Amruthadhaare ;ಅಜ್ಜಿ ಜೊತೆ ಸೇರಿ ಪ್ಲಾನ್ ಮಾಡಿರುವ ಗುಂಡು; ಮದುವೆಯ ದಿನ ಭೂಮಿಕಾಳಿಗೆ ಸಿಕ್ತು ಅಪರೂಪದ ಗಿಫ್ಟು!
ಅಮೃತಧಾರೆ ಧಾರಾವಾಹಿಯಲ್ಲಿ ಪಾರ್ಥನಿಗೆ ಅಣ್ಣನ ಮದುವೆ ಬಗ್ಗೆ ಬಹಳ ಬೇಸರವಿದ್ದು, ಇದನ್ನು ಹೇಗಾದರೂ ಮಾಡಿ ತಡೆಯಬೇಕು ಎಂದು ಒದ್ದಾಡುತ್ತಿದ್ದಾನೆ. ಆದರೆ, ಈ ಮದುವೆಗೆ ಭೂಮಿಕಾಳ ಒಪ್ಪಿಗೆ ಇರುವುದನ್ನು ಕೇಳಿ ಗಾಬರಿಯಾಗಿದ್ದಾನೆ. ಇತ್ತ ಆನಂದ್ ಗಂತೂ ದಿಕ್ಕೇ ತೋಚದಂತೆ ಆಗಿದ್ದು, ಗೆಳಯನ ಪರಿಸ್ಥಿತಿ ಕಂಡು ನಲುಗಿದ್ದಾನೆ.
ಭೂಮಿಕಾಳಿಗೆ ಸಿಕ್ಕ ಉಡುಗೊರೆ ಏನು..?
ಮದುವೆ ದಿನವೂ ಆರಂಭವಾಗಿದ್ದು, ಮನೆಯಲ್ಲಿ ದೊಡ್ಡದಾಗಿಯೇ ಮಂಟಪವನ್ನು ನಿರ್ಮಿಸಲಾಗಿದೆ. ಬಣ್ಣ ಬಣ್ಣದ ಹೂಗಳು ಕಂಗೊಳಿಸುತ್ತಿದ್ದು, ಗೌತಮ್ ದಿವಾನ್ ಬಿಳಿ ಪಂಚೆಯುಟ್ಟು ಹಸೆಮಣೆ ಏರಲು ಸಜ್ಜಾಗಿದ್ದಾನೆ. ಭೂಮಿಕಾ ಕೂಡ ರೆಡಿಯಾಗಿದ್ದು, ಪತಿಯನ್ನು ಸಿದ್ಧ ಮಾಡುತ್ತಿದ್ದಾಳೆ. ತಲೆಕೆಟ್ಟ ಗೌತಮ್ ಮದುವೆ ಇಷ್ಟವಿಲ್ಲದಿದ್ದರೂ ಕೂಡ ಭೂಮಿಕಾಳಿಗೆ ಸರ್ಪ್ರೈಸ್ ಉಡುಗೊರೆಯನ್ನು ನೀಡಿದ್ದಾನೆ. ನನ್ನ ಈ ಮದುವೆಗೆ ನೀವು ಈ ಸೀರೆಯನ್ನೇ ಉಡಬೇಕು ಎಂದು ಸೀರೆಯನ್ನು ನೀಡಿದ್ದಾನೆ. ಸೀರೆಯನ್ನು ಗಿಫ್ಟ್ ಆಗಿ ಪಡೆದ ಭೂಮಿಕಾಳಿಗೆ ಶಾಕ್ ಆಗಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಏನನ್ನೂ ರಿಯಾಕ್ಟ್ ಮಾಡಲಾಗದೇ ಸುಮ್ಮನಾಗಿದ್ದಾಳೆ.

ಮೊಮ್ಮಗನ ಬದುಕಿಗೆ ಅಜ್ಜಿಯ ಮಾಸ್ಟರ್ ಪ್ಲಾನ್
ಗುಂಡು ಮತ್ತು ಭೂಮಿಕಾ ಜೋಡಿಯನ್ನು ಸದಾ ಹಾಡಿ ಹೊಗಳುವ ಅಜ್ಜಿಯೇ ಈಗ ಮೊಮ್ಮಗನಿಗೆ ಮತ್ತೊಂದು ಮದುವೆ ಮಾಡಿಸಲು ಮುಂದೆ ನಿಂತು ತಯಾರಿ ನಡೆಸಿರುವುದು ಎಲ್ಲರಿಗೂ ಶಾಕ್ ಆಗಿದೆ. ವಂಶೋದ್ಧಾರಕನಿಗಾಗಿ ಈ ಸಂಭ್ರಮ ಎಂದು ಹೇಳಿರುವ ಅಜ್ಜಿ ಮಾತಿನ ಹಿಂದೆ ಮರ್ಮವೊಂದು ಅಡಗಿದೆ ಎಂಬುದು ಪಕ್ಕಾಗಿದೆ. ಶಕುಂತಲಾ ಆಟಕ್ಕೆ ಬ್ರೇಕ್ ಹಾಕಲು, ಭೂಮಿಕಾ ಮನದ ಗೊಂದಲವನ್ನು ನಿವಾರಿಸಲು ಅಜ್ಜಿ ಈ ಮದುವೆಯಲ್ಲಿ ಭಾಗಿಯಾಗಿ ಹೊಸ ನಾಟಕ ಮಾಡುತ್ತಿದ್ದಾರೆ ಎಂಬುದು ಪಕ್ಕಾ ಆಗಿದೆ. ಮೊಮ್ಮಗನ ಬದುಕಿಗಾಗಿ ಅಜ್ಜಿ ಯಾವುದೋ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂಬುದು ಎದ್ದು ಕಾಣಿಸುತ್ತಿದೆ.
