗೌತಮ್ ಸಿಹಿ ಅನ್ನು ಮಾತನಾಡಿಸಿ ಇಬ್ಬರೂ ಫ್ರೆಂಡ್ಸ್ ಆಗುತ್ತಾರೆ. ಬಳಿಕ ಗೌತಮ್ ಜೊತೆಗೆ ಸಿಹಿ ಬಂದಿದ್ದನ್ನು ನೋಡಿ ಸೀತಾಳಿಗೆ ನಿರಾಳವಾಗುತ್ತದೆ.

ಸಿಹಿ ಮತ್ತು ಗೌತಮ್ ಆಟವಾಡುವುದನ್ನು ನೋಡಿದ ಸೀತಾ ನೀನು ಗೌತಮ್‌ನನ್ನು ಗಂಡನಾಗಿ ಪಡೆಯಲು ಪುಣ್ಯ ಮಾಡಿದ್ದಿಯಾ ಎಂದು ಭೂಮಿಕಾಳಿಗೆ ಹೇಳುತ್ತಾಳೆ. ಈ ಮಾತನ್ನು ಕೇಳಿದ ಭೂಮಿಕಾಳಿಗೂ ಖುಷಿಯಾಗುತ್ತದೆ.
ಶಕುಂತಲಾ ಮಾತುಗಳು
ಇನ್ನು ಮದುವೆ ಮುಗಿದ ಮೇಲೆ ಎಲ್ಲರೂ ಊಟಕ್ಕೆ ಕುಳಿತುಕೊಳ್ಳುತ್ತಾರೆ. ಆಗ ಫೋಟೋಗ್ರಾಫರ್ ಹಾಗೂ ಆನಂದ್ ಇಬ್ಬರ ಭೂಮಿಕಾ ಮತ್ತು ಗೌತಮ್‌ಗೆ ಒಬ್ಬರಿಗೊಬ್ಬರು ತಿನ್ನಿಸಲು ಹೇಳುತ್ತಾರೆ. ಇದು ಗೌತಮ್ ಮತ್ತು ಭೂಮಿಕಾ ಇಬ್ಬರಿಗೂ ಗಾಬರಿಯಾಗುತ್ತದೆ. ಆದರೂ ಬೇರೆ ದಾರಿ ಇಲ್ಲದೇ, ಇಬ್ಬರೂ ಒಬ್ಬರಿಗೊಬ್ಬರು ಮೈಸೂರ್ ಪಾಕ್ ಅನ್ನು ತಿನ್ನಿಸುತ್ತಾರೆ. ಇನ್ನು ಶಕುಂತಲಾ ಬಾಳೆ ಎಲೆ ಊಟವನ್ನು ನೋಡಿ ಆಡಿಕೊಳ್ಳುತ್ತಾಳೆ. ಈ ಊಟವನ್ನು ನಮ್ಮ ಮನೆಯ ಕೆಲಸದವರೂ ತಿನ್ನುವುದಿಲ್ಲ ಎಂದು ಹೇಳುತ್ತಾಳೆ. ಅಷ್ಟೊತ್ತಿಗೆ ಅಲ್ಲಿಗೆ ಸದಾಶಿವ ಬಂದು ನಾವು ಮದುವೆ ಮಾಡಿಕೊಟ್ಟಾಗ ತುಂಬಾ ಸಮಸ್ಯೆಗಳಾಯ್ತು ಕ್ಷಮಿಸಿ. ನನ್ನ ಕೈಯಲ್ಲಿ ಶಕ್ತಿ ಇದ್ದಷ್ಟೇ ಸಾಧ್ಯ ಎಂದು ಹೇಳುತ್ತಾನೆ.

