Amruthadhaare ; ಶಕುಂತಲಾ ಮಾಸ್ಟರ್ ಪ್ಲಾನ್ ಬಗ್ಗೆ ತಿಳಿದು ಹೊಸ ಆಲೋಚನೆ ಮಾಡಿದ ಭೂಮಿಕಾ..!
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಗೆ ಮೈಕೈ ನೋವು ಬಂದು ಜ್ವರದಿಂದ ಬಳಲುತ್ತಿದ್ದಾನೆ. ಆನಂದ್ ಕೂಡ ಗೌತಮ್ ಆರೋಗ್ಯದ ಬಗ್ಗೆ ಆತಂಕಗೊಂಡಿದ್ದಾನೆ. ಇತ್ತ ಮಲ್ಲಿಯನ್ನು ಜೈದೇವ ಪ್ರೀತಿಸುತ್ತಿರುವಂತೆ ನಟಿಸುತ್ತಿದ್ದಾನೆ. ಮಲ್ಲಿಯನ್ನು ಬಿಟ್ಟಿರುವುದೇ ಇಲ್ಲ. ಮಲ್ಲಿಯನ್ನು ಪ್ರೀತಿ ಹೆಸರಿನಲ್ಲಿ ಅಟ್ಟಕ್ಕೇರಿಸಿ, ಕೊನೆಗೊಂದು ದಿನ ಬೀಳಿಸುವುದೇ ಅವನ ಪ್ಲಾನ್.
ಸದ್ಯ ಮಲ್ಲಿ ಕಾಲೇಜಿಗೆ ಹೋಗಿ ಹಾಲ್ ಟಿಕೆಟ್ ತರಲು ಜೈದೇವನನ್ನು ಕರೆದಿದ್ದಾಳೆ. ಜೈದೇವ ಕೂಡ ಖುಷಿಯಿಂದ ಮಲ್ಲಿ ಜೊತೆಗೆ ಹೋಗಲು ಒಪ್ಪಿಕೊಂಡಿದ್ದಾನೆ.
ಕೆಲಸ ಕಳೆದುಕೊಂಡ ಜೀವನ್
ಇನ್ನು ಜೀವನ್ ಗೆ ಅಪ್ರೈಸಲ್ ಆಗುವ ಸಮಯ. ಹಾಗಾಗಿ ಇನ್ನೂ ಸಂಬಳ ಆಗಿರುವುದಿಲ್ಲ. ಜೀವನ್ ಆಫೀಸಿನಿಂದ ಬರುವುದನ್ನೇ ಮನೆಯವರೆಲ್ಲಾ ಕಾಯುತ್ತಿರುತ್ತಾರೆ. ಆದರೆ, ಜೀವನ್ ಕೆಲಸವನ್ನು ಕಳೆದುಕೊಂಡಿರುತ್ತಾನೆ. ಮನೆಯವರನ್ನು ನೋಡಿ ಸತ್ಯ ಹೇಳಲು ಭಯಗೊಂಡ ಜೀವನ್ ತನಗೆ 30% ಅಪ್ರೈಸಲ್ ಆಗಿದೆ. ಇನ್ಮುಂದೆ ನಮ್ಮ ಕಷ್ಟವೆಲ್ಲಾ ತೀರಿತು. ಯಾವ ಸಾಲವೂ ಇರುವುದಿಲ್ಲ ಎಂದು ಸುಳ್ಳು ಹೇಳಿ ಸ್ವೀಟ್ ಕೊಡುತ್ತಾನೆ. ಮನೆಯವರೆಲ್ಲರೂ ಜೀವನ್ ಮಾತನ್ನು ಕೇಳಿ ಖುಷಿ ಪಡುತ್ತಾರೆ. ಮಹಿಮಾ, ಅಪೇಕ್ಷಾ ಹಾಗೂ ಮಂದಾಕಿನಿ ಶಾಪಿಂಗ್ ಮಾಡಲು ಮನೆಯಿಂದ ಹೊರಡುತ್ತಾರೆ.