ತಲೆ ಕೆಡಿಸಿಕೊಂಡ ಗುಂಡುಗೆ ಆಸರೆ ಯಾರು..?
ಆನಂದ್ ಮತ್ತು ಅಪರ್ಣಾ ತಲೆಕೆಡಿಸಿಕೊಂಡಿದ್ದು. ಇದ್ದಕ್ಕಿದ್ದ ಹಾಗೆಯೇ ಹೀಗೆಲ್ಲಾ ಯಾಕೆ ಆಗುತ್ತಿದೆ ಎಂದು ಆನಂದ್ ಗೌತಮ್ ಬಳಿ ಪ್ರಶ್ನೆ ಮಾಡಿದ್ದಾನೆ. ಭೂಮಿಕಾ ಮತ್ತು ಗೌತಮ್ ನಿಂದ ಉತ್ತರ ಸಿಗದೇ ಆನಂದ್ ಗೊಂದಲದಲ್ಲಿ ಮುಳುಗಿದ್ದಾನೆ. ಯಾರದೋ ಬಲೆಯಲ್ಲಿ ಸಿಲುಕಿರುವ ಗೌತಮ್, ಹೆಂಡಿತಿಯ ಮಾತಿನಂತೆ ಮತ್ತೊಂದು ಮದುವೆಯಾಗಲು ತಯಾರಾಗಿದ್ದು, ತನ್ನ ಪಾಲಿಗೆ ಯಾರೂ ಇಲ್ಲ ಎಂಬಂತೆ ಕಂಗಾಲಾಗಿದ್ದಾನೆ. ಇದ್ದಕ್ಕಿದ್ದ ಹಾಗೆಯೇ ಗೌತಮ್ ಬದುಕಿಗೆ ಆಸರೆಯಾಗಿದ್ದ ಭೂಮಿಯೇ ಬಿರುಕು ಬಿಟ್ಟಿದ್ದು, ಮುಂದೇನು ಎಂಬ ಪ್ರಶ್ನೆ ಶುರುವಾಗಿದೆ. ಒಂದು ಕಡೆ ದಿವಾನ್ ಮನೆಯಲ್ಲಿ ಮದುವೆಯ ಸಮಾರಂಭ ನಡೆಯುತ್ತಿದ್ದರೆ, ದಿವಾನ್ ಕುಟುಂಬದ ಮನಗಳಲ್ಲಿ ಸೂತಕದ ಛಾಯೆ ಎದ್ದು ಕಾಣುತ್ತಿದೆ. ಸ್ಮಶಾನ ಮೌನದಲ್ಲಿ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆಯಲು ಸಜ್ಜಾಗಿದೆ.
ಮಧುರಾಳಿಗೆ ಸಿಗದ ಭಾಗ್ಯ
ನಿಶ್ಕಲ್ಮಶವಾಗಿ ದಾಂಪತ್ಯ ಬದುಕಿಗೆ ಹೆಜ್ಜೆ ಇಡಲು ಮುಂದಾಗಿರುವ ಮಧುರ ಬಾಳಿಗೆ ಕಹಿಯ ರುಚಿ ಹತ್ತಲು ಇನ್ನು ಕೆಲವೇ ಕ್ಷಣಗಳು ಬಾಕಜಿ ಇದ್ದು, ಭೂಮಿಕಾಳೇ ಮಧುರಾಳನ್ನು ಸಿದ್ಧಗೊಳಿಸಿದ್ದಾಳೆ. ಹೊಸ ಬದುಕಿನ ಆಸೆ ಹೊಸ್ತಿಲಲ್ಲಿ ನಿಂತಿರುವ ಮಧುರ ಬಾಳಲ್ಲಿ ಸುನಾಮಿ ಏಳುವುದು ಕನ್ಫರ್ಮ್ ಆಗಿದೆ. ಮದುವೆಗೆ ಒಪ್ಪಿರುವ ಗೌತಮ್, ಮಧುರಾಳನ್ನು ಬಿಟ್ಟು ಭೂಮಿಕಾ ಜೊತೆಗೆ ಬದುಕಿನ ಬಂಡಿಯನ್ನು ಎಳೆಯುವುದಂತೂ ಪಕ್ಕಾ. ಹೊಸ ಸೀರೆ ಕೊಟ್ಟು ಹೆಂಡತಿಗೆ ಮತ್ತೆ ಪವಿತ್ರ ಮಾಂಗಲ್ಯವನ್ನು ಕಟ್ಟಿ ಇವಳೇ ನನ್ನ ಉಸಿರು ಎಂದು ಹೇಳಲು ಮುಂದಾಗಿದ್ದಾನೆ. ಮಕ್ಕಳಾಗುವುದಿಲ್ಲ ಎಂಬ ಒಂದೇ ಕಾರಣಕ್ಕೆ ಭೂಮಿಕಾ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಗೌತಮ್ ಗೆ ಈ ಮದುವೆಯನ್ನು ಮಾಡಿಸುತ್ತಿದ್ದು, ಮಕ್ಕಳನ್ನು ಮಾಡಿಕೊಳ್ಳುವುದೊಂದೇ ಬದುಕಲ್ಲ ಎಂದು ತೋರಿಸಿಕೊಡಲು ಗೌತಮ್ ಮೂಹೂರ್ತಕ್ಕಾಗಿ ಕಾಯುತ್ತಿದ್ದಾನೆ.


Click it and Unblock the Notifications