ಬೇಸರ ಮಾಡಿಕೊಂಡ ಮಹಿಮಾ
ಇತ್ತ ಮಹಿಮಾ ಮುಖ ಅಲರ್ಜಿಯಾಗಿರುತ್ತದೆ. ವೈದ್ಯರನ್ನು ಕರೆಸಿರುತ್ತಾರೆ. ವೈದ್ಯರು ಬಂದು ಎಕ್ಸ್ಪೈರಿ ಆಗಿರುವ ಕ್ರೀಂ ಅನ್ನು ಬಳಸಿದ್ದೀರಾ. ಅದಕ್ಕೆ ಹೀಗಾಗಿದೆ ಎಂದು ಹೇಳುತ್ತಾರೆ. ಜೀವ, ಮಹಿಮಾಳನ್ನು ಹುಷಾರಾಗಿ ನೋಡಿಕೊಳ್ಳುತ್ತಿರುತ್ತಾನೆ. ಆಗ ಮಹಿಮಾ ತಾನು ಮದುವೆಯಾದ ಕೂಡಲೇ ಹನಿಮೂನ್‌ಗೆಂದು ಹೊರಟು ಬಂದಿದ್ದು, ತಮ್ಮ ಮದುವೆ ಇದ್ದರೂ ಕೂಡ ಭೂಮಿಕಾ ಮತ್ತು ಗೌತಮ್ ಬೇಸರ ಮಾಡಿಕೊಳ್ಳದೇ ಕಳಿಸಿಕೊಟ್ಟಿದ್ದನ್ನು ನೆನಪು ಮಾಡಿಕೊಳ್ಳುತ್ತಾಳೆ. ಇದು ಮಹಿಮಾಳಿಗೆ ಬಹಳ ಬೇಸರವನ್ನುಂಟು ಮಾಡುತ್ತದೆ. ಈ ಬಗ್ಗೆ ಜೀವನ್ ಬಳಿ ಕ್ಷಮೆಯನ್ನು ಕೇಳುತ್ತಾಳೆ. ನಾನು ಹಾಗೆ ಮಾಡಬಾರದಿತ್ತು. ಈಗ ನಮ್ಮ ಹನಿಮೂನ್ ಕೂಡ ಹಾಳಾಯ್ತು. ನಿನ್ನ ಸಮಯವೂ ವೇಸ್ಟ್ ಆಯ್ತು. ಜೊತೆಗೆ ಮನೆಯವರಿಗೂ ಬೇಸರ ಮಾಡಿದೆ ಎಂದು ಹೇಳುತ್ತಾಳೆ. ಆಗ ಜೀವ ಈಗ ಆಗಿ ಹೋಗಿದ್ದನ್ನು ನೆನಪು ಮಾಡಿಕೊಳ್ಳಬಾರದು. ಆಮೇಲೆ ನೆನಪು ಮಾಡಿಕೊಂಡು ಬೇಸರ ಮಾಡಿಕೊಳ್ಳಬೇಡ ಎಂದು ಹೇಳುತ್ತಾನೆ.
ಕಣ್ಣೀರು ಹಾಕಿದ ಮನೆಯವರು
ಇತ್ತ ಭೂಮಿಕಾ ಹಾಗೂ ಗೌತಮ್ ಇಬ್ಬರ ಅಜ್ಜಿಯಂದಿರು ಕೂಡ ಒಳ್ಳೆಯ ಫ್ರೆಂಡ್ಸ್ ಆಗಿ ಖುಷಿ ಖುಷಿಯಾಗಿ ಮಾತನಾಡುತ್ತಿರುತ್ತಾರೆ. ಭೂಮಿಕಾಳನ್ನು ಇಂದು ಮನೆ ತುಂಬಿಸಿಕೊಳ್ಳಬಾರದು. ಇಬ್ಬರನ್ನೂ ಬೇರೆ ಎಲ್ಲಾದರೂ ರೂಮ್ ಮಾಡಿ ಬಿಡಿ. ನಾಳೆ ಬೆಳಗ್ಗೆ 10.30 ಗೆ ಒಳ್ಳೆಯ ಟೈಮ್ ಇದೆ ಆಗ ಮನೆಗೆ ತುಂಬಿಸಿಕೊಳ್ಳಿ ಎನ್ನುತ್ತಾರೆ. ಇನ್ನು ಭೂಮಿಕಾಳನ್ನು ಕಳಿಸಿಕೊಡಲು ಮನೆಯವರೆಲ್ಲಾ ಕಣ್ಣೀರು ಹಾಕುತ್ತಾರೆ. ಭೂಮಿಕಾಳಿಗೆ ಅವರ ಮನೆಯವರದ್ದೇ ಚಿಂತೆಯಾಗಿರುತ್ತದೆ. ಅಳುತ್ತಲೇ ಭೂಮಿಕಾ ಮನೆಯವರನ್ನು ಬಿಟ್ಟು ಗೌತಮ್ ಜೊತೆಗೆ ಹೊರಡುತ್ತಾಳೆ.


Click it and Unblock the Notifications











