Amruthadhaare ; ಅಪೇಕ್ಷಾ-ಪಾರ್ಥನ ಮದುವೆಗೆ ಶಕುಂತಲಾ ಸಪೋರ್ಟ್ : ಜೈದೇವ್ ಒಪ್ಪಿಕೊಳ್ಳುತ್ತಾನಾ..?
ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥನ ಮದುವೆಯನ್ನು ಸದಾಶಿವ ನಿರಾಕರಿಸಿದ್ದಾನೆ. ಅಪ್ಪನ ನಿರ್ಧಾರಕ್ಕೆ ಭೂಮಿಕಾ ಕೂಡ ಒಪ್ಪಿಕೊಂಡಿದ್ದಾಳೆ. ಗೌತಮ್ ಮನೆಯಲ್ಲಿ ಸದಾಶಿವನ ನಿರ್ಧಾರವನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಅಲ್ಲದೇ, ಭೂಮಿಕಾಳಿಗೆ ಈ ಮದುವೆಗೆ ಒಪ್ಪಿಸು ಎಂದು ಕೇಳಿಕೊಂಡಿದ್ದು, ಭೂಮಿಕಾ ಸಾಧ್ಯವೇ ಇಲ್ಲ ಎಂದು ಹೇಳಿದ್ದಾಳೆ. ಭೂಮಿಕಾ ಮಾತನ್ನು ಕೇಳಿದ ಗೌತಮ್ ಕೂಡ ತಮ್ಮ ಮಾವನ ಮಾತು ಸರಿಯಾಗಿದೆ ಎಂದು ಭಾವಿಸಿದ್ದಾನೆ. ಪಾರ್ಥನಿಗೆ ತನ್ನ ಪ್ರೀತಿಯನ್ನು ಬಿಟ್ಟುಕೊಡು ಎಂದು ಕೇಳಿಕೊಂಡಿದ್ದಾನೆ.
ತಮ್ಮನಿಗೆ ಬುದ್ಧಿ ಹೇಳಿದ ಭೂಮಿಕಾ
ಪ್ರೀತಿಯನ್ನು ಕಳೆದುಕೊಳ್ಳುತ್ತಿರುವ ದುಃಖದಲ್ಲಿ ಪಾರ್ಥ ಇದ್ದಾನೆ. ಇತ್ತ ಅಪೇಕ್ಷಾ ಮನೆಯಲ್ಲೂ ಈ ಮದುವೆ ವಿಚಾರಕ್ಕೆ ಗಲಾಟೆಯಾಗಿದೆ. ಆದರೆ, ಸದಾಶಿವ ಯಾವುದೇ ಕಾರಣಕ್ಕೂ ಈ ಮದುವೆ ಅಸಾಧ್ಯ ಎಂದು ಹೇಳಿದ್ದಾನೆ. ಅಪೇಕ್ಷಾ ತನ್ನ ಪ್ರೀತಿ ಕೈ ತಪ್ಪುತ್ತಿದೆ ಎಂದು ಆತಂಕಗೊಂಡಿದ್ದು, ಜೀವನ್ ಬಳಿ ಓಡಿ ಹೋಗಿ ಮದುವೆಯಾಗುವ ಬಗ್ಗೆ ಮಾತನಾಡಿದ್ದಾಳೆ. ಜೀವನ್ ತಂಗಿಯ ಪ್ರೀತಿಗೆ ಒಪ್ಪಿದ್ದು, ಬೆಳಗ್ಗೆಯೇ ರಿಜಿಸ್ಟರ್ ಆಫೀಸಿನಲ್ಲಿ ಮದುವೆ ಮಾಡಿಸುವುದಾಗಿ ಹೇಳಿದ್ದಾನೆ. ಇದಕ್ಕೋಸ್ಕರ ಪಾರ್ಥ ಮತ್ತು ಅಪೇಕ್ಷಾಳನ್ನು ರಿಜಿಸ್ಟರ್ ಆಫೀಸ್ ಬಳಿ ಬರಲು ಹೇಳಿದ್ದು, ಮಹಿಮಾ ಬಳಿ ಸುಳಿವು ಬಿಟ್ಟುಕೊಟ್ಟಿದ್ದಾನೆ. ವಿಚಾರ ತಿಳಿದ ಭೂಮಿಕಾ ಜೀವನ್ ಗೆ ಬೈದು ಬುದ್ಧಿ ಹೇಳಿದ್ದಾಳೆ.

