Amruthadhaare ; ಅಪೇಕ್ಷಾಳಿಗೆ ಕಪಾಳಮೋಕ್ಷ ಮಾಡಿದ ಭೂಮಿಕಾ : ಸುಧಾ ಮನೆಗೆ ಬಂದ ಸಂಪತ್ತು..!

By ಪ್ರಿಯಾ ದೊರೆ

ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಮತ್ತೆ ದಿಯಾ ಜೊತೆಗೆ ಸಂಪರ್ಕ ಬೆಳೆಸಿದ್ದಾನೆ. ಮಲ್ಲಿಗೆ ಗೊತ್ತಾಗದಂತೆ ಮತ್ತೆ ಮತ್ತೆ ಫೋನ್‌ ಮಾಡಿ ಲಲ್ಲೆ ಹೊಡೆಯುತ್ತಿದ್ದಾನೆ. ಆದರೆ, ಮಲ್ಲಿಗೆ ಈ ಬಾರಿ ಯಾವುದೇ ಕಾರಣಕ್ಕೂ ಅನುಮಾನ ಬರಬಾರದು ಎಂದು ತನ್ನ ನಾಟಕವನ್ನು ಹೆಚ್ಚು ಮಾಡಿಕೊಂಡಿದ್ದಾನೆ. ಮಲ್ಲಿಯೇ ಸರ್ವಸ್ವ ಎಂಬಂತೆ ನಡೆದುಕೊಳ್ಳುತ್ತಾನೆ. ಈ ಹಿಂದೆ ತಾನು ಮಾಡಿದ್ದಕ್ಕೆ ಪಶ್ಚಾತಾಪ ಪಡುತ್ತಿರುವವನಂತೆ ನಟಿಸುತ್ತಿದ್ದಾನೆ. ಮಲ್ಲಿಗೆ ಪದೇ ಪದೇ ಉಡುಗೊರೆಗಳನ್ನು ತಂದು ಕೊಡುವ ನೆಪದಲ್ಲಿ ತನಗೆ ಹೆಂಡತಿ ಮೇಲೆ ಪ್ರೀತಿ ಇದೆ ಎಂದು ತೋರಿಸಿಕೊಳ್ಳುತ್ತಿದ್ದಾನೆ.


ಸುಧಾಳ ಮನೆಗೆ ಬಂದ ಸಿರಿ

ಗೌತಮ್ ಗೆ ಸುಧಾ ಸತ್ಕಾರ ಮಾಡಿದ್ದು, ಇದರಿಂದ ಗೌತಮ್ ಬಹಳ ಸಂತಸಗೊಂಡಿದ್ದಾನೆ. ನಡೆದ ಎಲ್ಲಾ ಘಟನೆಯನ್ನೂ ಭೂಮಿಕಾ ಬಳಿ ಹೇಳಿಕೊಂಡಿದ್ದಾನೆ. ಮನೆಯಲ್ಲಿ ಕಷ್ಟವಿದ್ದರೂ ಬಂದವರಿಗೆ ಸತ್ಕಾರ ಮಾಡಿದ ರೀತಿಯನ್ನು ವಿವರಿಸಿದ್ದಾನೆ. ಹೀಗಾಗಿ ಭೂಮಿಕಾ ಅವರಿಗೋಸ್ಕರ ಹಣ್ಣು-ಹಂಪಲು, ಸೀರೆ, ಮಗುವಿಗೆ ಬಟ್ಟೆ, ಗೊಂಬೆ, ಚಾಕ್ಲೇಟ್ ಜೊತೆಗೆ ಹಣ ಎಲ್ಲವನ್ನೂ ತಂದು ಗೌತಮ್‌ಗೆ ನೀಡಿದ್ದು ಸುಧಾಳಿಗೆ ನೀಡಲು ಬಂದಿದ್ದಾನೆ. ಪುಟಾಣಿ ಮಗುವಿಗೆ ಎಲ್ಲವನ್ನೂ ಕೊಟ್ಟು ಹೊರಟಿದ್ದಾನೆ. ಇತ್ತ ಸಜ್ಜಪ್ಪ ತಿಂದು ಸುಧಾಳ ಕೈಗೆ ಬಂಗಾರದ ಬಳೆಯನ್ನೂ ಕೊಡಿಸಿದ್ದಾನೆ. ಸುಧಾಳ ಮನೆಯಲ್ಲಿ ಕಷ್ಟ ಇಷ್ಟು ದಿನ ತಾಂಡವವಾಡುತ್ತಿತ್ತು. ಆದರೆ ಈಗ ಸಿರಿ ತಾನಾಗಿಯೇ ಒಲಿದು ಬರುತ್ತಿದ್ದಾಳೆ. ಇದು ಸುಧಾ ಮನದಲ್ಲೂ ನೆಮ್ಮದಿಯನ್ನು ಮೂಡಿಸಿದೆ.