ಶಕುಂತಲಾಳ ನಾಟಕ ತಿಳಿದ ಭೂಮಿಕಾ
ಶಕುಂತಲಾ ಗೌತಮ್ ಹಾಗೂ ಭೂಮಿಕಾಳನ್ನು ಬೇರೆ ಮಾಡುವುದಕ್ಕಾಗಿ ತನಗೆ ಹುಷಾರಿಲ್ಲ ಎಂದು ನಾಟಕ ಮಾಡುತ್ತಿರುತ್ತಾಳೆ. ಈ ಸತ್ಯವನ್ನು ತಿಳಿದ ಮಲ್ಲಿ, ಭೂಮಿಕಾಳಿಗೆ ಹೇಳುತ್ತಾಳೆ. ಜಾತಕ ದೋಷ ಇದೆ ಎಂದು ಸುಳ್ಳು ಹೇಳಿ ಗೌತಮ್ ನಿಂದ ಭೂಮಿಕಾಳನ್ನು ದೂರ ಇಡಲು ಶಕುಂತಲಾ ಪ್ಲಾನ್ ಮಾಡಿದ್ದು, ಇದು ಈಗ ಭೂಮಿಕಾಳಿಗೆ ಗೊತ್ತಾಗಿದೆ. ಯಾರ ಮಾತನ್ನೂ ಸುಲಭವಾಗಿ ನಂಬದ ಭೂಮಿಕಾ ತಾನೇ ಶಕುಂತಲಾ ರೂಮಿಗೆ ಹೋಗಿ ಮಾತ್ರೆಯನ್ನು ಕೊಟ್ಟು ಪರೀಕ್ಷೆ ಮಾಡುತ್ತಾಳೆ. ಶಕುಂತಲಾ ಮಾತ್ರೆಯನ್ನು ತೆಗೆದುಕೊಳ್ಳದೇ ಬಿಸಾಡುತ್ತಾಳೆ. ಇದನ್ನು ಗಮನಿಸಿದ ಭೂಮಿಕಾಳಿಗೆ ತನ್ನ ಅತ್ತೆಯ ನಾಟಕ ತಿಳಿಯುತ್ತದೆ. ಇನ್ನು ಗೌತಮ್ ಗೆ ಅಪರ್ಣಾ ಬೈಯುತ್ತಾಳೆ. ಹೀಗೆಲ್ಲಾ ಹರಕೆ ಹೊತ್ತು ಯಾಕೆ ಕಷ್ಟ ಪಡಬೇಕು ಎಂದು ಬುದ್ಧಿ ಹೇಳುತ್ತಾಳೆ.

ಜಾತಕ ತೋರಿಸಿದ ಭೂಮಿಕಾ
ಆನಂದ್ ಬಳಿ ಭೂಮಿಕಾ ಸತ್ಯ ವಿಚಾರಿಸಿದ್ದಾಳೆ. ಗೌತಮ್ ಹರಕೆ ಹೊರಲು ಕಾರಣವೇನು ಎಂದು ತಿಳಿದುಕೊಂಡಿದ್ದಾಳೆ. ತನಗೋಸ್ಕರ ಗೌತಮ್ ಕಷ್ಟಪಟ್ಟಿದ್ದು ಎಂಬುದನ್ನು ತಿಳಿದು ಬೇಸರ ಮಾಡಿಕೊಂಡಿದ್ದಾಳೆ. ಹಾಗಾಗಿ ಜಾತಕದಲ್ಲಿ ದೋಷವಿರುವುದು ನಿಜವೇ ಇಲ್ಲ ಸುಳ್ಳಾ ಎಂದು ತಿಳಿಯಲು ಮುಂದಾಗಿದ್ದಾಳೆ. ತನ್ನ ತಾಯಿ ಮಂದಾಕಿನಿಯನ್ನು ದೇವಸ್ಥಾನಕ್ಕೆ ಕರೆಸಿಕೊಂಡು ಬೇರೆ ಗುರುಗಳ ಬಳಿ ಜಾತಕವನ್ನು ತೋರಿಸಿದ್ದಾಳೆ. ಗುರುಗಳು ಜಾತಕ ನೋಡಿ ಇವೆರಡೂ ಜೋಡಿಗಳದ್ದು ಅದ್ಭುತವಾದ ಜಾತಕ. ಇವರು ಒಟ್ಟಿಗೆ ಇರುತ್ತಾರೆ. ಇಬ್ಬರಲ್ಲೂ ಯಾವ ಸಮಸ್ಯೆಯೂ ಇಲ್ಲ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಭೂಮಿಕಾಳಿಗೆ ಖುಷಿಯಾಗುತ್ತದೆ.

ಶಕುಂತಲಾ ವಿರುದ್ಧ ಭೂಮಿಕಾ ಪ್ಲಾನ್
ಖುಷಿಯಿಂದ ಮನೆಗೆ ಬಂದ ಭೂಮಿಕಾಳಿಗೆ ಮಂದಾಕಿನಿ ಫೋನ್ ಮಾಡುತ್ತಾಳೆ. ನಮ್ಮ ಮನೆಗೆ ಯುಗಾದಿ ಹಬ್ಬದ ದಿನ ಗುರುಗಳು ಬರುತ್ತಾರೆ. ನೀನು ಮನೆಗೆ ಬಾ ಎಂದು ಕರೆಯುತ್ತಾರೆ. ಆದರೆ, ಭೂಮಿಕಾ ಬೇಡ, ಗುರುಗಳನ್ನು ನಮ್ಮ ಮನೆಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದಾಳೆ. ಭೂಮಿಕಾ ಎಲ್ಲರ ಎದುರಿಗೂ ತಮ್ಮಿಬ್ಬರ ಜಾತಕದಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಬೇಕು. ಆಗ ಶಕುಂತಲಾ ಮಾಡಿರುವ ಪ್ಲಾನ್ ಉಲ್ಟಾ ಆಗುತ್ತದೆ. ಗೌತಮ್ ಗೆ ಇರುವ ಆತಂಕ ದೂರಾಗುತ್ತದೆ. ಇದರಿಂದ ಗೌತಮ್ ಮತ್ತು ತಾನು ಒಂದಾಗಿರಬಹುದು ಎಂದು ಭೂಮಿಕಾ ಲೆಕ್ಕಾಚಾರ ಹಾಕಿದ್ದಾಳೆ


Click it and Unblock the Notifications











