Amruthadhaare ; ಅಪರ್ಣಾ ಮನೆಯಲ್ಲಿ ಗೌತಮ್ ಭೂಮಿಕಾ ಪಾರ್ಟಿ : ಪಾರ್ಥನಿಗೆ ಹೆಚ್ಚಿದ ಆತಂಕ..!
ಅಮೃತಧಾರೆ ಧಾರಾವಾಹಿಯಲ್ಲಿ ಅಪರ್ಣಾ, ಆನಂದ್, ಭೂಮಿಕಾ, ಗೌತಮ್, ಪಾರ್ಥ ಹಾಗೂ ಅಪೇಕ್ಷಾ ಸೇರಿ ಸಣ್ಣದೊಂದು ಪಾರ್ಟಿ ಮಾಡಿದ್ದಾರೆ.ಪಾರ್ಟಿಯಲ್ಲಿ ಭೂಮಿಕಾ ಮಾಡಿದ ನಾನ್ ವೆಜ್ ಅನ್ನು ಸವಿದು ಆಟವಾಡುತ್ತಿರುತ್ತಾರೆ. ಟ್ರೂತ್ ಆರ್ ಡೇರ್ ಆಟದಲ್ಲಿ ಆನಂದ್, ಗೌತಮ್ ಕಿತ್ತಾಡುತ್ತಾರೆ.
ಪಾರ್ಥನಿಗೆ ಪ್ರಪೋಸ್ ಮಾಡುವ ಸೀನ್ ಕೊಟ್ಟಾಗ ಪಾರ್ಥ ಅಪೇಕ್ಷಾಳನ್ನು ಪ್ರಪೋಸ್ ಮಾಡಿ ನಟಿಸುತ್ತಾನೆ. ಇದನ್ನು ಭೂಮಿಕಾ ಮನದಲ್ಲೇ ಸಂತಸ ಪಡುತ್ತಾಳೆ.
ಮಜಾ ತೆಗೆದುಕೊಂಡ ಗೌತಮ್
ಪ್ರತೀ ಸಲ ಪಾರ್ಟಿಗೆ ಕರೆದು ಡ್ರಿಂಕ್ಸ್ ಕೊಟ್ಟು ಅಪರ್ಣಾ ಮತ್ತು ಆನಂದ್ ಮಜಾ ತೆಗೆದುಕೊಳ್ಳುತ್ತಿದ್ದರು. ಈಗ ಬೇಕಂತಲೇ ಗೌತಮ್ ಕೇಕ್ ಅನ್ನು ಆರ್ಡರ್ ಮಾಡಿದ್ದಾನೆ. ಅಪರ್ಣಾ ಗೂ ಆನಂದ್ ಗೂ ರಮ್ ಕೇಕ್ ತಿನ್ನಿಸಿ, ಇಬ್ಬರೂ ನಶೆಯಲ್ಲಿ ಜಗಳ ಆಡಿದ್ದಾರೆ. ಅಪರ್ಣಾ ಡಿವೋರ್ಸ್ ಬೇಕು ಎಂದು ಕೇಳಿದ್ದು, ಆನಂದ್ ಟೀ ಬೇಕು ಎಂದಿದ್ದಾನೆ. ಇಬ್ಬರೂ ಕಿತ್ತಾಡುವುದನ್ನು ನೋಡಿ ಮಜಾ ತೆಗೆದುಕೊಂಡ ಬಳಿಕ ಇಬ್ಬರನ್ನೂ ಬೇರೆ ಬೇರೆ ರೂಮಿನಲ್ಲಿ ಮಲಗಿಸಿದ್ದಾರೆ. ಇಬ್ಬರೂ ನಶೆಯಲ್ಲಿದ್ದು ಏನಾಗುತ್ತಿದೆ ಎಂಬುದೇ ಅಪರ್ಣಾ ಮತ್ತು ಆನಂದ್ ಗೆ ಗೊತ್ತಿಲ್ಲ.