Amruthadhaare Serial 12 November episode written update

ಅಪ್ಪನ ಬಗ್ಗೆ ಕೇವಲವಾಗಿ ಮಾತನಾಡಿದ ಅಪ್ಪಿ

ಇತ್ತ ಅಪೇಕ್ಷಾಳನ್ನು ಶಾಪಿಂಗ್ ಗೆ ಹೋಗು ಎಂದು ಶಕುಂತಲಾ ಕಳಿಸಿದ್ದರೆ, ಅಪೇಕ್ಷ ಮನೆಯವರೆಲ್ಲರಿಗೂ ಬಟ್ಟೆಯನ್ನು ತಂದಿದ್ದಾಳೆ. ಮನೆಯವರಿಗೆಲ್ಲಾ ಬಟ್ಟೆಗಳನ್ನು ಕೊಟ್ಟಿದ್ದಾಳೆ. ಭೂಮಿಕಾಳಿಗೆ ಯಾವ ಬಟ್ಟೆ ತಂದೆ ಎಂದು ಲಕ್ಷ್ಮೀಕಾಂತ ಕೇಳಿದ ಪ್ರಶ್ನೆ ಜಂಬದಿಂದ ಮಾತನಾಡಿದ್ದಾಳೆ. ಅವಳು ಓಲ್ಡ್ ಮಾಡೆಲ್, ಅವಳಿಗೆ ಬಟ್ಟೆ ಆರಿಸಲು ಬರೋದಿಲ್ಲ ಎನ್ನುತ್ತಾಳೆ. ಇನ್ನು ತನ್ನ ತವರು ಮನೆಯ ಬಗ್ಗೆ ಮಾತನಾಡುತ್ತಾ, ತನ್ನ ತಂದೆ ಸದಾಶಿವ ಬಹಳ ಜುಗ್ಗ. ಒಂದು ದಿನವೂ ಶಾಪಿಂಗ್ ಗೆ ಹಣ ಕೊಟ್ಟವರಲ್ಲ. ಜೀವನ ಎಂಜಾಯ್ ಮಾಡುವುದೇ ಗೊತ್ತಿಲ್ಲ. ಅವರೊಬ್ಬರು ಬೋರಿಂಗ್ ಮನುಷ್ಯ ಎಂದು ಕೇವಲವಾಗಿ ಮಾತನಾಡುತ್ತಾಳೆ.


ಅಪೇಕ್ಷಾಳಿಗೆ ಭೂಮಿಕಾಳಿಂದ ಕಪಾಳಮೋಕ್ಷ

ಅಪೇಕ್ಷಾಳ ಮಾತನ್ನು ಕೇಳಿದ ಭೂಮಿಕಾಳಿಗೆ ಕೆಟ್ಟ ಕೋಪ ಬರುತ್ತದೆ. ಹಾಗಾಗಿ ಭೂಮಿಕಾ ಅಪೇಕ್ಷಾಳನ್ನು ಬೈಯುತ್ತಾಳೆ. ಯಾವತ್ತು ಬೆಳೆದು ಬಂದ ಹಾಗೂ ಹಿಂದಿನ ಬೇರನ್ನು ಮರೆಯಬೇಡ. ಅವರು ನಿನ್ನ ತಂದೆ. ಈಗ ನಿನಗೆ ಹೇಗೆ ಬೇಕೋ ಹಾಗಿರು ಆದರೆ ಯಾವತ್ತೂ ಅಪ್ಪನ ಬಗ್ಗೆ ಕೀಳಾಗಿ ಮಾತನಾಡಬೇಡ ಎಂದು ಬೈಯುತ್ತಾಳೆ. ಆದರೆ ಅಪೇಕ್ಷಾ ಕೇಳುವುದಿಲ್ಲ. ಕೋಪ ಮಾಡಿಕೊಂಡ ಭೂಮಿಕಾ ಅಪ್ಪಿ ಕೆನ್ನೆಗೆ ಎಲ್ಲರ ಎದುರಿಗೂ ಬಾರಿಸುತ್ತಾಳೆ. ಇದರಿಂದ ಅಪೇಕ್ಷಾಳಿಗೆ ಅವಮಾನವಾಗುತ್ತದೆ. ಸ್ವಲ್ಪ ಸಮಯದ ಬಳಿಕ ಶಕುಂತಲಾ ಮತ್ತು ಲಕ್ಷ್ಮೀಕಾಂತ ಮತ್ತೆ ಅಪ್ಪಿಯನ್ನು ಭೂಮಿಕಾಳ ವಿರುದ್ಧ ಎತ್ತಿಕಟ್ಟುತ್ತಾರೆ.

ಅಮ್ಮನಿಗಾಗಿ ಕೆಲಸ ಒಪ್ಪಿಕೊಂಡಿರುವ ಸುಧಾ

ಇನ್ನು ಸುಧಾಳಿಗೆ ಮತ್ತೆ ಫೋನ್ ಕಾಲ್ ಬರುತ್ತದೆ. ಆ ವ್ಯಕ್ತಿ ಆದಷ್ಟು ಬೇಗ ನೀನು ಸೇರಬೇಕಿರುವ ಮನೆಯ ಬಗ್ಗೆ ಯೋಚಿಸು. ಆಗ ನೀನು ಬಯಸಿದ್ದೆಲ್ಲವೂ ನಿನಗೆ ಸಿಗುತ್ತದೆ ಎಂದು ಹೇಳಿಕೊಡುತ್ತಾನೆ. ಸುಧಾ ಕೂಡ ಹೌದು ನನ್ನ ಕೆಲಸ ಆದಷ್ಟು ಬೇಗ ನೆರವೇರ ಬೇಕು. ನನಗೂ ಹೆಚ್ಚು ಸಮಯವಿಲ್ಲ. ನನ್ನ ತಾಯಿಗೆ ಆದಷ್ಟು ಬೇಗ ಚಿಕಿತ್ಸೆ ಕೊಡಿಸಬೇಕು ಎಂದು ಹೇಳುತ್ತಾಳೆ. ತನ್ನ ತಾಯಿಗಾಗಿ ಸುಧಾ ಈ ಕೆಲಸವನ್ನು ಒಪ್ಪಿದ್ದು, ಮುಂದೆ ಏನೆಲ್ಲಾ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X