ಅಪೇಕ್ಷಾಳಿಗೆ ಸಂಕಷ್ಟ ತಂದಿಟ್ಟ ಜೈದೇವ್‌ ; ಗೊಂದಲದಲ್ಲಿರುವ ಬಟರ್ ಫ್ಲೈ

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್‌ ತಾನು ಆಡಿದ್ದೇ ಆಟ, ನಡೆದಿದ್ದೇ ದಾರಿ ಎಂಬಂತೆ ಆಗಿದೆ. ಹಠ ಮಾಡಿ, ತಾಯಿ ಶಕುಂತಲಾಳನ್ನು ಬ್ಲ್ಯಾಕ್ ಮೇಲ್ ಮಾಡಿ ಮದುವೆಯಾಗಲು ಮುಂದಾಗಿದ್ದಾನೆ. ತಮ್ಮ ಪಾರ್ಥ ಪ್ರೀತಿಸಿದ ಹುಡುಗಿ ಅಪೇಕ್ಷಾಳ ಮೇಲೆ ಜೈದೇವ್‌ ನ ಕಣ್ಣು ಬಿದ್ದಿದೆ. ಹೇಗಾದರೂ ಮಾಡಿ ಅಪೇಕ್ಷಾಳನ್ನು ಮದುವೆಯಾಗಲೇ ಬೇಕು ಎಂದು ತೀರ್ಮಾನಿಸಿದ್ದಾನೆ.

ಮಲ್ಲಿ ಬದುಕಲ್ಲಿ ಎದ್ದಿದೆ ಬಿರುಗಾಳಿ..!

ಆದರೆ, ಇದೇ ಸಂದರ್ಭದಲ್ಲಿ ಜೈದೇವ ಎಡವಟ್ಟು ಒಂದನ್ನು ಕೂಡ ಮಾಡಿಕೊಂಡಿದ್ದಾನೆ. ಮಲ್ಲಿಯ ಜೊತೆಗೆ ಸಂಬಂಧವನ್ನು ಇಟ್ಟುಕೊಂಡಿದ್ದು, ಈಗ ಮಲ್ಲಿ ಗರ್ಭಿಣಿ ಆಗಿದ್ದಾಳೆ. ಭೂಮಿಕಾಳಿಗೆ ಮಲ್ಲಿಯ ಬಗ್ಗೆ ಗೊತ್ತಿರುವ ಕಾರಣ ಅವಳ ಬಗ್ಗೆ ವಿಶೇಷವಾದ ಕಾಳಜಿಯನ್ನು ಹೊಂದಿದ್ದಾಳೆ. ಮಲ್ಲಿ ವಾಂತಿ ಮಾಡುವುದನ್ನು ನೋಡಿ ಆರೋಗ್ಯ ವಿಚಾರಿಸಿಕೊಳ್ಳುತ್ತಾಳೆ.

 Amruthadhaare Serial 12 February episode written update

ಮಲ್ಲಿ ಗರ್ಭಿಣಿ ಆಗಿರುವ ಸತ್ಯವನ್ನು ತಿಳಿದು ಗಾಬರಿಯಾಗುತ್ತಾಳೆ. ಇದಕ್ಕೆ ಯಾರು ಕಾರಣ ಎಂದು ಎಷ್ಟೇ ಕೇಳಿದರೂ ಮಲ್ಲಿ ಸತ್ಯ ಬಾಯಿ ಬಿಡುವುದಿಲ್ಲ. ಆದರೆ, ಭೂಮಿಕಾಳಿಗೆ ಮಲ್ಲಿಯ ಈ ಸ್ಥಿತಿ ಹಿಂದೆ ಜೈದೇವ್‌ ಇದ್ದಾನೆ ಎಂಬ ಸತ್ಯ ತಿಳಿದರೆ ಏನು ಮಾಡಬಹುದು ಎಂಬ ಕುತೂಹಲ ಮೂಡಿದೆ. ಇನ್ನು ಜೈದೇವ್‌ ಮಲ್ಲಿಯನ್ನು ಸಮಾಧಾನ ಮಾಡಲು ಯತ್ನಿಸಿದ್ದು, ಜೈದೇವ್‌ ನ ನಡವಳಿಕೆಯಿಂದಲೇ ಸಮಸ್ಯೆ ಸೃಷ್ಟಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ಗೌತಮ್ ಮನೆಯಲ್ಲಿ ಹೂವು ಮುಡಿಸುವ ಶಾಸ್ತ್ರ..!