ಅಪೇಕ್ಷಾ, ಪಾರ್ಥನಿಗೆ ಆತಂಕ
ಇನ್ನು ಗೌತಮ್ ಅಪೇಕ್ಷಾ ಬಳಿ ಮದುವೆ ಬಗ್ಗೆ ಮಾತನಾಡಿದ್ದಾನೆ. ನೀನು ನಮ್ಮ ಮನೆಗೆ ಸೊಸೆಯಾಗಿ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ತಪ್ಪಿ ಹೋಗಿದೆ. ಇನ್ನು ನಿನಗೆ ಒಳ್ಳೆಯ ಹುಡುಗನನ್ನು ಹುಡುಕಿ ನಾನು ಮದುವೆ ಮಾಡುತ್ತೇನೆ ಎಂದು ಗೌತಮ್ ಭರವಸೆ ಕೊಟ್ಟಿದ್ದಾನೆ. ಪಾರ್ಥನ ಬಳಿ ಭೂಮಿಕಾ ಮಾತನಾಡಿದ್ದರು. ನಿಮ್ಮಿಬ್ಬರ ಪ್ರೀತಿಗೆ ಸಪೋರ್ಟ್ ಮಾಡುತ್ತೇನೆ. ಹಾಗಂತ ಮನೆಯವರ ಬಳಿ ಸಮರ್ಥಿಸಿಕೊಂಡು ಮನೆಯವರನ್ನು ಒಪ್ಪಿಸಲು ಸಾಧ್ಯವಿಲ್ಲ. ಆ ಕೆಲಸವನ್ನು ನೀನೇ ಮಾಡಬೇಕು ಎಂದು ಭೂಮಿಕಾ ಹೇಳಿದ್ದಾಳೆ. ಭೂಮಿಕಾ ಮಾತುಗಳನ್ನು ಕೇಳಿದ ಪಾರ್ಥನಿಗೆ ಆತಂಕ ಶುರುವಾಗಿದೆ. ನಾವಿಬ್ಬರು ಎಷ್ಟು ದಿನ ಅಂತ ಹೀಗೆ ಓಡಾಡಿಕೊಂಡಿರುವುದು. ಆದಷ್ಟು ಭೇಗ ಅಪೇಕ್ಷಾಳ ತಂದೆ ಸದಾಶಿವ ಅವರ ಬಳಿ ಮಾತನಾಡಬೇಕು ಎಂದು ಪಾರ್ಥ ಯೋಚಿಸಿದ್ದಾನೆ. ಅಪೇಕ್ಷಾಳಿಗೂ ಪಾರ್ಥನ ನಿರ್ಧಾರ ಸರಿ ಎಂದು ಅನಿಸಿದೆ.
ಲವ್ ಸ್ಟೋರಿ ಹೇಳಿದ ಭೂಮಿಕಾ, ಗೌತಮ್
ಪರ್ಣಾ, ಆನಂದ್ ಮಕ್ಕಳು ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಗೌತಮ್ ಮತ್ತು ಭೂಮಿಕಾ ಮಕ್ಕಳಿಗೆ ಊಟ ಮಾಡಿಸಿ ಮಲಗಿಸಿದ್ದಾರೆ. ಅಪ್ಪ, ಅಮ್ಮನಿಗೆ ಹುಷಾರಿಲ್ಲ ಎಂದು ಹೇಳಿದ್ದಾರೆ. ಮಕ್ಕಳು ಮಲಗುವ ಮುನ್ನ ಕಥೆ ಹೇಳಿದ್ದು, ಭೂಮಿಕಾ ಮತ್ತು ಗೌತಮ್ ತಮ್ಮ ಪ್ರೇಮ ಕಥೆಯನ್ನೇ ಹೇಳಿದ್ದಾರೆ. ಆನೆಯಾಗಿ ಗೌತಮ್, ಮೊಲವಾಗಿ ಭೂಮಿಕಾ ಕಥೆ ಹೇಳಿದ್ದಾರೆ.

ಮಕ್ಕಳ ಮೇಲೆ ಆಸೆ ಇಟ್ಟುಕೊಂಡಿರುವ ಗೌತಮ್
ತಮ್ಮಿಬ್ಬರ ಪರಿಚಯವಾಗಿದ್ದು, ಕೊನೆಗೆ ಮದುವೆಯಾಗಿದ್ದು, ನಿತ್ಯ ಜಗಳ ಮಾಡುತ್ತಿದ್ದದ್ದು, ನಂತರ ಪ್ರೀತಿ ಹುಟ್ಟಿದ್ದನ್ನು ಹೇಳಿದ್ದಾರೆ. ಈ ಕಥೆಯನ್ನು ಕೇಳಿದ ಮಕ್ಕಳಿಗೆ ಇದು ಇವರಿಬ್ಬರ ಲವ್ ಸ್ಟೋರಿ ಎಂಬುದೂ ಗೊತ್ತಾಗಿದೆ. ಇನ್ನು ಗೌತಮ್ ಮಕ್ಕಳ ಮೇಲೆ ತೋರಿಸಿದ ಪ್ರೀತಿ ನೋಡಿ ಭೂಮಿಕಾ ಪ್ರಶ್ನಿಸುತ್ತಾಳೆ. ಗೌತಮ್ ಕೂಡ ತನಗೆ ಮಗು ಎಂದರೆ ಬಹಳ ಇಷ್ಟ ಎಂದು ಹೇಳಿದ್ದಾನೆ. ಇಷ್ಟು ದಿನ ಪ್ರೀತಿಯಲ್ಲಿದ್ದ ಭೂಮಿಕಾಳಿಗೆ ಈಗ ಮಗುವಿನ ತಾಯಿ ಆಗುವ ಆಸೆ ಹುಟ್ಟಿಕೊಂಡಿದೆ. ಅಜ್ಜಿ ಆಸೆಯನ್ನು ಗೌತಮ್ ಮತ್ತು ಭೂಮಿಕಾ ನೆರವೇರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