ಪಾರ್ಥ ಮತ್ತು ಅಪೇಕ್ಷಾಳಿಗೆ ಕೈ ಕೊಟ್ಟ ಜೀವನ್
ಪಾರ್ಥ ಮತ್ತು ಅಪೇಕ್ಷಾ ನೆನ್ನೆ ಮೊನ್ನೆ ಪ್ರೀತಿ ಮಾಡಲು ಶುರು ಮಾಡಿದವರು. ಅವರ ಪ್ರೀತಿ ಮರೆಯಬಹುದು. ಆದರೆ, ಅಪ್ಪ ಮಕ್ಕಳ ಮೇಲೆ ಕಳೆದ 25 ವರ್ಷದಿಂದ ಪ್ರೀತಿ ಇಟ್ಟಿದ್ದು, ಸಾಕಷ್ಟು ಕನಸು ಕಂಡಿದ್ದಾರೆ ಎಂದು ಭೂಮಿಕಾ ಜೀವನ್ ಗೆ ಹೇಳುತ್ತಾಳೆ. ನೀನು ಮಾಡುತ್ತಿರುವುದು ಬಹಳ ತಪ್ಪು ಎಂದು ಹೇಳುತ್ತಾಳೆ. ಜೀವನ್ ಗೆ ಅಕ್ಕನ ಮಾತುಗಳು ಸರಿ ಎಂದು ಅನಿಸುತ್ತದೆ. ಹೀಗಾಗಿ ಸುಮ್ಮನಾಗುತ್ತಾನೆ. ಅಪೇಕ್ಷಾ ಮತ್ತು ಪಾರ್ಥನಿಗೆ ಈ ಮದುವೆ ಸಾಧ್ಯವಿಲ್ಲ ಎಂದು ಹೇಳಿ ಹೊರಡುತ್ತಾನೆ.
ಸಿಕ್ಕ ಅವಕಾಶವನ್ನು ಬಳಸಿಕೊಂಡ ಜೈದೇವ್
ಇತ್ತ ಭೂಮಿಕಾ ಮಲ್ಲಿಯನ್ನು ಅವಾಯ್ಡ್ ಮಾಡುತ್ತಾಳೆ. ತನಗೆ ಬೇರೆ ಕೆಲಸ ಇದ್ದ ಕಾರಣ ಮಲ್ಲಿ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. ಇದರಿಂದ ಬೇಸರವಾಗಿರುವ ಮಲ್ಲಿಗೆ ಜೈದೇವ್ ಸಮಾಧಾನ ಮಾಡುವುದು ಬಿಟ್ಟು ಭೂಮಿಕಾ ಬಗ್ಗೆ ಚಾಡಿ ಹೇಳುತ್ತಾನೆ. ಭೂಮಿಕಾ ನಿನ್ನನ್ನು ಬೇಕಂತಲೇ ದೂರ ಮಾಡುತ್ತಿದ್ದಾಳೆ. ಅವರ ಪ್ರೀತಿ, ಕಾಳಜಿ ಎಲ್ಲಾ ಸುಳ್ಳು ಎಂದು ಹೇಳುತ್ತಾನೆ. ಮಲ್ಲಿಗೂ ಕೂಡ ಜೈದೇವ್ ಹೇಳಿದ್ದೇ ನಿಜ ಎನಿಸಲು ಶುರುವಾಗಿದ್ದು, ಮಲ್ಲಿ ಭೂಮಿಕಾಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾಳೆ. ಇದರಿಂದ ಮಲ್ಲಿಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಆಗುವುದಂತೂ ಖಂಡಿತ.

ಪಾರ್ಥನ ಕೈ ಹಿಡಿದ ಶಕುಂತಲಾ
ಜೀವನ್ ಕೈಕೊಟ್ಟಿದ್ದಕ್ಕೆ ಅಪೇಕ್ಷಾ ಮತ್ತು ಪಾರ್ಥ ತಲೆ ಕೆಡಿಸಿಕೊಂಡಿದ್ದಾರೆ. ಪಾರ್ಥ ಶಕುಂತಲಾಳಿಗೆ ಫೋನ್ ಮಾಡಿದ್ದು, ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾನೆ. ಸಿಕ್ಕ ಅವಕಾಶವನ್ನು ಬಿಡದ ಶಕುಂತಲಾ ದೇವಸ್ಥಾನಕ್ಕೆ ಹೋಗಿ ಇಂದೇ ಮದುವೆಯಾಗಿ. ನಿಮ್ಮಬ್ಬರಿಗೆ ನಾನಿದ್ದೀನಿ ಎಂದು ಶಕುಂತಲಾ ಭರವಸೆಯನ್ನು ಕೊಟ್ಟಿದ್ದಾಳೆ. ಈ ಮಾತುಗಳನ್ನು ಕೇಳಿದ ಪಾರ್ಥ ಮತ್ತು ಅಪೇಕ್ಷಾ ಖುಷಿಯಾಗಿದ್ದಾರೆ. ಶಕುಂತಲಾ ಮೇಲಿನ ಗೌರವವನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನು ಜೈದೇವ್ ಈ ಮಾತನ್ನು ಕೇಳಿಸಿಕೊಂಡಿದ್ದಾನೆ. ಯಾವುದೇ ಕಾರಣಕ್ಕೂ ಪಾರ್ಥನಿಗೆ ಅಪೇಕ್ಷಾ ಸಿಗಬಾರದು ಎಂದು ನಿಂತ ಜಾಗದಲ್ಲೇ ಹಲ್ಲು ಕಡಿದಿದ್ದು, ಪಾರ್ಥ ಮತ್ತು ಅಪೇಕ್ಷಾಳಿಗೆ ಮತ್ಯಾವ ತೊಂದರೆ ಎದುರಾಗುತ್ತದೆಯೋ ಕಾದು ನೋಡಬೇಕಿದೆ.


Click it and Unblock the Notifications