ಜೈದೇವ್‌ ಪಾರ್ಥನ ಪ್ರೇಯಸಿ ಅಪೇಕ್ಷಾ ಮೇಲೆ ಕಣ್ಣಿಟ್ಟಿದ್ದಾನೆ. ಹೀಗಾಗಿ ಹಠ ಮಾಡಿ ಅವಳನ್ನು ಮದುವೆಯಾಗಲು ಮುಂದಾಗಿದ್ದಾನೆ. ಹೂವು ಮುಡಿಸುವ ಶಾಸ್ತ್ರ ಮಾಡಿಸುವ ಸಲುವಾಗಿ ಮಂದಾಕಿನಿ ಮನೆಯವರು ಗೌತಮ್ ಮನೆಗೆ ಆಗಮಿಸಿದ್ದಾರೆ. ಅಪೇಕ್ಷಾ ಕೂಡ ಪಾರ್ಥನ ಜೊತೆಗೆ ತನ್ನ ಮದುವೆ ನಡೆಯುತ್ತಿದೆ ಎಂಬ ಖುಷಿಯಲ್ಲಿರುತ್ತಾಳೆ. ಆದರೆ, ಜೈದೇವ್‌ ರೆಡಿಯಾಗಿ ಬಂದಿದ್ದನ್ನು ನೋಡಿ ಅಪೇಕ್ಷಾಳಿಗೆ ಶಾಕ್ ಆಗುತ್ತದೆ.

ತನಗೆ ಜೈದೇವ್‌ ಇಷ್ಟವಿಲ್ಲ ಎಂದು ಹೇಳುವುದು ಬಿಟ್ಟು ಮನದಲ್ಲೇ ಗೊಂದಲವನ್ನು ಸೃಷ್ಟಿಸಿಕೊಳ್ಳುತ್ತಾಳೆ. ಜೈದೇವ್‌ ಹಾಗೂ ಅಪೇಕ್ಷಾ ಇಬ್ಬರೂ ಒಂಟಿಯಾಗಿ ಮಾತನಾಡುವಾಗಲೂ ಅಪೇಕ್ಷಾ ಸತ್ಯ ಹೇಳುವ ಪ್ರಯತ್ನವನ್ನು ಮಾಡುವುದಿಲ್ಲ. ಇದೆಲ್ಲವೂ ಜೈದೇವ್‌ ನಿಗೆ ತನ್ನ ಕೆಲಸವನ್ನು ಸಾಧಿಸಿಕೊಳ್ಳಲು ಸಹಾಯ ಮಾಡುತ್ತದೆ.

 Amruthadhaare Serial 12 February episode written update

ಗೊಂದಲದಲ್ಲಿ ಒದ್ದಾಡುತ್ತಿರುವ ಅಪೇಕ್ಷಾ..!

ಪಾರ್ಥನನ್ನು ಜೈದೇವ್‌ ಬೇಕಂತಲೇ ನೆಟ್ ವರ್ಕ್ ಇಲ್ಲದ ಪ್ರದೇಶಕ್ಕೆ ಕೆಲಸದ ಮೇಲೆ ಕಳಿಸಿದ್ದಾನೆ. ಇದರಿಂದ ಅಪೇಕ್ಷಾಳಿಗೆ ಸಂಕಷ್ಟ ಎದುರಾಗಿದೆ. ಪಾರ್ಥ ಸಂಪರ್ಕಕ್ಕೆ ಸಿಗುತ್ತಿಲ್ಲ. ತನ್ನ ಬದುಕಲ್ಲಿ ನಡೆಯುತ್ತಿರುವ ಈ ಅನಿರೀಕ್ಷಿತ ಸಂದರ್ಭವನ್ನು ಎದುರಿಸಲಾಗದೇ ಮೌನಿ ಆಗಿದ್ದಾಳೆ. ಗೊಂದಲದಲ್ಲಿ ಅಪೇಕ್ಷಾ ಮನದಲ್ಲಿಯೇ ಒದ್ದಾಡುತ್ತಿದ್ದಾಳೆ. ಆದರೆ, ಅಪೇಕ್ಷಾಳನ್ನು ಹೊರತು ಪಡಿಸಿ ಮನೆಯವರೆಲ್ಲರೂ ಕೂಡ ಸಂಭ್ರಮದಲ್ಲಿ ಮುಳುಗಿ ಹೋಗಿದ್ದಾರೆ. ನಾವು ನಾವುಗಳೇ ಒಂದಾಗುತ್ತಿದ್ದೇವೆ ಎಂಬ ಖುಷಿಯಲ್ಲಿದ್ದಾರೆ.

ಎಂಗೇಜ್ಮೆಂಟ್ ಪ್ಲಾನ್ ಮಾಡಿದ ಜೈದೇವ್‌ ..!

ಅಪೇಕ್ಷಾಳಲ್ಲಿನ ಗೊಂದಲವನ್ನು ತಿಳಿದುಕೊಂಡ ಜೈದೇವ್‌ ಇದೇ ಸರಿಯಾದ ಸಂದರ್ಭ ಈಗಲೇ ನಿಶ್ಚಿತಾರ್ಥ ಮಾಡಿಕೊಂಡು ಮದುವೆಯ ಕೆಲಸವನ್ನು ಆರಂಭಿಸಿದರೆ, ಪಾರ್ಥ ಮತ್ತು ಅಪೇಕ್ಷಾಳಿಂದ ಮತ್ಯಾವ ಸಮಸ್ಯೆಯೂ ಎದುರಾಗುವುದಿಲ್ಲ ಎಂದು ಆಲೋಚಿಸಿದ್ದಾನೆ. ಹೀಗಾಗಿ ಶಕುಂತಲಾಳನ್ನು ಕರೆದು ಇಂದೇ ಎಂಗೇಜ್ಮೆಂಟ್ ಮಾಡೋಣ ಎಂದು ಹೇಳಿದ್ದಾನೆ.

ಶಕುಂತಲಾ ಕೂಡ ಇದಕ್ಕೆ ಒಪ್ಪಿದ್ದು, ಜೈದೇವ್‌ ನಿಗೆ ಗುರುಬಲ ಹೆಚ್ಚು ದಿನಗಳು ಇರುವುದಿಲ್ಲ. ಹೀಗಾಗಿ ಇಂದೇ ನಿಶ್ಚಿತಾರ್ಥ ಮಾಡಿಕೊಳ್ಳೋಣ ಎಂದು ಕೇಳಿದ್ದಾಳೆ. ಮನೆಯವರೆಲ್ಲರೂ ಇದಕ್ಕೆ ಒಪ್ಪುವ ಎಲ್ಲಾ ಲಕ್ಷ್ಣಗಳು ಕೂಡ ಗೋಚರಿಸುತ್ತಿವೆ. ಹಾಗೇನಾದರೂ ಆದರೆ, ಪಾರ್ಥ ಬರುವ ಮುನ್ನವೇ ಅಪೇಕ್ಷಾ ಜೈದೇವನ ಮದುವೆ ನಡೆದು ಹೋಗುತ್ತದೆಯಾ ಇಲ್ಲ ಮಲ್ಲಿ ಬಾಳನ್ನು ಭೂಮಿಕಾ ಸರಿ ಮಾಡಿ ಅಪೇಕ್ಷಾಳನ್ನು ಬಚಾವ್ ಮಾಡಿಸುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
jaidev plans to get marry apeksha. Now preparing for marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X